ವೈರಲ್ ಟ್ರೆಂಡ್ಗಳಿಗಾಗಿ AIಗೆ ಖಾಸಗಿ ಮಾಹಿತಿ ನೀಡುತ್ತಿದ್ದೀರಾ? ಎಚ್ಚರಿಕೆ…
AI ವ್ಯಂಗ್ಯಚಿತ್ರ ಟ್ರೆಂಡ್: ವಂಚಕರು ಮಾಹಿತಿ ಬಳಸಿಕೊಳ್ಳುವುದು ಹೇಗೆ? ತಜ್ಞರು ನೀಡುವ ಸಲಹೆಗಳೇನು?
ಸಾಂದರ್ಭಿಕ ಚಿತ್ರ | Photo Credit : freepik
ಪ್ರಾಂಪ್ಟ್ ಗಳನ್ನು ಬಳಸಿಕೊಂಡು ವ್ಯಂಗ್ಯಚಿತ್ರಗಳನ್ನು ರಚಿಸಲು ಕೃತಕಬುದ್ಧಿಮತ್ತೆ ಅಥವಾ AI ಸಾಧನಗಳನ್ನು ಕೇಳುವ ಸಾಮಾಜಿಕ ಮಾಧ್ಯಮದ ವೈರಲ್ ಟ್ರೆಂಡ್ ಗಂಭೀರ ಸೈಬರ್ ಭದ್ರತಾ ಕಳವಳಗಳನ್ನು ಹುಟ್ಟು ಹಾಕುತ್ತದೆ.
“ನನ್ನ ಬಗ್ಗೆ ತಿಳಿದಿರುವ ಎಲ್ಲವೂ” ಎಂದು AIಗೆ ನೀಡುವ ಪ್ರಾಂಪ್ಟ್ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ AIಗೆ (ಚಾಟ್ಜಿಪಿಟಿಯಂತಹ) ಬಳಕೆದಾರರು ತಮ್ಮ ಚಾಟ್ ಇತಿಹಾಸ, ಅಪ್ಲೋಡ್ ಮಾಡಿದ ಡೇಟಾ ಅಥವಾ ಸಂಪರ್ಕಿತ ಪ್ರೊಫೈಲ್ಗಳನ್ನು ವಿಶ್ಲೇಷಿಸಿ ವೈಯಕ್ತಿಕಗೊಳಿಸಿದ ಸಾರಾಂಶ, ಪಾತ್ರ ವಿಶ್ಲೇಷಣೆ ಅಥವಾ ವ್ಯಂಗ್ಯಚಿತ್ರಗಳನ್ನು ರಚಿಸಲು ಕೇಳುತ್ತಾರೆ. ಈ ಟ್ರೆಂಡ್ ಎಷ್ಟು ಅಪಾಯಕಾರಿ ಎನ್ನುವ ಬಗ್ಗೆ ಪ್ರಜ್ಞೆ ಇಲ್ಲದೆ ಎಲ್ಲರೂ ತಮ್ಮ ವಿವರಗಳನ್ನು AIಗೆ ನೀಡಿಬಿಡುತ್ತಿದ್ದಾರೆ.
AI ವ್ಯಂಗ್ಯಚಿತ್ರ ಟ್ರೆಂಡ್: ಮೋಜು ಅಥವಾ ವಂಚನೆಯ ಅಪಾಯ?
ವೈರಲ್ ಸಾಮಾಜಿಕ ಮಾಧ್ಯಮ ಟ್ರೆಂಡ್ನಲ್ಲಿ “ನನ್ನ ಬಗ್ಗೆ ತಿಳಿದಿರುವ ಎಲ್ಲವೂ” (everything you know about me) ಎಂಬ ಪ್ರಾಂಪ್ಟ್ ಅನ್ನು ಬಳಸಿಕೊಂಡು ವ್ಯಂಗ್ಯಚಿತ್ರಗಳನ್ನು (caricature) ರಚಿಸಲು AI ಸಾಧನಗಳನ್ನು ಕೇಳುವ ಸಾಮಾಜಿಕ ಮಾಧ್ಯಮದ ವೈರಲ್ ಟ್ರೆಂಡ್ ಗಂಭೀರ ಸೈಬರ್ ಭದ್ರತಾ ಕಳವಳಗಳನ್ನು ಹುಟ್ಟು ಹಾಕುತ್ತಿದೆ. ಔಟ್ಪುಟ್ಗಳು ಮನರಂಜನೆಯಂತೆ ಕಾಣುತ್ತಿದ್ದರೂ, ಈ ಡಿಜಿಟಲ್ ಭಾವಚಿತ್ರಗಳು ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸಬಹುದು ಮತ್ತು ವಂಚನೆಗಳು ಹೆಚ್ಚು ಸರಳವಾಗಿಬಿಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ವೈರಲ್ ಟ್ರೆಂಡ್ನಲ್ಲಿ ಏನಾಗುತ್ತಿದೆ?
