×
Ad

ಕಾರವಾರ: ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನೆಯಲ್ಲಿ ಬೆಂಕಿ‌ ಆಕಸ್ಮಿಕ; ಸುಟ್ಟು ಕರಕಲಾದ ಜಿಮ್ ಉಪಕರಣಗಳು

Update: 2024-06-25 12:35 IST

ಕಾರವಾರ:ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಮನೆಯಲ್ಲಿ ಬೆಂಕಿ ಅವಘಡವಾಗಿದ್ದು ವಸ್ತುಗಳು ಸುಟ್ಟು ಹೋಗಿರುವ ಘಟನೆ ನಡೆದಿದೆ.

ಶಿರಸಿ ನಗರದ ಕೆ.ಎಚ್.ಬಿ ಕಾಲನಿಯಲ್ಲಿರುವ ಅನಂತಕುಮಾರ ಹೆಗಡೆಯವರ ಮನೆಯ ಮೇಲಭಾಗದ ಜಿಮ್ ನಲ್ಲಿ ಮಂಗಳವಾರ ಬೆಳಿಗ್ಗೆ 4.30 ರ ವೇಳೆಗೆ   ಬೆಂಕಿ ಕಾಣಿಸಿತ್ತು. ಪರಿಣಾಮವಾಗಿ ಜಿಮ್ ಉಪಕರಣಗಳು ಸುಟ್ಟು ಹಾಳಾಗಿದೆ.

ಮಾಜಿ ಸಂಸದರು ಮತ್ತು ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿ ಆರಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆಗಿರಬಹುದೆಂದು ಶಂಕಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News