Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಾರತದ ಮಕ್ಕಳು ಶಾಲೆಗೆ ಹೋಗುವವರು ಶೇ....

ಭಾರತದ ಮಕ್ಕಳು ಶಾಲೆಗೆ ಹೋಗುವವರು ಶೇ. 97ರಷ್ಟು! ಆದರೆ ಕಲಿಯುವವರು ಶೇ. 50ಕ್ಕೂ ಕಡಿಮೆ!

ಶ್ರಿಯಾ ಮೋಹನ್ಶ್ರಿಯಾ ಮೋಹನ್3 Feb 2017 11:51 PM IST
share
ಭಾರತದ ಮಕ್ಕಳು ಶಾಲೆಗೆ ಹೋಗುವವರು ಶೇ. 97ರಷ್ಟು! ಆದರೆ ಕಲಿಯುವವರು ಶೇ. 50ಕ್ಕೂ ಕಡಿಮೆ!

ದಾಖಲಾತಿ ಎಂದ ಮಾತ್ರಕ್ಕೆ ಕಲಿಕೆಯೆಂದು ಅರ್ಥವಲ್ಲ. ‘ಪ್ರಥಮ್’ನ ರುಕ್ಮಿಣಿ ಬ್ಯಾನರ್ಜಿ ಪ್ರಕಾರ ಹಾಜರಾತಿ ಹೆಚ್ಚಿನ ಸೂಚನೆ ನೀಡುತ್ತದೆ. ಎಎಸ್‌ಇಆರ್‌ನ ನಿರ್ದೇಶಕರಾದ ವಿಲಿಮಾ ವಾದ್ವಾ ಕಲಿಕೆಯ ಸಮಸ್ಯೆಯ ಬಗ್ಗೆ ಹೆಚ್ಚಿನ ಉಲ್ಲೇಖವನ್ನು ಮಾಡುತ್ತಾರೆ. ‘ಸ್ಕೂಲ್ ಮ್ಯಾಟರ್ಸ್’ ಎಂಬ ವರದಿಗೆ ಅವರು ಬರೆದಿರುವ ಪರಿಚಯ ಪುಟದಲ್ಲಿ ‘‘ಕಲಿಕೆಯನ್ನು ಬಹಳಷ್ಟು ಇತರ ಅಭಿವೃದ್ಧಿ ಅಂಶಗಳ ಬೆಂಬಲದೊಂದಿಗೆ ನಡೆಯುವ ಪ್ರಕ್ರಿಯೆ ಎಂದು ಕಾಣಬೇಕೇ ಹೊರತು ಕೇವಲ ಶಾಲೆಗೆ ಪ್ರವೇಶಾತಿ ಎಂದು ನೋಡಬಾರದು’’ ಎಂದು ತಿಳಿಸುತ್ತಾರೆ. 

ಶಿಕ್ಷಣ ನೀತಿ ನಿರೂಪಕರು ಚಿಂತಿಸಬೇಕಾದ ಒಂದು ವಿಷಯವೆಂದರೆ ಭಾರತದಲ್ಲಿ ಎಲ್ಲರಿಗೂ ಶಾಲೆಯ ವ್ಯವಸ್ಥೆಯಿದೆ. ಆದರೆ ಕಲಿಯುವ ಅವಕಾಶ ಇರುವುದು ಕೆಲವರಿಗೆ ಮಾತ್ರ. ಇನ್ನೂ ನಿಖರವಾಗಿ ಹೇಳುವುದಾದರೆ ಕೇವಲ 50 ಶೇ. ವಿದ್ಯಾರ್ಥಿಗಳಿಗೆ ಮಾತ್ರ.

