Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಬಿಜೆಪಿಯ ದೀರ್ಘಾವಧಿ ಕನಸಿಗೆ ನೋಟು...

ಬಿಜೆಪಿಯ ದೀರ್ಘಾವಧಿ ಕನಸಿಗೆ ನೋಟು ರದ್ದತಿ ಏಕೆ ಪೂರಕವಲ್ಲ?

ಮನೀಶ್ ದುಬೆಮನೀಶ್ ದುಬೆ8 Jan 2017 11:44 PM IST
share
ಬಿಜೆಪಿಯ ದೀರ್ಘಾವಧಿ ಕನಸಿಗೆ ನೋಟು ರದ್ದತಿ ಏಕೆ ಪೂರಕವಲ್ಲ?

ಪ್ರಾದೇಶಿಕ ವಿರೋಧಿಗಳ ವಿರುದ್ಧದ ಬಿಜೆಪಿಯ ಇತ್ತೀಚಿನ ಯಶಸ್ಸು ಸದಾ ಮರುಕಳಿಸುತ್ತದೆ ಎಂಬ ವಿಶ್ವಾಸ ಇರಿಸಿಕೊಳ್ಳುವುದು ಮೂರ್ಖತನವಾಗುತ್ತದೆ. ಮತಕ್ಷೇತ್ರಗಳ ಬಹುತ್ವ ಹಾಗೂ ವೈವಿಧ್ಯತೆ, ಅವರ ಆಕಾಂಕ್ಷೆ ಹಾಗೂ ಅವುಗಳನ್ನು ರಾಷ್ಟ್ರೀಯ ಪಕ್ಷಗಳ ಅಧಿಕಾರ ಸಂರಚನೆಯಲ್ಲಿ ಸೇರಿಸಿಕೊಳ್ಳುವ ಸವಾಲುಗಳಿಂದಾಗಿ, ಪ್ರಾದೇಶಿಕ ಶಕ್ತಿಗಳು ಸ್ಪರ್ಧಾತ್ಮಕವಾಗಿಯೇ ಉಳಿಯುತ್ತವೆ ಎನ್ನುವುದನ್ನು ದೃಢಪಡಿಸುತ್ತದೆ.

ನೋಟು ರದ್ದತಿಯ ರಾಜಕೀಯ ಪರಿಣಾಮಗಳ ಬಗ್ಗೆ ಮತ್ತು ಅಖಿಲೇಶ್ ಯಾದವ್ ಅವರು ನಾಯಕರಾಗಿ ರೂಪುಗೊಂಡ ಬಗೆಗಿನ ಪರಿಣಾಮದ ಬಗ್ಗೆ ರಾಜಕೀಯ ಹಾಗೂ ಮಾಧ್ಯಮ ವಲಯದಲ್ಲಿ ಇನ್ನೂ ಅನಿಶ್ಚಿತತೆ ಮುಂದುವರಿದಿದ್ದರೂ, ಬಿಜೆಪಿಯ ದೀರ್ಘಾವಧಿ ಕಾರ್ಯತಂತ್ರ ರೂಪಿಸುವವರು ಮಾತ್ರ, ಪಕ್ಷವನ್ನು ಭಾರತದ ಆಡಳಿತಕ್ಕೆ ಸಹಜ ಪಕ್ಷ ಎಂಬ ಸ್ಥಿತಿ ಸೃಷ್ಟಿಯಾಗುವ ಆಶಾವಾದ ಹೊಂದಿದ್ದಾರೆ.

ಇವರ ಆಶಾವಾದಕ್ಕೆ ಮುಖ್ಯ ಕಾರಣಗಳು ಮೂರು. ಮೊದಲನೆಯದಾಗಿ, ಕಾಂಗ್ರೆಸ್ ಪಕ್ಷದ ಜತೆ ನೇರ ಹಣಾಹಣಿ ಇರುವ ರಾಜ್ಯಗಳಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್‌ಗಿಂತ ಸ್ಪಷ್ಟ ಮೇಲುಗೈ ಸಾಧಿಸಿರುವುದು. ಎರಡು ಪಕ್ಷದ ಸ್ಪರ್ಧೆ ಇರುವ ಚತ್ತೀಸ್‌ಗಡ, ಗುಜರಾತ್ ಅಥವಾ ಮಧ್ಯಪ್ರದೇಶದಲ್ಲಿ, ಕಾಂಗ್ರೆಸ್ ಇನ್ನೂ ನಿರೀಕ್ಷಿತ ಪ್ರಗತಿ ಸಾಧಿಸದಿರುವುದು.

