×
Ad

ಭಟ್ಕಳ: ಪಟಾಕಿ ಅಂಗಡಿಮಳಿಗೆ ಮೇಲೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ

Update: 2023-10-14 21:25 IST

ಭಟ್ಕಳ: ಅತ್ತಿಬೇಲಿಯಲ್ಲಿ ಸಂಭವಿಸಿದ ಪಟಾಕಿ ದುರಂತ ಘಟನೆ ಹಿನ್ನಲೆಯಲ್ಲಿ ಭಟ್ಕಳ ತಹಸೀಲ್ದಾರ ನೇತೃತ್ವದ ತಂಡ ಪಟ್ಟಣದಲ್ಲಿ ಪಟಾಕಿ ಮಾರಾಟದ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ.

ತಹಸೀಲ್ದಾರ ಎ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ನಗರ ಠಾಣೆ ಪಿಎಸ್‌ಐ ಶಿವಾನಂದ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಪಟ್ಟಣದ ನಾನಾ ಕಡೆ ಪಟಾಕಿ ಮಾರಾಟ ಮಾಡುವ ಅಂಗಡಿ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಹಳೆ ಬಸ್ ನಿಲ್ದಾಣ, ಸ೦ಶುದ್ದೀನ ಸರ್ಕಲ್, ಮುಖ್ಯ ರಸ್ತೆ, ಮಾರಿಗುಡಿ, ಹೂವಿನ ಪೇಟೆ ಸೇರಿದಂತೆ ಒಟ್ಟು ಸುಮಾರು ಹತ್ತಕ್ಕೂ ಹೆಚ್ಚು ಅಂಗಡಿಗಳನ್ನ ಪರಿಶೀಲಿಸಿದರು. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡದಂತೆ ಅಂಗಡಿ ಕಾರರಿಗೆ ಎಚ್ಚರಿಕೆ ನೀಡಿದರು. ಸೂಚನೆ ಮೀರಿ ಮಾರಾಟ ಮಾಡಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ದಾಳಿ ಸಂದರ್ಭದಲ್ಲಿ ಲೈಸೆನ್ಸ್ ಪಡೆದ ಅಂಗಡಿ ಮಳಿಗೆಯಲ್ಲಿ ಸ್ಪಾರ್ಕಲ್ (ಸುರಸುರಬತ್ತಿ) ಪ್ಯಾಕ್ ಪತ್ತೆಯಾಗಿದ್ದು ಪುರಸಭೆಯಿಂದ 500 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News