×
Ad

ಭಟ್ಕಳ: ಲಾರಿ - ಬೈಕ್‌ ಢಿಕ್ಕಿ; ಯುವತಿ ಮೃತ್ಯು, ಇಬ್ಬರಿಗೆ ಗಾಯ

Update: 2023-11-26 17:44 IST

ಭಟ್ಕಳ: ವೆಂಕಟಾಪುರ ಹೆದ್ದಾರಿಯಲ್ಲಿ ಬೈಕ್ ಹಾಗೂ ಲಾರಿ ನಡುವೆ  ಅಪಘಾತ ಸಂಭವಿಸಿ ಯುವತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ.

ಮೃತ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ನಿವಾಸಿ ಲಿಖಿತಾ (23) ಎಂದು ಗುರುತಿಸಲಾಗಿದೆ.

ಮೃತ ಲಿಖಿತಾ ಇತ್ತೀಚೆಗೆ ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಭಟ್ಕಳದಲ್ಲಿರುವ ತನ್ನ ಚಿಕ್ಕಮ್ಮಳ ಮನೆಗೆ ಬಂದಿದ್ದರು. ಚಿಕ್ಕಮ್ಮ ಗಿರಿಜಾ (45) ಎಂಬವರು ಗಾಯಗೊಂಡಿದ್ದು, ಸೋದರ ಸಂಬಂಧಿ ಗಣೇಶ (35) ಎಂಬವರು ಬೈಕ್‌ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. 

ಅಪಘಾತಕ್ಕೆ ಕಾರಣವಾದ ಲಾರಿ ಸ್ಥಳದಿಂದ ಪರಾರಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News