ಎರಡನೇ ಕಾರಣವೆಂದರೆ, ಪ್ರಾದೇಶಿಕ ಪಕ್ಷಗಳ ಸಂಘರ್ಷದ ಲಾಭವನ್ನು ಪಡೆಯುವಲ್ಲಿ ಬಿಜೆಪಿ ಕೈ ಮೇಲಾಗಿರುವುದು. ಭಾರತದ ಬಹುತೇಕ ಪ್ರಾದೇಶಿಕ ಪಕ್ಷಗಳು ಬೆಳೆದದ್ದು ಒಬ್ಬ ನಾಯಕನ ಬಿಗಿಮುಷ್ಟಿಯ ಹಿಡಿತದಲ್ಲಿ. ಪಕ್ಷದ ಸಹೋದ್ಯೋಗಿಗಳ ಭಾವನೆೆಗಳಿಗಿಂತ ಹೆಚ್ಚಾಗಿ ಇಲ್ಲಿ ಕುಟುಂಬ ರಾಜಕಾರಣದ್ದೇ ದರ್ಬಾರು. ಅಂಥ ಚಿತ್ರಣ ಬಾಳ್ ಠಾಕ್ರೆ, ಚರಣ್‌ಸಿಂಗ್, ಚೌಧರಿ ದೇವಿಲಾಲ್ ಅವರ ಪಕ್ಷಗಳಲ್ಲಿ ಕಾಣಬಹುದು. ಇದರ ಜತೆಗೆ ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ ಹಾಗೂ ಜಯಲಲಿತಾ ನಿಧನದ ಬಳಿಕ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ವಿಚಾರದಲ್ಲೂ ಪಕ್ಷದ ಆಂತರಿಕ ತುಮುಲವನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು.

ಪ್ರಾದೇಶಿಕ ಪಕ್ಷಗಳ ನಡುವೆ ಇರುವ ಗಂಭೀರವಾದ ಭಿನ್ನಾಭಿಪ್ರಾಯ, ಸೈದ್ಧಾಂತಿಕವಾಗಿ, ಎಲ್ಲ ಇತರ ವಿರೋಧ ಪಕ್ಷಗಳಿಗೆ ಅವಕಾಶವನ್ನು ಸೃಷ್ಟಿಸುತ್ತದೆ. ಆದರೆ, ಇತ್ತೀಚಿನ ಇತಿಹಾಸವನ್ನು ಅವಲೋಕಿಸಿದರೆ, ಇಂಥ ಅವಕಾಶವನ್ನು ಬಳಕೆ ಮಾಡಿಕೊಳ್ಳುವಲ್ಲಿ ಬಿಜೆಪಿ ಅತ್ಯಂತ ಯಶಸ್ವಿಯಾಗಿದೆ.

