Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅನಿವಾಸಿ ಭಾರತೀಯರ ದೀರ್ಘ ಪ್ರಯಾಣ

ಅನಿವಾಸಿ ಭಾರತೀಯರ ದೀರ್ಘ ಪ್ರಯಾಣ

-ಪ್ರಿಯದರ್ಶಿ ದತ್ತ-ಪ್ರಿಯದರ್ಶಿ ದತ್ತ8 Jan 2017 11:41 PM IST
share
ಅನಿವಾಸಿ ಭಾರತೀಯರ ದೀರ್ಘ ಪ್ರಯಾಣ

ಅನಿವಾಸಿ ಭಾರತೀಯರು ವರ್ಣ ತಾರತಮ್ಯ, ಧಾರ್ಮಿಕ ಅಸಹಿಷ್ಣುತೆ ಮತ್ತು ಕಾನೂನು ಭೇದವನ್ನು ಎದುರಿಸುತ್ತಿದ್ದಾರೆ. ನಾವೆಲ್ಲ ಭಾವಿಸಿದಂತೆ, ಬೇರೆ ದೇಶಕ್ಕೆ ವಲಸೆ ಹೋದ ಎಲ್ಲರೂ ಯಶಸ್ಸು ಗಳಿಸಿಲ್ಲ. 1980ರಲ್ಲಿ ಗಾಂಧಿ ದಕ್ಷಿಣ ಆಫ್ರಿಕದಲ್ಲಿ ಮೇಲೆತ್ತಿದ ಜ್ಯೋತಿಯನ್ನು ಕೆಳಗಿಳಿಸುವ ಕಾಲ ಇನ್ನೂ ಬಂದಿಲ್ಲ.

‘15ನೆ ಪ್ರವಾಸಿ ಭಾರತೀಯ ದಿವಸ’ ಸಮಾವೇಶವು ಬೆಂಗಳೂರಿನಲ್ಲಿ ಇಂದು ಸಮಾರೋಪಗೊಳ್ಳಲಿದೆ. ಇಂತಹ ಮೊದಲ ವಾರ್ಷಿಕ ಸಮಾವೇಶವು 2003ರ ಜ.9ರಿಂದ 11ರವರೆಗೆ ನಡೆದಿತ್ತು. ಆಗಸ್ಟ್ 2000ರಲ್ಲಿ ನೇಮಿಸಿದ ಉನ್ನತ ಮಟ್ಟದ ಸಮಿತಿಯ ಶಿಫಾರಸನ್ನು ಆಧರಿಸಿ, ಜನವರಿ 9ನ್ನು ‘ಪ್ರವಾಸಿ ಭಾರತೀಯ ದಿವಸ’ ಇಲ್ಲವೇ ‘ಅನಿವಾಸಿ ಭಾರತೀಯರ ದಿನ’ ಎಂದು ಆಚರಿಸಲಾಗುತ್ತಿದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅನಿವಾಸಿ ಭಾರತೀಯರ ವಿಷಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. 1998ರಲ್ಲಿ ಸರಕಾರ ಬಿಡುಗಡೆಗೊಳಿಸಿದ ರಿಸರ್ಜಂಟ್ ಇಂಡಿಯಾ ಬಾಂಡ್‌ಗಳಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹೂಡಿಕೆಯಾಗಿತ್ತು. ಆಗ ದೇಶ ಪೋಖರಣ್-2ರ ನಂತರದ ಆರ್ಥಿಕ ದಿಗ್ಬಂಧನಗಳಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಜಾಗತೀಕರಣದ ಬಳಿಕ ಅನಿವಾಸಿ ಭಾರತೀಯರು ಸ್ವದೇಶದ ಬಗ್ಗೆ ಹೆಚ್ಚು ಆಸಕ್ತಿ ತೋರಿಸ ತೊಡಗಿದರು. ಮಾಹಿತಿ ತಂತ್ರಜ್ಞಾನದ ಕೇಂದ್ರ ಬಿಂದು, ತೀವ್ರವಾಗಿ ಬೆಳೆಯುತ್ತಿದ್ದ ಆರ್ಥಿಕತೆ ಹಾಗೂ ಪರಮಾಣು ಶಕ್ತಿಯಿಂದಾಗಿ ದೇಶದ ಬಗ್ಗೆ ಭರವಸೆ ಮೂಡಿತ್ತು. ಕ್ರೀಡಾಂಗಣದಿಂದ ಹಿಡಿದು ವ್ಯಾಪಾರ ಶೃಂಗಗಳು ಹಾಗೂ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಅದು ವ್ಯಕ್ತವಾಗುತ್ತಿತ್ತು.

