Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಾವನೆಗಳ ಬಣ್ಣ ಅಳಿಸಬೇಕಿದೆ

ಭಾವನೆಗಳ ಬಣ್ಣ ಅಳಿಸಬೇಕಿದೆ

ವಿಕಾಸ ಆರ್ ಮೌರ್ಯವಿಕಾಸ ಆರ್ ಮೌರ್ಯ17 Jan 2017 11:38 PM IST
share
ಭಾವನೆಗಳ ಬಣ್ಣ ಅಳಿಸಬೇಕಿದೆ


ನಮ್ಮ ಮುಂದಿನ ಜಂಟಿ ಕಾರ್ಯಾಚರಣೆಯನ್ನು ಮುಂದುವರಿಸುತ್ತಾ ನಮ್ಮ ನಾಲಿಗೆಗಳನ್ನು ಸಾಣೆ ಹಿಡಿಯಬೇಕಿದೆ. ಮೆದುಳುಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಿದೆ. ದೇಹವನ್ನು ಹುರಿಗೊಳಿಸಿಕೊಳ್ಳಬೇಕಿದೆ. ಕೇವಲ ಪರ್ಯಾಯ ರಾಜಕೀಯಕ್ಕಲ್ಲ, ಪರ್ಯಾಯ ಸಮಾಜೋ-ಆರ್ಥಿಕ ವ್ಯವಸ್ಥೆಗಾಗಿ ಸಮಾಜವನ್ನು ಕಟ್ಟಬೇಕಿದೆ. ಜೊತೆಜೊತೆಗೆ ನಮ್ಮೊಳಗಿನ ಬ್ರಾಹ್ಮಣ್ಯಕ್ಕೂ ಕೊಳ್ಳಿ ಇಡಬೇಕಿದೆ. ಯಾಕೆಂದರೆ ಭಾವನೆಗಳೂ ಇಲ್ಲಿ ಬಣ್ಣ ಬಣ್ಣದ ಮುಖವಾಡ ಧರಿಸಿವೆ.

ನಮ್ಮ ಭಾವನೆಗಳು ಸೆಕೆಂಡ್ ಹ್ಯಾಂಡೆಡ್

ನಮ್ಮ ಪ್ರೀತಿ ಕೃತಕವಾಗಿದೆ

ನಮ್ಮ ನಂಬಿಕೆಗಳು ಬಣ್ಣ ಬಳಿದುಕೊಂಡಿವೆ

            -ರೋಹಿತ್ ವೇಮುಲಾ

ಈ ಮೇಲಿನ ಮಾತುಗಳನ್ನು ಹೇಳಿ ಒಂದು ವರ್ಷಗಳಾಗಿ ಹೋಯಿತು. ಜನವರಿ 17, 2016 ರಂದು ಗುಡ್ ಮಾರ್ನಿಂಗ್ ಎಂದಾರಂಭಿಸಿದ ಪತ್ರದ ಒಡೆಯ ಜೈ ಭೀಮ್ ಎಂದು ಹೇಳಿ ಮುಗಿಸುವಷ್ಟರಲ್ಲಿ ಮನೋವಿಜ್ಞಾನಿಯಾಗಿ ಹೋಗಿದ್ದ. ದಲಿತನೊಬ್ಬ ಈ ನೆಲದಲ್ಲಿ ಒಂಟಿಯಾಗಿ ಬದುಕುವುದು ಎಷ್ಟು ಕಷ್ಟವೆಂದು ನಿರೂಪಿಸಿದ್ದ. ನಮ್ಮ ದೇಶದ ವ್ಯವಸ್ಥೆ ತಾನೇ ನಿರ್ಮಿಸಿದ ಜನಾಂಗವೊಂದನ್ನು ಹೇಗೆ ಅಳಿಸಿಹಾಕಲು ಹೊಂಚುಹಾಕುತ್ತದೆ ಎಂಬುದನ್ನು ದೇಶಕ್ಕೆ ಪರಿಚಯಿಸಿದ. ಹೆಚ್ಚೂ ಕಡಿಮೆ ಎಲ್ಲ ಹೋರಾಟಗಳೂ ಜಾತಿಗಳಂತೆ ದ್ವೀಪವಾಗಿದ್ದಾಗ ರೋಹಿತ್ ವೇಮುಲಾ ತನ್ನ ಜೀವವನ್ನು ಬಲಿಗೊಟ್ಟು ಎಚ್ಚರಿಸಬೇಕಾಯಿತು. ಹೆಣ್ಣಿನ ವಿಷಯದಲ್ಲಾಗಲೀ, ದಲಿತರ ವಿಷಯದಲ್ಲಾಗಲೀ, ಆದಿವಾಸಿಗಳ ವಿಷಯದಲ್ಲಾಗಲಿ, ಮುಸಲ್ಮಾನರ ವಿಷಯದಲ್ಲಾಗಲಿ ಹೋರಾಟವಾಗಬೇಕೆಂದರೆ ಹೆಣವೇ ಬೀಳಬೇಕೆ?

