Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಂತರಾಳದಲ್ಲಿ ಅಪರಾಧದ ಕೊಲೆ ಸಂಚು!

ಅಂತರಾಳದಲ್ಲಿ ಅಪರಾಧದ ಕೊಲೆ ಸಂಚು!

ಪ್ರಭುತ್ವ-ತುಟಿಯಲ್ಲಿ ಜೇನುತುಪ್ಪ...

ಸಿ.ಶ್ರೀರಾಮ್, ಬೆಂಗಳೂರುಸಿ.ಶ್ರೀರಾಮ್, ಬೆಂಗಳೂರು22 Jan 2017 11:34 PM IST
share
ಅಂತರಾಳದಲ್ಲಿ ಅಪರಾಧದ ಕೊಲೆ ಸಂಚು!

ಸ್ವಯಂಘೋಷಿತ ಭಯೋತ್ಪಾದನಾ ವಿರೋಧಿಗಳು ಅಲ್ಪಸಂಖ್ಯಾತರು, ಆದಿವಾಸಿಗಳು, ಬಡವರ ಮೇಲೆ ಎಸಗಿರುವ ಘೋರ ಅಪರಾಧಗಳು ಅಷ್ಟಿಷ್ಟಲ್ಲ. ಸಮಾಜದಲ್ಲಿ ವಿಷವನ್ನು ಬಿತ್ತುವ ವಿಷಬೀಜಗಳ ಸಂಖ್ಯೆ ಕೆಲವೇ ಕೆಲವಾಗಿರುತ್ತವೆ! ಮಾಧ್ಯಮವು ಆರೋಪ ಹೊರಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಶಿಕ್ಷೆ ನೀಡುವ ನ್ಯಾಯಾಧೀಶರಾಗಿಬಿಟ್ಟಿದೆ.

ನವೆಂಬರ್ 8ರಂದು ಕೇಂದ್ರ ಸರಕಾರ ರೂ.500 ಮತ್ತು 1000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರದ್ದು ಮಾಡಿತು. ಇದು ದೇಶದ ಅರ್ಥವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತು. ಹಲವು ಕಾರ್ಖಾನೆಗಳು ಮುಚ್ಚಿ ಹೋದವು. ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡವು. ಅನೇಕರು ಆತ್ಮಹತ್ಯೆ ಮಾಡಿಕೊಂಡರು. ನೂರಾರು ಜನರು ಬ್ಯಾಂಕಿನ ಸರದಿಯಲ್ಲಿ ನಿಂತು ಕುಸಿದು ಪ್ರಾಣಗಳನ್ನು ಬಿಟ್ಟರು. ಪ್ರಸಕ್ತ ಪರಿಸ್ಥಿತಿ ಮೊದಲನೆ ಮತ್ತು ಎರಡನೆ ಮಹಾಯುದ್ಧದ ಸಮಯದ ಆರ್ಥಿಕ ಪರಿಸ್ಥಿತಿಯನ್ನು ಹೋಲುತ್ತಿದೆ. ನೋಟಿನ ರದ್ದತಿಗೆ ಸರಕಾರದ ತಪ್ಪು ಆರ್ಥಿಕ ನೀತಿಗಳು ನಿಜವಾದ ಕಾರಣವಾಗಿದ್ದರೂ ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆ ಎಂಬ ಕಾರಣಗಳನ್ನು ಸರಕಾರ ನೀಡಿತು.

1947ರಲ್ಲಿ ಬ್ರಿಟಿಷ್ ಸಾಮ್ರಾಜ್ಯವಾದಿಗಳ ನೇರ ನಿರ್ಗಮನದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಸರಕಾರಗಳು ಅನುಸರಿಸಿದ ಸಾಮ್ರಾಜ್ಯಶಾಹಿ ಪರ ಆರ್ಥಿಕ, ರಾಜಕೀಯ ನೀತಿಗಳು ದೇಶವನ್ನು ಈ ಬಿಕ್ಕಟ್ಟಿಗೆ ತಳ್ಳಿದೆ ಎಂದರೆ ತಪ್ಪಾಗಲಾರದು. ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳು ಅಭಿವೃದ್ಧಿಗೆ ವಿದೇಶಿ ಸಾಲ ಮತ್ತು ಪಶ್ಚಿಮ ರಾಷ್ಟ್ರಗಳಲ್ಲಿ ಕಸದ ತೊಟ್ಟಿಗೆ ಬಿಸಾಡಿದ ಹಳೆಯ ತಂತ್ರಜ್ಞಾನದ ಮೇಲೆ ಅವಲಂಬಿತವಾದವು. ಈ ಸಾಲಗಳು ದೇಶದ ಕೈಗಾರಿಕಾ ಅಭಿವೃದ್ಧಿಯನ್ನು ಮೊಟಕುಗೊಳಿಸುವ ಅಪಾಯಕಾರಿ ಷರತ್ತುಗಳಿಂದ ಕೂಡಿರುತ್ತದೆ. ಉದಾ: ಗ್ರೀಸ್.

