×
Ad

ಕುಮಟಾ | ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ಚೂರಿ ಇರಿತ: ಆರೋಪಿಯ ಸೆರೆ

Update: 2024-05-23 09:59 IST

ಸಂತೋಷ ಪಾಂಡುರಂಗ | ರಾಜೇಶ ರಮೇಶ ಅಂಬಿಗ

ಕುಮಟಾ, ಮೇ 23: ಯುವಕನೋರ್ವನ ಕಣ್ಣಿಗೆ ಖಾರದ ಪುಡಿ ಎರಚಿ, ಕುತ್ತಿಗೆಗೆ ಚಾಕು ಇರಿದು ಹಲ್ಲೆ ನಡೆಸಿದ ಘಟನೆ ಕುಮಟಾದ ಮಣಕಿ ಮೈದಾನದಲ್ಲಿ ಘಟನೆ ನಡೆದಿದೆ.

ಕುಮಟಾ ದುಂಡಕುಳಿ ನಿವಾಸಿ ಸಂತೋಷ ಪಾಂಡುರಂಗ ಅಂಬಿಗ (27) ಹಲ್ಲೆಗೊಳಗಾದ ಯುವಕ. ಹೆಗಡೆ ಚಿಟ್ಟಿಕಂಬಿ ಗ್ರಾಮದ ನಿವಾಸಿ ರಾಜೇಶ ರಮೇಶ ಅಂಬಿಗ(27) ಹಲ್ಲೆ ಆರೋಪಿಯಾಗಿದ್ದು, ಆತನನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ರಾಜೇಶ ರಮೇಶನನ್ನು ಈ ಹಿಂದೆ ಪ್ರೀತಿಸುತ್ತಿದ್ದ ಯುವತಿಯೋರ್ವಳು ಬಳಿಕ ಆತನ ವರ್ತನೆ ಸರಿ ಇಲ್ಲ ಕಾರಣ ನೀಡಿ ಆತನೊಂದಿಗಿದ್ದ ಪ್ರೇಮ ಸಂಬಂಧವನ್ನು ಮುರಿದಿದ್ದಳು. ಬಳಿಕ ತನ್ನ ಮಾವನ ಮಗನಾದ ಸಂತೋಷನನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ಇಚ್ಛಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಕೋಪಗೊಂಡಿದ್ದ ರಾಜೇಶ, ಕುಮಟಾದ ಮಣಕಿ ಮೈದಾನದ ಲೈಬ್ರರಿ ಹತ್ತಿರ ಸಂತೋಷರನ್ನು ಕರೆಯಿಸಿಕೊಂಡು ಅವರ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾನೆ. ಆತನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಗಾಯಾಳು ಸಂತೋಷ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ttps://whatsapp.com/channel/0029VaA8ju86LwHn9OQpEq28  ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News