ನಾನು ಏಕೆ ಮೆರಿಲ್ ಸ್ಟ್ರೀಪ್‌ರಂತೆ ಮಾತನಾಡುವುದಿಲ್ಲ ? - ಶಾರುಖ್ ಖಾನ್

ಇಂಡಿಯನ್ ಎಕ್ಸ್‌ಪ್ರೆಸ್‌ನ ಅಲಕಾ ಸಹಾನಿ ಅವರಿಗೆ ಕಳೆದ ವಾರ ಶಾರುಖ್ ಖಾನ್ ನೀಡಿದ ಸಂದರ್ಶನದ ಆಯ್ದ ಭಾಗ. ‘‘ಮೆರಿಲ್ ಸ್ಟ್ರೀಪ್ ಅವರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಭಾಷಣದ ಹಿನ್ನೆಲೆಯಲ್ಲಿ ಭಾರತೀಯ ಸೆಲೆಬ್ರಿಟಿಗಳು ಅದರಲ್ಲೂ ಮುಖ್ಯವಾಗಿ ಬಾಲಿವುಡ್ ತಾರೆಗಳು ಮಾತನಾಡುತ್ತಿಲ್ಲ. ಪ್ಲೀಸ್ ಅಭಿಪ್ರಾಯ ವ್ಯಕ್ತಪಡಿಸಿ’’ ಎಂದು ಕೇಳಿದ ಪ್ರಶ್ನೆಗೆ ಇಲ್ಲಿ ಖಾನ್ ಉತ್ತರಿಸಿದ್ದಾರೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಗ್ಗೆ ಮೆರಿಲ್ ಸ್ಟ್ರೀಪ್ ಮಾತನಾಡಿರುವುದು ಅಮೆರಿಕದಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಆಕೆ ಯಾವ ಭಾವನೆ ಹೊಂದಿದ್ದಾರೋ, ಯಾವ ಅಭಿಪ್ರಾಯ ವ್ಯಕ್ತಪಡಿಸಬೇಕಿತ್ತೋ ಅದು ಅಭಿವ್ಯಕ್ತವಾಗಿದೆ. ಯಾವುದೇ ಪತ್ರಕರ್ತರು, ಅದನ್ನೇ ಇಲ್ಲಿಗೂ ಹೋಲಿಸುವ ಮುನ್ನವೇ ಆ ಸ್ಥಿತಿ ಇಲ್ಲಿದೆಯೇ ಎಂಬ ಬಗ್ಗೆ ಮಾತನಾಡಬೇಕೇ? ಖಂಡಿತಾ ಇಲ್ಲ. ಪರಿಸ್ಥಿತಿ ಭಿನ್ನವಾಗಿ ಇದ್ದಿದ್ದರೆ ಜನ ಏನು ಮಾತನಾಡಬೇಕೋ ಆ ಬಗ್ಗೆ ಭಿನ್ನವಾಗಿ ಮಾತನಾಡುತ್ತಿದ್ದರು.
ಭಾರತೀಯ ಚಿತ್ರತಾರೆಯರು ಹೀಗೆ ಮಾತನಾಡುವುದು ಯಾವಾಗ? ಎಂದು ನಮ್ಮ ಪತ್ರಕರ್ತರು ಕೇಳುವುದು ತೀರಾ ವಿಚಿತ್ರ ಎನಿಸುತ್ತದೆ. ಇಲ್ಲದ ಪರಿಸ್ಥಿತಿ ಬಗ್ಗೆ ಭಾರತೀಯ ನಟರು ಏಕೆ ಮಾತನಾಡಬೇಕು? ನಾವು ಮಾತನಾಡಬೇಕು ಎಂದು ಬಯಸುವ ಕಾರ್ಯಸೂಚಿ ಅಥವಾ ಪರಿಸ್ಥಿತಿ ಇದ್ದಿದ್ದರೆ, ಆ ಬಗ್ಗೆ ಖಂಡಿತವಾಗಿಯೂ ಕೇಳಿ. ನಾವು ಮಾತನಾಡುತ್ತೇವೆ.