ಬಿಕ್ಕಟ್ಟಿನಲ್ಲಿರುವ ಸಾಮ್ರಾಜ್ಯಶಾಹಿಗಳು ಭಾರತದಂತಹ ಬಡದೇಶಗಳಿಗೆ ಸಾಲವಾಗಿ ನೀಡುವುದರ ಮೂಲಕ ತಮ್ಮ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಪರಿಹರಿಸಿಕೊಂಡವು. ಸಾಲವಾಗಿ ಬಂದ ವಿದೇಶಿ ಹಣವನ್ನು ಉತ್ಪಾದನಾ ಕ್ರಿಯೆಯಲ್ಲಿ ತೊಡಗಿಸದಿದ್ದರೆ ಆ ಸಾಲವು ದೇಶದ ಆರ್ಥಿಕ ವ್ಯವಸ್ಥೆಗೆ ಉರುಳಾಗುತ್ತದೆ. ಸಾಮಾನ್ಯವಾಗಿ ವಿದೇಶಿ ಸಾಲವು ಕೇಂದ್ರ ಹಣಕಾಸು ಸಂಸ್ಥೆ ರಿಸರ್ವ್ ಬ್ಯಾಂಕಿಗೆ ಹರಿದುಬರುತ್ತದೆ. ಈ ವಿದೇಶಿ ಹಣವನ್ನು ಕೇಂದ್ರ ಬ್ಯಾಂಕ್ ಭಾರತದ ರೂಪಾಯಿಗಳಿಗೆ ಪರಿವರ್ತಿಸಿ ಚಲಾವಣೆಗೆ ಬಿಡುತ್ತದೆ. ಇದು ಚಲಾವಣೆಯಲ್ಲಿರುವ ಹಣದ ಗಾತ್ರ ಮತ್ತು ಮೊತ್ತವನ್ನು ಹೆಚ್ಚಿಸುವುದರ ಜೊತೆಗೆ ಹಣದುಬ್ಬರ ಕಪ್ಪುಹಣಕ್ಕೆ ಅಡಿಪಾಯವಾಗುತ್ತದೆ. 1980ರ ನಂತರ ಉದಾರೀಕರಣ ಪ್ರಾರಂಭವಾದ ನಂತರ ವಿದೇಶಿ ಸಾಲದ ಒಳಹರಿಯುವಿಕೆ ಹೆಚ್ಚಾಯಿತು. ಇಂದು ದೇಶದ ಮೊದಲಿಗಿಂತಲೂ ಹೆಚ್ಚಾಗಿ ಅಪಾಯಕಾರಿ ಮಟ್ಟದಲ್ಲಿ ವಿದೇಶಿ ಸಾಲದ ಮೇಲೆ ಅವಲಂಬಿತವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ವಿದೇಶಿ ಸಾಲವು ದೇಶದ ಆಂತರಿಕ ಪ್ರಜಾಸತ್ತೆಯ ಮೇಲೆ ಒತ್ತಡವನ್ನು ಹೇರುತ್ತಿದೆ. ವಿದೇಶಾಂಗ ನೀತಿಯಲ್ಲಿ ದೇಶವು ಸ್ವತಂತ್ರ ನೀತಿಯನ್ನು ಕಳೆದುಕೊಂಡಿದೆ. ದೇಶವು ಸಾಮ್ರಾಜ್ಯಶಾಹಿಗಳ ರಾಷ್ಟ್ರೀಯ ಶೋಷಣೆಯನ್ನು ಎದುರಿಸುತ್ತಿದೆ. ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಬಂದವರೆಲ್ಲರನ್ನೂ ಸಾಮ್ರಾಜ್ಯಶಾಹಿಗಳು ಶಿಕ್ಷಿಸಲು ಸಿದ್ಧರಾಗಿರುತ್ತಾರೆ.