ಅನಿವಾಸಿ ಭಾರತೀಯರ ಆದ್ಯತೆಗಳ ಬಗ್ಗೆ ಭಾರತದ ನಾಯಕತ್ವ ಹಿಂದಿನಿಂದಲೂ ಚಿಂತನೆ ನಡೆಸಿತ್ತು. 1841ರಲ್ಲೇ ಮಾರಿಷಸ್‌ನಲ್ಲಿದ್ದ ಭಾರತೀಯ ಕಾರ್ಮಿಕರ ದಯನೀಯ ಸ್ಥಿತಿ ಬಗ್ಗೆ ತನಿಖೆ ನಡೆಸಬೇಕೆಂದು ಹೌಸ್ ಆಫ್ ಕಾಮನ್ಸ್ ಮೇಲೆ ಒತ್ತಡ ಹೇರಲಾಗಿತ್ತು. 1833ರಲ್ಲಿ ಬ್ರಿಟಿಷ್ ಸಾಮ್ರಾಜ್ಯ ಗುಲಾಮಗಿರಿಯನ್ನು ನಿಷೇಧಿಸಿತು. 1894ರಲ್ಲಿ ಮದ್ರಾಸ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ದಕ್ಷಿಣ ಆಫ್ರಿಕದ ವಸಾಹತುಗಳಲ್ಲಿ ಭಾರತೀಯರ ಮತದಾನದ ಹಕ್ಕು ಕಸಿದುಕೊಂಡಿದ್ದರ ವಿರುದ್ಧ ನಿಲುವಳಿಯನ್ನು ಮಂಡಿಸಲಾಗಿತ್ತು. ಪೂನಾ(1895),ಕೊಲ್ಕತ್ತಾ(1896).ಮದ್ರಾಸ್(1898),ಲಾಹೋರ್(1900),ಕೊಲ್ಕತ್ತಾ(1901) ಮತ್ತು ಅಹ್ಮದಾಬಾದ್‌ನ ಸಮಾವೇಶದಲ್ಲಿ ಇಂಥದ್ದೇ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಆಗ ಅನಿವಾಸಿ ಭಾರತೀಯರೆಂದರೆ, ದಕ್ಷಿಣ ಮತ್ತು ಪೂರ್ವ ಆಫ್ರಿಕದಲ್ಲಿ ನೆಲೆಸಿದವರು ಮಾತ್ರ ಆಗಿದ್ದರು. ಸ್ಥಳೀಯ ಬ್ರಿಟಿಷ್ ಸರಕಾರ ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದ ಬಗ್ಗೆ ಹಲವು ಹೋರಾಟಗಳನ್ನು ಇವರು ನಡೆಸಿದ್ದರು. 1914ರ ಗಾಂಧಿ-ಸ್ಮಟ್ಸ್ ಒಪ್ಪಂದವು ಇವರಿಗೆ ಸಿಕ್ಕ ದೊಡ್ಡ ಜಯವಾಗಿತ್ತು.