ಇದಕ್ಕೆ ಪ್ರತಿಯಾಗಿ ನಾನು ಒಂದು ಪ್ರಶ್ನೆ ಕೇಳುತ್ತೇನೆ: ನಮ್ಮ ಪತ್ರಕರ್ತರು ಏಕೆ ಪಾಶ್ಚಾತ್ಯ ಪತ್ರಕರ್ತರಂತೆ ನಡೆದುಕೊಳ್ಳುವುದಿಲ್ಲ? ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನಿಖರ ಹಾಗೂ ಅಂಕಿ ಅಂಶ ಸಹಿತವಾಗಿ ಪ್ರಶ್ನೆಗಳನ್ನು ಪತ್ರಕರ್ತರು ಕೇಳುವುದನ್ನು ನೀವು ನೋಡಿರಬಹುದು. ಇತರರು ಮಧ್ಯಪ್ರವೇಶಿಸಿದರೆ, ಇದು ನನ್ನ ಸಮಯ ಎಂದು ತಡೆಯುತ್ತಾರೆ.
ಆದರೆ ಇಲ್ಲಿ ಇದು ನಿಮ್ಮ ಸಮಯ ಅಲ್ಲ ಎಂದು ನಾನು ಪತ್ರಕರ್ತರಿಗೆ ಹೇಳಬಯಸುತ್ತೇನೆ. ಆದ್ದರಿಂದ ನೀವು ಸುಮ್ಮನಿರಿ. ನೀವು ಇಬ್ಬರು ಪ್ರಶ್ನೆ ಕೇಳುವುದನ್ನು ನಾನು ಕೇಳಿಸಿಕೊಳ್ಳಬೇಕೇ? ಟಿವಿ ಪರದೆ ಮೇಲೆ ಇಬ್ಬರು ಪತ್ರಕರ್ತರು ಪರಸ್ಪರ ಮಾತನಾಡುತ್ತಿರುತ್ತಾರೆ. ಅಲ್ಲಿ ಕುಳಿತ ಪ್ಯಾನಲಿಸ್ಟ್‌ಗಳು ಮಾತನಾಡುವುದಿಲ್ಲ. ಅದು ವಿಲಕ್ಷಣ ಜಾಗ...
ಇತ್ತ್ತೀಚೆಗೆ ನಾನು ಒಂದು ಸಮಸ್ಯೆ ಸೃಷ್ಟಿಸಿದೆ. ನಾನು ಆರೋಪಮಾಡುತ್ತಿಲ್ಲ. ನಾನೂ ಅದರ ಭಾಗವಾಗಿದ್ದೆ. ಈ ಮಧ್ಯೆ ನೀವು ಪ್ರಬಲ ಅಭಿಪ್ರಾಯ ವ್ಯಕ್ತಪಡಿಸಬೇಕಾದರೆ, ನೀವು ನನಗೆ ನೇರವಾಗಿ, ‘‘ನಿಮ್ಮ ಬಗ್ಗೆ ನಾನು ಈ ತುಣುಕು ಮಾಡುತ್ತಿದ್ದೇನೆ. ಶಾರುಖ್, ನೀವು ಇದರ ಪರ ಅಭಿಪ್ರಾಯ ವ್ಯಕ್ತಪಡಿಸುತ್ತೀರೋ ಅಥವಾ ವಿರುದ್ಧವೋ?’’ ಎಂದು ಹೇಳಬಹುದು. ಈ ಬಗ್ಗೆ ನಾನು ಹೊಂದಿರುವ ನಿಲುವನ್ನು ಹೊಂದಲು ನೀವು ಬಯಸುತ್ತೀರಾ? ಬಹುಶಃ ನಾನು ನಿಮ್ಮ ಅಭಿಪ್ರಾಯಕ್ಕೆ ದನಿಗೂಡಿಸುತ್ತೇನೆ ಎಂದು ಹೇಳಬಹುದು. ಆದ್ದರಿಂದ ನಾನು ಈ ಹೇಳಿಕೆ ನೀಡುತ್ತಿದ್ದೇನೆ. ಅಥವಾ ನಿಮ್ಮ ಅಭಿಪ್ರಾಯಕ್ಕೆ ನನ್ನ ಮನ್ನಣೆ ಇಲ್ಲ. ಇದನ್ನು ನಿಮ್ಮ ವರದಿಯಲ್ಲಿ ಸೇರಿಸಬಹುದು ಎಂದು ಹೇಳುತ್ತೇನೆ. ಪ್ರತಿ ಸಂದರ್ಶನ ಈಗ ಸಂಪಾದಕೀಯವಾಗುತ್ತಿದೆ...
