×
Ad

ಶಿರಸಿ | ಆಟವಾಡುತ್ತಿದ್ದಾಗ ಅಣ್ಣನಿಂದ ಏರ್ ಗನ್ ಫೈರಿಂಗ್: ತಮ್ಮ ಮೃತ್ಯು

Update: 2025-09-05 14:16 IST

ಉತ್ತರ ಕನ್ನಡ: ಆಟವಾಡುತ್ತಿದ್ದಾಗ ಏರ್ ಗನ್ ನಿಂದ ಗುಂಡು ಹಾರಿ ಏಳು ವರ್ಷದ ಬಾಲಕ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಸೋಮನಳ್ಳಿ ಗ್ರಾಮದಲ್ಲಿ ನಡೆದಿದೆ.

ಗಣಪತಿ ಹೆಗಡೆ ಎಂಬವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಏಳು ಮತ್ತು 9 ವರ್ಷದ ಅಣ್ಣ ತಮ್ಮ ಇಬ್ಬರೂ ಮನೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ 9 ವರ್ಷದ ಅಣ್ಣ ಬಾಲಕ ಏರ್ ಗನ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಈ ಗುಂಡು ತಗುಲಿ 7 ವರ್ಷದ ಬಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News