×
Ad

ಬ್ರಹ್ಮಾವರ: ಬ್ಯಾಂಕ್ ಮೆನೇಜರ್ ಹೆಸರಿನಲ್ಲಿ ಆನ್‌ಲೈನ್ ವಂಚನೆ

Update: 2023-12-12 20:19 IST

ಬ್ರಹ್ಮಾವರ, ಡಿ.12: ಬ್ಯಾಂಕ್ ಮೆನೇಜರ್ ಎಂಬುದಾಗಿ ನಂಬಿಸಿ ಓಟಿಪಿ ಪಡೆದು ಮಹಿಳೆಯೊಬ್ಬರ ಖಾತೆಯಿಂದ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರದ ಸುಶೀಲಾ ಎಂ.(75) ಎಂಬವರ ಮೊಬೈಲ್‌ಗೆ ನ.15ರಂದು ಅಪರಿಚಿತ ವ್ಯಕ್ತಿಯು ಕರೆ ಮಾಡಿ, ತಾನು ಬ್ಯಾಂಕ್ ಮೆನೇಜರ್, ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಪಟ್ಟು ನಿಮ್ಮ ಕೆವೈಸಿ ಅಪ್‌ಡೆಟ್ ಮಾಡಲು ಬಾಕಿ ಇದೆ ಎಂದು ಹೇಳಿದ್ದರು. ಇದನ್ನು ನಂಬಿದ ಸುಶೀಲಾ ಓಟಿಪಿಯನ್ನು ನೀಡಿದ್ದು, ಅದನ್ನು ಬಳಸಿ ಅಪರಿಚಿತ ವ್ಯಕ್ತಿ ಸುಶೀಲಾ ಅವರ ಖಾತೆಯಿಂದ ಒಟ್ಟು 2,82,000ರೂ. ಹಣವನ್ನು ಮೋಸದಿಂದ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News