×
Ad

ಭಟ್ಕಳ ಮುಸ್ಲಿಮ್ ಜಮಾಅತ್ ದುಬೈಗೆ 50 ವರ್ಷದ ಸಂಭ್ರಮ ಹಿನ್ನಲೆ; ಜಶ್ನ್ ಪನ್ನಾಸ್-2025 ಕಾರ್ಯಕ್ರಮ

Update: 2025-08-16 17:57 IST

ಭಟ್ಕಳ: ಭಟ್ಕಳ ಮುಸ್ಲಿಮ್ ಜಮಾಅತ್ ದುಬೈ ಇದರ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಟ್ಕಳದ ರಾಬಿತಾ ಸೂಸೈಟಿ ಸಭಾಂಗಣದಲ್ಲಿ ʼಜಶ್ನ್ ಪನ್ನಾಸ್-2025ʼ ಕಾರ್ಯಕ್ರಮ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನಡೆಯಿತು.

ನಗರದ ಪ್ರಮುಖ ಧಾರ್ಮಿಕ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಟ್ಕಳ ಮುಸ್ಲಿಮ್ ಜಮಾಅತ್‌ ದುಬೈ ಇದರ ಸೇವಾ ಕಾರ್ಯವನ್ನು ಪ್ರಶಂಸಿಸಿದರು.

ದುಬೈ ಮತ್ತು ಶಾರ್ಜಾ ನಗರಗಳಲ್ಲಿ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೂ, ಜಮಾಅತ್‌ನ ಸದಸ್ಯರು ಸದಾ ಭಟ್ಕಳದ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗಾಗಿ ಶ್ರಮಿಸುತ್ತಿದ್ದಾರೆ ಎಂದು ವಕ್ತಾರರು ಹೇಳಿದರು. 

ಕಾರ್ಯಕ್ರಮದಲ್ಲಿ, ಜಮಾತ್‌ನ ಅರ್ಧ ಶತಮಾನದ ಸೇವಾ ಪಯಣವನ್ನು ತೋರಿಸುವ ವೀಡಿಯೋ ಪ್ರದರ್ಶಿಸಲಾಯಿತು. ಅಲ್ಲದೆ, ಭಟ್ಕಳದ ಹಲವು ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸೇವೆ ಮಾಡಿದ ದಿ.ಎಸ್‌.ಎಂ. ಸೈಯದ್‌ ಖಲೀಲ್‌ ರಹ್ಮಾನ್‌ ಅವರ ಜೀವನಚರಿತ್ರೆ ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಲಾಯಿತು.

ಅಂಜುಮನ್‌ ಹಾಮಿ-ಇ ಮುಸ್ಲಿಮೀನ್ ಅಧ್ಯಕ್ಷ ಮುಹಮ್ಮದ್ ಯೂನಸ್‌ ಕಾಜಿಯಾ ಮಾತನಾಡಿ, "ದುಬೈ ಜಮಾಅತ್‌ ಗಲ್ಫ್‌ನ ಎಲ್ಲಾ ಭಟ್ಕಳಿ ಸಂಘಗಳ ಪೋಷಕಿ" ಎಂದು ಹೇಳಿದರು. ಗಲ್ಫ್‌ನಲ್ಲಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸು ಕಂಡಿರುವ ಭಟ್ಕಳದ ಯುವಕರು, ತಮ್ಮ ಊರಿಗೆ ಮತ್ತು ಸಂಸ್ಥೆಗಳಿಗೆ ಬದ್ಧರಾಗಿರುವುದು ಹಿರಿಯರ ಸಂಸ್ಕಾರದ ಫಲ ಎಂದು ಹೇಳಿದರು. ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾ ಬಂದ್ರಿ, ತಂಝೀಮ್ ಸಂಕೀರ್ಣ(ಕಾಂಪ್ಲೆಕ್ಸ್) ನಿರ್ಮಾಣಕ್ಕೆ ದುಬೈ ಜಮಾತ್‌ ನೀಡಿದ ದೊಡ್ಡ ದೇಣಿಗೆಯನ್ನು ಸ್ಮರಿಸಿದರು.

ದುಬೈ ಜಮಾಆತ್ ಉಪಾಧ್ಯಕ್ಷ ಇಮ್ರಾನ್ ಖತೀಬ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿಲಾನಿ ಮೊಹ್ತಶಮ್ ಸ್ವಾಗತಿಸಿದರು. ಮಾಜಿ ಪ್ರಧಾನ ಕಾರ್ಯದರ್ಶಿ ಶಕೇಬ್ ಶಾಬಂದಿ ನಿರೂಸಿದರು.

ಮೌಲಾನಾ ಅಬ್ದುರ್‌ ರಬ್‌ ಖತೀಬ್‌, ಮೌಲಾನಾ ಖ್ವಾಜಾ ಮೊಯಿನ್‌ಉದ್ದೀನ್‌, ಮೌಲವಿ ಅಬ್ದುಲ್‌ ಅಲೀಂ‌, ಉಮರ್‌ ಫಾರೂಕ್‌, ಆಫ್ತಾಬ್‌ ಹುಸೈನ್‌ ಸೇರಿದಂತೆ ಅನೇಕ ಗಣ್ಯರು ಮಾತನಾಡಿದರು.

ರಾಬಿತಾ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅತೀಕುರ್ ರಹ್ಮಾನ್ ಮುನಿರಿ, ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ.ನದ್ವಿ, ಮೊಹ್ತಶಮ್ ಜಾನ್ ಅಬ್ದುಲ್ ರಹಮಾನ್, ಮುಹಮ್ಮದ್ ಬಾಪು ಅಬ್ದುಲ್ ಖಾದಿರ್ ಬಾಷಾ ರುಕ್ನುದ್ದೀನ್, ಅಮ್ಜದ್ ಶಾಬಂದ್ರಿ, ಮುಹಮ್ಮದ್ ಗೌಸ್ ಖಲೀಫ, ಕೆ.ಎಂ.ಸಮೀರ್, ಕಮರ್ ಸಾದ, ಎಸ್.ಎಂ.ಅರ್ಷದ್, ಅತಿಥಿಗಳಾಗಿ ಆಗಮಿಸಿದ್ದರು. ಜಮಾತ್ ನ ಕೋಶಾಧಿಕಾರಿ ಅಫಾಕ್ ನಾಯ್ತೆ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News