ಬಿಜೆಪಿ ಇತ್ತೀಚೆಗೆ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. ಉದಾಹರಣೆಗೆ ಹರ್ಯಾಣದಲ್ಲಿ ಬಿಜೆಪಿ ಉದಯ. ಇದಕ್ಕೆ ಕಾರಣವಾದದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಲಾಲ್ ಕುಟುಂಬ ಉತ್ತರಾಧಿಕಾರಿ ಗದ್ದಲದಿಂದಾಗಿ ಕಾಂಗ್ರೆಸ್ ವಿರೋಧಿ ಭಾವನೆೆ ದಟ್ಟವಾಗಿ ಬೆಳೆದದ್ದು. ಠಾಕ್ರೆಯವರ ಸಂಪ್ರದಾಯವನ್ನು ಮುಂದುವರಿಸುವ ಬಗ್ಗೆ ಮಲಸಹೋದರರಲ್ಲಿ ಎದುರಾದ ಭಿನ್ನಾಬಿಪ್ರಾಯ ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ಹಾನಿಯನ್ನು ಉಂಟು ಮಾಡಿತು. ಶಿಬುಸೊರೆನ್ ಅವರ ಉತ್ತರಾಧಿಕಾರಿಗಳು, ಅವರ ಜಾಗವನ್ನು ತುಂಬಲು ವಿಫಲರಾಗಿದ್ದರಿಂದ ಜಾರ್ಖಂಡ್‌ನಲ್ಲಿ ಬಿಜೆಪಿ ಆಧಿಪತ್ಯ ಸ್ಥಾಪಿಸಲು ಕಾರಣವಾಯಿತು. ಅಸ್ಸಾಂ ಗಣ ಪರಿಷತ್‌ನ ಪ್ರಗತಿಪರ ವಿಭಜನೆಯು ಅಸ್ಸಾಂನಲ್ಲಿ ಬಿಜೆಪಿಗೆ ರಾಜಕೀಯ ಅವಕಾಶ ಸೃಷ್ಟಿಸಿಕೊಟ್ಟಿತು.

ಈ ಪರಿಸ್ಥಿತಿಯಲ್ಲಿ, ಸಮಾಜವಾದಿ ಪಕ್ಷದ ಆಂತರಿಕ ಯುದ್ದ, ಬಿಜೆಪಿಗೆ ಅನುಕೂಲಕರ ಅವಧಿಯಲ್ಲಿ ಬೆಳಕಿಗೆ ಬಂದಿಲ್ಲ. ಕೇವಲ ಒಂದು ವಾರದ ಹಿಂದೆ, ನೋಟು ರದ್ದತಿಯ ಘಟನೋತ್ತರ ಸಂಕಷ್ಟಗಳು ಮುಂದುವರಿದಿದ್ದವು; ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊಟ್ಟಮೊದಲ ಬಾರಿಗೆ ನರೇಂದ್ರ ಮೋದಿಯವರಿಗೆ ಇದು ಹಿನ್ನಡೆಯಾಗಿತ್ತು. ಇದರಿಂದಾಗಿ ಬಿಜೆಪಿಯ ಉತ್ತರ ಪ್ರದೇಶದ ಕನಸು ನನಸಾಗುವ ಹಂತ ದೂರವಿದ್ದಂತೆ ಕಾಣುತ್ತದೆ.

ಅಖಿಲೇಶ್ ಹಾಗೂ ಮುಲಾಯಂ ಬಣಗಳ ನಡುವೆ ಕತ್ತುಕತ್ತಿನ ಕಾಳಗ ನಡೆಯುತ್ತಿದ್ದು, ಇದು ಬಿಜೆಪಿಗೆ ಅವಕಾಶದ ಬಾಗಿಲು ಎನ್ನಲಾಗುತ್ತಿದೆ. ತಂದೆ ಹಾಗೂ ಮಗನ ನಡುವೆ ಒಪ್ಪಂದ ಏರ್ಪಟ್ಟರೂ, ಬಿಜೆಪಿಗೆ ನೋಟು ರದ್ದತಿ ಬಳಿಕ ಉಂಟಾದ ಹಿನ್ನಡೆಯನ್ನು ಸ್ವಲ್ಪಮಟ್ಟಿಗೆ ತೊಡೆದು ಹಾಕಲು ಇದು ಅನುಕೂಲವಾಗುತ್ತದೆ ಎನ್ನಬಹುದು.

ಅಂತಿಮವಾಗಿ ಬಿಜೆಪಿ ಉತ್ತರ ಪ್ರದೇಶದಲ್ಲಿ 2017ರ ಚುನಾವಣೆಯಲ್ಲಿ ಗೆಲ್ಲಲಾಗದಿದ್ದರೂ, ಸಮಾಜವಾದಿ ಪಕ್ಷದ ಒಂದು ವರ್ಗದ ಮತಬ್ಯಾಂಕನ್ನು ಸೆಳೆಯುವ ಸಾಧ್ಯತೆ ಇದೆ.

