×
Ad

ಉಡುಪಿ | ಟ್ರಾನ್ಸ್ ಫಾರ್ಮರ್ ಏರಿದ ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ: ಆಸ್ಪತ್ರೆಗೆ ದಾಖಲು

Update: 2024-01-30 12:28 IST

ಉಡುಪಿ, ಜ.30: ಟ್ರಾನ್ಸ್ ಫಾರ್ಮರ್ ಮೇಲೇರಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಲು ಯತ್ನಿಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನೋರ್ವನನ್ನು ಸಮಾಜ ಸೇವಕ ವಿಶು ಶೆಟ್ಟಿ ಸಾರ್ವಜನಿಕರ ಸಹಕಾರದಿಂದ ರಕ್ಷಿಸಿರುವ ಘಟನೆ ಮಂಗಳವಾರ ಬೆಳಗ್ಗೆ ಉದ್ಯಾವರ ಬಲಾಯಿಪಾದೆ ಬಳಿ ನಡೆದಿದೆ.

ರಕ್ಷಿಸಲ್ಪಟ್ಟ ಯುವಕನನ್ನು ಮಂಚಕಲ್ ಹಳೆಯಂಗಡಿ ಪರಿಸರದ ನಿವಾಸಿ ಸೂರಜ್ (28) ಎಂದು ಗುರುತಿಸಲಾಗಿದೆ. ಈತನನ್ನು ಚಿಕಿತ್ಸೆಗಾಗಿ ಉಡುಪಿಯ ದೊಡ್ಡಣಗುಡ್ಡೆ ಬಾಳಿಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾರಸುದಾರರು ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ. ಈ ಸಂದರ್ಭದಲ್ಲಿ ಮಲ್ಪೆ ಠಾಣೆ ಎಎಸ್ಸೈ ತನಿಯ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News