×
Ad

ಬ್ರಹ್ಮಾವರ: ಅಂಬೇಡ್ಕರ್ ಭವನದಲ್ಲಿ ಅಂಚೆ ಇಲಾಖೆ ಜನಸಂಪರ್ಕ ಅಭಿಯಾನ

Update: 2024-09-18 21:10 IST

ಬ್ರಹ್ಮಾವರ, ಸೆ.18: ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ, ಅಂಬೇಡ್ಕರ್ ಯುವಕ ಮಂಡಲ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ವೆಲ್ಫೇರ್ ಟ್ರಸ್ಟ್ ತೆಂಕು ಬಿರ್ತಿ ಇವರ ಆಶ್ರಯದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಅಪಘಾತ ವಿಮೆ ಮತ್ತು ಅಂಚೆ ಇಲಾಖೆಯ ಇತರ ಸೌಲಭ್ಯಗಳ ಮಾಹಿತಿಗಳಿಗಾಗಿ ಅಂಚೆ ಜನಸಂಪರ್ಕ ಅಭಿಯಾನ ವಾರಂಬಳ್ಳಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಅಂಚೆ ಅಧೀಕ್ಷರಾದ ರಮೇಶ್ ಪ್ರಭು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಮಂಡಲದ ಹರಿಶ್ಚಂದ್ರ ಕೆ.ಡಿ. ವಹಿಸಿದ್ದರು. ಅಂಚೆ ನಿರೀಕ್ಷಕರಾದ ಶಂಕರ್ ಲಮಾಣಿ ಅವರು ಅಂಚೆ ಇಲಾಖೆಯಲ್ಲಿ ಲಭ್ಯವಿ ರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ, ದಲಿತ ಸಂಘರ್ಷ ಸಮಿತಿಯ ಶ್ಯಾಮರಾಜ್ ಬಿರ್ತಿ, ಅಂಚೆ ಪಾಲಕರಾದ ಗಾಯತ್ರಿ ಭಾಗವಹಿಸಿದ್ದರು.

ಅನಿಲ್ ಕುಮಾರ್ ಸ್ವಾಗತಿಸಿ, ಪ್ರಶಾಂತ್ ಬಿರ್ತಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಬಿರ್ತಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News