×
Ad

ಗೋಕರ್ಣ: ಸಮುದ್ರ ಪಾಲಾಗುತ್ತಿದ್ದ 8 ಜನರ ರಕ್ಷಣೆ

Update: 2023-10-10 20:04 IST

ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರ ಪಾಲಾಗಿದ್ದ ಹುಬ್ಬಳ್ಳಿಯ 8 ಜನರನ್ನು ಲೈಫ್ ಗಾರ್ಡ್ ರಕ್ಷಣೆ ಮಾಡಿದ ಘಟನೆ ಗೋಕರ್ಣದಲ್ಲಿ ನಡೆದಿದೆ.

ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದ ಹುಬ್ಬಳ್ಳಿಯ ಪರಶುರಾಮ ಕುಟುಂಬದ  ಸದಸ್ಯರು ಸಮುದ್ರದಲ್ಲಿ ಈಜಲು ತೆರಳಿದ್ದರು. ಅಲೆಯ ರಸಭಕ್ಕೆ ಎಂಟು ಜನರು ಸಮುದ್ರ ಪಾಲಾಗಿದ್ದರು.

ಸ್ಥಳದಲ್ಲೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ ತಕ್ಷಣ ಸಮುದ್ರಕ್ಕೆ ಇಳಿದು, ಪರಶುರಾಮ (44) ರುಕ್ಷ್ಮಿಣಿ ( 38) ಧೀರಜ ( 14) ಅಕ್ಷರ (14) ಖುಷಿ ( 13) ದೀಪಿಕಾ ( 12 ) ನಂದ ಕಿಶೋರ ( 10 ) ಎಲ್ಲರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮುಳುಗುತ್ತಿದ್ದ ಹುಬ್ಬಳ್ಳಿಯ ಒಂದೇ ಕುಟುಂಬದ 7 ಜನರನ್ನು ಹಾಗೂ ಪಿಂಡ ಪ್ರದಾನ ಮಾಡಲು ಬಂದಿದ್ದ ಓರ್ವ ವ್ಯಕ್ತಿಯನ್ನು ಲೈಫ್ ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ, ಲೋಕೇಶ, ಹರಿಕಾಂತ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News