ಭಟ್ಕಳದಲ್ಲಿ ಸ್ಟೆಮ್ ಫೆಸ್ಟ್-2025
ಭಟ್ಕಳ, ನ.16: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್ ನಲ್ಲಿ ಶನಿವಾರ ಸ್ಟೆಮ್ ಫೆಸ್ಟ್-2025 ನ್ನು ಆಚರಿಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 800ಕ್ಕೂ ಹೆಚ್ಚು ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಆಗಮಿಸಿ, ಸ್ಪರ್ಧಾತ್ಮಕ ಹಾಗೂ ಸಂವಹನಾತ್ಮಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಸಂವಾದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಕೆ. ಫಝ್ಲುರ್ ರಹ್ಮಾನ್ ಮಾತನಾಡಿ, ಸಿದ್ಧಾಂತದ ಜ್ಞಾನಕ್ಕೆ ಅನುಭವದ ಸ್ಪರ್ಶ ಸಿಕ್ಕಾಗ ಮಾತ್ರ ವಿಜ್ಞಾನ ಜೀವಂತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಂಊಒ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶಾಕ್ ಶಬಂದ್ರಿ ಮಾತನಾಡಿ, ಸ್ಟೆಮ್ ಮೂಲಕ ವಿದ್ಯಾರ್ಥಿಗಳಲ್ಲಿ ವಿಚಾರಶೀಲತೆ ಮತ್ತು ಆವಿಷ್ಕಾರ ಮನೋಭಾವ ಬೆಳೆಯುತ್ತದೆ ಎಂದರು.
ಮಾದರಿ ಪ್ರದರ್ಶನ, ರೋಬೋ ರೇಸ್, ಕ್ವಿಜ್, ಸ್ಟಾರ್ಟ್-ಅಪ್ ಪಿಚ್ ಸೇರಿದಂತೆ ಹಲವಾರು ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು. ಸಂಜೆಯ ಸಮಾರೋಪದಲ್ಲಿ ವಿಜೇತರಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.