 ಜನರನ್ನು ಧಮನ ಮಾಡಲು ಆಳುವ ವರ್ಗಗಳು ಸಾಮ್ರಾಜ್ಯಶಾಹಿಗಳ ಜೊತೆ ಕೈಜೋಡಿಸುತ್ತಾರೆ. ಪ್ರಪಂಚದೆಲ್ಲೆಡೆ ನಡೆಯುತ್ತಿರುವ ಯುದ್ಧಗಳಲ್ಲಿ ದಬ್ಬಾಳಿಕೆಯ ವಿರುದ್ಧ ನಡೆಯುವ ಯುದ್ಧವು ಒಂದು ನ್ಯಾಯಸಮ್ಮತ ಯುದ್ಧವಾಗಿದೆ.

ಒಂದು ವರದಿಯ ಪ್ರಕಾರ 1972, ಜನವರಿಯಲ್ಲಿ ಭಾರತದಲ್ಲಿ 20.15 ಬಿಲಿಯನ್ ರೂ.ಗಳ ನೋಟುಗಳು ಚಲಾವಣೆಯಲ್ಲಿದ್ದರೆ, 2016ರಲ್ಲಿ ಅದು 27,139.6 ಬಿಲಿಯನ್ ರೂ.ಗಳನ್ನು ತಲುಪುತ್ತದೆ. ಇದು ಭಾರತದಲ್ಲಿ ಮಿತಿಮೀರಿದ ನೋಟಿನ ಮುದ್ರಣವನ್ನು ತೋರಿಸುತ್ತದೆ. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕಾಗದದ ನೋಟುಗಳು ಭಾರತದಲ್ಲಿ ಹರಿದಾಡುತ್ತಿರುವುದು ಬಹಳ ಸ್ಪಷ್ಟವಾಗಿ ಕಾಣುತ್ತದೆ.

2014ರಲ್ಲಿ ದೇಶದ ಒಟ್ಟು ವರಮಾನದಲ್ಲಿ(ಜಿಡಿಪಿ) ನೋಟಿನ ಶೇಕಡಾವಾರು ಸಂಖ್ಯೆಯಲ್ಲಿ ಭಾರತ ಇತರ ದೇಶಗಳಾದ ಚೀನಾ, ಜರ್ಮನಿ, ಅಮೆರಿಕ ದೇಶಗಳಿಗಿಂತ ಅಗ್ರಸ್ಥಾನದಲ್ಲಿದೆ.

ನೋಟಿನ ರದ್ದತಿಗೆ ಖೋಟಾ ನೋಟಿನ ಕಾರಣವನ್ನು ನೀಡುತ್ತಿದ್ದಾರೆ. ಭಾರತ ಸಂಖ್ಯಾಶಾಸ್ತ್ರ ವಿಶ್ವವಿದ್ಯಾನಿಲಯದ 2015ರ ವರದಿಯ ಪ್ರಕಾರ ಭಾರತದಲ್ಲಿ ಚಲಾವಣೆಯಲ್ಲಿರುವ ಒಟ್ಟು ನೋಟಿನ ಸಂಖ್ಯೆಯ ಮೊತ್ತದಲ್ಲಿ ಚಲಾವಣೆಯಲ್ಲಿರುವ ಖೋಟಾನೋಟಿನ ಮೊತ್ತವು ಬರೀ 400 ಕೋಟಿ ರೂ.ಗಳಾಗಿದೆ.ಇದು ಒಟ್ಟು ಚಲಾವಣೆಯಲ್ಲಿರುವ ಅಧಿಕೃತ ಮೊತ್ತವಾದ 19.7 ಲಕ್ಷ ಕೋಟಿ ರೂ.ಗಳ ಶೇ.0.025 ಆಗಿದೆ!!!

ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುವುದೇ ನೋಟಿನ ರದ್ದತಿಯ ಉದ್ದೇಶವೆಂದು ಸರಕಾರವು ಹೇಳುತ್ತಿದೆ. ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಭಯೋತ್ಪಾದಕರು ಬಂಡವಾಳಶಾಹಿ ರಾಷ್ಟ್ರಗಳ ನಾಗರಿಕರಾಗಿದ್ದಾರೆ. ಭಾರತ, ಪಾಕಿಸ್ತಾನಗಳು ನೋಟಿನ ಮುದ್ರಣಕ್ಕೆ ಬಳಸುವ ಕಚ್ಚಾ ಕಾಗದ, ಶಾಯಿ, ಬೆಳ್ಳಿಯದಾರ ಒಂದೇ ಆಗಿವೆ. ಇವುಗಳನ್ನು ಭಯೋತ್ಪಾದಕರಿಗೆ ಆಶ್ರಯದಾಣವಾಗಿರುವ ಇಂಗ್ಲೆಂಡ್, ಅಮೆರಿಕ, ಜರ್ಮನಿ ದೇಶಗಳು ಪೂರೈಸುತ್ತವೆ!

ಮಿತಿಮೀರಿದ ನೋಟಿನ ಮುದ್ರಣವು ಭ್ರಷ್ಟಾಚಾರ ಮತ್ತು ಕಪ್ಪುಹಣಕ್ಕೆ ಪ್ರಮುಖ ಕಾರಣ ಎಂದರೆತಪ್ಪಾಗಲಾರದು. ಭ್ರಷ್ಟಾಚಾರವು ಬ್ರಿಟಿಷ್ ವಸಾಹತುಶಾಹಿಗಳು ಸ್ಥಾಪಿಸಿದ ಪ್ರಭುತ್ವದ ಭಾಗವಾಗಿಬಿಟ್ಟಿದೆ. ಕೆಳಮಟ್ಟದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ. ಮೇಲ್ಮಟ್ಟದಲ್ಲಿ ನಡೆಯುವ ದೊಡ್ಡ ಭ್ರಷ್ಟಾಚಾರಗಳ ಬಗ್ಗೆ ಮೋದಿ ವೌನವಾಗಿದ್ದಾರೆ. ದೊಡ್ಡ ಬಂಡವಾಳಶಾಹಿಗಳು, ಭಾಗಿಯಾಗಿರುವ ಬಹುಕೋಟಿ ಕಲ್ಲಿದ್ದಲು ಹಗರಣ, ಸ್ಪೆಕ್ಟ್ರಮ್ ಹಗರಣ, ಬೋಫೋರ್ಸ್ ಹಗರಣಗಳ ಬಗ್ಗೆ ಮಾತನಾಡುತ್ತಿಲ್ಲ! ಯಾಕೆ?

ಮಾರಿಷಸ್ ದೇಶದ ಮುಖಾಂತರ ಭಾರತದ ದೊಡ್ಡ ಬಂಡವಾಳಶಾಹಿಗಳು, ರಾಜಕಾರಣಿಗಳು, ಅಧಿಕಾರಶಾಹಿಗಳು, ವಿದೇಶಿ ಸಂಸ್ಥೆಗಳು ಲೂಟಿ ಮಾಡಿರುವ ಕಪ್ಪು ಹಣವು ‘ವಿದೇಶಿ ಬಂಡವಾಳ’ದ ಹೂಡಿಕೆಯ ಮಾರುವೇಶದಲ್ಲಿ ಭಾರತವನ್ನು ಪ್ರವೇಶಿಸುತ್ತದೆ. 2001-2011ರ ಅವಧಿಯಲ್ಲಿ ದೇಶಕ್ಕೆ ಹರಿದುಬಂದ ವಿದೇಶಿ ನೇರ ಬಂಡವಾಳದಲ್ಲಿ ಶೇ.39.6 ಮಾರಿಷಸ್ ಮಾರ್ಗವಾಗಿ ಭಾರತವನ್ನು ಪ್ರವೇಶಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಮಾರ್ಗವಾಗಿ ಭಾರತವನ್ನು ಪ್ರವೇಶಿಸಿದ ಮೊತ್ತವು ಒಟ್ಟು ವಿದೇಶಿ ನೇರ ಬಂಡವಾಳದ ಶೇ.29 ಆಗಿತ್ತು.