5ನೆ ತರಗತಿಯಲ್ಲಿ ಕಲಿಯುವ ಶೇ. 47.8 ಮಕ್ಕಳಷ್ಟೇ ಎರಡನೆ ತರಗತಿಯ ಪಠ್ಯಪುಸ್ತಕವನ್ನು ಓದಲು ಸಮರ್ಥರಾಗಿದ್ದಾರೆ ಮತ್ತು 8ನೆ ತರಗತಿಯ ಕೇವಲ 43.2ಶೆ. ವಿದ್ಯಾರ್ಥಿಗಳಷ್ಟೇ ಸರಳ ಭಾಗಾಕಾರಗಳನ್ನು ಮಾಡಲು ಶಕ್ತರಾಗಿದ್ದಾರೆ. ಬಹುತೇಕ ಸಂಪೂರ್ಣ ಸಾಕ್ಷರತೆಯನ್ನು ಹೊಂದಿದೆ ಎಂದು ಪೋಸು ನೀಡುವ ಭಾರತ ಕಲಿಕೆಯ ವಿಷಯದಲ್ಲಿ ಇಷ್ಟೊಂದು ಹಿಂದೆ ಬೀಳಲು ಹೇಗೆ ಸಾಧ್ಯ ಎಂದು ನೀವು ತಲೆ ಕೆರೆದುಕೊಳ್ಳಬಹುದು, ಆದರೆ ಶಿಕ್ಷಣ ಸ್ಥಿತಿಗತಿಯ ವಾರ್ಷಿಕ ವರದಿ (ಎಎಸ್‌ಇಆರ್) ಇದೇ ಅಂಶವನ್ನು ನಿಖರವಾಗಿ ತಿಳಿಸಿದೆ. ಶಿಕ್ಷಣ ಕ್ಷೇತ್ರದ ಸರಕಾರೇತರ ಸಂಸ್ಥೆ ‘ಪ್ರಥಮ್’ನಿಂದ 11ನೆ ವರ್ಷ ಸನ್ಮಾನ ಪಡೆಯುತ್ತಿರುವ ಎಎಸ್‌ಇಆರ್ ಒಂದು ಕೌಟುಂಬಿಕ ಸಮೀಕ್ಷೆಯಾಗಿದ್ದು ಮಕ್ಕಳ ಕಲಿಕೆಯ ಸ್ಥಿತಿಗತಿ ಬಗ್ಗೆ ಮತ್ತು ಅತ್ಯಂತ ಸರಳ ಪಠ್ಯಗಳನ್ನು ಓದುವ ಮತ್ತು ಮೂಲ ಅಂಕಗಣಿತವನ್ನು ಮಾಡುವ ಅವರ ಸಾಮರ್ಥ್ಯದ ಬಗ್ಗೆ ಅಂದಾಜನ್ನು ಒದಗಿಸುತ್ತದೆ. ಈ ಸಮೀಕ್ಷೆಯು ಭಾರತದ ಬಹುತೇಕ ಎಲ್ಲಾ ಗ್ರಾಮೀಣ ಜಿಲ್ಲೆಗಳಿಗೆ ತಲುಪುತ್ತದೆ ಮತ್ತು 3ರಿಂದ 16ರ ಒಳಗಿನ ಮಕ್ಕಳನ್ನು ಒಳಗೊಂಡಿರುತ್ತದೆ.

ಎಎಸ್‌ಇಆರ್ ಶಾಲಾ ಆಧಾರಿತ ಸಮೀಕ್ಷೆಯಲ್ಲದೆ ಮನೆಯಾಧಾರಿತ ಸಮೀಕ್ಷೆಯಾಗಿದೆ. ಹಾಗಾಗಿ ಶಾಲೆಗೆ ಹೋಗದ ಮಕ್ಕಳಿಂದ ಹಿಡಿದು ಶಾಲೆ ತೊರೆದಿರುವ ಮಕ್ಕಳವರೆಗೂ ಮತ್ತು ಸರಕಾರಿ ಶಾಲೆಗಳು, ಖಾಸಗಿ ಶಾಲೆಗಳು, ಧಾರ್ಮಿಕ ಶಾಲೆಗಳು ಮತ್ತು ಇತರ ಯಾವುದೇ ರೀತಿಯ ಶಾಲೆಯಲ್ಲಿ ಕಲಿಯುವ ಮಕ್ಕಳನ್ನು ಒಳಗೊಂಡಿರುತ್ತದೆ. ಹಾಗಾಗಿ ಅದು ಗ್ರಾಮೀಣ ಭಾರತದ ಎಲ್ಲಾ ಮಕ್ಕಳ ಮೂಲ ಕಲಿಕೆಯ ಅಂದಾಜನ್ನು ಗಳಿಸುತ್ತದೆ.

