×
Ad

ಓವರ್ ವ್ಯೆ ಆಫ್ ಚಂದ್ರಯಾನ-3: ಅ.21ರಂದು ಆನ್‌ಲೈನ್‌ನಲ್ಲಿ ವಿಶೇಷ ಉಪನ್ಯಾಸ

Update: 2023-10-20 19:49 IST

ಉಡುಪಿ: ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ‘ಓವರ್ ವ್ಯೆ ಆಫ್ ಚಂದ್ರಯಾನ-3’ ಎಂಬ ವಿಷಯದ ಕುರಿತ ತಾಂತ್ರಿಕ ಉಪನ್ಯಾಸವನ್ನು ಅಕ್ಟೋಬರ್ 21ರಂದು ಬೆಳಗ್ಗೆ 10:30ರಿಂದ 12:15ರವರೆಗೆ ಆನ್‌ಲೈನ್ ಮತ್ತು ಆಫ್‌ಲೈನ್ (ಅಕಾಡೆಮಿ ಕಚೇರಿ, ಪ್ರೊ.ಯು. ಆರ್. ರಾವ್ ವಿಜ್ಞಾನ ಭವನ, ತೋಟಗಾರಿಕಾ ವಿಜ್ಞಾನ ಕಾಲೇಜು, ಜಿ.ಕೆ.ವಿ.ಕೆ.ಆವರಣ, ಮೇ.ಸಂದೀಪ್ ಉನ್ನಿಕೃಷ್ಣನ್ ರಸ್ತೆ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು) ಇಲ್ಲಿ ಆಯೋಜಿಸಲಾಗಿದೆ.

ಆಸಕ್ತ ಪದವಿ ಪೂರ್ವ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಭಾಗವಹಿಸಲು -https://forms.gle/qa2rJVBGN3f9ahKg6-ಮೂಲಕ ನೋಂದಾಯಿಸಿ ಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ದೂ.ಸಂಖ್ಯೆ:080-29721550 ಅಥವಾ ಅಕಾಡೆಮಿ ವೆಬ್‌ಸೈಟ್ - www.kstacademy.in- ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News