ದೇಶದ ಸಂಶೋಧನಾ ಕ್ಷೇತ್ರದ ಮುಂದಿದೆ ಅಸಾಧಾರಣ ಸವಾಲು
ನೊಬೆಲ್ ಬಹುಮಾನ ಖಂಡಿತವಾಗಿಯೂ ಅಪೇಕ್ಷಣೀಯ ಗೌರವ. ಆದರೆ ಆ ನಿಟ್ಟಿನಲ್ಲಿ ಮೂಲ ಸಂಶೋಧನೆಯನ್ನು ದೇಶದಲ್ಲಿ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ್ದು ಕೂಡಾ ಅಷ್ಟೇ ಮಹತ್ವದ್ದು. ಇಂಥ ಮಹತ್ವದ ಸಂಶೋಧನೆಗೆ ಪೂರಕ ವಾತಾವರಣ ನಿರ್ಮಾಣವಾದರೆ ಆರ್ಥಿಕ ಪ್ರಗತಿ ಹಾಗೂ ಜಾಗತಿಕ ಮನ್ನಣೆ ಸಹಜವಾಗಿಯೇ ಸಿಗುತ್ತದೆ.
ಆದರೆ ಅನುಶೋಧನೆಗೆ ಪೂರಕವಾಗುವುದು ಹೇಗೆ? ನೊಬೆಲ್ ಪುರಸ್ಕೃತರಿಂದಲೇ ಈ ಪ್ರಶ್ನೆಗೆ ಉತ್ತರ ಪಡೆಯುವ ಅವಕಾಶ ಇತ್ತೀಚೆಗೆ ಭಾರತಕ್ಕೆ ದೊರಕಿತ್ತು.
ಭೌತಶಾಸ್ತ್ರ ಸಂಶೋಧನೆಗಾಗಿ 1930ರಲ್ಲಿ ಸರ್ ಸಿ.ವಿ.ರಾಮನ್ ನೊಬೆಲ್ ಪ್ರಶಸ್ತಿ ಪಡೆದ ಬಳಿಕ ವಿಜ್ಞಾನ ವಿಷಯದಲ್ಲಿ ಭಾರತ ನೊಬೆಲ್ ಪಡೆದಿಲ್ಲ ಎಂಬ ಆಘಾತದಿಂದ ಇನ್ನೂ ಭಾರತ ಚೇತರಿಸಿಕೊಂಡಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ನೊಬೆಲ್ ಘೋಷಣೆಯಾದಾಗ, ಕೇಂದ್ರದ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್.ಚೌಧರಿ, 2035ರೊಳಗೆ ಭಾರತೀಯರು ನೊಬೆಲ್ ಪಡೆಯುವಂತೆ ಸಂಶೋಧನೆಗೆ ನೆರವಾಗುವ ಯೋಜನೆಯನ್ನು ಸರಕಾರ ರೂಪಿಸಿದೆ ಎಂದು ಘೋಷಿಸಿದರು. ನೊಬೆಲ್ ಬಹುಮಾನ ಖಂಡಿತವಾಗಿಯೂ ಅಪೇಕ್ಷಣೀಯ ಗೌರವ. ಆದರೆ ಆ ನಿಟ್ಟಿನಲ್ಲಿ ಮೂಲ ಸಂಶೋಧನೆಯನ್ನು ದೇಶದಲ್ಲಿ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ್ದು ಕೂಡಾ ಅಷ್ಟೇ ಮಹತ್ವದ್ದು. ಇಂಥ ಮಹತ್ವದ ಸಂಶೋಧನೆಗೆ ಪೂರಕ ವಾತಾವರಣ ನಿರ್ಮಾಣವಾದರೆ ಆರ್ಥಿಕ ಪ್ರಗತಿ ಹಾಗೂ ಜಾಗತಿಕ ಮನ್ನಣೆ ಸಹಜವಾಗಿಯೇ ಸಿಗುತ್ತದೆ.