ಎಎಸ್‌ಇಆರ್ ಇಂದು ಭಾರತದಲ್ಲಿ ಮಕ್ಕಳ ಕಲಿಕಾ ಫಲಿತಾಂಶದ ಬಗ್ಗೆ ದೊರಕುವ ಮಾಹಿತಿಯ ಏಕಮಾತ್ರ ಮೂಲವಾಗಿದೆ. ಅದನ್ನು ದೇಶಾದ್ಯಂತ ಸುಮಾರು 500 ಸಂಸ್ಥೆಗಳ ಜತೆಗಾರಿಕೆಯಲ್ಲಿ ಮತ್ತು 25,000ಕ್ಕೂ ಅಧಿಕ ಕಾರ್ಯಕರ್ತರಿಂದ ನಡೆಸಲಾಗುತ್ತದೆ. 2016ರ ಎಎಸ್‌ಇಆರ್ ವರದಿಯಲ್ಲಿ 589 ಜಿಲ್ಲೆಗಳ 17,473 ಗ್ರಾಮಗಳ 5,62,305 ಮಕ್ಕಳ ಸಮೀಕ್ಷೆ ನಡೆಸಲಾಗಿದೆ.

ಚಿಂತೆಗೀಡುಮಾಡುವ ಅಂಕಿಅಂಶಗಳು

ವರದಿಯು ಒಂದು ಪ್ರಮುಖ ಸಮಸ್ಯೆಯತ್ತ ಬೊಟ್ಟು ಮಾಡುತ್ತದೆ. ಶಾಲಾ ದಾಖಲಾತಿ ಶೇ. 97 ತಲುಪಿದ್ದರೆ ಗುಣಮಟ್ಟದ ಕಲಿಕೆ ಮಾತ್ರ ತೀರಾ ಕೆಳಮಟ್ಟಕ್ಕೆ ತಲುಪಿದೆ. 2009ರಲ್ಲಿ ಎಎಸ್‌ಇಆರ್ ತನ್ನ ಮೊದಲ ವರದಿ ಸಲ್ಲಿಸಿದ ಸಮಯದಿಂದ ಸ್ಥಿತಿ ಬಹುತೇಕ ಬದಲಾವಣೆಯಾಗದೇ ಉಳಿದಿದೆ. ಹೇಗೆ?

ಇಲ್ಲಿ ಕೆಲವು ಅಂಕಿಅಂಶಗಳನ್ನು ನೀಡಲಾಗಿದೆ:

1. ಎರಡನೇ ತರಗತಿಯ ಪಠ್ಯಪುಸ್ತಕವನ್ನು ಓದಬಲ್ಲ ಐದನೆ ತರಗತಿಯಲ್ಲಿ ಕಲಿಯುವ ಮಕ್ಕಳ ಅನುಪಾತವು 2014ರ ಶೇ. 48.1ರಿಂದ 47.8ಕ್ಕೆ ತಲುಪಿದೆ.

2. ಮೂರಂಕೆಯ ಸಂಖ್ಯೆಯನ್ನು ಒಂದಂಕೆಯಿಂದ ಭಾಗಿಸಬಲ್ಲ ಗ್ರಾಮೀಣ ಪ್ರದೇಶಗಳಲ್ಲಿ 8ನೆ ತರಗತಿಯಲ್ಲಿ ಕಲಿಯುವ ಮಕ್ಕಳ ಅನುಪಾತವು 2014ರ ಶೇ. 44.2ರಿಂದ 2016ರಲ್ಲಿ ಶೇ. 43.2ಕ್ಕೆ ಕುಸಿದಿದೆ.