ಪ್ರಾದೇಶಿಕ ಪಕ್ಷಗಳ ಒಳಗಿನ ಸಂಘರ್ಷವಲ್ಲದೇ, ಸಾಂಪ್ರದಾಯಿಕವಲ್ಲದ ರಾಜ್ಯಗಳಲ್ಲಿ ಬಿಜೆಪಿ ಪ್ರಗತಿ, ಬಿಜೆಪಿ ಹಾಗೂ ಆರೆಸ್ಸೆಸ್‌ನ ರಾಷ್ಟ್ರೀಯವಾದ ಹಾಗೂ ಬಹುಸಂಖ್ಯಾತ ಮನೋಭಾವನೆೆ ಮತ್ತು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಎಸಗಿದ ಪಾಪಗಳು ಬಿಜೆಪಿಗೆ ವರವಾಗಿ ಪರಿಗಣಮಿಸಿವೆ.

ಈ ಸಂಘರ್ಷ ಬಿಜೆಪಿ ಪ್ರಾಯೋಜಿತವಂತೂ ಅಲ್ಲ; ಬದಲಾಗಿ ಪಕ್ಷದಲ್ಲಿ ಆಂತರಿಕವಾಗಿ ಪ್ರಜಾಪ್ರಭುತ್ವ ಇಲ್ಲದಿರುವುದು ಹಾಗೂ, ಭವಿಷ್ಯದ ನಾಯಕತ್ವದ ಹೂಡಿಕೆಯಿಂದಾಗಿ ಸೃಷ್ಟಿಯಾಗಿರುವಂಥದ್ದು. ಬಿಜೆಪಿಯೇತರ ಪಕ್ಷಗಳಿಗೆ ಇನ್ನೂ ಕೆಟ್ಟ ಪರಿಸ್ಥಿತಿ ಎಂದರೆ, ಮಧ್ಯಮಾವದಿ ಹಾಗೂ ದೀರ್ಘಾವಧಿಯಲ್ಲಿ, ಬಿಜೆಪಿ ತನ್ನ ರಾಷ್ಟ್ರೀಯವಾದ ಹಾಗೂ ಬಹುಸಂಖ್ಯಾತ ಟ್ರಂಪ್ ಕಾರ್ಡನ್ನು ಬಳಸುವುದು ಹಾಗೂ ಪ್ರಾದೇಶಿಕ ಎದುರಾಳಿಗಳು ಜಾರುವಂತೆ ನೋಡಿಕೊಳ್ಳುವುದು.

ಬಿಜು ಜನತಾದಳ, ಬಹುಜನ ಸಮಾಜ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು, ಭವಿಷ್ಯದಲ್ಲಿ ನಾಯಕರಿಲ್ಲದ ಸ್ಥಿತಿಯಲ್ಲಿ ಸರ್ವಸನ್ನದ್ಧತೆಯನ್ನು ಇನ್ನೂ ಪ್ರದರ್ಶಿಸಬೇಕಾಗಿದೆ. ಮುಂದಿನ ವರ್ಷಗಳಲ್ಲಿ ಇವರು ಬಿಜೆಪಿ ತೆಕ್ಕೆಗೆ ಸೇರಿದರೂ ಆಶ್ಚರ್ಯ ಪಡಬೇಕಿಲ್ಲ. ಹೆಚ್ಚುವರಿಯಾಗಿ, ತಮಿಳುನಾಡಿನಲ್ಲಿ ಜಯಲಲಿತೋತ್ತರ ಯುಗದಲ್ಲಿ ಬಿಜೆಪಿ ಸ್ವಯಂ ಸಾಮರ್ಥ್ಯದಿಂದ ಅವಕಾಶವನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನ ನಡೆಸುವುದು ಗುಟ್ಟಾಗಿ ಉಳಿದಿಲ್ಲ.