ಆದರೆ ಅನುಶೋಧನೆಗೆ ಪೂರಕವಾಗುವುದು ಹೇಗೆ? ನೊಬೆಲ್ ಪುರಸ್ಕೃತರಿಂದಲೇ ಈ ಪ್ರಶ್ನೆಗೆ ಉತ್ತರ ಪಡೆಯುವ ಅವಕಾಶ ಇತ್ತೀಚೆಗೆ ಭಾರತಕ್ಕೆ ದೊರಕಿತ್ತು. 2017ರ ಜನವರಿ 9 ರಿಂದ 13ರವರೆಗೆ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ವೈದ್ಯಕೀಯ ವಿಜ್ಞಾನದಲ್ಲಿ ನೊಬೆಲ್ ಪಡೆದ ಒಂಬತ್ತು ಮಂದಿ, ಭಾರತೀಯ ವಿದ್ಯಾರ್ಥಿಗಳು, ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ಕೈಗಾರಿಕೆಗಳ ಜತೆ ಸಂವಾದ ನಡೆಸಿದರು. ಸ್ವೀಡನ್‌ನ ನೋಬಲ್ ಮೀಡಿಯಾ ಎ.ಬಿ. ಸಹಭಾಗಿತ್ವದಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆ ಇಂಥದ್ದೊಂದು ವಿಶಿಷ್ಟ ಪ್ರಯತ್ನ ಮಾಡಿ, ಗಾಂಧಿನಗರ, ದಿಲ್ಲಿ ಹಾಗೂ ಬೆಂಗಳೂರಿಗೆ ನೊಬೆಲ್ ಪುರಸ್ಕೃತರನ್ನು ಸಂವಾದಕ್ಕಾಗಿಯೇ ಕರೆಸಿತು.
ಕೊನೆಯ ದಿನ ಅಂದರೆ ಜನವರಿ 13ರಂದು ಬೆಂಗಳೂರಿನಲ್ಲಿ ಎಲ್ಲರ ಗಮನ ಸೆಳೆದದ್ದು, 2004ರಲ್ಲಿ ಭೌತಶಾಸ್ತ್ರ ನೊಬೆಲ್ ಪುರಸ್ಕೃತ ವಿಜ್ಞಾನಿ ಡೇವಿಡ್ ಗ್ರೋಸ್ ಹಾಗೂ 2013ರಲ್ಲಿ ವೈದ್ಯಕೀಯ ನೊಬೆಲ್ ಪಡೆದ ರಾಂಡಿ ಶೆಕ್‌ಮನ್.
ಇಬ್ಬರೂ ನೊಬೆಲ್ ಪುರಸ್ಕೃತರು ತಮ್ಮ ಉಪನ್ಯಾಸದಲ್ಲಿ ಒತ್ತು ನೀಡಿದ ಅಂಶವೆಂದರೆ, ನೀತಿ ಅಭಿವೃದ್ಧಿಪಡಿಸುವ ವಿಚಾರದಲ್ಲಿ ವೈಜ್ಞಾನಿಕ ಧ್ವನಿ ಪ್ರಬಲವಾಗಬೇಕು ಹಾಗೂ ನಿರಂತರವಾಗಿರಬೇಕು. ಏಕೆಂದರೆ ಇದು ಭವಿಷ್ಯದ ಸಂಶೋಧನೆ ಹಾಗೂ ವೈಜ್ಞಾನಿಕ ಪರಿಹಾರಗಳ ಅಡಿಗಲ್ಲು ಎನ್ನುವುದು. ಈ ನಿಟ್ಟಿನಲ್ಲಿ ಅಮೆರಿಕದ ರಾಷ್ಟ್ರೀಯ ಸಂಶೋಧನಾ ಮಂಡಳಿ ನಿರ್ವಹಿಸುತ್ತಿರುವ ಪಾತ್ರವನ್ನು ಉದಾಹರಿಸಿದರು. ದೇಶದ ಸಂಶೋಧನೆಗಳನ್ನು ತುಲನೆ ಮಾಡುವ, ವೈಜ್ಞಾನಿಕ ಅಭಿಪ್ರಾಯ ಆಹ್ವಾನಿಸಿ ಶ್ವೇತಪತ್ರ ಪ್ರಕಟಿಸುವ ಇಂಥ ವ್ಯವಸ್ಥೆ ಭಾರತದಲ್ಲೂ ರೂಪುಗೊಳ್ಳಬೇಕು ಎಂದು ಗ್ರೋಸ್ ಒತ್ತಿಹೇಳಿದರು.
