ಬಿಸಿಲಿನ ಧಗೆಗೆ ಹಸಿವೆಯಾಗುವುದಿಲ್ಲವೆ? ಈ ಸಮಸ್ಯೆಗೆ ಪರಿಹಾರವೇನು?
ಸಾಂದರ್ಭಿಕ ಚಿತ್ರ | Photo Credit : magnific
ಬೇಸಗೆಯ ಹಸಿವಿನ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪೌಷ್ಠಿಕಾಂಶಯುಕ್ತ ಸಮತೋಲಿತ ಊಟಗಳನ್ನು ಸೇವಿಸುವುದರ ಮೇಲೆ ಗಮನ ಹರಿಸಬೇಕು.
ಬೇಸಗೆಯಲ್ಲಿ ಹೆಚ್ಚು ಹಸಿವೆ ಇರುವುದಿಲ್ಲವಾದ ಕಾರಣ ಜನರು ಕಡಿಮೆ ತಿನ್ನುತ್ತಾರೆ. ಶಾರೀರಿಕವಾಗಿ ಹೇಳುವುದಾದರೆ ಶಾಖವು ನಿಮ್ಮ ದೇಹ ಆಹಾರ ನಿರ್ವಹಿಸುವುದನ್ನು ಬದಲಿಸುತ್ತದೆ. ಇತ್ತೀಚೆಗೆ ಪೌಷ್ಠಿಕತಜ್ಞೆ ಪೂಜಾ ಮುಖಿಜಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಈ ಬಗ್ಗೆ ಹೇಳಿದ್ದಾರೆ. ಏಕೆ ಶಾಖ ಹೆಚ್ಚಾಗಿರುವಾಗ ಹಸಿವೆ ಕಡಿಮೆ ಇರಲು ಎರಡು ಕಾರಣಗಳನ್ನು ಅವರು ನೀಡಿದ್ದಾರೆ.
ಮೊದಲನೆಯದಾಗಿ, ದ್ರವದ ನಷ್ಟವು ಸದ್ದಿಲ್ಲದೆ ಪೋಷಕಾಂಶಗಳ ಬೇಡಿಕೆ ಹೆಚ್ಚಾಗುತ್ತದೆ. ಶಾಖದಲ್ಲಿ ನೀರು ಕಳೆದುಕೊಳ್ಳುವುದು ಮಾತ್ರವಲ್ಲ, ನರದ ಕಾರ್ಯಗಳು, ಸ್ನಾಯುವಿನ ಸಂಕೋಚನ, ಹಸಿವಿನ ನಿಯಂತ್ರಣವನ್ನು ಬೆಂಬಲಿಸುವ ಎಲೆಕ್ಟ್ರೋಲೈಟ್ಗಳನ್ನೂ ಕಳೆದುಕೊಳ್ಳುತ್ತೀರಿ.
ಎರಡನೆಯದಾಗಿ ಪ್ರೊಟೀನ್ ಅಗತ್ಯಗಳು ಹಸಿವಿನೊಂದಿಗೆ ಕಡಿಮೆಯಾಗುವುದಿಲ್ಲ. ವಾಸ್ತವದಲ್ಲಿ ಬಿಸಿ ವಾತಾವರಣದಲ್ಲಿ ಅಸಮಂಜಸ ಪ್ರೊಟೀನ್ ಸೇವನೆಯು ಆಯಾಸ, ನಿಧಾನಗತಿಯ ಚೇತರಿಕೆ ಮತ್ತು ಹೆಚ್ಚಿನ ಸಂಜೆಯ ಹಂಬಲಗಳಿಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ.
ವೇಲಚೇರಿಯ ಅಪೊಲೊ ಕ್ಲಿನಿಕ್ ನ ಕ್ಲಿನಿಕಲ್ ನ್ಯೂಟ್ರಿಷನ್ ಡಾ. ಮಿಸ್ಬಾ ಬೇಗಂ ಮಾಧ್ಯಮಕ್ಕೆ ಹೇಳಿರುವ ಪ್ರಕಾರ ಹೈಡ್ರೇಶನ್ ಗೆ ಆದ್ಯತೆ ನೀಡಬೇಕು. ಮಾತ್ರವಲ್ಲದೆ, ಬೇಸಗೆಯ ಆಹಾರದಲ್ಲಿ ಪ್ರೊಟೀನ್ ಬಗ್ಗೆ ರಾಜಿಯೇ ಮಾಡುವಂತಿಲ್ಲ. “ಬೇಸಗೆಯ ಹವಾಮಾನದಲ್ಲಿ ಅನೇಕ ಮಂದಿಯ ಊಟದ ಪದ್ಥತಿಗಳಲ್ಲಿ ಆಗುವ ಬದಲಾವಣೆಯನ್ನು ಬೇಸಗೆಯ ಹಸಿವೆಯ ವಿದ್ಯಮಾನವು ಸೂಚಿಸುತ್ತದೆ. ಅಂದರೆ, ಹೆಚ್ಚು ಹಸಿವೆ ಇಲ್ಲದಿರುವುದು ಅಥವಾ ತಂಪಿನ ಹವಾಮಾನದಲ್ಲಿ ಸೇವಿಸುವ ಆಹಾರಕ್ಕಿಂತ ಭಿನ್ನವಾದ ಆಹಾರವನ್ನು ಸೇವಿಸುವುದು. ಫಲಿತಾಂಶವಾಗಿ ದೇಹವು ಉಷ್ಣತೆ ಕಡಿಮೆ ಮಾಡಲು ಪ್ರಯತ್ನಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ಬಹುತೇಕರು ಭಾರೀ ಊಟ ಸೇವಿಸಲು ಬಯಸುವುದಿಲ್ಲ. ಕೆಲವರು ಊಟ ಬಿಡುತ್ತಾರೆ ಅಥವಾ ಕಡಿಮೆ ಸೇವಿಸುತ್ತಾರೆ, ಇನ್ನು ಕೆಲವರು ಊಟದ ಬದಲು ತಂಪು ಪಾನೀಯ, ಐಸ್ ಕ್ರೀಮ್ ಅಥವಾ ಲಘು ತಿನಿಸುಗಳನ್ನು ಹಂಬಲಿಸುತ್ತಾರೆ.”
