ಭಟ್ಕಳ| ಜೂಜಾಟ ಪ್ರಕರಣ: ಎಂಟು ಮಂದಿ ಆರೋಪಿಗಳ ಬಂಧನ
ಭಟ್ಕಳ: ಕುಂಟವಾಣಿ ಕ್ರಾಸ್ ಬಳಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, 4.05 ಲಕ್ಷ ರೂ. ಮೌಲ್ಯದ ಸ್ವತ್ತು ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಜುಲೈ 25 ರಂದು ರಾತ್ರಿ 10 ಗಂಟೆ ಸುಮಾರಿಗೆ ಕುಂಟವಾಣಿ ಕ್ರಾಸ್‌ನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ ಎ. ಲಿಂಗಾರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಎಂಟು ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದರು.
ಮಹೇಶ ಕೃಷ್ಣ ಭಂಡಾರಿ (30), ಮಂಜುನಾಥ ಸುಕ್ರು ಗೊಂಡ (31), ವಿನಾಯಕ ಮಂಜುನಾಥ ದೇಶಭಂಡಾರಿ (26), ರವಿ ಸಣ್ಣು ಗೊಂಡ (31), ರವಿ ನಾಗೇಶ ಭಂಡಾರಿ (36), ವಾಸುದೇವ ತಿಮ್ಮಪ್ಪ ಗೊಂಡ (27), ಮಹೇಶ ಪುಂಡಲೀಕ ಭಂಡಾರಿ (29) ಸಂತೋಷ ಕರಿಯ ಗೊಂಡ (25) ಬಂಧಿತರು. ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ ಎ. ಲಿಂಗಾರೆಡ್ಡಿ ತನಿಖೆ ನಡೆಸುತ್ತಿದ್ದಾರೆ.