1988ರಲ್ಲಿ ಭಾರತದಲ್ಲೂ ವಿಜ್ಞಾನ ಯೋಜನೆ ರೂಪಿಸುವ ವಿಚಾರದಲ್ಲಿ ಸಹಕರಿಸಲು ‘ಟೆಕ್ನಾಲಜಿ ಇನ್ಫಾರ್ಮೇಷನ್, ಫೋರ್‌ಕಾಸ್ಟಿಂಗ್ ಆ್ಯಂಡ್ ಅಸೆಸ್‌ಮೆಂಟ್ ಕೌನ್ಸಿಲ್’ (ಟಿಐಇಎಸಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಮೌಲ್ಯಮಾಪನ ವರದಿ, ವಿಷನ್ ಡಾಕ್ಯುಮೆಂಟ್ ಹಾಗೂ ವಿವಿಧ ತಂತ್ರಜ್ಞಾನ ವಲಯ ಹಾಗೂ ಸೇವೆಗಳಿಗೆ ಮಾಗದರ್ಶಿ ಸೂತ್ರಗಳನ್ನು ರೂಪಿಸುವುದು ಇದರ ಹೊಣೆಯಾಗಿತ್ತು. ಟಿಐಎಫ್‌ಎಸಿಯ ಪ್ರಮುಖ ವರದಿ ಎಂದರೆ 2016ರ ಜನವರಿಯಲ್ಲಿ ಬಿಡುಗಡೆಯಾದ ‘ಟೆಕ್ನಾಲಜಿ ವಿಷನ್ 2035.’ ಭಾರತದ ವೈಜ್ಞಾನಿಕ ಭವಿಷ್ಯದ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳು ಹಾಗೂ ತಜ್ಞರಿಂದ ಪಡೆದ ಸೈದ್ಧಾಂತಿಕ ಕಲ್ಪನೆಗಳನ್ನು ಇದು ಒಳಗೊಂಡಿದೆ. ಇಂಥ ವರದಿಗಳು ಸಂಭಾವ್ಯ ಪರಿಣಾಮಗಳನ್ನು ಪಟ್ಟಿ ಮಾಡುವಲ್ಲಿಗೆ ಕೊನೆಯಾಗುತ್ತದೆ. ಅದಕ್ಕೆ ಅನುಸರಿಸಬೇಕಾದ ಮಾರ್ಗದ ಬಗ್ಗೆ ಅದು ತಲೆ ಕೆಡಿಸಿಕೊಳ್ಳುವುದಿಲ್ಲ. ವಿಜ್ಞಾನಿಗಳು ಅವುಗಳ ನಿರ್ದಿಷ್ಟತೆ ಬಗ್ಗೆ ಚರ್ಚಿಸಲು ವಿಷಯದ ಬಗ್ಗೆ ಶ್ವೇತಪತ್ರ ಮಂಡಿಸುವುದು ಅಗತ್ಯ.
2008ರಿಂದ 2010ರ ಅವಧಿಯಲ್ಲಿ, ಪ್ರಧಾನಿಯ ವೈಜ್ಞಾನಿಕ ಸಲಹೆಗಾರರಾಗಿದ್ದ ಸಿ.ಎನ್.ಆರ್.ರಾವ್. ವಿಜ್ಞಾನ ಹಾಗೂ ಎಂಜಿನಿಯರಿಂಗ್ ಮಂಡಳಿ (ಎಸ್‌ಇಆರ್‌ಬಿ) ಸ್ಥಾಪಿಸಿ, ಸಂಶೋಧನಾ ಅನುದಾನ ನೀಡಿಕೆಗೆ ಪ್ರತಿಭೆಯನ್ನೇ ಮಾನದಂಡವಾಗಿ ಪರಿಗಣಿಸಿ, ಇದನ್ನು ಆಡಳಿತಶಾಹಿಯ ಮುಷ್ಟಿಯಿಂದ ಬಿಡುಗಡೆ ಮಾಡುವ ಪ್ರಯತ್ನ ಮಾಡಿದರು. ಆದರೆ ಸಂಶೋಧನೆಯ ಸವಾಲನ್ನು ಎಸ್‌ಇಆರ್‌ಬಿ ಅಷ್ಟೊಂದು ಗಂಭೀರವಾಗಿ ಅರ್ಥ ಮಾಡಿಕೊಂಡಿರಲಿಲ್ಲ ಎನ್ನುವುದನ್ನು ಅವರು ಇತ್ತೀಚಿನ ಒಂದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು.