ಮೂರನೆಯದಾಗಿ ಬಿಜೆಪಿ, ಸಂಘ ಪರಿವಾರದ ಸಂಪರ್ಕದ ಋಣ ಹೊಂದಿದ್ದರೂ, ಪಕ್ಷದ ನೈತಿಕತೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಿರುವುದು. ಲೆಕ್ಕಾಚಾರದಿಂದ ಇತರ ಮತ ಬ್ಯಾಂಕ್‌ಗಳಿಗೆ ಗಾಳ ಹಾಕಿರುವುದು ಕೂಡಾ ಬಿಜೆಪಿಯ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ವಿರುದ್ಧವಾಗಿ, ಕಾಂಗ್ರೆಸ್, ಅಧಿಕಾರ ಕಳೆದುಕೊಂಡ ಬಳಿಕ ಕಾಂಗ್ರೆಸ್ ಯಾವ ಬಹುಪಕ್ಷಗಳ ವ್ಯವಸ್ಥೆಯ ರಾಜ್ಯಗಳಲ್ಲಿ ಕೂಡಾ ಅಧಿಕಾರ ಗಳಿಸಿಲ್ಲ.

ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್, ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್ ಹಾಗೂ ಮಾಯಾವತಿಯಂಥ ನಾಯಕರು ಇನ್ನೂ ಸ್ವಲ್ಪಕಾಲ ರಾಜಕೀಯದಲ್ಲಿ ಉಳಿಯಲಿದ್ದು, ತಮಿಳುನಾಡಿನಲ್ಲೂ ಪ್ರಯೋಜನ ತಕ್ಷಣಕ್ಕೆ ಲಭಿಸದು, ಆದರೆ ತಾಳ್ಮೆ ಹಾಗೂ ಸಹನೆ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ತಂದುಕೊಡುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಇದಕ್ಕೆ ಸ್ಫೂರ್ತಿದಾಯಕ ಎಂಬಂತೆ ಕರ್ನಾಟಕದ ಪರಿಸ್ಥಿತಿ ಅವಲೋಕಿಸಿದರೆ, ಒಮ್ಮೆ ವಿಂಧ್ಯಾಪರ್ವತದ ದಕ್ಷಿಣಕ್ಕೆ ಪ್ರಯೋಗ ಭೂಮಿಯಾಗಿದ್ದ ಕರ್ನಾಟಕ ಹಾಗೂ ಕೇರಳದಲ್ಲಿ ಹಲವಾರು ಅವಮಾನಕರ ಸೋಲಿನ ಬಳಿಕ ಗಣನೀಯ ಸುಧಾರಣೆಯನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತಂತ್ರಗಾರಿಕೆ ತಜ್ಞರು ಆಶಾವಾದ ಹೊಂದಿದ್ದಾರೆ.

ಅದಾಗ್ಯೂ ಪಕ್ಷದ ಮುನ್ನಡೆಗೆ ತಡೆಯಾಗಿರುವ ಅಂಶ ಯಾವುದು? ಕಾಂಗ್ರೆಸ್‌ಗೆ ಒಮ್ಮೆ ನಾಸಬಂದಿ ಮಾಡಿದ ಹಾನಿಯಂತೆ ಬಿಜೆಪಿಗೆ ನೋಟುಬಂದಿ ಕೂಡಾ ಅಂಥದ್ದೇ ಹಾನಿ ಮಾಡಬಲ್ಲದು. ಬಡವರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಹಾಗೂ, ಬಿಜೆಪಿಸ್ನೇಹಿ ಎನಿಸಿಕೊಂಡಿರುವ ವೇತನ ಪಡೆಯುವ ವರ್ಗದ ಮನೋಭಾವನೆೆ ಬದಲಾಗಬಹುದು. ವ್ಯಾಪಾರಿ ಹಾಗೂ ಉದ್ಯಮಿ ವಲಯ ಕೂಡಾ ಆರ್ಥಿಕ ಚಟುವಟಿಕೆ ಇಳಿಮುಖವಾದರೆ ಮತ್ತು ತೆರಿಗೆ ಅಧಿಕಾರಿಗಳ ಕಿರುಕುಳ ಅತಿಯಾದರೆ ತಿರುಗಿ ಬೀಳುವ ಅಪಾಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಬಿಜೆಪಿಯ ಪ್ರಸ್ತುತ ವಿಧಾನದಲ್ಲೇ ಅಂತರ್ಗತವಾಗಿರುವ ಕೆಲ ಲೋಪಗಳಿವೆ. ರಾಜಕೀಯ ವಿರೋಧಿಗಳ ವಿರುದ್ಧದ ಘೋಷಣೆಗಳಿಗೆ, ರಾಷ್ಟ್ರೀಯವಾದಿ ಎದೆಬಡಿತಕ್ಕೆ ಹಾಗೂ ತೋಳ್ಬಲ ಪ್ರದರ್ಶನಕ್ಕೆ ಒಂದು ಮಿತಿ ಇದೆ.

