×
Ad

ಭಟ್ಕಳ: ಮೀನು ಮಾರಾಟ ಮಾಡುವ ಮಹಿಳೆಯ ಸರ ಕಳವು

Update: 2023-09-21 23:19 IST

ಭಟ್ಕಳ: ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮನೆ ಮನೆಗೆ ತೆರಳಿ ಮೀನು ಮಾರಾಟ ಮಾಡುವ ಮಹಿಳೆಯೋರ್ವಳ ಸರಗಳ್ಳತನ ಮಾಡಿ ಪರಾರಿಯಾದ ಘಟನೆ ಶಿರಾಲಿಯ ಸೋನಾರಾಕೇರಿ ಕ್ರಾಸ್ ಸಮೀಪ ನಡೆದಿದೆ.

ಸರಗಳ್ಳತನವಾದ ಮೀನುಗಾರ ಮಹಿಳೆಯನ್ನು ನಾಗಮ್ಮ ಮಹಾದೇವ ಮೊಗೇರ ಎಂದು ತಿಳಿದು ಬಂದಿದೆ. ಈಕೆ ಎಂದಿನಂತೆ ಶಿರಾಲಿಯ ಅಕ್ಕ ಪಕ್ಕದ ಗ್ರಾಮದ ಮನೆ ಮನೆಗಳಿಗೆ ಮೀನು ವ್ಯಾಪಾರ ಮಾಡಿಕೊಂಡು ಸೋನಾರಕೇರಿ ಕ್ರಾಸ್‌ ನಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಬರುತ್ತಿದ್ದಾಗ ಮುಂದಿನಿಂದ ಬಂದ ಇಬ್ಬರು ಏನು ಮೀನು ಇದೆ ಎಂದು ವಿಚಾರಿಸಿದಾಗ ಮೀನು ಮಾರಾಟ ಮಹಿಳೆ ಬಂಗಡೆ ಮೀನು ಎಂದು ಹೇಳಿದ್ದಾಳೆ. ಈ ವೇಳೆ ಬೈಕ್‌ ಸವಾರರು ಹೆಲ್ಮೆಟ್ ಧರಿಸಿದ್ದು,  ಹಿಂಭಾಗದಲ್ಲಿ ಕುಳಿತಿದ್ದ ಕಪ್ಪು ಬಣ್ಣದ ಚಹರೆಯುಳ್ಳ ವ್ಯಕ್ತಿ ಮಹಿಳೆಯ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು 27 ಗ್ರಾಂ ತೂಕದ ಬಂಗಾರದ ಚೈನ್ ಹರಿದುಕೊಂಡು ನಾಪತ್ತೆಯಾಗಿದ್ದಾರೆ.

ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News