ಅದೊಂದು ಸಾಂಸ್ಥಿಕ ಕೊಲೆಯೇ ನಿಜ. ಆದರೆ ಆ ಕೊಲೆಗಾರರಿಂದ ತಪ್ಪಿಸಿಕೊಂಡು ಓಡಿ ಹೋಗುವ ಎಲ್ಲಾ ದಾರಿಗಳೂ ರೋಹಿತ್ ವೇಮುಲಾನಿಗೆ ತೆರೆದಿತ್ತು. ಇಟ್ಟಿಗೆ ಮಣ್ಣು ಹೊತ್ತವನಿಗೆ, ಸಪ್ಲೆಯರ್ ಕೆಲಸ ಮಾಡಿದವನಿಗೆ ಹೊಟ್ಟೆ ಹೊರೆಯುವುದು ಕಷ್ಟವೇನಾಗಿರಲಿಲ್ಲ. ಆದರೆ ಅವನಿಗೆ ಶಾಶ್ವತ ಪರಿಹಾರ ಬೇಕಿತ್ತು. ತನ್ನಂತೆ ಕ್ಯಾಂಪಸ್ ಒಳಗಡೆ ಮತ್ತು ಹೊರಗಡೆ ತಾರತಮ್ಯತೆಯ ಕ್ರೌರ್ಯಕ್ಕೆ ನಲುಗುತ್ತಿದ್ದವರ ಪರವಾಗಿ ನಿಲ್ಲುವವರನ್ನು ಹುಡುಕುತ್ತಿದ್ದ. ಅದಕ್ಕಾಗಿಯೇ ದಲಿತರಿಗೆ ವಿಷವನ್ನು ಕೊಟ್ಟುಬಿಡಿ ಎಂದದ್ದು. ಈ ಮಾತಿಗೆ ಕುಲಪತಿಯೂ ಬಾಯ್ಬಿಡಲಿಲ್ಲ. ಸಹಪಾಠಿಗಳೂ ಬಾಯ್ಬಿಡಲಿಲ್ಲ. ಮಾಧ್ಯಮಗಳು ಐತಿಹಾಸಿಕ ಮೌನಾಚರಣೆ ಮಾಡುತ್ತಿದ್ದುವು. ಅದಕ್ಕೆ ವೆಲಿವಾಡದಲ್ಲಿ ಜೀವಿಸುತ್ತಾ ವೀಡಿಯೊ ಒಂದನ್ನು ಮಾಡಿ ದಲಿತಪರರು ಎಂದು ಬೀಗುವವರ ಕಣ್ಣು ತಟ್ಟಿದ. ಆದರೆ ನಾವದನ್ನು ಎದೆಗೆ ಹಾಕಿಕೊಳ್ಳಲಿಲ್ಲ. ಮಾಧ್ಯಮಗಳು, ಸಹಪಾಠಿಗಳು, ವಿಶ್ವ ವಿದ್ಯಾಲಯ, ಸಂಘಟನೆಗಳು ಎಲ್ಲರೂ ಅವರವರ ದ್ವೀಪಗಳಲ್ಲಿ ದುಡಿಯುತ್ತಿದ್ದರು. ‘ಕತ್ತಿ’ ಎಂಬ ತಮಿಳು ಸಿನೆಮಾದಲ್ಲಿ ಹಳ್ಳಿಯ ನೀರನ್ನು ಕಾರ್ಪೋರೇಟ್ ಕೊಕಾ ಕೋಲಾ ಕಂಪೆನಿ ಕೊಳ್ಳೆ ಹೊಡೆಯಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾಗ, ಮಾಧ್ಯಮ, ಸಮಾಜ, ವ್ಯವಸ್ಥೆ ಎಲ್ಲವೂ ದಿವ್ಯ ಮೌನ ತಾಳಿದ್ದಾಗ ಅವರ ಗಮನ ಸೆಳೆಯಲು ಆ ಹಳ್ಳಿಯ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಗ ದೇಶದ ಎಲ್ಲಾ ಅಂಗಗಳೂ ಅಲ್ಲಿಗೆ ಧಾವಿಸುತ್ತವೆ.