ಭಾರತದ ಬಡವರು ವಾಸ್ತವವಾಗಿ ಬಣ್ಣನೆಗಳಿಗೆ ಮರುಳಾಗದೇ, ತಮಗೇನು ದೊರಕಿದೆ ಎಂಬ ಮಾನದಂಡದಿಂದ ಸರಕಾರದ ವೌಲ್ಯಮಾಪನ ಮಾಡುವಷ್ಟು ಪ್ರಬುದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ ಪಕ್ಷವನ್ನು ಮತದಾರ ಶಿಕ್ಷಿಸಿದ್ದಾನೆ. ಕಾಂಗ್ರೆಸ್‌ನ ಪತನಕ್ಕೆ ದಲಿತ ಹಾಗೂ ಆದಿವಾಸಿಗಳ ಬೆಂಬಲದ ನೆಲೆ ಕಳೆದುಕೊಂಡದ್ದು ಮುಖ್ಯ ಕಾರಣ. ಎಲ್ಲ ಕಲ್ಯಾಣ ಪ್ರಯೋಜನಗಳನ್ನು ಹಂತಹಂತವಾಗಿ ಕಡಿತ ಮಾಡುತ್ತಿರುವ ಸರಕಾರವನ್ನು ಜನ ಭಿನ್ನವಾಗಿ ಪರಿಗಣಿಸುತ್ತಾರೆ ಎಂದು ನಂಬಲು ಕಾರಣಗಳಿಲ್ಲ. ರಾಷ್ಟ್ರೀಯವಾದಿ ತೋಳ್ಬಲ ಪ್ರದರ್ಶನ ಅಥವಾ ಪಾಕಿಸ್ತಾನದ ಜತೆಗಿನ ಸಂಘರ್ಷ ಕೂಡಾ ಸದಾ ಪ್ರತಿಫಲ ನೀಡಲಾರದು. 1971ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಅಲ್ಪಾವಧಿಯಲ್ಲೇ ಜನ ಇಂದಿರಾಗಾಂಧಿಯನ್ನು ಮಟ್ಟಹಾಕಿದ್ದಾರೆ. ಅಂತೆಯೇ ಅಣ್ವಸ್ತ್ರ ಪ್ರಯೋಗವಾಗಲೀ, ಕಾರ್ಗಿಲ್ ವಿಜಯವಾಗಲೀ, ಅಟಲ್ ಬಿಹಾರಿ ವಾಜಪೇಯಿಯವರಿಗೆ ಸತತ ಎರಡನೆ ಬಾರಿಗೆ ಅಧಿಕಾರ ಗಳಿಸಿಕೊಡಲು ಸಾಧ್ಯವಾಗಿಲ್ಲ.

ವಿರೋಧಿಗಳನ್ನು ಗುರಿ ಮಾಡುವಂತಹ ಕ್ರಮ ರಾಜಕೀಯ ಯುದ್ದದ ಪಥವನ್ನು ಬದಲಿಸಲಿದೆ. ಒಂದು ಕಾಲಕ್ಕೆ ಬದ್ಧ ವಿರೋಧಿಗಳಾಗಿದ್ದ ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಯಾದವ್ ಯಶಸ್ವಿಯಾಗಿ ಕೈಜೋಡಿಸಿದ್ದಾರೆ. ಅರವಿಂದ್ ಕೇಜ್ರಿವಾಲ್, ಕುಮಾರ್ ಹಾಗೂ ಬ್ಯಾನರ್ಜಿ ಬಾಂಧವ್ಯ ಹಾಗೂ ನೋಟು ರದ್ದತಿ ಬಳಿಕ ಬ್ಯಾನರ್ಜಿ ಎಡ ಪಕ್ಷಗಳತ್ತ ಹೆಜ್ಜೆ ಇಟ್ಟಿರುವುದು ಕೂಡಾ ಭವಿಷ್ಯದ ದಿಕ್ಸೂಚಿಯಾಗಬಲ್ಲದು.

