×
Ad

ಬಾವಿಗೆ ಬಿದ್ದ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ

Update: 2023-09-10 19:19 IST

ಉಡುಪಿ, ಸೆ.10: ಬಾವಿಗೆ ಬಿದ್ದ ಬೃಹತ್ ಹೆಬ್ಬಾವೊಂದನ್ನು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಯ ಜಂಟಿ ಕಾರ್ಯಚರಣೆಯಲ್ಲಿ ರಕ್ಷಿಸಿದ ಘಟನೆ ಉಡುಪಿಯ ಸಂತೋಷನಗರ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸಂತೋಷ್‌ನಗರದ ವಕೀಲರೊಬ್ಬರ ಮನೆಯ ಆಳವಾದ ಬಾವಿಗೆ ಮೂರು ನಾಲ್ಕು ದಿನಗಳ ಹಿಂದೆ ಸುಮಾರು 15 ಅಡಿ ಉದ್ದದ ಹೆಬ್ಬಾವೊಂದು ಬಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಸ್ಥಳೀಯ ನಿವಾಸಿ ಬಶೀರ್ ಆಳದ ಬಾವಿಗಿಳಿದು ಸುರಕ್ಷಿತ ವಾಗಿ ಹೆಬ್ಬಾವನ್ನು ಮೇಲಕ್ಕೆತ್ತಿದ್ದಾರೆ. ಉಡುಪಿ ಅರಣ್ಯ ಇಲಾಖೆಯ ಅಧಿಕಾರಿ ಕೇಶವ ಪೂಜಾರಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News