ನಾನು ಬೆನ್ನುಬೆನ್ನಿಗೆ ಮೂರು ಮುಸ್ಲಿಂ ಪಾತ್ರವನ್ನು ನಿರ್ವಹಿಸಿದ ಬಗ್ಗೆ ನೀವೊಂದು ಲೇಖನ ಬರೆಯುತ್ತೀರಿ ಎಂದುಕೊಳ್ಳೋಣ. ನಟನಾಗಿ ನನ್ನ ವೃತ್ತಿಪರತೆಯನ್ನು ಗೌರವಿಸುತ್ತಲೇ ಹೇಳುವುದಾದರೆ, ಕರಣ್ ಜೋಹರ್ ಅವರ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ನನ್ನ ಪಾತ್ರದ ಹೆಸರೇ ನನಗೆ ಗೊತ್ತಿಲ್ಲ. ನಾನು ಕೇವಲ ಎರಡು ಗಂಟೆಗಷ್ಟೇ ಹೋಗಿ, ಕೆಲ ಶಾಟ್‌ಗಳನ್ನು ನಿರ್ವಹಿಸಿದೆ. ಕರಣ್, ರಣಬೀರ್ ಕಪೂರ್ ಹಾಗೂ ಐಶ್ವರ್ಯ ರೈ ಬಚ್ಚನ್ ಹೀಗೆ ಸ್ನೇಹಿತರ ಜತೆಗೆ ಸಂತೋಷವಾಗಿ ಕಾಲ ಕಳೆದೆ. ಮುಂಜಾನೆ 2ಕ್ಕೆ ಪ್ಯಾಕಪ್ ಮಾಡಿ, ಮುಂಜಾನೆ 6ರವರೆಗೆ ಪಾರ್ಟಿ ಮಾಡಿ ಲಿಸ್ಬಾನ್ ಚಿತ್ರೀಕರಣಕ್ಕೆ ಮರಳಿದೆ.
ಈ ಬಗ್ಗೆ ಯಾವುದೇ ಅಭಿಪ್ರಾಯಕ್ಕೆ ಬರಬೇಡಿ. ಈ ಚಿತ್ರಗಳೆರಡೂ ಎರಡು ವರ್ಷಗಳಿಂದ ಮುಂದೂಡುತ್ತಾ ಬಂದ ಚಿತ್ರಗಳು. ಇಂದು ಪ್ರತಿಯೊಬ್ಬ ನಟ- ನಟಿಯರು ಕೂಡಾ ತಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ಮನೋರಂಜನೆ ನೀಡಲು ಪ್ರಯತ್ನ ಹಾಕುತ್ತಾರೆ. ಆದ್ದರಿಂದ ಮೊದಲು ಮಾಹಿತಿ ನೀಡಿದ ಹೆಗ್ಗಳಿಕೆ ಪಡೆಯಲು ಪೈಪೋಟಿ ಏಕೇ? ಇದಕ್ಕಾಗಿ ಬೇರೆಯವರನ್ನು ಮಾಧ್ಯಮ ಏಕೆ ಬಳಸಿಕೊಳ್ಳುತ್ತಿದೆ?
ನೀವು ನನ್ನೊಂದಿಗೆ ಇದ್ದೀರಾ ಎಂದು ಕೇಳುವ ಗೌರವ ಉಳಿಸಿಕೊಳ್ಳಿ. ನಾವಿಬ್ಬರೂ ಈ ಬಗ್ಗೆ ಮಾತನಾಡಬಹುದು..ಅಥವಾ ನೀವು ತುಣುಕು, ಬೈಟ್ ಅಥವಾ ಶಬ್ದಗಳನ್ನು ನಿಮ್ಮ ದೃಷ್ಟಿಕೋನವನ್ನು ಬಿಂಬಿಸಲು ಸದಾ ಬಳಸಿಕೊಳ್ಳುತೀರಾ?
ಮೆರಿಲ್ ಸ್ಟ್ರೀಪ್ ಭಾಷಣದ ಬಳಿಕ, ‘‘ಭಾರತೀಯ ನಟರು ಇದನ್ನೇಕೆ ಮಾಡುತ್ತಿಲ್ಲ’’ ಎಂದು ಕೇಳಿ ಇದು, ನನ್ನಲ್ಲಿ ದಿಢೀರನೇ ನೀವು ಟೈಗರ್ ವುಡ್ಸ್ ಅವರಂತೆ ಏಕೆ ಗಾಲ್ಫ್ ಆಡುತ್ತಿಲ್ಲ ಎಂದು ಕೇಳಿದಂತಾಗುತ್ತದೆ. ಹಾಲಿವುಡ್ ವಿದೇಶಿ ಪತ್ರಿಕಾ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಹಾಗೆ ಮಾತನಾಡಿದ ಅವರ ದಿಟ್ಟತನವನ್ನು ನಾನು ಹೊಗಳುತ್ತೇನೆ. ನಮ್ಮ ನಟರೂ ಮಾತನಾಡುತ್ತಾರೆ. ಹಾಗೆಯೇ ನಟಿಯರು, ಚಿತ್ರನಿರ್ಮಾಪಕರು ಮತ್ತು ಪತ್ರಕರ್ತರು ಕೂಡಾ.
