×
Ad

ಅಂಜುಮನ್ ಬಿಸಿಎ ವಿದ್ಯಾರ್ಥಿ ಸಂದೀಪ್ ನಾಯ್ಕಗೆ ಪ್ರಥಮ ರ‍್ಯಾಂಕ್‌

Update: 2023-08-25 18:28 IST

ಭಟ್ಕಳ:  ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ (AIMCA) ಕಾಲೇಜಿನ ಬಿಸಿಎ (IVth SEM) ವಿದ್ಯಾರ್ಥಿ ಸಂದೀಪ್ ವಿಜಯ್ ನಾಯ್ಕ ಶೇ.95.02% ಅಂಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಪ್ರಥಮ ರ‍್ಯಾಂಕ್‌ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಮುಹಮ್ಮದ್ ಮೋಹಸಿನ್ ಕೆ. ತಿಳಿಸಿದ್ದಾರೆ.

ಇತ್ತಿಚೆಗೆ ಬಿಬಿಎ(BBA) ಸ್ಟ್ರೀಮ್ ನಲ್ಲಿ ಪ್ರಥಮ ರ‍್ಯಾಂಕ್‌ ಸೇರಿದಂತೆ ಒಟ್ಟು 12 ರ‍್ಯಾಂಕ್‌ ಗಳು ಅಂಜುಮನ್ ಸಂಸ್ಥೆ ಪಡೆದುಕೊಂಡಿತ್ತು ಎಂದು ತಿಳಿಸಿರುವ ಅವರು ವಿದ್ಯಾರ್ಥಿಗಳ ರ‍್ಯಾಂಕ್‌ ಗಳಿಸುವ ಪರಂಪರೆ ಹೀಗೆ ಮುಂದುವರೆಯಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಅಂಜುಮನ್ ಸಂಸ್ಥೆಗೆ ಇದು ಪ್ರತಿಷ್ಟಿತ ಕ್ಷಣವಾಗಿದೆ ಎಂದು ತಿಳಿಸಿದ್ದು ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News