ಭಟ್ಕಳ ಉತ್ಸವ-25 ಕಾರ್ಯಕ್ರಮ
ಭಟ್ಕಳ: ಸಾಂಸ್ಕ್ರತಿಕವಾಗಿ ನಮ್ಮ ತಾಲೂಕು ಹಿಂದುಳಿದೆ ಎಂಬ ಅಪವಾದವನ್ನು ತೊಡೆದುಹಾಕಿದ ಕೀರ್ತಿ ಭಟ್ಕಳ ಉತ್ಸವ ಕಾರ್ಯಕ್ರಮದ ಸಂಯೋಜಕರಿಗೆ ಸಲ್ಲಬೇಕು ಎಂದು ಮಾಜಿ ಶಾಸಕ ಸುನೀಲ್ ನಾಯ್ಕ ಹೇಳಿದರು.
ಅವರು ಇಲ್ಲಿನ ವೆಂಕಟಾಪುರದ ಖಾಜಿಯ ಮೈದಾನದಲ್ಲಿ ಕ್ರಿಯಾಶೀಲ ಗೆಳೆಯರ ಸಂಘ ಹಮ್ಮಿಕೊಂಡ ಭಟ್ಕಳ ಉತ್ಸವ-25 ಕಾರ್ಯಕ್ರಮದ ಸಮಾರೋಪ ಸಮಾರಂಭ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಜಿಲ್ಲೆಯ ಕುಮಟಾ, ಕಾರವಾರ, ಶಿರಸಿ ಹಾಗೂ ಇತರ ಕಡೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಿರಂತರವಾಗಿ. ನಡೆಯುತ್ತಿರುತ್ತದೆ. ಆದರೆ ಭಟ್ಕಳ ತಾಲೂಕಿನಲ್ಲಿ ಸಾಂಸ್ಕ್ರತಿಕ ಕಾಯಕ್ರಮಕ್ಕೆ ಹಿನ್ನಡೆಯಿದೆ ಎಂಬ ಅಪವಾದಕ್ಕೆ ಪೂರಕವಾಗಿ ಭಟ್ಕಳ ಉತ್ಸವವನ್ನು ಅದ್ದೂರಿಯಾಗಿ ಮಾಡುವುದು ಮೂಲಕ ತಾಲೂಖಿನ ಕೀರ್ತಿಯನ್ನು ಕ್ರಿಯಾಶೀಲ ಗೆಳೆಯರ ಸಂಘ ಹೆಚ್ಚಿಸಿದೆ. ಭಟ್ಕಳ ಇತಿಹಾಸದಲ್ಲಿ ಪ್ರಥಮವಾಗಿ ದೊಡ್ಡ ಮಟ್ಟದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿ ಯಶಸ್ವಿಯಾಗಿದೆ. ಇಂದು ಕಾರ್ಯಕ್ರಮ ನಡೆಸುವುದು ತುಂಬ ಕಷ್ಟಕರ ಕೆಲಸ. ಈ ಸಂಘವು ಸಾಂಸ್ಕ್ರತಿಕ ಕಾರ್ಯಕ್ರಮದ ಪ್ರೋತ್ಸಾಹದ ಜೊತೆಗೆ ಕರೋನಾ ಸಮಯದಲ್ಲಿ ಸಮಾಜಿಮುಖಿಯಾಗಿ ಕೆಲಸ ಮಾಡಿದೆ. ಇಂತಹ ಸಂಘವು ನಮ್ಮ ತಾಲೂಕಿನಲ್ಲಿ ಇರುವುದು ನಮ್ಮಗೆ ಹೆಮ್ಮೆಯ ವಿಷಯವಾಗಿದೆ. ಎಂದರು.