2014-15ರಲ್ಲಿ ಭಾರತದಲ್ಲಿ ವಿದೇಶಿ ನೇರ ಬಂಡವಾಳದ ಹೂಡಿಕೆಯಲ್ಲಿ ಸಿಂಗಾಪುರ ದೇಶವನ್ನು ಎರಡನೆ ಸ್ಥಾನಕ್ಕೆ ತಳ್ಳಿ ಮಾರಿಷಸ್ ಅಗ್ರಸ್ಥಾನಕ್ಕೇರಿದೆ. 2014-15ರಲ್ಲಿ ಮಾರಿಷಸ್‌ನಿಂದ 9.03 ಬಿಲಿಯನ್ ಡಾಲರ್‌ಗಳ ವಿದೇಶಿ ನೇರ ಬಂಡವಾಳ ಹರಿದುಬಂದರೆ, ಸಿಂಗಾಪುರದಿಂದ 6.74 ಬಿಲಿಯನ್ ಡಾಲರ್‌ಗಳ ವಿದೇಶಿ ನೇರ ಬಂಡವಾಳ ಭಾರತಕ್ಕೆ ಬರುತ್ತದೆ.

ಆರ್ಥಿಕ ತಜ್ಞ ಡೇವ್‌ಕರ್ ಪ್ರಕಾರ ಪ್ರತಿವರ್ಷ 50 ಬಿಲಿಯನ್ ಡಾಲರ್ ಕಪ್ಪುಹಣವು ಭಾರತದಿಂದ ಹೊರಹೋಗುತ್ತದೆ ಮತ್ತು ವಿದೇಶದಲ್ಲಿ ಭಾರತದ ಬಂಡವಾಳಶಾಹಿಗಳು ಸುಮಾರು ಒಂದು ಟ್ರಿಲಿಯನ್ ಡಾಲರ್ ಕಪ್ಪು ಹಣವನ್ನು ಸುರಕ್ಷಿತವಾಗಿಟ್ಟಿದ್ದಾರೆ.

ಇಂದು ಸ್ವಘೋಷಿತ ‘ಅತಿದೊಡ್ಡ ಪ್ರಜಾಪ್ರಭುತ್ವ’ ಅತಿದೊಡ್ಡ ಭ್ರಷ್ಟ ದೇಶವಾಗಿಬಿಟ್ಟಿದೆ. ತಮ್ಮ ಹಿತಾಸಕ್ತಿಯನ್ನು ಕಾಪಾಡುವ, ನಿಷ್ಠ ರಾಜಕೀಯ ಪಕ್ಷಗಳನ್ನು ಗೆಲ್ಲಿಸಲು ಭಾರತದ ದೊಡ್ಡ ಬಂಡವಾಳಶಾಹಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜಕೀಯ ಪಕ್ಷಗಳ ಪರವಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ. ದೇಶದ ಖನಿಜ ಸಂಪತ್ತುಗಳನ್ನು ಲೂಟಿ ಮಾಡಲು, ಅಗ್ಗದ ದರದಲ್ಲಿ ಕಾರ್ಮಿಕರನ್ನು ದುಡಿಸಿ ಅಧಿಕ ಲಾಭ ಮಾಡಲು ಬಂಡವಾಳಶಾಹಿಗಳು ಬೃಹತ್ ಪ್ರಮಾಣದಲ್ಲಿ ಚುನಾವಣೆಗಳಲ್ಲಿ ಹಣವನ್ನು ಖರ್ಚು ಮಾಡುತ್ತಿವೆ.

ಇಂದು ದೇಶದ ಆರ್ಥಿಕತೆ ಮತ್ತು ರಾಜಕೀಯವನ್ನು ಕೆಲವೇ ಶ್ರೀಮಂತ ಕುಟುಂಬಗಳು ನಿಯಂತ್ರಿಸುತ್ತಿವೆ. ಬಡವರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ, ಕಾರ್ಮಿಕರಿಗೆ ಯಾವುದೇ ಧ್ವನಿಯಿಲ್ಲ.

ಈ ನಯವಂಚಕರು ಚುನಾವಣೆಯಲ್ಲಿ ಬರೀ ಭ್ರಷ್ಟಾಚಾರವಲ್ಲದೆ ವ್ಯಾಪಕ ಹಿಂಸಾಚಾರ, ಜಾತಿ, ಕೋಮುವಾದವನ್ನು ಬಳಸುತ್ತಿದ್ದಾರೆ. ಕಾಗದದ ನೋಟಿನ ಲಾಭಕ್ಕಾಗಿ ಇವರು ಸಾಮ್ರಾಜ್ಯಶಾಹಿಗಳ ಜೊತೆ ಕೈಜೋಡಿಸಿದ್ದಾರೆ. ಯುವಪೀಳಿಗೆಯನ್ನು ಮಾನಸಿಕವಾಗಿ, ಸಾಂಸ್ಕೃತಿಕವಾಗಿ ಭ್ರಷ್ಟಗೊಳಿಸುವ ಕೆಲಸ ನಿರಂತರವಾಗಿ ಇವರು ಮಾಡುತ್ತಿದ್ದಾರೆ.