ಇಲ್ಲಿ ರೈತರದ್ದು ಆತ್ಮಹತ್ಯೆಯಲ್ಲ. ಅವರು ಹುತಾತ್ಮರು. ಹಾಗೆಯೇ ರೋಹಿತ್‌ನದ್ದು ಆತ್ಮಹತ್ಯೆಯಲ್ಲ. ಅವನು ಹುತಾತ್ಮ. ಈ ನೆಲದ ಅನಿಷ್ಟ ತಾರತಮ್ಯದೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮ. ಮಾವೋ ಹೇಳುತ್ತಾರೆ ‘‘ಕನಿಷ್ಠ 100 ವರ್ಷಗಳ ಇತಿಹಾಸ ಅಧ್ಯಯನ ಮಾಡಿ. ಅದು ಇಂದಿನ ಸಮಾಜದ ಮೇಲೆ ಉಂಟುಮಾಡಿರುವ ಪರಿಣಾಮ ತಿಳಿದು, ಅದರ ಕೇಂದ್ರ ಬಿಂದುವನ್ನು ಗುರುತಿಸಿ ಅದಕ್ಕೆ ಗುರಿ ಇಟ್ಟು ಹೊಡೆಯಿರಿ’’ ಎಂದು. ಬಾಬಾಸಾಹೇಬ್ ಅಂಬೇಡ್ಕರ್‌ರವರೂ ‘‘ಭಾರತದ ಶತ್ರುಗಳೆಂದರೆ ಬ್ರಾಹ್ಮಣ್ಯ ಮತ್ತು ಬಂಡವಾಳ’’ ಎಂದಿದ್ದಾರೆ. ರೋಹಿತ್ ವೇಮುಲಾ ತಿಳಿಸಿದ್ದು ಅದನ್ನೇ ‘‘ತಾರತಮ್ಯತೆಯೇ ಈ ಸಮಾಜದ ಜೀವಾಳ’’. ಬ್ರಾಹ್ಮಣ್ಯ ಮತ್ತು ಬಂಡವಾಳ ಈ ನೆಲವನ್ನು ಎಲ್ಲಿಯವರೆಗೆ ಆಳುತ್ತವೋ ಅಲ್ಲಿಯವರೆಗೆ ತಾರತಮ್ಯವಿರುತ್ತದೆ. ತಾರತಮ್ಯ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಅಸಮಾನತೆಗಳು ಇರುತ್ತವೆ. ರೋಹಿತ್ ವೇಮುಲಾನಂತವರನ್ನು ಅದು ಗುರಿಯಾಗಿಸಿಕೊಂಡು ನಿರ್ನಾಮ ಮಾಡುತ್ತಾ ಮುಂದುವರಿಯುತ್ತದೆ.

