×
Ad

ಭಟ್ಕಳ ತಾಲೂಕು ಆಸ್ಪತ್ರೆಗೆ ಉದ್ಯಮಿ ರಾಮನಾಥ ಶಾನಭಾಗರಿಂದ 50 ಲಕ್ಷ ರೂ. ದೇಣಿಗೆ

Update: 2025-05-29 22:10 IST

ಭಟ್ಕಳ : ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ 10 ಹಾಸಿಗೆಗಳ ತುರ್ತು ಮತ್ತು ಅಪಘಾತ ಚಿಕಿತ್ಸಾ ವಾರ್ಡ್ ನಿರ್ಮಾಣವಾಗಲಿದೆ. ಇದಕ್ಕಾಗಿ ಅಮೆರಿಕದಲ್ಲಿ ನೆಲೆಸಿರುವ ಖ್ಯಾತ ಎನ್‌ಆರ್‌ಐ ಉದ್ಯಮಿ ವಾಮನ್ ರಾಮನಾಥ ಶಾನಭಾಗ ಅವರು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭವು ಬುಧವಾರ ನಡೆಯಿತು.

ಸಮಾರಂಭದಲ್ಲಿ ಮಾತನಾಡಿದ ಶಾನಭಾಗ ಅವರು, ಈ ದೇಣಿಗೆಯನ್ನು ತಮ್ಮ ದಿವಂಗತ ಪತ್ನಿ ಗೀತಾ ಶಾನಭಾಗ ಅವರ ಸ್ಮರಣಾರ್ಥವಾಗಿ ನೀಡಲಾಗಿದೆ ಎಂದು ತಿಳಿಸಿದರು. 

ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಅವರೊಂದಿಗೆ ಆಸ್ಪತ್ರೆಯ ಅಗತ್ಯಗಳನ್ನು ಚರ್ಚಿಸಿದ ನಂತರ, ಗಂಭೀರ ಸ್ಥಿತಿಯ ರೋಗಿಗಳಿಗೆ ಚಿಕಿತ್ಸೆ ನೀಡಲು ಸಂಪೂರ್ಣ ಸೌಕರ್ಯವುಳ್ಳ ತುರ್ತು ಮತ್ತು ಅಪಘಾತ ಚಿಕಿತ್ಸಾ ವಾರ್ಡ್ ನಿರ್ಮಾಣಕ್ಕೆ ಧನಸಹಾಯ ನೀಡಲು ಶಾನಭಾಗ ಅವರು ತೀರ್ಮಾನಿಸಿದರು.

ನಾಗಯಕ್ಷಿ ಧರ್ಮ ದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ್ ಪ್ರಭು, ಭಟ್ಕಳ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀಧರ ಶಾನಭಾಗ, ನಾಮಧಾರಿ ಸಮುದಾಯದ ಗೌರವಾಧ್ಯಕ್ಷ ಕೃಷ್ಣ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯಕ್ ಮತ್ತು ನಾಮಧಾರಿ ಸಮುದಾಯದ ಮಾಜಿ ಅಧ್ಯಕ್ಷ ಎಂ.ಆರ್. ನಾಯಕ್, ಡಾ.ಸವಿತಾ ಕಾಮತ್, ಡಾ.ಲಕ್ಷ್ಮೇಶ್, ಡಾ.ಸತೀಶ್ ಬಿ., ಡಾ.ಸುರಕ್ಷಿತ್ ಶೆಟ್ಟಿ, ಡಾ.ಸುರೇಶ ನಾಯಕ್, ವಸಂತ ಶಾನಭಾಗ, ರಾಜೇಶ ನಾಯಕ್, ರಮೇಶ ಖಾರ್ವಿ, ಅಬ್ದುಲ್ ಸಮಿ ಕೋಲಾ, ನಜೀರ್ ಕಾಸಿಮ್‌ಜಿ, ಸಲ್ಮಾನ್ ಶೇಖ್, ನಜೀರ್ ಕಾಸಿಮ್‌ ಜಿ., ನಿಸಾರ್ ಅಹ್ಮದ್, ಮತ್ತು ವೆಂಕಟೇಶ ನಾಯಕ್ ಅಸರಕೇರಿ ಸೇರಿದಂತೆ ಹಲವಾರು ಸಮುದಾಯ ಮುಖಂಡರು ಮತ್ತು ವೈದ್ಯಕೀಯ ವೃತ್ತಿಪರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News