ಬರ್ಮಾ, ಸಿಂಗಾಪುರ, ಮಲಯ, ಥಾಯ್ಲೆಂಡ್ ಮತ್ತಿತರ ದೇಶಗಳಲ್ಲೂ ಭಾರತೀಯರು ನೆಲೆಸಿದ್ದರು. ಇವರಲ್ಲಿ ಅನೇಕರು 1940ರಲ್ಲಿ ಸುಭಾಶ್ಚಂದ್ರ ಬೋಸ್ ಅವರ ಅಝಾದ್ ಹಿಂದ್ ಫೌಝ್‌ಗೆ ಆರ್ಥಿಕ ನೆರವು ನೀಡಿದ್ದರು ಇಲ್ಲವೇ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮಲಯದ ರಬ್ಬರ್ ತೋಟಗಳಲ್ಲಿದ್ದ ತಮಿಳು ಯುವತಿಯರು ಬಂದೂಕು ಹೆಗಲಿಗೇರಿಸಿ ತಾವು ಕಾಣದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಒಂದು ಸ್ಮರಣೀಯ ಕಥನವಾಗಿತ್ತು.
ಗಾಂಧೀಜಿ ಜ.9,1915 ರಂದು ದೇಶಕ್ಕೆ ವಾಪಸಾದರು. ದಕ್ಷಿಣ ಆಫ್ರಿಕದಲ್ಲಿ 21 ವರ್ಷ ಅವರು ಭಾರತೀಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. ಸತ್ಯಾಗ್ರಹ ಎಂದು ಅವರು ಕರೆದ ಅಸಹಕಾರ ತಂತ್ರವನ್ನು ದಕ್ಷಿಣ ಆಫ್ರಿಕದಲ್ಲಿ ಅಭಿವೃದ್ಧಿಗೊಳಿಸಿ, ಭಾರತದಲ್ಲಿ ಪ್ರಯೋಗಿಸಿದರು. ಅಂದು ವಿದೇಶದಲ್ಲಿ ನೆಲೆಸಿದ್ದವರ ಸ್ಥಿತಿ ಇಂದಿನ ಅನಿವಾಸಿಗಳಂತೆ ಇರಲಿಲ್ಲ. ಅವರಲ್ಲಿ ಹೆಚ್ಚಿನವರು ತೋಟ ಮತ್ತು ಕಾರ್ಖಾನೆಗಳಲ್ಲಿ ಒಪ್ಪಂದ ವ್ಯವಸ್ಥೆ(ಆಫ್ರಿಕ, ಫಿಜಿ, ವೆಸ್ಟ್ ಇಂಡೀಸ್ ಇತ್ಯಾದಿ), ಕಂಗನಿ ವ್ಯವಸ್ಥೆ (ಶ್ರೀಲಂಕ) ಮತ್ತು ಮೇಸ್ತ್ರಿ ವ್ಯವಸ್ಥೆ(ಬರ್ಮ)ಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇವರೆಲ್ಲರೂ ಸಂಪ್ರದಾಯ ಹೇರಿದ ಸಮುದ್ರ ದಾಟುವಿಕೆ ವಿರುದ್ಧದ ನಿಷೇಧವನ್ನು ಉಲ್ಲಂಘಿಸಿದ ಧೀರರಾಗಿದ್ದರು.

