×
Ad

ಕಾರವಾರ: ನಡು ರಸ್ತೆಯಲ್ಲೇ ಪಲ್ಟಿಯಾದ ವೋಲ್ವೋ ಬಸ್‌; ಪ್ರಯಾಣಿಕರಿಗೆ ಗಾಯ

Update: 2024-02-06 11:37 IST

ಕಾರವಾರ: ಬೆಂಗಳೂರಿನಿಂದ ಗೋವಾ ಮಾಗ೯ವಾಗಿ ಹೊರಟ ಸೀಬಡ್೯ ವೊಲ್ವೋ ಬಸ್ ನಡು ರಸ್ತೆಯಲ್ಲೆ ಪಲ್ಟಿಯಾಗಿರುವ ಘಟನೆ ಮಂಗಳವಾರ ಬೆಳಗಿನ ಜಾವ ಅಂಕೋಲಾ ತಾಲೂಕಿನ ವಜ್ರಳ್ಳಿಯ ಸಮೀಪ ನಡೆದಿದೆ.

ಬಸ್ ನಲ್ಲಿ ಕಡಿಮೆ ಪ್ರಯಾಣಿಕರಿದ್ದ ಕಾರಣ ಕನಿಷ್ಠ ಹತ್ತು ಮಂದಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ  ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ತಕ್ಷಣವೇ‌ ನಾಲ್ಕು ಆಂಬುಲೆನ್ಸ್ ಗಳ ಮೂಲಕ ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News