ಬಳಕೆದಾರರು ವೈಯಕ್ತಿಕ ಡಾಟಾಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು AI ಸಾಧನಗಳಿಗೆ ತಮ್ಮ ಜೀವನ, ಉದ್ಯೋಗ ಮತ್ತು ವೈಯಕ್ತಿಕ ವಿವರಗಳನ್ನು ಬಳಸಿ ವ್ಯಂಗ್ಯಚಿತ್ರಗಳನ್ನು ರಚಿಸುವಂತೆ ಕೇಳುತ್ತಿದ್ದಾರೆ. ಫಲಿತಾಂಶವಾಗಿ ಅನಿಮೇಶನ್ ಆಗಿರುವ ಜನರ ಕೆಲಸ, ಕುಟುಂಬ ಅಥವಾ ವೃತ್ತಿಪರ ವಿವರಗಳು ವ್ಯಾಪಕವಾಗಿ ‘ಇನ್ಸ್ಟಾಗ್ರಾಂ’, ‘ಲಿಂಕ್ಡಿನ್’ ಮತ್ತು ‘ಎಕ್ಸ್’ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿಬಿಡುತ್ತಿವೆ.
ಈ ಮೋಜಿನ ಹಿಂದೆ ಗುಪ್ತ ಅಪಾಯವೂ ಇದೆ. ಈ ಪ್ರಾಂಪ್ಟ್ಗಳು AI ವ್ಯವಸ್ಥೆಯು ಫೋಟೋವನ್ನು ಮೀರಿದ ಮಾಹಿತಿಯನ್ನು ಕಬಳಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಉದ್ಯೋಗ ವಿವರಗಳು, ಕಂಪನಿ ಹೆಸರುಗಳು, ಹವ್ಯಾಸಗಳು ಮತ್ತು ಕುಟುಂಬದ ವಿವರಗಳೂ AIಗೆ ನೀಡಿದಂತಾಗುತ್ತಿದೆ.
ಯಾವ ದತ್ತಾಂಶ ಬಹಿರಂಗವಾಗುತ್ತಿದೆ?
ಸೈಬರ್ತಜ್ಞರು ಮುಖ್ಯವಾಗಿ ಹೇಳುವ ಪ್ರಕಾರ, ಒಂದು ಫೋಟೋದಿಂದ ಮುಖ, ವಯಸ್ಸು, ಜನಾಂಗೀಯತೆ ಮತ್ತು ಹಿನ್ನೆಲೆಯ ವಿವರಗಳು ಬಹಿರಂಗವಾಗಿಬಿಡುತ್ತದೆ. “ನನ್ನ ಬಗ್ಗೆ ತಿಳಿದಿರುವ ಎಲ್ಲವೂ” ಪ್ರಾಂಪ್ಟ್ಗಳ ಸಂದರ್ಭದಲ್ಲಿ ಹೆಸರುಗಳು, ಉದ್ಯೋಗ ವಿವರಗಳು, ನಗರಗಳು, ನಿತ್ಯದ ಚಟುವಟಿಕೆಗಳು ಮತ್ತು ಕುಟುಂಬದ ಉಲ್ಲೇಖಗಳನ್ನು AIಗೆ ನೀಡಿದಂತಾಗುತ್ತದೆ. ಫಲಿತಾಂಶವಾಗಿ ಕೇವಲ ಕಾರ್ಟೂನ್ ಮಾತ್ರ ಹೊರಬರುತ್ತಿಲ್ಲ. ನೀವು ಸ್ವಯಂಪ್ರೇರಿತವಾಗಿ ನಿಮ್ಮ ವೈಯಕ್ತಿಕ ಪ್ರೊಫೈಲ್ ಅನ್ನು ಸಂಶ್ಲೇಷಣೆಗೊಳಿಸಲು ನೀಡಿರುತ್ತೀರಿ.
