×
Ad

ದುಬೈಗೆ ತೆರಳುವ ವಿಮಾನದಲ್ಲಿ ಹೃದಯಾಘಾತ; ಭಟ್ಕಳದ ಸಮಾಜ ಸೇವಕ ಡಾಟ ಇರ್ಷಾದ್ ನಿಧನ

Update: 2025-03-20 13:45 IST

ಭಟ್ಕಳ: ಭಟ್ಕಳದ ಖ್ಯಾತ ಸಮಾಜ ಸೇವಕ, ಮಾಜಿ ಕೌನ್ಸಿಲರ್ ಇರ್ಷಾದ್ ಇಕ್ಕೇರಿ ಅಲಿಯಾಸ್ ಡಾಟ ಇರ್ಷಾದ್ (67) ಅವರು ದುಬೈಗೆ ತೆರಳುವ ವಿಮಾನದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.

ಮಂಗಳವಾರ ರಾತ್ರಿ 11 ಗಂಟೆಗೆ ಮಂಗಳೂರಿನಿಂದ ಅಬುಧಾಬಿಗೆ ಪತ್ನಿ ಮತ್ತು ಮಗಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಗುರುವಾರ ಮುಂಜಾನೆ, ಅಬುಧಾಬಿಗೆ ತಲುಪುವ ಒಂದು ಗಂಟೆ ಮೊದಲು ಅವರಿಗೆ ಹೃದಯಾಘಾತ ಸಂಭವಿಸಿತು. ತಕ್ಷಣವೇ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಮಾನವನ್ನು ಮಸ್ಕತ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಮೃತರನ್ನು ಮಸ್ಕತ್ ವಿಮಾನ ನಿಲ್ದಾಣದ ಕ್ಲಿನಿಕ್‌ಗೆ ಕರೆದೊಯ್ಯಲಾಗಿದ್ದು, ಅವರ ಪತ್ನಿ ಮತ್ತು ಮಗಳು ಸಹ ಅಲ್ಲಿಯೇ ಇಳಿದಿದ್ದಾರೆ.

ಭಟ್ಕಳದ ಕಾರಗದ್ದೆ ನಿವಾಸಿಯಾಗಿದ್ದ ಇರ್ಷಾದ್ ಇಕ್ಕೇರಿ ಈ ಭಾಗದಲ್ಲಿ ಪರಿಚಿತ ವ್ಯಕ್ತಿಯಾಗಿದ್ದರು. ಅವರ ಪತ್ನಿ ಫರ್ಹಾನಾ ಡಾಟ, ಜಾಲಿ ಪಂಚಾಯತ್ ಸದಸ್ಯೆಯಾಗಿದ್ದು, ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಸ್ಕತ್‌ನಲ್ಲಿರುವ ಅವರ ಕುಟುಂಬ ಸದಸ್ಯರು, ಭಟ್ಕಳ ಮುಸ್ಲಿಂ ಜಮಾತ್‌ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಕೂಡಲೇ ವಿಮಾನ ನಿಲ್ದಾಣಕ್ಕೆ ತೆರಳಿ, ಮೃತ ದೇಹವನ್ನು ಸ್ವಾಧೀನಪಡಿಸಿಕೊಳ್ಳಲು ಅಗತ್ಯವಿರುವ ದಾಖಲೆ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News