×
Ad

ಕಾರವಾರ: ಅಬಕಾರಿ ಜಿಲ್ಲಾಧಿಕಾರಿ ರೂಪಾ ಮನೆ ಮೇಲೆ ಲೋಕಾಯುಕ್ತ ದಾಳಿ

Update: 2024-03-27 13:22 IST

ಕಾರವಾರ: ಅಬಕಾರಿ ಜಿಲ್ಲಾಧಿಕಾರಿ ಎಂ.ರೂಪಾ ಅವರ ಮನೆ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಂ.ರೂಪಾ ಅವರ ಬೆಂಗಳೂರಿನಲ್ಲಿರುವ ಎರಡು ಮನೆ, ಶಿವಮೊಗ್ಗ ಹೊಸನಗರದಲ್ಲಿನ ಮನೆ ಹಾಗೂ ಕಾರವಾರದಲ್ಲಿರುವ ಮನೆಯ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.ಈ ವೇಳೆ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಉಡುಪಿ ಲೋಕಾಯುಕ್ತ ಎಸ್ಪಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ  ಕಾರವಾರ ಲೋಕಾಯುಕ್ತ ಎಸ್ಪಿ ಕೂಡಾ ಭಾಗಿಯಾಗಿದ್ದರು. 

ರೂಪ ಅವರು ಯಾವ ಯಾವ ಜಿಲ್ಲೆಯಲ್ಲಿ ಅಬಕಾರಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿರುವ ಕಡೆಗಳಲ್ಲೆಲ್ಲಾ ಮನೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಇವರಿಗೆ  ಸಂಬಂಧಿಸಿದ ಐದು ಕಡೆ ದಾಳಿ  ನಡೆದಿದೆ ಎನ್ನಲಾಗಿದೆ .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News