ವಂಚಕರು ಮಾಹಿತಿ ಬಳಸಿಕೊಳ್ಳುವುದು ಹೇಗೆ?
ವಂಚಕರು ಈ AI ನಿರ್ಮಿತ ಪ್ರೊಫೈಲ್ಗಳನ್ನು ಬಳಸಿಕೊಳ್ಳಬಹುದು. ಅಧಿಕೃತವಾಗಿ ಕಾಣುವ ಫೋಟೋಗಳನ್ನು ಬಳಸಿ ನಕಲಿ ಸಾಮಾಜಿಕ ಮಾಧ್ಯಮ ಮತ್ತು ವೃತ್ತಿಪರ ಖಾತೆಗಳನ್ನು ತೆರೆಯಬಹುದು. ನಿಮ್ಮಂತೆ ಸೋಗು ಹಾಕಲು ಡೀಫ್ಫೇಕ್ಗಳನ್ನು ರಚಿಸಬಹುದು (ಅಂದರೆ AI ಮತ್ತು ಮಿಷಿನ್ ಲರ್ನಿಂಗ್ ಆಲ್ಗಾರಿದಂಗಳ ಬಳಕೆ ಮಾಡಿ ನೈಜ, ಫ್ಯಾಬ್ರಿಕೇಟ್ ಮಾಡಿದ ಆಡಿಯೋ, ವೀಡಿಯೋ ಅಥವಾ ನಿರ್ದಿಷ್ಟ, ನಿಜವಾದ ವ್ಯಕ್ತಿಯ ಹೋಲಿಕೆ, ಧ್ವನಿ ಅಥವಾ ಚಲನೆಗಳನ್ನು ಅನುಕರಿಸುವ ಚಿತ್ರಗಳನ್ನು ರಚಿಸಬಹುದು). ಉದ್ಯೋಗ ಸ್ಥಳದ ವಿವರಗಳು, ಹುದ್ದೆಗಳು ಮತ್ತು ಶ್ರೇಣಿಗಳನ್ನು ತಿಳಿದುಕೊಂಡು ಫಿಷಿಂಗ್ ಇಮೇಲ್ಗಳನ್ನು (ವಿಶ್ವಾಸಾರ್ಹ ಮೂಲದವರಂತೆ ನಟಿಸುವ ಮೂಲಕ ಬಳಕೆದಾರರ ಹೆಸರು, ಪಾಸ್ವರ್ಡ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿ ಕದಿಯಲು ವಿನ್ಯಾಸಗೊಳಿಸಲಾದ ವಂಚನೆಯ ಸಂದೇಶ) ಕಳುಹಿಸಬಹುದು. ಭಾವನಾತ್ಮಕ ವಂಚನೆಗಳು, ಕುಟುಂಬದ ಸದಸ್ಯರಂತೆ ನಟಿಸುವ ಮೂಲಕ ಸಂಬಂಧಿಕರಿಗೆ ಸಮಸ್ಯೆ ಒಡ್ಡಬಹುದು ಅಥವಾ ವಂಚಿಸಬಹುದು. ತಜ್ಞರೊಬ್ಬರು ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಕಾರ ವೈರಲ್ ಟ್ರೆಂಡ್ ವಾಸ್ತವದಲ್ಲಿ ಸೈಬರ್ ಅಪರಾಧಿಗಳಿಗೆ ಸ್ವಯಂಪ್ರೇರಿತವಾಗಿ ತಮ್ಮ ವಿವರಗಳನ್ನು ಸಂಕ್ಷಿಪ್ತವಾಗಿ ನೀಡುವುದು ಆಗಿರುತ್ತದೆ.
ಈ ಟ್ರೆಂಡ್ ಏಕೆ ಅಪಾಯಕಾರಿ?