ಆದರೆ ನೀವು ಜನರಿಗೆ ಅರ್ಥವಾಗುವುದನ್ನು ಮಾತನಾಡಬೇಕು. ಸ್ಟ್ರೀಪ್ ಮಾತನಾಡಲು ಬಳಸಿಕೊಂಡ ವೇದಿಕೆಗಿಂತ ಹೆಚ್ಚಾಗಿ, ಅವರು ಮಾತನಾಡಿದ್ದು ಜನರಿಗೆ ಅರ್ಥವಾಗುವ ವೇದಿಕೆಯನ್ನು ಅವರು ಬಳಸಿಕೊಂಡರು. ನಾನು ಈ ಮೊದಲೇ ಹೇಳಿದಂತೆ ಪತ್ರಕರ್ತರು ತಾರಾಪಟ್ಟ ಪಡೆದಿಲ್ಲ; ಮೇಲಾಗಿ ಸೆಲೆಬ್ರಿಟಿಗಳು ಕೂಡಾ. ದಿಢೀರನೇ ಎಲ್ಲರೂ ಚೆನ್ನಾಗಿ ಕಾಣುತ್ತಾರೆ. ಉತ್ತಮವಾಗಿ ಮೇಕಪ್ ಮಾಡಿಕೊಳ್ಳುತ್ತಾರೆ. ನಿರೂಪಕ ಪ್ರತಿ ಪ್ರದರ್ಶನದ ಸ್ಟಾರ್ ಆಗಿರುತ್ತಾರೆ. ಸಂಕಲನಕಾರ ಪ್ರತೀ ತುಣುಕಿನ ಸ್ಟಾರ್. ಪ್ರತಿಯೊಬ್ಬರೂ ಫೋಟೊ ಬಳಸಿಕೊಂಡೇ ಲೇಖನ ಬರೆಯುತ್ತಾರೆ. ಪ್ರತಿಯೊಬ್ಬರೂ ತೂಕ ಕಳೆದುಕೊಂಡು ಚೆನ್ನಾಗಿ ಕಾಣಬೇಕೆಂಬ ಅಪೇಕ್ಷೆ ಹೊಂದಿರುತ್ತಾರೆ. ನಾನು ತಾರಪಟ್ಟ ಗಳಿಸಿ ಏಳು ವರ್ಷವಾದಾಗ, ನಾನು ಹೀಗೆಯೇ ವರ್ತಿಸುತ್ತಿದ್ದೆ.
ಹೊಸದಾಗಿ ತಾರಾಪಟ್ಟ ಗಳಿಸಿದ, ಅದ್ಭುತ ಪತ್ರಕರ್ತರಿಗಾಗಿ ನಾನು ಕಾಯುತ್ತಿದ್ದೆ. ಅಂಥ ಬಹುತೇಕ ಮಂದಿಯ ಜತೆ ನನಗೆ ಸ್ನೇಹ ಇತ್ತು. ಸಮಾಜ ಮಾಧ್ಯಮಗಳಲ್ಲಿ ನೀವು ಏಕೆ ನಾಚಿಕೆ ಇಲ್ಲದ ಮಂದಿಯ ಜತೆ ಸೇರಿ, ಏನೋ ಹೇಳುವ ಮೂಲಕ ಯಾಕೆ ಖ್ಯಾತರಾಗಬಯಸುತ್ತೀರಿ ಎಂದು ನಾನು ಕೇಳಬೇಕಾಗಿದೆ. ನೀವು ಅದನ್ನು ಮಾಡುವ ಅಗತ್ಯವಿಲ್ಲ. ನೀವು ಜನರ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಬೇಕಾದವರು. ನಿಮ್ಮ ಅಭಿಪ್ರಾಯವನ್ನು ನಾನು ಜನರ ಅಭಿಪ್ರಾಯವಾಗಿ ತೆಗೆದುಕೊಂಡು ಜಗತ್ತಿನಲ್ಲಿ ಏನಾಗುತ್ತಿದೆ ಎಂಬ ನಿರ್ಧಾರಕ್ಕೆ ಬರಬಹುದು. ವಿಶ್ವದ ವಿದ್ಯಮಾನಗಳನ್ನು ತಿಳಿಯಲು ನೀವು ಮೊದಲ ಮೂಲ...
