ಆರೆಸ್ಸೆಸ್ ಶತಮಾನೋತ್ಸವದ ಪ್ರಯುಕ್ತ ಭಟ್ಕಳದಲ್ಲಿ ಮೆರವಣಿಗೆ
Update: 2025-10-13 19:21 IST
ಭಟ್ಕಳ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಸ್ಥಾಪನೆಯ 100ನೇ ವರ್ಷದ ಅಂಗವಾಗಿ ಭಟ್ಕಳದಲ್ಲಿ ಭಾನುವಾರ ಭವ್ಯ ಮೆರವಣಿಗೆ ಹಾಗೂ ಪೆರೇಡ್ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಂತ ಪ್ರಚಾರಕರಾದ ನರೇಂದ್ರಜಿ ಮಾತನಾಡಿ, ಆರೆಸ್ಸೆಸ್ ವಿಶ್ವದ ಅತ್ಯಂತ ಶಿಸ್ತಿನ ಸಂಘಟನೆ. ಡಾ.ಹೇಡ್ಗೆವಾರರು 1925ರಲ್ಲಿ ಸ್ಥಾಪಿಸಿದ ಈ ಸಂಘಟನೆ ಇಂದು ಒಂದು ಶತಮಾನ ಪೂರೈಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ “ಪಂಚ ಪರಿವರ್ತನ” ಹೆಸರಿನ ಸಾಮಾಜಿಕ ಸೌಹಾರ್ದತೆ, ಕುಟುಂಬ ಮೌಲ್ಯಗಳು, ಪರಿಸರ ಜಾಗೃತಿ, ಸ್ವಾವಲಂಬನೆ ಹಾಗೂ ನಾಗರಿಕ ಹೊಣೆಗಾರಿಕೆಗಳನ್ನು ಒಳಗೊಂಡ ಅಭಿಯಾನವನ್ನು ಘೋಷಿಸಲಾಯಿತು.
ನಗರದ ಎರಡು ಸ್ಥಳಗಳಿಂದ ಮೆರವಣಿಗೆ ಪ್ರಾರಂಭವಾಗಿ ವಿವಿಧ ಬೀದಿಗಳಲ್ಲಿ ಸಂಚರಿಸಿ ಗುರು ಸುಧೀದ್ರ ಕಾಲೇಜು ಮೈದಾನದಲ್ಲಿ ಸಮಾರೋಪಗೊಂಡಿತು. ಅತಿಥಿಗಳಾಗಿ ಈಶ್ವರ ನಾಯಕ್ ಮತ್ತು ರಾಮಚಂದ್ರ ಕಾಮತ್ ಹಾಜರಿದ್ದರು. ಭಟ್ಕಳ ಡಿವೈಎಸ್ಪಿ ಮಹೇಶ್ ಅವರ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.