×
Ad

ಭಟ್ಕಳ: ಅಂಜುಮನ್ ಬಾಲಕಿಯರ ಹಾಸ್ಟೆಲ್ ಕಟ್ಟಡಕ್ಕೆ ಶಂಕುಸ್ಥಾಪನೆ

Update: 2024-08-21 18:20 IST

ಭಟ್ಕಳ: ಸಾಗರ ರಸ್ತೆಯ ಹೆಸ್ಕಾಂ ಕಚೇರಿ ಎದುರು ಸಿದ್ದಿಖಾ ಇರ್ಷಾದ್ ಅವರು ಅಂಜುಮನ್ ಸಂಸ್ಥೆಗೆ ದೇಣಿಗೆ ನೀಡಿದ 10 ಗುಂಟೆ ಜಾಗದಲ್ಲಿ ಬುಧವಾರ ಬಾಲಕಿಯರ ವಸತಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿತು.

ಶಂಕುಸ್ಥಾಪನೆ ಮಾಡಿ ಮಾತನಾಡಿದ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನೂಸ್ ಕಾಜಿಯಾ, ಮುಸ್ಲಿಮ್ ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆಯುವಂತಾಗಲು ವಸತಿ ನಿಲಯದ ಅವಶ್ಯಕತೆ ಇತ್ತು. ಅದನ್ನು ಸಿದ್ದಿಖಾ ಇರ್ಷಾದ್ ಅವರು ವಸತಿ ನಿಲಯ ನಿರ್ಮಾಣಕ್ಕಾಗಿ ಸ್ಥಳದಾನ ಮಾಡುವುದರ ಮೂಲಕ ಪೂರೈಸಿದ್ದಾರೆ. ಅಂಜುಮನ್ ಸಂಸ್ಥೆಯು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದರು.

ಈ ಸಂದರ್ಭ ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಅತಿಕುರ‍್ರಹ್ಮಾನ್ ಮುನಿರಿ, ಕಮರ್ ಸಾದಾ, ಮುಹಿದ್ದೀನ್ ರುಕ್ನುದ್ದೀನ್, ಡಾ.ಸಲೀಮ್ ಸಾದಾ, ಮುಬಶ್ಶಿರ್ ಹಲ್ಲಾರೆ, ಮುಹಮ್ಮದ ಸಾದಿಖ್ ಪಿಲ್ಲೂರು, ಸಾದುಲ್ಲಾ ರುಕ್ನುದ್ದೀನ್ ಸೇರಿದಂತೆ ಅಂಜುಮನ್ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News