‘‘ವಿಜ್ಞಾನಿಗಳು ಕೂಡಾ ವೃತ್ತಿಪರ ಸಂಘಟನೆಗಳನ್ನು ರೂಪಿಸಿ, ರಾಜಕಾರಣಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಬೇಕು. ಅಮೆರಿಕದ ಕಾಂಗ್ರೆಸ್‌ಗೆ ನಾವದನ್ನು ಮಾಡುತ್ತೇವೆ’’ ಎಂದು ಶೇಕ್‌ಮನ್ ಸ್ಪಷ್ಟಪಡಿಸಿದರು. ವಿಜ್ಞಾನದ ವಿಷಯದಲ್ಲಿ ತರಬೇತಿ ಪಡೆದವರು ವಿರಳ ಎನ್ನುವುದು ಅವರ ಅನಿಸಿಕೆ. ಅಮೆರಿಕ ಕಾಂಗ್ರೆಸ್‌ನಲ್ಲಿ ವಿಜ್ಞಾನ ಹಿನ್ನೆಲೆಯ ಸದಸ್ಯರಿರುವುದು ಒಬ್ಬರು ಮಾತ್ರ ಎಂದು ಗ್ರೋಸ್ ಬಹಿರಂಗಪಡಿಸಿದರು. ಇಂಥ ಪರಿಸ್ಥಿತಿಯಲ್ಲಿ ಶ್ವೇತಪತ್ರ ಹಾಗೂ ವಿಚಾರ ಸಂಕಿರಣಗಳು ವೈಜ್ಞಾನಿಕ ಧ್ವನಿಯನ್ನು ನೀತಿ ನಿರೂಪಣೆಯಲ್ಲಿ ಸೇರಿಸುವಲ್ಲಿ ಹಾಗೂ ಯೋಜನೆಯನ್ನು ಅರ್ಥಪೂರ್ಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಂಶೋಧನಾ ವಿಧಾನ ಹಾಗೂ ವಿವಿಧ ಕ್ಷೇತ್ರಗಳ ಸವಾಲುಗಳ ಬಗ್ಗೆ ರಾಜಕಾರಣಿಗಳು ತಿಳಿದುಕೊಂಡರೆ, ವೈಜ್ಞಾನಿಕ ಬೇಡಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದು ಅವರ ಅಭಿಮತ.
‘‘ರಾಜಕಾರಣಿಗಳು ವಿಜ್ಞಾನದ ಮೂಲತತ್ವಗಳನ್ನು ತಿಳಿದುಕೊಳ್ಳದಿದ್ದರೂ, ವೈಜ್ಞಾನಿಕ ಪ್ರಕ್ರಿಯೆಯ ಮೂಲಭೂತ ಅಂಶಗಳನ್ನಾದರೂ ಅರಿತುಕೊಂಡರೆ ಸಾಕು ಎಂದು ಶೇಕ್‌ಮನ್ ಹೇಳಿದರು. ಅನುಶೋಧನೆ ಎಂದರೆ ಮೂಲಭೂತವಾಗಿ ಹೊಸ ಕಲ್ಪನೆ ಎಂದಷ್ಟೇ ಅರ್ಥ. ಆದರೆ ವಿಭಿನ್ನ ವ್ಯಕ್ತಿಗಳಿಗೆ ಅದರ ಅರ್ಥ ಮಾತ್ರ ಬೇರೆಯಾಗುತ್ತದೆ. ಉದ್ಯಮಕ್ಷೇತ್ರಕ್ಕೆ ಅನುಶೋಧನೆ ಎಂದರೆ, ಹೊಸ ಉತ್ಪನ್ನ ಹಾಗೂ ಆರ್ಥಿಕ ಲಾಭವಾದರೆ, ಸರಕಾರದ ಅರ್ಥದಲ್ಲಿ ಸಾರ್ವಜನಿಕ ಸಮಸ್ಯೆಗೆ ಕಂಡುಹಿಡಿಯುವ ಪರಿಹಾರ ಹಾಗೂ ತಂತ್ರಜ್ಞಾನದ ಉನ್ನತಿ. ಈ ಎಲ್ಲವನ್ನೂ ವಿಜ್ಞಾನಿಗಳು ಸಾಧಿಸುವಂತೆ ಮಾಡಲು ಸಮಾಜ ಹೇಗೆ ವಿಜ್ಞಾನಿಗಳನ್ನು ಸಶಕ್ತರನ್ನಾಗಿಸಬೇಕು?
ಇದಕ್ಕೆ ಒಕ್ಕೊರಲ ಉತ್ತರ ಕೇಳಿಬಂತು: ಮೂಲವಿಜ್ಞಾನದಲ್ಲಿ ಮೂಲಭೂತ ಸಂಶೋಧನೆ ಬೆಂಬಲಿಸುವ ಮೂಲಕ.
