×
Ad

ಕಾರವಾರ: ಅನುಮಾನಾಸ್ಪದವಾಗಿ ಯೋಧ ಮೃತ್ಯು

Update: 2024-11-11 23:02 IST

ಕಾರವಾರ: ತಾಲೂಕಿನ ಕೈಗಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧರೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಭವಿಸಿದೆ.

ಮೃತ ಯೋಧ ಬಿಹಾರ ಮೂಲದವನಾಗಿದ್ದು, ಹರವಿಂದ‌ರ್ ಕುಮಾ‌ರ್ ರಾಮ್ (28) ಎಂದು ಗುರುತಿಸಲಾಗಿದೆ.

ಅವರು ಎರಡು ವರ್ಷದಿಂದ ಮಲ್ಲಾಪುರದ ಸಿಐಎಸ್‌ಎಪ್‌ ಕ್ಯಾಂಪಿನಲ್ಲಿ ಕರ್ತವ್ಯದಲ್ಲಿದ್ದರು. ಪೆಟ್ರೋಲಿಂಗ್ ತೆರಳುವ ವೇಳೆಯಲ್ಲಿ ವಾಹನದ ಹಿಂಬದಿ ಕೂತಿದ್ದರು ಎನ್ನಲಾಗಿದೆ. ರೈಫಲ್ಲಿಂದ ಗುಂಡು ಹಾರಿದ್ದು ತಲೆಯ ಭಾಗ ಸೀಳಿ ಛಿದ್ರವಾಗಿದೆ. ತಾನು ಬಳಸುತ್ತಿದ್ದ ರೈಪಲ್‌ನಿಂದಲೇ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಮಲ್ಲಾಪುರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News