ಈ ಪರಿಣಾಮಗಳು ಸಾಮಾನ್ಯವಾಗಿ ಶಾಖ ಮತ್ತು ಡಿಹೈಡ್ರೇಶನ್ ನಿಂದ ದ್ರವಗಳ ನಷ್ಟಕ್ಕೆ ಕಾರಣವಾಗುತ್ತದೆ. “ದೇಹ ಅತಿಯಾಗಿ ಬಿಸಿಯಾದಾಗ ಅದರ ಆದ್ಯತೆ ತಂಪಾಗುವುದು ಆಗಿರುತ್ತದೆ. ಹೀಗಾಗಿ ಮೆದುಳಿಗೆ ಹೋಗುವ ಹಸಿವೆಯ ಸಂಕೇತಗಳು ಕಡಿಮೆಯಾಗುತ್ತವೆ. ಬೇಸಗೆಯಲ್ಲಿ ಜನರು ಬೆವರುವ ಮೂಲಕ ಹೆಚ್ಚಿನ ನೀರು ಮತ್ತು ಎಲೆಕ್ಟ್ರೊಲೈಟ್ಗಳನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಆಯಾಸ, ಹೊಟ್ಟೆ ತುಂಬಿದ ಭಾವನೆ ಅಥವಾ ಹಸಿವಿನ ಕೊರತೆ ಉಂಟಾಗಬಹುದು. ಅವರ ಪ್ರಕಾರ, ಅಧಿಕ ತಾಪಮಾನವು ಹಸಿವು ಮತ್ತು ಜೀರ್ಣಕ್ರಿಯೆ ನಿಯಂತ್ರಿಸುವ ಹಾರ್ಮೋನ್ ಗಳ ಮೇಲೂ ಪರಿಣಾಮ ಬೀರುವ ಮೂಲಕ ಜನರ ಸಾಮಾನ್ಯ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ಉಂಟುಮಾಡುತ್ತದೆ.
ಈ ನಡವಳಿಕೆ ಮೇಲ್ವಿಚಾರಣೆ ಮಾಡಲು ವಿಫಲವಾದರೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಬಿಸಿ ಹವೆಯ ಕಾರಣದಿಂದ ಆರೋಗ್ಯಕರ ಊಟದ ಬದಲಿಗೆ ತಂಪು ಪಾನೀಯ, ಪ್ಯಾಕ್ ಮಾಡಿದ ರಸಗಳು ಅಥವಾ ಸಿಹಿತಿನಿಸುಗಳನ್ನು ಸೇವಿಸಬಹುದು. ಹೆಚ್ಚು ಹೊತ್ತು ಊಟ ಮಾಡುವುದನ್ನು ಬಿಡುವುದು ಆಯಾಸ, ದೌರ್ಬಲ್ಯ ಮತ್ತು ಸಾಕಷ್ಟು ಪೋಷಣೆ ಉಂಟು ಮಾಡುವುದಿಲ್ಲ. ಶಕ್ತಿಯ ಕೊರತೆ, ತಲೆ ತಿರುಗುವಿಕೆ ಅಥವಾ ಏಕಾಗ್ರತೆಯ ಕೊರತೆಗೆ ಕಾರಣವಾಗಲಿದೆ. ಕೆಲವೊಮ್ಮೆ ಅತಿಯಾದ ಆಹಾರ ಸೇವನೆಗೂ ಕಾರಣವಾಗಿ ಜೀರ್ಣದ ಸಮಸ್ಯೆಗಳು ಕಂಡುಬರಬಹುದು.
ಬೇಸಗೆಯ ಹಸಿವಿನ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪೌಷ್ಠಿಕಾಂಶಯುಕ್ತ ಸಮತೋಲಿತ ಊಟಗಳನ್ನು ಸೇವಿಸುವುದರ ಮೇಲೆ ಗಮನ ಹರಿಸಬೇಕು. ಸೂಕ್ತ ಆಯ್ಕೆಯೆಂದರೆ ತಾಜಾ ಹಣ್ಣುಗಳು, ಸಲಾಡ್ಗಳು, ಮೊಸರು ಅಥವಾ ಮಜ್ಜಿಗೆ ಜೊತೆಗೆ ಸುಲಭವಾಗಿ ಜೀರ್ಣವಾಗುವ ಮನೆಯಲ್ಲಿ ಬೇಯಿಸಿದ ಆಹಾರಗಳು ಸೇರಿವೆ. ಜೊತೆಗೆ ಬಿಸಿ ಹವೆಯಲ್ಲಿ ಸಾಕಷ್ಟು ಹೈಡ್ರೇಶನ್ ಆಗಿರಬೇಕು. ಕಲ್ಲಂಗಡಿ, ಸೌತೆಕಾಯಿ, ತೆಂಗಿನ ನೀರು, ನಿಂಬೆ ನೀರು ಮತ್ತು ಸಕ್ಕರೆರಹಿತವಾಗಿ ತಾಜಾ ಹಣ್ಣಿನ ಪಾನೀಯಗಳನ್ನು ಸೇವಿಸಬೇಕಾಗುತ್ತದೆ.
ಕೃಪೆ: indianexpress.com