ಮೆರಿಲ್ ಸ್ಟ್ರೀಪ್ ನಾವು ವಿಶ್ವದಲ್ಲಿ ಅತಿಹೆಚ್ಚು ಇಷ್ಟಪಡುವ ಮಹಿಳೆ. ಗಾಯನ ದೇವರ ಉಡುಗೊರೆ ಎನ್ನುವುದು ನನ್ನ ನಂಬಿಕೆ. ನಟನೆಯ ಕೌಶಲ ರೂಢಿಸಿಕೊಳ್ಳಬಹುದು, ಕಲಿಯಬಹುದು ಮತ್ತು ತರಬೇತಿ ಪಡೆಯಬಹುದು. ನಟನೆಯಲ್ಲೂ ದೇವರ ಉಡುಗೊರೆ ಎಂದಿದ್ದರೆ ಅದು ಮೆರಿಲ್ ಸ್ಟ್ರೀಪ್ ಮಾತ್ರ. ಅವರಿಗೆ ಮಾತನಾಡುವ ಹಕ್ಕು ಇದೆ ಎಂಬ ಸ್ಥಿತಿಯಲ್ಲಿ ಅವರಿದ್ದಾರೆ.
ಭಾರತೀಯ ನಟರೂ ಹಾಗೆ ಮಾತನಾಡಬೇಕು ಎಂದು ನೀವೇಕೆ ಬಯಸುತ್ತೀರಿ? ಭಾರತೀಯ ಪತ್ರಕರ್ತರು ನನ್ನನ್ನು ಹಾಗೆ ಬಿಂಬಿಸಬೇಕು ಎಂದೂ ನಾನು ಹೇಳಬಹುದೇ? ಅದು ನ್ಯಾಯವೇ? ನನ್ನ ಅಭಿಪ್ರಾಯವನ್ನು ನಿಮ್ಮ ಕಾರ್ಯಸೂಚಿ ಇಲ್ಲದ ಕಥಾಹಂದರದಲ್ಲಿ ಬಿಂಬಿಸುವ ವೇದಿಕೆ ಕಲ್ಪಿಸಿಕೊಡಿ. ಆಗ ನಾನು ಮಾತನಾಡುತ್ತೇನೆ. ನಾನು ಸದಾ ಅದನ್ನು ನಿರ್ವಹಿಸಿದ್ದೇನೆ. ಮುಂದುವರಿಸುತ್ತೇನೆ ಕೂಡಾ. ಎಲ್ಲೋ ಏನೋ ಸಂಭವಿಸಿದ್ದರೆ ಅದು ನನ್ನ ಗಮನಕ್ಕೂ ಬಂದಿರುವುದಿಲ್ಲ.
ಶಾರುಖ್ ಖಾನ್ ಏಕೆ ಮಾತನಾಡುತ್ತಿಲ್ಲ ಎಂದು ಜನ ಪ್ರಶ್ನಿಸಲು ಆರಂಭಿಸಿದ್ದಾರೆ. ನನಗೆ ಯಾವುದೇ ತೊಂದರೆಯಾಗುತ್ತಿಲ್ಲ ಎಂದಾದರೆ ಅಥವಾ ಆ ಬಗ್ಗೆ ನನಗೆ ಅರಿವು ಇಲ್ಲದಿದ್ದರೂ ನಾನು ಮೌನವಾಗಿರಲು ಬಿಡುವುದಿಲ್ಲ. ಒಂದು ವಿಷಯದ ಬಗ್ಗೆ ನನಗೆ ಮಾತನಾಡುವ ಬಯಕೆ ಇಲ್ಲದಿದ್ದರೆ, ಅದು ನಿಮಗೆ ತಿಳಿವಳಿಕೆ ಇಲ್ಲ ಎಂಬ ಅರ್ಥವೇ?.. ಇಲ್ಲದಿದ್ದರೆ ದೊಡ್ಡ ಗದ್ದಲವಾಗುತ್ತದೆ. ಆ ಗದ್ದಲಕ್ಕೆ ನನ್ನ ಧ್ವನಿ ಸೇರಿಸಲು ನಾನು ಬಯಸುವುದಿಲ್ಲ. ಹ್ಯಾಶ್‌ಟ್ಯಾಗ್ ಆಗಲು ನನಗೆ ಇಷ್ಟವಿಲ್ಲ. ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ನನಗೆ ಅವಕಾಶ ಬೇಕು. ಆ ಬಳಿಕ ನಾನು ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕೇ ಎಂದು ನಿರ್ಧರಿಸುತ್ತೇನೆ.