 ಈ ಬ್ರಾಹ್ಮಣ್ಯ-ಬಂಡವಾಳಶಾಹಿ ಕೇವಲ ದಲಿತನನ್ನು ಹಾಳುಮಾಡಿದೆಯೇ? ಆಧುನಿಕ ಭಾರತದ ಇತಿಹಾಸವನ್ನು ಗಮನಿಸಿದರೆ ಬ್ರಾಹ್ಮಣ್ಯದ ವಿರುದ್ಧ ದಲಿತರು ಮತ್ತು ಶೂದ್ರರು ಹೋರಾಡಿದ್ದಾರೆ. ಕೇವಲ ಥಿಯರಿಗಳಲ್ಲಿ ಮುಳುಗಿಹೋಗದೆ ಪ್ರಾಯೋಗಿಕವಾಗಿಯೂ ಯಶ ಗಳಿಸಿದ್ದಾರೆ. ಫುಲೆ ದಂಪತಿಗಳು, ಪೆರಿಯಾರ್, ನಾರಾಯಣ ಗುರುಗಳು, ಬಾಬಾಸಾಹೇಬ್ ಅಂಬೇಡ್ಕರ್‌ರವರು ಪ್ರಮುಖರು. ಬಂಡವಾಳಶಾಹಿಯ ವಿರುದ್ಧ ಕಮ್ಯುನಿಸ್ಟ್ ಹೋರಾಟಗಳು ಎಡೆಬಿಡದೆ ದುಡಿಯುತ್ತಿವೆ. ಅಂಬೇಡ್ಕರರು ಕಾಂಗ್ರೆಸ್ ಹಾಗೂ ಗಾಂಧೀಜಿಯವರಿಗೆ ಬಿರ್ಲಾ ಮಾಡುತ್ತಿದ್ದ ಪ್ರತಿಫಲಾಪೇಕ್ಷೆ ಸಹಾಯವನ್ನು ಬಂಡವಾಳವೆಂದೇ ಕರೆದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಭೂಮಾಲಕರ ಪಡೆಯನ್ನು ಪ್ರಶ್ನಿಸುತ್ತಾ ಅವರೊಳಗಿನ ಬದ್ಧತೆಯನ್ನು ಪ್ರಶ್ನಿಸಿದ್ದರು. ಭಗತ್ ಸಿಂಗ್ ಕೂಡ ಇದನ್ನೇ ಹೇಳಿದ್ದು. ‘‘ಭಾರತದ ಸ್ವಾತಂತ್ರ್ಯ ಕೆಂಪು ಕೋತಿಗಳಿಂದ ಕಂದು ಬಣ್ಣದ ಕೋತಿಗಳಿಗೆ ರವಾನೆಯಾಗುತ್ತದೆ’’ ಎಂದು. ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಭಾರತದ ಬ್ರಾಹ್ಮಣ್ಯ-ಬಂಡವಾಳ ವರ್ಗಕ್ಕೆ ಸ್ವಾತಂತ್ರ್ಯ ರವಾನೆಯಾಗಿರುವುದನ್ನು ನಾವು ಕಳೆದ 7 ದಶಕಗಳಿಂದಲೂ ಕಾಣುತ್ತಲೇ ಇದ್ದೇವೆ. ಇಲ್ಲಿಯವರೆಗೂ ಸಿದ್ದಲಿಂಗಯ್ಯನವರ ಯಾರಿಗೆ ಬಂತು ಸ್ವಾತಂತ್ರ್ಯ? ಪ್ರಶ್ನೆಗೆ ಉತ್ತರ ಬದಲಿಸಲು ಸಾಧ್ಯವೇ ಆಗುತ್ತಿಲ್ಲ.

