×
Ad

ಭಟ್ಕಳ: ಬಿಹಾರ ಮೂಲದ ಯುವಕ ಆತ್ಮಹತ್ಯೆ

Update: 2023-09-15 19:39 IST

ಭಟ್ಕಳ: ಗಾರೆ ಕೆಲಸಕ್ಕೆ ಬಂದ ಬಿಹಾರ ಮೂಲದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುರುಳಿಸಾಲ ಮನೆಯೊಂದರಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ರಂಜಿತ ಕುಮಾರ (27) ಎಂದು ತಿಳಿದು ಬಂದಿದೆ. ಈತನ ಸಹೋದರ ಕಳೆದ 14 ವರ್ಷದಿಂದ ಭಟ್ಕಳದಲ್ಲಿ ಗಾರೆ ಕೆಲಸ ಮಾಡುತ್ತಿದ್ದು ಇತನೊಂದಿಗೆ ಕಳೆದ 5 ವರ್ಷದಿಂದ ಬಂದಿದ್ದ ಮೃತ ವ್ಯಕ್ತಿ ಭಟ್ಕಳದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದನು. ಈತನ ಪತ್ನಿ ಕಳೆದ 3 ದಿನದ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮೃತ ವ್ಯಕ್ತಿ ರಂಜಿತ ಕುಮಾರ ನಿನ್ನೆ ತಡ ರಾತ್ರಿ ಬಿಹಾರದಲ್ಲಿರುವ ತನ್ನ ಕುಟುಂಬದೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಬಳಿಕ ಬೆಳ್ಳಿಗ್ಗೆ ಈತ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News