ಸ್ವಲ್ಪ ಹಿಂದಿನ ಕಾಲದವರೆಗೂ ಇದನ್ನು ಕನಸಿನಲ್ಲೂ ಯೋಚಿಸುವಂತಿರಲಿಲ್ಲ ಹಾಗೂ ಬಿಜೆಪಿಯ ವಿಸ್ತರಣಾ ಕಾರ್ಯಸೂಚಿ ಅನಾವರಣಗೊಳ್ಳುತ್ತಿದ್ದಂತೆ, ಇತರ ಹೊಂದಾಣಿಕೆಯನ್ನು ಕೂಡಾ ಅಲ್ಲಗಳೆಯುವಂತಿಲ್ಲ. ಉತ್ತರ ಪ್ರದೇಶದಲ್ಲಿ ಅತಂತ್ರ ರಚನೆಯಾದರೆ, ಮುಲಾಯಂ ಸಿಂಗ್ ಯಾದವ್ ಇಲ್ಲದ ಸಮಾಜವಾದಿ ಪಕ್ಷದ ಜತೆ ವ್ಯವಹಾರ ನಡೆಸಲು ಬಹುಜನ ಸಮಾಜ ಪಕ್ಷ ಮುಂದಾಗುವ ಹಂತದಲ್ಲಿ ಇದೀಗ ನಾವಿದ್ದೇವೆ. ಅಂತಿಮವಾಗಿ, ಪ್ರಾದೇಶಿಕ ವಿರೋಧಿಗಳ ವಿರುದ್ಧದ ಬಿಜೆಪಿಯ ಇತ್ತೀಚಿನ ಯಶಸ್ಸು ಸದಾ ಮರುಕಳಿಸುತ್ತದೆ ಎಂಬ ವಿಶ್ವಾಸ ಇರಿಸಿಕೊಳ್ಳುವುದು ಮೂರ್ಖತನವಾಗುತ್ತದೆ. ಮತಕ್ಷೇತ್ರಗಳ ಬಹುತ್ವ ಹಾಗೂ ವೈವಿಧ್ಯತೆ, ಅವರ ಆಕಾಂಕ್ಷೆ ಹಾಗೂ ಅವುಗಳನ್ನು ರಾಷ್ಟ್ರೀಯ ಪಕ್ಷಗಳ ಅಧಿಕಾರ ಸಂರಚನೆಯಲ್ಲಿ ಸೇರಿಸಿಕೊಳ್ಳುವ ಸವಾಲುಗಳಿಂದಾಗಿ, ಪ್ರಾದೇಶಿಕ ಶಕ್ತಿಗಳು ಸ್ಪರ್ಧಾತ್ಮಕವಾಗಿಯೇ ಉಳಿಯುತ್ತವೆ ಎನ್ನುವುದನ್ನು ದೃಢಪಡಿಸುತ್ತದೆ.

ಬಿಜೆಪಿಯ ವನ್ ಇಂಡಿಯಾ ಮಾದರಿ ಕೂಡಾ ಪ್ರಾದೇಶಿಕ ಹಾಗೂ ಕ್ಷೇತ್ರವಾರು ಅಗತ್ಯತೆಗಳಿಗೆ ವಿರುದ್ಧವಾಗಿದೆ ಎಂಬ ವಾದವೂ ಇದೆ. ಇದು ಉಪ ರಾಷ್ಟ್ರೀಯತೆ ಪ್ರಬಲವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದೂ ವಾದಿಸುವವರಿದ್ದಾರೆ. ಇಂಥದ್ದೇ ಪರಿಸ್ಥಿತಿಯಲ್ಲಿ ಹಿಂದೆಯೂ ಸಂಭವಿಸಿದಂತೆ ಇಂತಹ ಉತ್ಸಾಹ ರಾಜಕೀಯ ವಾಹಕ ಹಾಗೂ ಚಾಂಪಿಯನ್ನರನ್ನು ಹುಡುಕಿಕೊಳ್ಳುತ್ತದೆ.

share
ಮನೀಶ್ ದುಬೆ
ಮನೀಶ್ ದುಬೆ
Next Story
X