×
Ad

ಭಟ್ಕಳ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಇಬ್ಬರು ಪೊಲೀಸರಿಗೆ ಗಾಯ

Update: 2024-06-23 12:02 IST

ಸಾಂದರ್ಭಿಕ ಚಿತ್ರ

ಭಟ್ಕಳ: ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ಪೊಲೀಸರಿಗೆ  ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿದ್ದು, ಇದರಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಜೂ 21ರ ರಾತ್ರಿ 8.30ರ ಸುಮಾರಿಗೆ ಪೊಲೀಸ್‌ ಸಿಬ್ಬಂದಿ ಕೃಷ್ಣ ಗುಡ್ಡಪ್ಪ, ಕಿರಣ್ ಕುಮಾರ್. ಜಿ ನಾಯ್ಕ‌, ಸುರೇಶ ಪಟಗಾರ ಸಾಗರ ರೋಡ್ ಬಳಿಯ ಪೊಲೀಸ್‌ ಕ್ವಾಟರ್ಸ್ ಬಳಿಯ ಕಚ್ಚಾರಸ್ತೆ ಅಂಚಿನಲ್ಲಿ ಮಾತನಾಡುತ್ತ ನಿಂತಿದ್ದರು. ಆಗ, ಅಡ್ಡಾದಿಡ್ಡಿಯಾಗಿ ಬಸ್‌ ಚಲಾಯಿಸಿಕೊಂಡು ಬಂದ ಭೀಮಣ್ಣ ಜಗ್ಗಲ್ಲವರ್ ಎಂಬಾತ ಬಸ್ ಗುದ್ದಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಕಿರಣ್ ಕುಮಾರ್. ಜಿ ನಾಯ್ಕ ಹಾಗೂ ಸುರೇಶ ಪಟಗಾರ ಗಾಯಗೊಂಡಿದ್ದು, ಇಬ್ಬರಿಗೂ ಹೊಟ್ಟೆ, ಕಾಲು, ಹಣೆ, ಬುಜಕ್ಕೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ ಎನ್ನಲಾಗಿದೆ.

ಕೃಷ್ಣ ಗುಡ್ಡಪ್ಪ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಬಸ್ಸನ್ನು ಸ್ಥಳದಲ್ಲಿ ನಿಲ್ಲಿಸದ ಚಾಲಕ ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News