×
Ad

ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನ ಯೋಜನೆಗಳಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

Update: 2025-06-27 14:29 IST

ಭಟ್ಕಳ: ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ಜಿಲ್ಲಾ ಪಂಚಾಯಿತಿ), ಭಟ್ಕಳ, 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಹಾಗೂ ಇತರ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳಿಗೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕಾಳುಮೆಣಸು, ಕಂದುಬಾಳೆ, ಅಂಗಾಶ ಬಾಳೆ, ಡ್ರಾಗನ್, ರಾಂಬೂಟನ್, ಹೈಬ್ರಿಡ್ ತರಕಾರಿ ಕಾರ್ಯಕ್ರಮಗಳು, ಪಾಸ್ಮಿಕ್ ಹೊದಿಕೆ, ಗೇರು, ಮಾವು ಪುನಶ್ಚೇತನ, ಹಾಗೂ ರೋಗ-ಕೀಟ ನಿಯಂತ್ರಣ ಯೋಜನೆಯಡಿ ಮೈಲುತುತ್ತ ಖರೀದಿಗೆ ಪ್ರತಿ ಹೆಕ್ಟೇರ್‌ಗೆ 1,500 ರೂ. ಸಹಾಯಧನ ನೀಡಲಾಗುವುದು. ರೈತರು GST ಬಿಲ್‌ನೊಂದಿಗೆ RTC, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮುಂತಾದ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.

ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಾಣ, ನೀರು ಸಂಗ್ರಹಣಾ ಘಟಕ ನಿರ್ಮಾಣ, ಮತ್ತು 20 HP ಟ್ರ್ಯಾಕ್ಟರ್ ಖರೀದಿಗೆ ಆಸಕ್ತ ರೈತರು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು.

ಇತರ ಯೋಜನೆಗಳು: RKVY ಯೋಜನೆ: ನೀರು ಸಂಗ್ರಹಣಾ ಘಟಕಕ್ಕೆ ಸಹಾಯಧನ. PMKSY ಯೋಜನೆ: ಹನಿ ನೀರಾವರಿ ಘಟಕಕ್ಕೆ ಶೇ. 90ರಷ್ಟು ಸಹಾಯಧನ. SMAM ಯೋಜನೆ: ತೋಟಗಾರಿಕೆಯಲ್ಲಿ ಯಾಂತ್ರೀಕರಣಕ್ಕಾಗಿ ಅಲ್ಯೂಮಿನಿಯಂ ಏಣಿ, ವೀಡ್ ಕಟರ್, ಹುಲು ಕತ್ತರಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಕಾಳುಮೆಣಸು ಬಿಡಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ಸಿಂಪರಣಾ ಯಂತ್ರ, ಪವರ್ ಟಿಲ್ಲರ್, ಮತ್ತು ವೀಡರ್ ಖರೀದಿಗೆ ಸಹಾಯಧನ ನೀಡುತ್ತಿದ್ದು, ಜೇಷ್ಠಮತೆ ಅನುದಾನ ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಭಟ್ಕಳದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News