AI ಸಾಧನಗಳು ವ್ಯಕ್ತಿಗಳ ಚದುರಿರುವ ಮಾಹಿತಿಗಳನ್ನು ಒಂದು ಸಂಘಟಿಸಿದ ಪ್ರೊಫೈಲ್ ಆಗಿ ಗುರುತಿಸಿಕೊಡುತ್ತವೆ. ವಂಚಕರಿಗೆ ಓಪನ್-ಸೋರ್ಸ್ ಇಂಟಲಿಜೆಂಟ್ ಗ್ಯಾದರಿಂಗ್ ಅಥವಾ OSINT (ಸಾರ್ವಜನಿಕವಾಗಿ ಲಭ್ಯವಿರುವ ಮತ್ತು ಕಾನೂನುಬದ್ಧವಾಗಿ ಬಳಸಬಹುದಾದ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ, ವ್ಯಾಖ್ಯಾನಿಸುವ ಮೂಲಕ ಪ್ರೊಫೈಲ್ ರಚಿಸುವುದು) ಮಾಡಲು ಅಗತ್ಯವಿರುವ ಸಮಯವು ಉಳಿದು ಹೋಗಿ, ಸುಲಭವಾಗಿ ಮಾಹಿತಿ ಕೈಗೆ ಸಿಗುತ್ತದೆ. ನಿಮ್ಮ ಕಾರ್ಯಸ್ಥಳ, ಕುಟುಂಬ ಅಥವಾ ಹವ್ಯಾಸಗಳನ್ನು ಆಧರಿಸಿ ಮಾಡುವ ವಂಚನೆಗಳು ಇನ್ನಷ್ಟು ವಿಶ್ವಾಸಾರ್ಹವಾಗಿ ಕಾಣಬಹುದು. ಅತ್ಯಧಿಕವಾಗಿ AI ಬಳಕೆ ಮಾಡುವ ಆದರೆ ತಾಂತ್ರಿಕ ಸಾಕ್ಷರತೆ ಕಡಿಮೆ ಇರುವ ಕಡೆಗೆ ಅಪಾಯ ಇನ್ನಷ್ಟು ಹೆಚ್ಚಾಗಬಹುದು.
ತಜ್ಞರು ನೀಡುವ ಸಲಹೆಗಳೇನು?
“ನನ್ನ ಬಗ್ಗೆ ತಿಳಿದಿರುವ ಎಲ್ಲವೂ” ಎನ್ನುವಂತಹ AIಗೆ ನೀಡುವ ಪ್ರಾಂಪ್ಟ್ಗಳನ್ನು ತಪ್ಪಿಸಿ. ಲೋಗೋಗಳು, ದಾಖಲೆಗಳು ಅಥವಾ ಗುರುತಿಸಬಹುದಾದ ಸ್ಥಳಗಳ ಫೋಟೋಗಳನ್ನು ಅಪ್ಲೋಡ್ ಮಾಡಬೇಡಿ. ಮಕ್ಕಳು ಮತ್ತು ಕುಟುಂಬದ ವಿವರಗಳನ್ನು ಚಿತ್ರಗಳಲ್ಲಿ ನೀಡಬೇಡಿ. ಬೀದಿ ದೀಪಗಳು ಅಥವಾ ಬ್ಯಾಡ್ಜ್ಗಳಂತಹ ಗುರುತಿಸಬಹುದಾದ ವಿವರಗಳನ್ನು ಕತ್ತರಿಸಿ ತೆಗೆದು ಹಾಕಿ ಅಥವಾ ಬ್ಲರ್ ಮಾಡಿ. ಚಾಟ್ ಇತಿಹಾಸವನ್ನು ತೆಗೆದು ಹಾಕಿ ಅಥವಾ ಖಾಸಗಿ-ಗೌಪ್ಯತೆ ಬಹಿರಂಗದಂತಹ ಫೀಚರ್ಗಳನ್ನು ನಿಷ್ಕ್ರಿಯಗೊಳಿಸಿ. ಬಳಸುವ ಮೊದಲು ವೇದಿಕೆಯ ಗೌಪ್ಯತೆಯ ನೀತಿಗಳನ್ನು ವಿಶ್ಲೇಷಿಸಿ. ಪ್ರಸ್ತುತ ಅತ್ಯಧಿಕ ರೆಸೊಲ್ಯುಷನ್ ಇರುವ ಫೋಟೋಗಳ ಬದಲಾಗಿ ಹಳೆಯ ಎಡಿಟ್ ಮಾಡಿದ ಚಿತ್ರಗಳನ್ನು ಹೆಚ್ಚು ಬಳಸಿ.