×
Ad

ಮಧ್ಯಂತರ ಜಾಮೀನು ರದ್ದು: ಶಾಸಕ ಸತೀಶ್ ಸೈಲ್‌ಗೆ ಸಂಕಷ್ಟ

Update: 2025-11-07 23:44 IST

ಶಾಸಕ ಸತೀಶ್ ಸೈಲ್

ಕಾರವಾರ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಶಾಸಕ ಸತೀಶ್ ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮತ್ತೊಂದು ಆಘಾತ ನೀಡಿದೆ. ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿದೆ. ಈ ತೀರ್ಪಿನಿಂದಾಗಿ ಶಾಸಕ ಸೈಲ್ ಮತ್ತೆ ಜೈಲು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಈಡಿ (ಜಾರಿ ನಿರ್ದೇಶನಾಲಯ) ವಿಚಾರಣೆಯ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಸೈಲ್ ಅವರು ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಅಕ್ಟೋಬರ್ 25ರವರೆಗೆ ಜಾಮೀನು ನೀಡಿತ್ತು.

ನಂತರ, ಚಿಕಿತ್ಸೆ ಮತ್ತು ಆರೋಗ್ಯದ ಕಾರಣಗಳನ್ನು ನೀಡಿ ಜಾಮೀನು ಅವಧಿಯನ್ನು ವಿಸ್ತರಿಸಲು ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ಅಂಗೀಕರಿಸಿ, ನವೆಂಬರ್ 7ರವರೆಗೆ ಕಾಲಾವಕಾಶ ನೀಡಿತ್ತು. ಆದರೆ, ಈಗ ಮಧ್ಯಂತರ ಜಾಮೀನು ರದ್ದಾಗಿರುವ ಕಾರಣ, ಸತೀಶ್ ಸೈಲ್ ಅವರು ಮರಳಿ ಜೈಲು ಪಾಲಾಗುವ ಸಾಧ್ಯತೆ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News