ಜನರ ಮೇಲಿನ ಪ್ರಭುತ್ವದ ಅಘೋಷಿತ ಯುದ್ಧದಲ್ಲಿ ಮಾಧ್ಯಮವು ಶತ್ರುವಿನ ಐದನೆ ತುಕಡಿಯಾಗಿ ಕೆಲಸ ಮಾಡುತ್ತಿದೆ. ಮಾಧ್ಯಮಗಳು ಸುಳ್ಳನ್ನು ತಯಾರಿಸುವ ಕಾರ್ಖಾನೆಗಳಾಗಿವೆ ಹಾಗೂ ಅತಿ ಶೀಘ್ರ ನ್ಯಾಯಾಲಯಗಳಾಗಿ (ಊಠಿ ಖ್ಟಚ್ಚ ಇಟ್ಟಠಿ) ಅಥವಾ ವಿಶೇಷ ನ್ಯಾಯಾಲಯಗಳಾಗಿ ಕಾನೂನುಬಾಹಿರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿವೆ. ಅಂತರ್ಜಾಲದ ಮೂಲಕ ಸಂಘಟಿತರಾಗುವ ಗುಂಪುಗಳು ‘ತಪ್ಪಿತಸ್ಥರಿಗೆ’ ಒಮ್ಮೆಲೇ ಶೀಘ್ರ ಶಿಕ್ಷೆ ನೀಡುತ್ತವೆ. ಜನರ ಮೇಲಿನ ಅದರಲ್ಲೂ ಅಲ್ಪಸಂಖ್ಯಾತರ ಮೇಲಿನ ಫ್ಯಾಶಿಸ್ಟ್ ಶಕ್ತಿಗಳ ದಾಳಿಗಳಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದಾಗಿದೆ. ಈ ಸ್ವಯಂಘೋಷಿತ ಭಯೋತ್ಪಾದನಾ ವಿರೋಧಿಗಳು ಅಲ್ಪಸಂಖ್ಯಾತರು, ಆದಿವಾಸಿಗಳು, ಬಡವರ ಮೇಲೆ ಎಸಗಿರುವ ಘೋರ ಅಪರಾಧಗಳು ಅಷ್ಟಿಷ್ಟಲ್ಲ. ಸಮಾಜದಲ್ಲಿ ವಿಷವನ್ನು ಬಿತ್ತುವ ವಿಷಬೀಜಗಳ ಸಂಖ್ಯೆ ಕೆಲವೇ ಕೆಲವಾಗಿರುತ್ತವೆ! ಮಾಧ್ಯಮವು ಆರೋಪ ಹೊರಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಶಿಕ್ಷೆ ನೀಡುವ ನ್ಯಾಯಾಧೀಶರಾಗಿಬಿಟ್ಟಿದೆ.

ಮಾಧ್ಯಮಗಳು ಮಾಹಿತಿಗಳ ರಾಶಿಗಳಿಂದ ಸತ್ಯವನ್ನು ಬೇರ್ಪಡಿಸುವ ಪ್ರಯತ್ನಗಳನ್ನು ಮಾಡದೆ, ಕೇವಲ ಸರಕಾರಿ ಅಧಿಕಾರಿಗಳು ನೀಡುವ ಸುಳ್ಳು ವರದಿಗಳನ್ನು ಉಲ್ಲೇಖಿಸುತ್ತವೆ. ಮಾಧ್ಯಮಗಳು ಪ್ರಭುತ್ವದ ಜೊತೆ ಹಾಸಿಗೆಯನ್ನು ಹಂಚಿಕೊಂಡಿರುವುದನ್ನು ಇವು ಜುವಾತುಪಡಿಸುತ್ತವೆ.

