×
Ad

ಅಶ್ಲೀಲ ಪದ ಬಳಸಿ ವಿಡಿಯೋ: ಕ್ರಮಕ್ಕೆ ಆಗ್ರಹ

Update: 2023-07-26 21:48 IST

ಸಾಂದರ್ಭಿಕ ಚಿತ್ರ

ಉಡುಪಿ, ಜು.26: ಕುಕ್ಕೆಹಳ್ಳಿ ದೈವಸ್ಥಾನದ ಹೆಸರು ಬಳಕೆ ಮಾಡಿ ಹಾಗೂ ನನ್ನ ಹೆಸರು ಇರುವ 21 ಸೆಕೆಂಡುಗಳ ವೀಡಿಯೋ ಮಾಡಿ ಅಶ್ಲೀಲ ಪದಗಳನ್ನು ಬಳಸಿ ವಾಟ್ಸಾಪ್ ಮೂಲಕ ಹರಿಯಬಿಡಲಾಗುತ್ತಿದೆ ಎಂದು ಕುಕ್ಕೆಹಳ್ಳಿ ಕೊರಗಜ್ಜ ದೈವಸ್ಥಾನದ ಕೆ.ಕೃಷ್ಣ ಕುಲಾಲ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜು.18ರಂದು ಹಿರಿಯಡ್ಕ ಠಾಣೆಗೆ ದೂರು ನೀಡಲಾಗಿದೆ. ಇಂತಹ ಕೆಲಸ ಮಾಡಿದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ಕ್ಷೇತ್ರಕ್ಕೆ ಸಾವಿರಾರು ಮಂದಿ ಭಕ್ತರು ಬರುವುದನ್ನು ಕಂಡು ಕೆಲವು ಮಂದಿ ದೈವಸ್ಥಾನದ ಅಭಿವೃದ್ಧಿಯನ್ನು ಕಂಡು ಭಕ್ತರ ಬರುವಿಕೆಯನ್ನು ಕಂಡು ಸಹಿಸ ಲಾಗದೆ ಈ ರೀತಿ ತೊಂದರೆ ನೀಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀಧರ ಪೂಜಾರಿ, ವೆಂಕಟರಾಜ ಕಾರಂತ, ಗಣೇಶ್ ಕುಲಾಲ್, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News