  ಜನ ಚಳವಳಿಗಳು ತಂಡಗಳಾಗಿ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯನ್ನು ಪ್ರತ್ಯೇಕವಾಗಿಯೇ ಎದುರಿಸಲು ಹೊರಟವು. ಪ್ರತ್ಯೇಕವಾಗಿಯೇ ಅಲ್ಲಲ್ಲಿ ಗೆಲುವನ್ನು ಸಾಧಿಸಿದವು. ಆದರೆ 90ರ ದಶಕದ ನಂತರ ಜಾಗತೀಕರಣ ಬ್ರಾಹ್ಮಣ್ಯ ಮತ್ತು ಬಂಡವಾಳ ಶಕ್ತಿಯನ್ನು ಇನ್ನೂ ಹತ್ತಿರ ತಂದಿತು. ಅವೆರಡೂ ರೂಪಿಸಿದ ಬಂಡವಾಳವಾದವೇ ದೇಶದ ವಿಮೋಚಕ ಎಂಬ ಭ್ರಮೆಯಲ್ಲಿ ಚಳವಳಿಗಳು ಛಿದ್ರವಾದವು. ಈ ಛಿದ್ರಗಳೂ ಕೂಗುತ್ತಲೇ ಇವೆ. ಆದರೆ ದನಿ ಸಾಲದಾಗಿದೆ. ಇಂತಹ ಕೂಗಿನಲ್ಲೊಂದು ಕೂಗು ರೋಹಿತ್ ವೇಮುಲಾ. ಹೀಗೆ ಒಂಟಿ ಕೂಗುಗಳು ಬೃಹತ್ ಕಂಪನ ಉಂಟು ಮಾಡಲಾಗುತ್ತಿಲ್ಲ ಎಂಬುದು ಎಷ್ಟು ಸತ್ಯವೋ. ಅಷ್ಟೇ ಸತ್ಯ ಒಂಟಿ ಕೂಗುಗಳು ಜಂಟಿಯಾಗಿ ಕೂಗಬೇಕೆನ್ನುವುದು. ಅದಾವುದೇ ವಾದಗಳಿರಲಿ, ಸಿದ್ಧಾಂತಗಳಿರಲಿ ಅವೆಲ್ಲವೂ ಜನಪರವಾಗಿ ಒಂದುಗೂಡಬೇಕಾದ ತುರ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ವಾದಗಳು ಒಂದಾಗುತ್ತವೆಯೋ ಇಲ್ಲವೋ ವಾದಿಗಳು ಒಂದಾಗಲೇಬೇಕಿದೆ. ಏಕೆಂದರೆ ಕಳೆದ ಮೂರು ದಶಕಗಳಲ್ಲಿ ಬ್ರಾಹ್ಮಣ್ಯ-ಬಂಡವಾಳಶಾಹಿ ಇನ್ನಿಲ್ಲದಂತೆ ಜಂಟಿ ಕಾರ್ಯಾಚರಣೆಗಿಳಿದಿರುವಾಗ ಜನಪರ ಸಂಘಟನೆಗಳ ಒಂಟಿ ಕಾರ್ಯಾಚರಣೆಗಳು ನೆಲಕಚ್ಚುವುದು ಖಂಡಿತ. ದಲಿತ-ದಮನಿತರ ಜಂಟಿ ಕಾರ್ಯಾಚರಣೆಗಳು ದಶಕದ ನಂತರ ಕಳೆದ ವರ್ಷ ನಡೆದಿರುವುದು ಚಳವಳಿಗಳ ಸಾಧ್ಯತೆಯನ್ನು ಮನಗಾಣಿಸಿದೆ.

