×
Ad

ಭಟ್ಕಳ | ಅಕ್ರಮ ಜಾನುವಾರು ಸಾಗಾಟ: ಮೂವರ ಬಂಧನ

Update: 2025-05-25 22:47 IST

ಭಟ್ಕಳ: ಭಟ್ಕಳದ ಶಿರಾಲಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಜಾನುವಾರು ತುಂಬಿದ್ದ ಲಾರಿಯನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ ಘಟನೆ ಶನಿವಾರ ವರದಿಯಾಗಿದೆ.

ಬಂಧಿತರನ್ನು ಹಾವೇರಿಯ ಚೇತನ್ ನಂದೀಶ್ ಕಡ್ಲಿ (26), ಸಂತೋಷ್ ದಯಾನಪ್ಪ ಬೊರಾದ್ (25) ಮತ್ತು ಗದಗದ ದುರ್ಗಾ ಫಕೀರಪ್ಪ ಚಲವಾದಿ (50) ಎಂದು ಗುರುತಿಸಲಾಗಿದೆ.

ಲಾರಿ ನೆರೆಯ ಹಾವೇರಿ ಜಿಲ್ಲೆಯಿಂದ ಭಟ್ಕಳಕ್ಕೆ ಬರುತ್ತಿತ್ತು. ಈ ಜಾನುವಾರುಗಳನ್ನು ಕಾನೂನುಬಾಹಿರವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಲಾರಿ ಸಹಿತ 19 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News