ನಾನು ನಿರ್ಧರಿಸುವ ವೇಳೆಗೆ ಆ ಕ್ಷಣ ಕಳೆದುಹೋಗುತ್ತದೆ. ನನ್ನ ಧ್ವನಿಗೆ ಬೆಲೆ ಇದೆ ಎನ್ನುವುದು ನನಗೆ ಗೊತ್ತು. ಅದನ್ನು ಸರಿಯಾದ ವೇದಿಕೆಯಲ್ಲಿ ನನ್ನ ಸಿದ್ಧಾಂತ ಅಭಿವ್ಯಕ್ತಪಡಿಸುತ್ತೇನೆ. ಹ್ಯಾಶ್‌ಟ್ಯಾಗ್ ಟ್ರೆಂಡ್‌ನ ಭಾಗವಾಗಲು ನಾನು ಬಯಸುವುದಿಲ್ಲ.
ನೀವು ಎಲ್ಲರನ್ನೂ ಹೀಗೆ ಕೇಳುವುದರಿಂದ ಬಹಳಷ್ಟು ಮಂದಿ ಮೂರ್ಖರು ಕೂಡಾ ಮಾತನಾಡುತ್ತಾರೆ. ನನ್ನನ್ನು ನಂಬಿ; ನೀವು ಅದನ್ನು ಕೇಳಿಸಿಕೊಳ್ಳಬೇಡಿ. ಹಲವು ಮಂದಿ ಈಗ ಸಾಮಾಜಿಕ ಮಾಧ್ಯಮದಲ್ಲಿದ್ದೀರಿ. ಕೆಲ ಗಂಟೆ ದೀಪ ಆರಿಸಿದರೆ ವಿದ್ಯುತ್ ಉಳಿತಾಯದ ದಿನವಾಗುತ್ತದೆ. ಅಂತೆಯೇ ಮೂರು ಗಂಟೆ ಕಾಲ ಜನ ಟ್ವೀಟ್ ಅಥವಾ ರೀಟ್ವೀಟ್ ಮಾಡದೇ ಆರಾಮವಾಗಿರಿ.
ನಟನೆಯಲ್ಲಿ ದೇವರ ಉಡುಗೊರೆ ಎಂದಿದ್ದರೆ ಅದು ಮೆರಿಲ್ ಸ್ಟ್ರೀಪ್ ಮಾತ್ರ. ಅವರಿಗೆ ಮಾತನಾಡುವ ಹಕ್ಕು ಇದೆ ಎಂಬ ಸ್ಥಿತಿಯಲ್ಲಿ ಅವರಿದ್ದಾರೆ.
ಭಾರತೀಯ ನಟರೂ ಹಾಗೆ ಮಾತನಾಡಬೇಕು ಎಂದು ನೀವೇಕೆ ಬಯಸುತ್ತೀರಿ? ಭಾರತೀಯ ಪತ್ರಕರ್ತರು ನನ್ನನ್ನು ಹಾಗೆ ಬಿಂಬಿಸಬೇಕು ಎಂದೂ ನಾನು ಹೇಳಬಹುದೇ? ಅದು ನ್ಯಾಯವೇ? ನನ್ನ ಅಭಿಪ್ರಾಯವನ್ನು ನಿಮ್ಮ ಕಾರ್ಯಸೂಚಿ ಇಲ್ಲದ ಕಥಾಹಂದರದಲ್ಲಿ ಬಿಂಬಿಸುವ ವೇದಿಕೆ ಕಲ್ಪಿಸಿಕೊಡಿ. ಆಗ ನಾನು ಮಾತನಾಡುತ್ತೇನೆ. ನಾನು ಸದಾ ಅದನ್ನು ನಿರ್ವಹಿಸಿದ್ದೇನೆ. ಮುಂದುವರಿಸುತ್ತೇನೆ ಕೂಡಾ.