ಈ ದಿವಸ ‘ಅಭಿವೃದ್ಧಿ’ಯೆಂಬುದು ಯುದ್ಧ ಮುಂದುವರಿದ ಭಾಗವಾಗಿದೆ. ಕೋಟ್ಯಂತರ ಬಡವರು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಈ ಅಭಿವೃದ್ಧಿಯೆಂದು ಕರೆಯುವ ಸಾಮ್ರಾಜ್ಯಶಾಹಿ ಆಯೋಜಿತ ಆಯೋಜನೆಗಳಿಗೆ ತಮ್ಮ ಮನೆ, ಭೂಮಿ, ಗುಡಿಸಲು, ಉದ್ಯೋಗ, ವ್ಯಾಪಾರಗಳನ್ನು ಕಳೆದುಕೊಂಡು ತಮ್ಮ ನಾಡಿನಲ್ಲೇ ಈ ಅಘೋಷಿತ, ಅಸಮಾನ ಭೀಕರ ಯುದ್ಧಕ್ಕೆ ಬಲಿಯಾಗಿದ್ದಾರೆ. ನಿರಾಶ್ರಿತರಾಗಿದ್ದಾರೆ. 1947ರಿಂದ ಇದುವರೆಗೆ 6.5 ಕೋಟಿ ಜನರು 6.5 ಕೋಟಿ ಎಕರೆ ಭೂಮಿಯನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇದು ಅಭಿವೃದ್ಧಿಯೇ? ಸಾಮ್ರಾಜ್ಯಶಾಹಿಗಳು ಹೇರಿರುವ ಹೊಸ ಆರ್ಥಿಕ ನೀತಿಯ ಫಲವಾಗಿ ಸಾಮಾಜಿಕ ಬಿಕ್ಕಟ್ಟುಗಳು ತಲೆದೋರಿವೆ. ಆಂತರಿಕ ಯುದ್ಧವೇ ಇದರ ಫಲವಾಗಿದೆ.

ವಸಾಹತುಶಾಹಿಗಳು ಭಾರತಕ್ಕೆ ಬಂದಾಗ ಸ್ಥಳೀಯರ ಪ್ರತಿರೋಧವನ್ನು ಎದುರಿಸಿದರು.ಆದರೆ ಈ ದಿವಸ ಯಾವುದೇ ಪ್ರತಿರೋಧವಿಲ್ಲ. ಫ್ಯಾಶಿಸ್ಟ್ ಪ್ರಭುತ್ವವು ಪ್ರಗತಿಪರ ಚಳವಳಿಗಳ ವಿರುದ್ಧ ಸಕ್ರಿಯವಾಗಿದೆ. ಆದರೆ ಸಾಮ್ರಾಜ್ಯಶಾಹಿಗಳ ವಿರುದ್ಧ ಕೈಕಟ್ಟಿ ಕುಳಿತ್ತಿದೆ. ಪ್ರಗತಿಪರ ಚಳುವಳಿಗಳ ವಿರುದ್ಧ ಅಪಪ್ರಚಾರ ಯುದ್ಧ ಪ್ರಾರಂಭಿಸುವ ರಾಜಕೀಯ ಪ್ರಚಾರವಾಗಿವೆ.

ಜನರ ಕಣ್ಣೊರೆಸಲು ಪ್ರಭುತ್ವವು ಹಲವಾರು ಸುಧಾರಣಾ ಘೋಷಣೆಗಳನ್ನು ನೀಡುತ್ತಿದೆ. ಇವೆಲ್ಲ ಜನರನ್ನು ಮೋಸಗೊಳಿಸುವ ನಯವಂಚನೆಯಿಂದ ಕೂಡಿದ ತಂತ್ರವಾಗಿದೆ. ಪ್ರಭುತ್ವದ ತುಟಿಯಲ್ಲಿ ಯಾವಾಗಲೂ ಜೇನುತುಪ್ಪವಿರುತ್ತವೆ. ಆದರೆ ಅಂತರಾಳದಲ್ಲಿ ಅಪರಾಧ ಮನೋಭಾವದ ಕೊಲೆ ಮಾಡುವ ಸಂಚು ಇರುತ್ತದೆ!

share
ಸಿ.ಶ್ರೀರಾಮ್, ಬೆಂಗಳೂರು
ಸಿ.ಶ್ರೀರಾಮ್, ಬೆಂಗಳೂರು
Next Story
X