ಜೆ.ಎನ್.ಯು. ಯುವ ಹೋರಾಟ, ಗುಜರಾತಿನ ಉನಾದಲ್ಲಿ ದಲಿತರು ಮತ್ತು ಮುಸ್ಲಿಮರ ಜಂಟಿ ಹೋರಾಟ, ನಮ್ಮ ರಾಜ್ಯದ ‘ಚಲೋ ಉಡುಪಿ’ ದಲಿತ-ದಮನಿತರ ಹೋರಾಟ, ಕೇರಳದ ಶ್ರಮಿಕರ ಹೋರಾಟ, ಆಂಧ್ರಪ್ರದೇಶದ ಬೃಹತ್ ಜಾಥಾ, ದಿಡ್ಡಳ್ಳಿ ಆದಿವಾಸಿಗಳ ಹೋರಾಟ ಇವುಗಳೆಲ್ಲವೂ ಮತ್ತೊಂದು ಬೃಹತ್ ಚಳುವಳಿಯ ಅನಿವಾರ್ಯತೆಯನ್ನು ಮನಗಂಡಿವೆ. ಈ ಮೇಲಿನ ಎಲ್ಲಾ ಹೋರಾಟಗಳಲ್ಲೂ ಮಹಿಳಾವಾದಿಗಳು, ಅಂಬೇಡ್ಕರ್ ವಾದಿಗಳು, ಕಮ್ಯುನಿಸ್ಟ್‌ವಾದಿಗಳು, ರೈತ ಸಂಘಟನೆಗಳು ಮುಂತಾಗಿ ಒಂದಕ್ಕೊಂದು ಕೈ ಜೋಡಿಸಿವೆ. ಈ ಕಾಲದ ಕರೆಯೂ ಅದೇ ಆಗಿದೆ. ಬ್ರಾಹ್ಮಣ್ಯ-ಬಂಡವಾಳಶಾಹಿಯ ಜಂಟಿ ಕಾರ್ಯಾಚರಣೆಗೆ ವಿರುದ್ಧವಾಗಿ ಜನಪರ ದಲಿತ-ದಮನಿತರ ಜಂಟಿ ಕಾರ್ಯಾಚರಣೆಯಾಗಬೇಕಿದೆ. ಇಂದು ಯುವಶಕ್ತಿ ಇಷ್ಟರ ಮಟ್ಟಿಗೆ ಜಂಟಿ ಕಾರ್ಯಾಚರಣೆಗೆ ನಿಂತಿದೆಯೆಂದರೆ ಅದರ ಕ್ರೆಡಿಟ್ ರೋಹಿತ್ ವೇಮುಲಾನಿಗೇ ಸಲ್ಲಬೇಕಿದೆ. ಕಳೆದ ವರ್ಷದ ಹೋರಾಟವನ್ನು ಯುವಶಕ್ತಿ ರೋಹಿತ್ ವೇಮುಲಾನಿಗೆ ಅರ್ಪಿಸಬೇಕಿದೆ. ಹಾಗೆಯೇ ನಮ್ಮ ಮುಂದಿನ ಜಂಟಿ ಕಾರ್ಯಾಚರಣೆಯನ್ನು ಮುಂದುವರಿಸುತ್ತಾ ನಮ್ಮ ನಾಲಿಗೆಗಳನ್ನು ಸಾಣೆ ಹಿಡಿಯಬೇಕಿದೆ. ಮೆದುಳುಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಿದೆ. ದೇಹವನ್ನು ಹುರಿಗೊಳಿಸಿಕೊಳ್ಳಬೇಕಿದೆ. ಕೇವಲ ಪರ್ಯಾಯ ರಾಜಕೀಯಕ್ಕಲ್ಲ, ಪರ್ಯಾಯ ಸಮಾಜೋ-ಆರ್ಥಿಕ ವ್ಯವಸ್ಥೆಗಾಗಿ ಸಮಾಜವನ್ನು ಕಟ್ಟಬೇಕಿದೆ. ಜೊತೆಜೊತೆಗೆ ನಮ್ಮೊಳಗಿನ ಬ್ರಾಹ್ಮಣ್ಯಕ್ಕೂ ಕೊಳ್ಳಿ ಇಡಬೇಕಿದೆ. ಯಾಕೆಂದರೆ ಭಾವನೆಗಳೂ ಇಲ್ಲಿ ಬಣ್ಣ ಬಣ್ಣದ ಮುಖವಾಡ ಧರಿಸಿವೆ.

share
ವಿಕಾಸ ಆರ್ ಮೌರ್ಯ
ವಿಕಾಸ ಆರ್ ಮೌರ್ಯ
Next Story
X