ಕಾರ್ಯಕ್ರಮವದಲ್ಲಿ ಉಪಸ್ಥಿತರಿದ್ದ ಪಶ್ವಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ 2019ರಲ್ಲಿ ಪ್ರಾರಂಭವಾದ ಈ ಸಂಘ ಅದ್ಬುತವಾಗಿ ಈ ಭಟ್ಕಳ ಉತ್ಸವವನ್ನು ಯಶಸ್ವಿಯಾಗಿ ನಡೆಸಿದೆ. ಸಂಘದ ಎಲ್ಲ ಸದಸ್ಯರು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಈ ಸಂಘವು ತನ್ನ ಕಾರ್ಯಚಟುಕೆಗಳ ಮೂಲಕ ಭಟ್ಕಳದವರ ಹೃದಯ ಶ್ರೀಮಂತಿಕೆಯನ್ನು ಗೆದ್ದಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ತಲೂಕು ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ, ಉದ್ಯಮಿ ಕೇದಾರ ಕೊಲ್ಲೆ, ಶಿಕ್ಷಕ ಪ್ರಕಾಶ ಶಿರಾಲಿ, ಶೈಲೇಂದ್ರ ಜೈನ್ ಮಾತನಾಡಿದರು.
ಭಟ್ಕಳ ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಕಾಂತ ನಾಯ್ಕ ವಹಿಸಿ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಹಲವರು ಪಕ್ಷ ಬೇದ ಜಾತಿ, ದರ್ಮ ಮರೆತು ಸಹಕರಿಸಿದ್ದಾರೆ. ಅವರೆಲ್ಲರ ಸಹಕಾರದಿಂದ ಭಟ್ಕಳವ ಉತ್ಸವವನ್ನು ಅದ್ದೂರಿಯಾಗಿ ನಡೆಸಿ ಯಶಸ್ವಿಗೊಳಸಿದ್ದೇವೆ ಎಂದರು.
ಉತ್ಸವ ಸಮಿತಿಯ ಸಹ ಸಂಚಾಲಕ ಮನಮೋಹನ ನಾಯ್ಕ ಸ್ವಾಗತಿಸಿದರು.
ವೇದಿಕೆಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಗಜಾನನ ಆಚಾರ್ಯ, ಖಾರ್ವಿ ಸಮಾಜದ ಅಧ್ಯಕ್ಷ ಗೋವಿಂದ ಖಾರ್ವಿ , ಸಂತ ರೋಹಿದಾಸ ಸಮಾಜದ ಮುಖಂಡರಾದ ಮೋಹನ ಶಿರಾಲಿಕರ, ಕ್ರಿಯಾಶೀಲ ಸಂಘದ ಕಾರ್ಯದರ್ಶಿ ಅರುಣ ನಾಯ್ಕ .ಭಟ್ಕಳದ ಉತ್ಸವದ ಮೇಳದ ಸಂಯೋಜಕ ಶ್ರೀಧರ ಮರವಂತೆ, ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಸಾಧಕರಾದ ನಾಗೆಂದ್ರ ಅಣ್ಣಪ್ಪ ನಾಯ್ಕ,ಬೆಳಕೆ(ಡಿಸ್ಕಸ್ ಥ್ರೋ) ದರ್ಶನ್ ನಾಯ್ಕ ಜಾಲಿ,(ಪೇಂಟಿಂಗ) ನಾಗಶ್ರೀ ನಾಯ್ಕ,ಭಟ್ಕಳ.(ಕರಾಟೆ) ಶ್ರೀಮತಿ ರೂಪಾ ಖಾರ್ವಿ ( ಉತ್ತಮ ಶಿಕ್ಷಕಿ) ಭವ್ಯ ದೇವಾಡಿಗ,ಕಾಯ್ಕಿಣಿ,ಭಟ್ಕಳ. ( ಎತ್ತರ ಜಿಗಿತ) ರಶ್ಮಿತ ದೇವಾಡಿಗ, ಮುರುಡೇಶ್ವರ,(ಎತ್ತರಜಿಗಿತ) ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶ್ರಿಕ್ಷಕ ಶ್ರೀಧರ ಶೇಟ್ ಹಾಗೂ ಪೂರ್ಣಿಮಾ ಕರ್ಕಿಕರ ಕಾರ್ಯಕ್ರಮ ನಿರೂಪಿಸಿದರು.
ಪಾಂಡುರಂಗ ನಾಯ್ಕ ವಂದನಾರ್ಪಣೆ ಮಾಡಿದರು. ಸಬಾ ಕಾರ್ಯಕ್ರಮದ ನಂತರ ಪ್ರೆಂಡ್ಸ್ ಮೆಲೋಡಿಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.20 ಸಾವಿರಕ್ಕೂ ಅದಿಕ ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.