×
Ad

ದಶ ಲಕ್ಷ ಗಿಡ ನೆಡುವ ಅಭಿಯಾನ ಲಾಂಛನ ಬಿಡುಗಡೆ

Update: 2025-06-17 14:33 IST

ಶಿರಸಿ : ಪರಿಸರ ಜಾಗೃತ ಅಂಗವಾಗಿ ಅರಣ್ಯವಾಸಿಗಳಿಂದ ದಶ ಲಕ್ಷ ಗಿಡ ನೆಡುವ ಅಭಿಯಾನ ಐತಿಹಾಸಿಕ ಕಾರ್ಯಕ್ರಮ. ಈ ಕಾರ್ಯಕ್ರಮವು ವೃಕ್ಷ ಕ್ರಾಂತಿಗೆ ನಾಂದಿಯಾಗಲಿ. ಅರಣ್ಯವಾಸಿಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಹಿರಿಯ ಚಿಂತಕ ಕಾಗೋಡು ತಿಮ್ಮಪ್ಪ ಅವರು ಹೇಳಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜೂನ್ 21 ರಿಂದ ದಶಲಕ್ಷ ಗಿಡ ನೆಡುವ 15 ದಿನಗಳ ಅಭಿಯಾನದ ಲಾಂಛನವನ್ನು ಸಾಗರದ ಗ್ರಹ ಕಛೇರಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅರಣ್ಯವಾಸಿಗಳು ಪರಿಸರ ಉಳಿಸಿ, ಬೆಳೆಸಿ. ಅರಣ್ಯದೊಂದಿಗೆ ಜೀವನ ಅವಲಂಬಿತರಾಗಿರಬೇಕು. ಪರಿಸರ ಅಭಿವೃದ್ದಿಯಲ್ಲಿ ಅರಣ್ಯವಾಸಿಗಳ ಪಾತ್ರ ಅತೀ ಮುಖ್ಯ ಹಾಗೂ ಅರಣ್ಯ ಭೂಮಿ ಹಕ್ಕಿನೊಂದಿಗೆ, ಪರಿಸರ ಜಾಗೃತೆ ಹಮ್ಮಿಕೊಂಡಿರುವುದು ಹೋರಾಟಗಾರರ ವೇದಿಕೆಯ ಶ್ರೇಷ್ಠ ಮಟ್ಟದ ಕಾರ್ಯ. ಮನುಷ್ಯ ತನ್ನ ಅವಶ್ಯಕತೆಗಾಗಿ ಕಾಡು ನಾಶ ಮಾಡಿರುವ ಹಿನ್ನಲೆಯಲ್ಲಿ, ಇಂದು ಗಿಡ ನೆಡುವ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಂಡಿರುವುದು ಅರಣ್ಯವಾಸಿಗಳ ಉತ್ತಮ ಸಂಸ್ಕೃತಿ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಜೂನ್ 21 ರಂದು ಏಕಕಾಲದಲ್ಲಿ 500 ಕ್ಕೂ ಮಿಕ್ಕಿ ವಿವಿಧ ತಾಲೂಕಿನ ವಿವಿಧ ಸ್ಥಳಗಳಲ್ಲಿ ಲಕ್ಷಕ್ಕೂ ಮಿಕ್ಕಿ ಗಿಡಗಳನ್ನು ಅರಣ್ಯವಾಸಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವಿವಿಧ ಪ್ರಬೇಧಗಳ ಗಿಡ:

ಗಿಡ ನೆಡುವ ಅಭಿಯಾನದಲ್ಲಿ 100 ಕ್ಕೂ ಮಿಕ್ಕಿ ವಿವಿಧ ಪ್ರಭೇಧಗಳ ಗಿಡ ನೆಡುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News