×
Ad

ಭಟ್ಕಳ ತಾಲೂಕು ಪತ್ರಿಕಾ ವಿತರಕರ ಒಕ್ಕೂಟ ರಚನೆ

Update: 2023-09-12 16:08 IST

ಭಟ್ಕಳ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಭಟ್ಕಳ ತಾಲೂಕು ಘಟಕವನ್ನು ರಚನೆ ಮಾಡಲಾಗಿದ್ದು ಸಂಸ್ಥಾಪಕ ಅಧ್ಯಕ್ಷರಾಗಿ ರಾಮಕೃಷ್ಣ ಭಟ್ಟ, ಕಾರ್ಯದರ್ಶಿಯಾಗಿ ಮಂಜುನಾಥ ದೇವಡಿಗ ಆಯ್ಕೆಯಾಗಿದ್ದಾರೆ.

ಭಟ್ಕಳದಲ್ಲಿ ನಡೆದ ಪತ್ರಿಕಾ ವಿತರಕರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಕ್ಕೂಟದ ಉಪಾಧ್ಯಕ್ಷರಾಗಿ ಮಧುಸೂಧನ ಕಾಯ್ಕಿಣಿ, ಖಜಾಂಚಿಯಾಗಿ ದಯಾನಂದ ನಾಯ್ಕ ಆಯ್ಕೆಯಾಗಿದ್ದು ಒಕ್ಕೂಟದ ಸದಸ್ಯರಾಗಿ ನಾಗೇಶ ಆರ್. ನಾಯ್ಕ, ರಾಮ ಎಸ್. ಗೊಂಡ, ಮಂಜುನಾಥ ಮೊಗೇರ, ಗಣೇಶ ನಾಯ್ಕ, ಮಂಜುನಾಥ ನಾಯ್ಕ, ಸಂತೋಷ ನಾಯ್ಕ, ನಾಗರಾಜ ಶೆಟ್ಟಿ, ರೇಖಾ ಭಟ್ಟ, ಶ್ಯಾಮಲಾ ನಾಯ್ಕ ಮಹೇಶ ದೇವಾಡಿಗ, ಸುಬ್ರಹ್ಮಣ್ಯ ಕಾಯ್ಕಿಣಿ, ಕಿರಣ ಗೊಂಡ, ಧನಂಜಯ ನಾಯ್ಕ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News