ವಸಾಹತುಶಾಹಿ ಕಾಲದಲ್ಲಿ ಸರಕಾರಗಳು ಜನಾಂಗೀಯ ತಾರತಮ್ಯವನ್ನು ಕಾರ್ಯನೀತಿಯನ್ನಾಗಿಸಿ ಕೊಂಡಿದ್ದವು. ಆದರೆ, ವಸಾಹತೀಕರಣದ ಅಂತ್ಯದ ನಂತರ ಬೇರೆಯದೇ ಸಮಸ್ಯೆಗಳು ಸೃಷ್ಟಿಯಾದವು. ಗಾಂಧೀಜಿ ಅವರ ಜೀವಿತಾವಧಿಯಲ್ಲೇ ಸಿಲೋನ್ ಮತ್ತು ಬರ್ಮಾದಲ್ಲಿದ್ದ ಭಾರತೀಯರು ಕ್ಲಿಷ್ಟಕರ ಸಮಸ್ಯೆಯನ್ನು ಎದುರಿಸಿದರು. ಸ್ವತಂತ್ರ ಸಿಲೋನ್‌ನಲ್ಲಿ ಡಿಎಸ್ ಸೇನನಾಯಕೆ ಸರಕಾರ ಭಾರತ ಮೂಲದ ಲಕ್ಷಗಟ್ಟಲೆ ಜನರಿಗೆ ನಾಗರಿಕತ್ವವನ್ನು ನಿರಾಕರಿಸಿತು. ಮಾರಿಷಸ್‌ನಲ್ಲಿ ಭಾರತೀಯರು ಅಧಿಕಾರ ಹಿಡಿದರೂ, ಆ ದೇಶದಲ್ಲಿ ಅಲ್ಪಸಂಖ್ಯಾತರಾದರು. ಈ ಕಾಲನಿಗಳಲ್ಲಿ ಭಾರತೀಯರು ಬೇರೆಯದೇ ರೀತಿಯ ಸಮಸ್ಯೆ ಎದುರಿಸಬೇಕಾಗಿ ಬಂದಿತು.

ವಸಾಹತುಶಾಹಿ ಕಾಲವು ಸಮುದ್ರ ಸಾಮ್ರಾಜ್ಯಗಳ ಕಾಲ. 1950ರ ಅಂತ್ಯದವರೆಗೆ ಖಂಡಾಂತರ ಪ್ರಯಾಣಕ್ಕೆ ಉಗಿ ಜಹಜುಗಳು ನಂಬಿಕಾರ್ಹ ವ್ಯವಸ್ಥೆಯಾಗಿದ್ದವು. 1960ರ ಆರಂಭದಲ್ಲಿ ದೂರದ ಪ್ರಯಾಣಕ್ಕೆ ವಿಮಾನಗಳ ಬಳಕೆ ಶುರುವಾಯಿತು. ಇದು ಮಾನವ ಸಂಪನ್ಮೂಲದ ಗುಣಮಟ್ಟ, ವ್ಯಾಪ್ತಿ ಮತ್ತು ದೇಶದೊಂದಿಗೆ ಸಂಪರ್ಕ ಸಾಧಿಸುವಿಕೆಯನ್ನು ಪ್ರತಿಫಲಿಸಿತು ಎನ್ನಬಹುದು. ಇದೇ ಹೊತ್ತಿನಲ್ಲಿ ಅಮೆರಿಕವು ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ, 1965ನ್ನು ಜಾರಿಗೊಳಿಸಿತು. ಇದರಿಂದ ವಿದ್ಯಾರ್ಥಿಗಳು ಮತ್ತು ಅತ್ಯುತ್ತಮ ಕೌಶಲವುಳ್ಳ ವೃತ್ತಿಪರರು ಹೊರ ದೇಶಕ್ಕೆ ತೆರಳಲಾರಂಭಿಸಿದರು. ಈ ಚಾರಿತ್ರಿಕ ಕಾಯ್ದೆಯು ದೇಶದಿಂದ ಬೇರೆಡೆಗೆ ತೆರಳುವವರ ಸಂಖ್ಯೆ ಮತ್ತು ರೂಪುರೇಷೆಯನ್ನೇ ಬದಲಿಸಿತು. 1960ರಲ್ಲಿ 12,000ದಷ್ಟಿದ್ದ ವಲಸೆಗಾರರ ಪ್ರಮಾಣ ಇಂದು 2.5 ದಶ ಲಕ್ಷಕ್ಕೆ ಹೆಚ್ಚಳಗೊಂಡಿದೆ. ಈ ವಿದ್ಯಾವಂತ ಮತ್ತು ಯಶಸ್ವಿ ವಲಸೆಗಾರರು ಭಾರತೀಯ ಡಯಾಸ್ಪೋರಾಕ್ಕೆ ಚಾಲಕ ಶಕ್ತಿಯನ್ನು ನೀಡಿದ್ದಾರೆ.

ಆದರೆ, ನಾಣ್ಯದ ಇನ್ನೊಂದು ಮುಖವೂ ಇದೆ. ಸಮಾಜವಾದದ ವರ್ಷಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆ ದುರ್ಬಲವಾಗಿತ್ತು. ಆಗ ವಲಸೆಗಾರರು ತಮ್ಮ ಅಸ್ಮಿತೆ ಬಗ್ಗೆ ಹೆಮ್ಮೆಯುಳ್ಳವರಾಗಿರಲಿಲ್ಲ. ಅದೇ ರೀತಿ ದೇಶದಲ್ಲಿ ಅನಿವಾಸಿಗಳನ್ನು ಪಲಾಯನವಾದಿಗಳು ಎನ್ನಲಾಗುತ್ತಿತ್ತು. ಆದರೆ, 1991ರ ಬಳಿಕ ಆರ್ಥಿಕ ಬೆಳವಣಿಗೆ ತೀವ್ರಗೊಂಡಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಪ್ರಾಬಲ್ಯ, ವಾಜಪೇಯಿ ಅವರ ಸರಕಾರ ಸೇರಿದಂತೆ ಇನ್ನಿತರ ಅಂಶಗಳು ಅನಿವಾಸಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದವು. ಉಪಗ್ರಹ ಟೆಲಿವಿಷನ್, ಇಂಟರ್ನೆಟ್ ಮತ್ತು ಫೋನ್‌ಗಳ ಹೆಚ್ಚಳದಿಂದ ಅನಿವಾಸಿಗಳು ದೇಶದೊಂದಿಗೆ ನಿರಂತರ ಸಂಪರ್ಕದಲ್ಲಿರುವುದು, ಅವರು ದೇಶದ ಹಿತಾಸಕ್ತಿ ಬಗ್ಗೆ ಚಿಂತನೆ ನಡೆಸುವುದು, ಸ್ವದೇಶಿ ಮತ್ತು ವಿದೇಶಿ ಭಾರತೀಯರು ದೇಶದ ಬಗ್ಗೆ ಜಾಗತಿಕ ವೇದಿಕೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಸಾಧ್ಯವಾಯಿತು. 2008ರಲ್ಲಿ ಬೋಸ್ಟನ್‌ನಲ್ಲಿ ಕಂಚನ್ ಬ್ಯಾನರ್ಜಿ ಆರಂಭಿಸಿದ ಮ್ಯಾಗಝಿನ್ ‘ನ್ಯೂ ಗ್ಲೋಬಲ್ ಇಂಡಿಯನ್’ ಇದರ ಅಭಿವ್ಯಕ್ತಿ ಎನ್ನಬಹುದು.

ಆದರೆ, ಅನಿವಾಸಿ ಭಾರತೀಯರು ವರ್ಣ ತಾರತಮ್ಯ, ಧಾರ್ಮಿಕ ಅಸಹಿಷ್ಣುತೆ ಮತ್ತು ಕಾನೂನು ಭೇದವನ್ನು ಎದುರಿಸುತ್ತಿದ್ದಾರೆ. ನಾವೆಲ್ಲ ಭಾವಿಸಿದಂತೆ, ಬೇರೆ ದೇಶಕ್ಕೆ ವಲಸೆ ಹೋದ ಎಲ್ಲರೂ ಯಶಸ್ಸು ಗಳಿಸಿಲ್ಲ. 1980ರಲ್ಲಿ ಗಾಂಧಿ ದಕ್ಷಿಣ ಆಫ್ರಿಕದಲ್ಲಿ ಮೇಲೆತ್ತಿದ ಜ್ಯೋತಿಯನ್ನು ಕೆಳಗಿಳಿಸುವ ಕಾಲ ಇನ್ನೂ ಬಂದಿಲ್ಲ.

share
-ಪ್ರಿಯದರ್ಶಿ ದತ್ತ
-ಪ್ರಿಯದರ್ಶಿ ದತ್ತ
Next Story
X