ಗ್ರೋಸ್ ಇದಕ್ಕೆ ಸಣ್ಣ ಉದಾಹರಣೆ ಕೊಟ್ಟರು. ‘‘ಇಂದು ಸ್ಮಾರ್ಟ್‌ಫೋನ್ ಸಮಾಜಕ್ಕೆ ಬರಲು ಸಾಧ್ಯವಾದದ್ದು 1900ರ ದಶಕದಲ್ಲಿ ಆದ ಕ್ವಾಂಟಮ್ ಫಿಸಿಕ್ಸ್ ಸಂಶೋಧನೆಯ ಪ್ರಗತಿಯಿಂದಾಗಿ. ಆದ್ದರಿಂದ ಪ್ರತಿಯೊಂದು ಸಂಶೋಧನೆ ರೂಪುಗೊಂಡ ಹಿನ್ನೆಲೆಯ ಬಗ್ಗೆ ಕೂಡಾ ಅರಿತುಕೊಳ್ಳುವ ಪ್ರಯತ್ನ ಮಾಡಿ’’ ಎನ್ನುವುದು ಅವರ ಸಲಹೆಯಾಗಿತ್ತು. ಸೃಜನಶೀಲತೆ ಹಾಗೂ ಕುತೂಹಲದ ಸಂಶೋಧನೆ ಎಲ್ಲ ಅನುಶೋಧನೆಗಳ ಮೂಲ ಎನ್ನುವುದನ್ನು ಇತಿಹಾಸವೂ ತೋರಿಸಿಕೊಟ್ಟಿದೆ. ಇಂದು ನಿಗೂಢ ಎನಿಸುವ ಸಿದ್ಧಾಂತಗಳು ನಾಳೆ ಕ್ರಾಂತಿಕಾರಿ ತಂತ್ರಜ್ಞಾನ ಅಥವಾ ಸಾಮಾಜಿಕ ಸಬಲೀಕರಣದ ಮೂಲವಾಗ ಬಲ್ಲದು. ದುರದೃಷ್ಟವಶಾತ್ ಈ ಸಂಬಂಧ ಬಗ್ಗೆ ಭಾರತದಲ್ಲಿ ಇನ್ನೂ ಜಾಗೃತಿ ಇಲ್ಲ ಎನ್ನುವುದು ಅವರ ಪ್ರಾಮಾಣಿಕ ಅನಿಸಿಕೆಯಾಗಿತ್ತು. ಈ ಕಾರಣದಿಂದಾಗಿ ಭಾರತೀಯ ಸಮಾಜ, ಮೂಲ ಸಂಶೋಧನೆ ನಡೆಸುವ ತನ್ನ ವಿಜ್ಞಾನಿಗಳನ್ನೇ ಕಡೆಗಣಿಸುತ್ತಿದೆ ಎಂಬ ಬೇಸರ ವ್ಯಕ್ತಪಡಿಸಿದರು. ಇನ್ನೊಂದೆಡೆ ಅಮೆರಿಕದಲ್ಲಿ ಈ ಸಂಬಂಧವನ್ನು ಬೇಗನೆ ಗುರುತಿಸಲಾಗಿದ್ದು, ನೊಬೆಲ್ ಪುರಸ್ಕೃತರು ನಿಜಕ್ಕೂ ಋಣಿಗಳು ಎಂದು ಬಣ್ಣಿಸಿದರು.
