×
Ad

ಭಟ್ಕಳ: ಕಾಡಿನಲ್ಲಿ ಕೋಳಿ ಜೂಜಾಟ; ಪೊಲೀಸರಿಂದ ದಾಳಿ

Update: 2025-07-29 23:16 IST

ಭಟ್ಕಳ: ಮುರುಡೇಶ್ವರ ಉತ್ತರಕೊಪ್ಪ ಬಿಡಕ್ಕಿ ಬೈಲ್ ಅರಣ್ಯ ಪ್ರದೇಶದಲ್ಲಿ ಕೋಳಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮುರುಡೇಶ್ವರ ಪೊಲೀಸರು ದಾಳಿ ನಡೆಸಿ, 6 ಕೋಳಿಗಳು, 4 ಬೈಕ್‌ಗಳು ಹಾಗೂ 1200 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮುರುಡೇಶ್ವರ ಠಾಣೆಯ ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ಹಣಮಂತ ಬಿರಾದಾರ ಅವರಿಗೆ ಕೋಳಿ ಜೂಜಾಟದ ಕುರಿತು ಖಚಿತ ಮಾಹಿತಿ ಲಭಿಸಿತು. ಈ ಹಿನ್ನೆಲೆಯಲ್ಲಿ ಅವರು ತಂಡದೊಂದಿಗೆ ಕಾಡಿನೊಳಗೆ ದಾಳಿ ನಡೆಸಿದರು. ಶನಿಯಾರ ನಾಯ್ಕ, ರಾಘವೇಂದ್ರ ನಾಯ್ಕ ಮತ್ತು ಗಣಪತಿ ನಾಯ್ಕ ಎಂಬವರು ಕೋಳಿ ಕಾಳಗ ಜೂಜಾಟದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರನ್ನು ಕಂಡ ತಕ್ಷಣ ಜೂಜುಕೋರರು ಪರಾರಿಯಾದರೂ, ಸ್ಥಳದಲ್ಲಿ ಇದ್ದ 1200 ರೂ. ನಗದು, 6 ಕೋಳಿಗಳು ಮತ್ತು 4 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದರು.

ಈ ಕಾರ್ಯಾಚರಣೆಯಲ್ಲಿ ಮುರುಡೇಶ್ವರ ಠಾಣೆಯ ಸಿಬ್ಬಂದಿಯಾದ ಸುರೇಂದ್ರ ಅಲಗೇರಿಕರ್, ಸಂಗಪ್ಪ ಹರಿಜನ, ಮಹೇಶ ಸಮನಳ್ಳಿ, ವಿಜಯ ನಾಯ್ಕ ಮತ್ತು ಯೋಗೇಶ ನಾಯ್ಕ ಭಾಗವಹಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News