×
Ad

ಭಟ್ಕಳ: ಮಗುವಿನೊಂದಿಗೆ ಮಹಿಳೆ ನಾಪತ್ತೆ; ದೂರು ದಾಖಲು

Update: 2024-02-03 15:46 IST

ಭಟ್ಕಳ: ವಿವಾಹಿತ ಯುವತಿಯೊಬ್ಬಳು ತನ್ನ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಬದ್ರಿಯಾಕಾಲೋನಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಯುವತಿಯನ್ನು ಮಿಶ್ರಿಯಾ (25ವರ್ಷ)ಎಂದು ಗುರುತಿಸಲಾಗಿದೆ. ಜ. 30 ರಂದುಬೆಳಿಗ್ಗೆ 11 ತಾಯಿ ಮನೆಗೆ ಹೋಗುವುದಾಗಿ ಪಕ್ಕದ ಮನೆಯವರಲ್ಲಿ ತಿಳಿಸಿದ್ದ ಈಕೆ ತವರು ಮನೆಗೂ, ಸಂಬಂಧಿಕರಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾಣೆಯಾದಮಹಿಳೆಯಚಹರೆ: ದುಂಡನೆಯಮುಖ, ಗೋಧಿಮೈಬಣ್ಣ, ತೆಳ್ಳನೆಯಮೈಕಟ್ಟು, 5.0 ಅಡಿಎತ್ತರ, ಬಲಗಣ್ಣಿನ ಹತ್ತಿರ ಕಪ್ಪು ಮಚ್ಚೆ ಇದೆ. ಬ್ಯಾರಿ, ಕನ್ನಡ, ಭಾಷೆಮಾತನಾಡುತ್ತಾಳೆ. ಚೂಡಿದಾರ ಹಾಗೂಕಪ್ಪುಬುರ್ಖಾಧರಿಸಿದ್ದಾಳೆ.

ಕಾಣೆಯಾದಮಗುವಿನಚಹರೆ: ದುಂಡನೆಯಮುಖ, ಗೋಧಿಮೈಬಣ್ಣ, ತೆಳ್ಳನೆಯಮೈಕಟ್ಟು 3.0 ಅಡಿ ಎತ್ತರಬ್ಯಾರಿ, ಭಾಷೆಮಾತನಾಡುತ್ತಾಳೆ. ಗೌನ್ ಧರಿಸಿದ್ದಾಳೆ.

 ಸಾರ್ವಜನಿಕರು ಇವರನ್ನು ಗುರುತಿಸಿದರೆ  ಭಟ್ಕಳ ಗ್ರಾಮೀಣ ಪೊಲೀಸ್ಠಾಣೆ ದೂರವಾಣಿಸಂಖ್ಯೆ 08385-227333, ಮೊಬೈಲ್ ನಂ. 9480805252 ಕಾರವಾರ ಪೊಲೀಸ್‌ ಕಂಟ್ರೋಲ್ರೂಂ. 08382-226550/112/100 ಗೆ ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣಪೊಲೀಸ್ಠಾಣೆ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News