‘1940ರ ದಶಕದಿಂದೀಚೆಗೆ ಡೆಮಾಕ್ರೇಟ್ ಹಾಗೂ ರಿಪಬ್ಲಿಕನ್ ಹೀಗೆ ಎರಡೂ ಪಕ್ಷದವರು ಮೂಲ ವಿಜ್ಞಾನಕ್ಕೆ ಬೆಂಬಲವಾಗಿ ನಿಂತಿವೆ. ಎರಡನೆ ಮಹಾಯುದ್ಧದ ಬಳಿಕದ ಶಕೆಯಲ್ಲಿ ಮೂಲವಿಜ್ಞಾನ ಸಂಶೋಧನೆ ಬೆಳೆಯಲು ಅಣುಬಾಂಬ್ ಉತ್ತೇಜಕ ಶಕ್ತಿಯಾಯಿತು. 1956ರಿಂದ 2014ರ ಅವಧಿಯಲ್ಲಿ ಮೂಲ ಸಂಶೋಧನೆಗೆ ಸರಕಾರ ನೀಡುತ್ತಿರುವ ಅನುದಾನದ ವಾರ್ಷಿಕ ಪ್ರಗತಿ ಶೇ. 9.5ರಷ್ಟು. ಅನ್ವಯಿಕ ವಿಜ್ಞಾನಕ್ಕೆ ಈ ಪ್ರಗತಿ ದರ ಶೇ. 7.3 ಆಗಿದ್ದರೆ, ಅನ್ವಯಿಕ ಸಂಶೋಧನೆಗೆ ಶೇ. 6.6 ಎಂದು ಅವರು ವಿವರ ನೀಡಿದರು. ಒಟ್ಟಾರೆ ಅಮೆರಿಕದಲ್ಲಿ ಒಟ್ಟು ಜಿಡಿಪಿಯ ಶೇ. 2.7 ಸಂಶೋಧನಾ ವಲಯಕ್ಕೆ ಅನುದಾನವಾಗಿ ಹರಿಯುತ್ತಿದ್ದರೆ, ಭಾರತದಲ್ಲಿ ಈ ಪ್ರಮಾಣ ಇನ್ನೂ ಶೇ. 0.85ರಲ್ಲೇ ಇದೆ. ಬ್ರಿಕ್ಸ್ ದೇಶಗಳ ಪೈಕಿ ಕೂಡಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಮೇಲೆ ಕನಿಷ್ಠ ವೆಚ್ಚ ಮಾಡುತ್ತಿರುವ ದೇಶ ಭಾರತ ಎನ್ನುವುದನ್ನು ಗ್ರೋಸ್ ಬಯಲುಗೊಳಿಸಿದರು.
ಮೂಲ ಸಂಶೋಧನೆ ಅನುದಾನ ವಿಚಾರದಲ್ಲಿ ವಾಸ್ತವವಾಗಿ ದೀರ್ಘಾವಧಿ ಬದ್ಧತೆ ಮತ್ತು ತಾಳ್ಮೆ ಅಗತ್ಯ. ಈ ಕಾರಣದಿಂದ ಅದಕ್ಕೆ ಸಾರ್ವಜನಿಕ ನಿಧಿಯಿಂದ ನಿರಂತರ ಅನುದಾನ ಬೆಂಬಲದ ಅಗತ್ಯತೆ ಇದೆ. ಅಮೆರಿಕದಲ್ಲಿ ಸಂಶೋಧನಾ ಯೋಜನೆಗಳಿಗೆ ನೀಡುವ ದೇಣಿಗೆಗೂ ತೆರಿಗೆ ವಿನಾಯಿತಿ ಇದೆ. ಈ ತಂತ್ರವನ್ನು ಭಾರತವೂ ಅಳವಡಿಸಿಕೊಳ್ಳಬಹುದು ಎಂದು ಇಬ್ಬರೂ ಸಲಹೆ ಮಾಡಿದರು.
ಅನುದಾನ ಮಾತ್ರವಲ್ಲದೇ ವಿಶಾಲವಾದ ಜ್ಞಾನದಾಹಿ ಭಾರತೀಯರ ತರಬೇತಿಗೆ ಗುಣಮಟ್ಟದ ಸಂಪನ್ಮೂಲ ಕೂಡಾ ಅಗತ್ಯ. ಭಾರತದ ಅಗ್ರಗಣ್ಯ ಸಂಸ್ಥೆಗಳೆನಿಸಿದ ಐಐಟಿಗಳು ಹಾಗೂ ರಾಜ್ಯಮಟ್ಟದ ಕಾಲೇಜುಗಳ ನಡುವೆ ದೊಡ್ಡ ಅಂತರ ಇರುವುದನ್ನೂ ಗ್ರೋಸ್ ಉಲ್ಲೇಖಿಸಿದರು. ಇದು ಸಂಶೋಧನಾ ವಿಷಯಗಳಿಗೆ ತೆರೆದುಕೊಳ್ಳುವ ವಿಚಾರ ಮತ್ತು ಶಿಕ್ಷಣದ ಗುಣಮಟ್ಟಕ್ಕೂ ಅನ್ವಯಿಸುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೂಡಾ ಗುಣಮಟ್ಟದ ಪ್ರಯೋಗಾಲಯಗಳಲ್ಲಿ ಸಂಶೋಧಕರ ಜತೆ ಬೆರೆತು, ಅದ್ಭುತ ಸಂಶೋಧನೆಗಳನ್ನು ನಡೆಸಲು ಸಿಗುವ ಅವಕಾಶ ವಿರಳ ಎಂದು ಗ್ರೋಸ್ ವಿಷಾದಿಸಿದರು. ಈ ನಿಟ್ಟಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ಮಹತ್ವದ ಹೆಜ್ಜೆಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಐಐಟಿಳ ಗುರಿ ವಿಶ್ವದರ್ಜೆಯ ಎಂಜಿನಿಯರ್‌ಗಳನ್ನು ರೂಪಿಸುವುದಾದರೆ, ಐಐಎಸ್‌ಇಆರ್ ಗುರಿ ವಿಶ್ವದರ್ಜೆಯ ವಿಜ್ಞಾನಿಗಳನ್ನು ಸಜ್ಜುಗೊಳಿಸುವುದು. ಇದು ನಿಜಕ್ಕೂ ಅದ್ಭುತ. ಅಲ್ಲಿನ ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ನಿಜಕ್ಕೂ ವಿಶ್ವದರ್ಜೆಯವರು ಆದರೆ ಅಂಥ ಸಂಸ್ಥೆಗಳ ಸಂಖ್ಯೆ ವಿರಳ ಎಂದು ಗ್ರೋಸ್ ವಿಶ್ಲೇಷಿಸಿದರು. ಈ ಅಂತರವನ್ನು ಕಡಿಮೆ ಮಾಡಬೇಕಾದರೆ ಸಂಪನ್ಮೂಲ ಹಾಗೂ ತರಬೇತಿ ಹೊಂದಿದ ಮಾನವ ಸಂಪನ್ಮೂಲ ಬೇಕು. ದೊಡ್ಡ ದೇಶಗಳಿಗೆ ಸಂಕೀರ್ಣ ಸ್ಥಿತಿ ಉದ್ಭವವಾಗುವುದೇ ಇಲ್ಲಿ. ಅತ್ಯುನ್ನತ ಸಂಸ್ಥೆಗಳನ್ನು ಸೃಷ್ಟಿಸಲು, ಭಾರತಕ್ಕೆ ಮಾನವಶಕ್ತಿ ಬೇಕು. ಅವರನ್ನು ಸಿದ್ಧಪಡಿಸಬೇಕಾದರೆ ಉನ್ನತ ಮಟ್ಟದ ಸಂಸ್ಥೆಗಳು ಬೇಕು. ಇದು ಕೋಳಿ ಹಾಗೂ ಮೊಟ್ಟೆ ಸಮಸ್ಯೆಯಂತೆ. ಯಾವುದು ಮೊದಲು? ಈ ಸವಾಲಿನಿಂದ ಹೊರಬರುವುದು ತೀರಾ ಕಷ್ಟಕರ ಎನ್ನುವುದು ಅವರ ಅಭಿಮತ.
ಇದಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನವನ್ನು ಶೇಕ್‌ಮನ್ ಮಾಡಿದರು. ಸಂಪನ್ಮೂಲ ಹಾಗೂ ವಿದ್ಯಾರ್ಥಿಗಳು ಸಂಶೋಧನೆಗೆ ತೆರೆದುಕೊಳ್ಳುವ ಅವಕಾಶ ಎರಡೂ ಪ್ರಮುಖವಾಗುತ್ತದೆ. 2010ರಲ್ಲಿ ಭಾರತ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ವಿದೇಶಗಳಲ್ಲಿ ಸಂಶೋಧನೆ ಕೈಗೊಳ್ಳುವ ಪ್ರತಿಭಾವಂತರಿಗೆ ಫೆಲೋಶಿಪ್ ಆರಂಭಿಸಿದೆ. ವಿದೇಶಗಳಲ್ಲಿ ಅವಕಾಶ ಸಿಗುವುದಕ್ಕಿಂತ, ಅವರಿಗೆ ಅನುದಾನ ಹಾಗೂ ಸ್ವಾತಂತ್ರ್ಯ ನೀಡುವುದು ಮುಖ್ಯ ಎನ್ನುವುದನ್ನು ಗ್ರೋಸ್ ಕೂಡಾ ಅನುಮೋದಿಸಿದರು.
