×
Ad

ಕಾರವಾರ: ನೌಕಾನಲೆಯ ಕಾರ್ಮಿಕ ಕಾಲೊನಿಯಲ್ಲಿ ಸಿಲಿಂಡರ್​ ಸ್ಫೋಟ

Update: 2024-03-10 12:15 IST

ಕಾರವಾರ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ಕೈದು ಶೆಡ್‌ ಗಳಿಗೆ ಬೆಂಕಿ ತಗುಲಿದ ಘಟನೆ ತಾಲೂಕಿನ ಮುದಗಾ ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ರವಿವಾರ ಸಂಭವಿಸಿದೆ.

ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪನಿಯ ಕಾರ್ಮಿಕರಿಗಾಗಿ ಶೆಡ್ ಗಳನ್ನು ನಿರ್ಮಿಸಲಾಗಿದೆ. ಲೇಬರ್ ಕಾಲನಿಯ ಬಿ2 ಸಾಲಿನ ಶೆಡ್ ಒಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದಾಗಿ ಒಂದು ಸಾಲಿನ ನಾಲ್ಕೈದು ಶೆಡ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.  

ಕಾಲೊನಿಯಲ್ಲಿ ದಟ್ಟ ಹೊಗೆ ಆವರಿಸಿದ್ದು,  ಬೆಂಕಿಯನ್ನು ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News