ಭಾರತೀಯರಲ್ಲಿ ಸ್ವದೇಶಕ್ಕೆ ಮರಳುವ ಪ್ರಬಲವಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಬಂಧ ಇದೆ. ಅವರ ವರ್ಗಾಂತರ ಸುಲಭವಾಗಿಸುವುದು ಮುಖ್ಯ. ಭಾರತ ಅವಳಿ ಪೌರತ್ವ ನೀಡಲು ಮುಂದಾದಲ್ಲಿ, ವಿದೇಶದಲ್ಲಿ ಸಂಶೋಧನೆ ಕೈಗೊಳ್ಳುವ ಭಾರತೀಯ ಸಂಶೋಧಕರ ಹುಮ್ಮಸ್ಸು ಮತ್ತಷ್ಟು ಹೆಚ್ಚಬಹುದು. ಇದು ಬಹಳಷ್ಟು ಮಂದಿ ಭಾರತೀಯರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ದೇಶಕ್ಕೆ ಆಗಮಿಸಿ, ಅತ್ಯುತ್ತಮ ಕೊಡುಗೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಬಹುತೇಕ ದೇಶಗಳು ಅವಳಿ ಪೌರತ್ವಕ್ಕೆ ಅವಕಾಶ ನೀಡಿರುವಾಗ ಭಾರತದಲ್ಲೇಕೆ ಆಗುತ್ತಿಲ್ಲ ಎನ್ನುವುದು ಅವರ ಪ್ರಶ್ನೆ.
ನಿರಂತರವಾಗಿ ವಿಸ್ತೃತವಾಗುತ್ತಲೇ ಹೋಗುವ ಡಿಜಿಟಲ್ ಯುಗದಲ್ಲಿ ಮುಂದಿನ ದೈತ್ಯ ಅನುಶೋಧನೆ ಯಾವುದು ಎಂದು ಅಂದಾಜಿಸುವುದು ಕಷ್ಟ. ಆದರೆ ಎಲ್ಲ ಭವಿಷ್ಯದ ತಂತ್ರಜ್ಞಾನಕ್ಕೆ ಕೂಡಾ ಮೂಲವಿಜ್ಞಾನ ಅಡಿಗಲ್ಲಾಗಿರುತ್ತದೆ. ಈ ಸತ್ಯವನ್ನು ಅರ್ಥ ಮಾಡಿಕೊಂಡು ರೂಪಿಸಿದ ನೀತಿಗಳಿಗೆ ಫಲ ಇದ್ದೇ ಇದೆ. ದೊಡ್ಡ ಮಾಹಿತಿ ಹಾಗೂ ದೊಡ್ಡ ವಿಜ್ಞಾನಕ್ಕೆ ದೊಡ್ಡ ಬೇಡಿಕೆ ಖಂಡಿತವಾಗಿಯೂ ಇದೆ. ಇದಕ್ಕಾಗಿ ಖಂಡ ಖಂಡಗಳ ದೇಶಗಳ ನಡುವೆ ಹಾಗೂ ವಿಜ್ಞಾನಿಗಳ ನಡುವೆ ಸಹಭಾಗಿತ್ವ ಏರ್ಪಡಬೇಕು. ಇಂಥ ಸಹಭಾಗಿತ್ವ ರೂಪಿಸುವ ನಿಟ್ಟಿನಲ್ಲಿ ಭಾರತ ಅಗ್ರಗಣ್ಯ ರಾಷ್ಟ್ರವಾಗಬೇಕು ಎನ್ನುವುದು ಗ್ರೋಸ್ ಅವರ ಸಲಹೆ.
ಕೊನೆಯಲ್ಲಿ ಶೇಕ್‌ಮನ್, ಹಲವು ದಶಕಗಳ ಕಾಲ ಅಮೆರಿಕದ ವಿಜ್ಞಾನ ನೀತಿ ಹಾಗೂ ಸಂಶೋಧನೆಯನ್ನು ನಿರ್ದೇಶಿಸುವಲ್ಲಿ ಮಹತ್ವದ ಪಾತ್ರ ವಹಿಸಿದ 1945ರ ‘ಸೈನ್ಸ್- ದ ಎಂಡ್‌ಲೆಸ್ ಫ್ರಾಂಟಿಯರ್’ ಎಂಬ ಶೀರ್ಷಿಕೆಯ ವರದಿಯ ಅಂಶವನ್ನು ಉಲ್ಲೇಖಿಸಿದರು: ‘‘ವಿಜ್ಞಾನವನ್ನು ಆಳುವ ಯಾವುದೇ ಯೋಜನೆಯಲ್ಲಿ ವಿಚಾರಣೆಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು.’’
ಕೃಪೆ: thewire