3. ಮೂರನೆ ತರಗತಿಯಲ್ಲಿ ಕೇವಲ ಶೇ. 32 ಮಕ್ಕಳು ಸರಳ ಇಂಗ್ಲಿಷ್ ಶಬ್ದವನ್ನು ಓದಬಲ್ಲರಾದರೆ ನಾಲ್ಕರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಇಂಗ್ಲಿಷ್ ವಾಕ್ಯವನ್ನು ಓದಬಲ್ಲರಾಗಿದ್ದಾರೆ.

4. ಮಹಾರಾಷ್ಟ್ರದಲ್ಲಿ 8ನೇ ತರಗತಿಯಲ್ಲಿ ಕಲಿಯುವ ಪ್ರತೀ ನಾಲ್ಕು ಮಕ್ಕಳಲ್ಲಿ ಒಬ್ಬನಿಗೆ ಎರಡನೆ ತರಗತಿಯ ಪಠ್ಯಪುಸ್ತಕವನ್ನು ಓದಲು ಕೂಡಾ ಬರುವುದಿಲ್ಲ.

5. 2016ರಲ್ಲಿ ಸರಕಾರಿ ಶಾಲೆಗಳಲ್ಲಿ ಮೂರನೆ ತರಗತಿಯಲ್ಲಿ (ಶೇ. 58.8) ಮತ್ತು ಖಾಸಗಿ ಶಾಲೆಗಳಲ್ಲಿ ಮೂರನೆ ತರಗತಿಯಲ್ಲಿ ಕಲಿಯುವ (ಶೇ. 61.2) ಅರ್ಧಕ್ಕಿಂತಲೂ ಅಧಿಕ ಮಕ್ಕಳಿಗೆ ಎರಡನೆ ತರಗತಿಯ ಪಾಠವನ್ನು ಓದಲು ಬರುವುದಿಲ್ಲ. 2014ರಲ್ಲಿ ಈ ಸಂಖ್ಯೆ ಕ್ರಮವಾಗಿ ಶೇ. 66.9 ಮತ್ತು ಶೇ. 63 ಆಗಿತ್ತು.

6. ಕನಿಷ್ಠ ಒಂದನೆ ತರಗತಿಯ ಪಠ್ಯವನ್ನು ಓದಬಲ್ಲ ಮೂರನೆ ತರಗತಿಯಲ್ಲಿ ಕಲಿಯುವ ಮಕ್ಕಳ ಪ್ರಮಾಣವು 2014ರಲ್ಲಿ ಶೇ. 40.2ಕ್ಕಿಂತ ಸ್ವಲ್ಪಏರಿಕೆಯಾಗಿ 2016ರಲ್ಲಿ ಶೇ. 42.5ಕ್ಕೆ ತಲುಪಿದೆ. ಪಂಜಾಬ್, ಉತ್ತರಾಖಂಡ, ಹರ್ಯಾಣ, ಚತ್ತೀಸ್‌ಗಡ, ಗುಜರಾತ್, ಮಹಾರಾಷ್ಟ್ರ ಮತ್ತು ತೆಲಂಗಾಣದಂತಹ ರಾಜ್ಯಗಳ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲಿ ಈ ಪ್ರಮಾಣದಲ್ಲಿ ಹೆಚ್ಚು ಏರಿಕೆ ಕಂಡಿದೆ. ವರದಿಯ ಪ್ರಕಾರ ಈ ರಾಜ್ಯಗಳ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದಲ್ಲಿ ಆಗಿರುವ ಏರಿಕೆಯಿಂದಾಗಿ ಈ ಬೆಳವಣಿಗೆ ಕಂಡಿದೆ.

7. 2014ರಲ್ಲಿ ಮೂರನೆ ತರಗತಿಯಲ್ಲಿ ಕಲಿಯುವ ಶೇ. 25.4 ಮಕ್ಕಳು ಅಂಕಗಣಿತದಲ್ಲಿ ಎರಡಂಕೆಯ ವ್ಯವಕಲನ ಮಾಡಲು ಸಮರ್ಥರಾಗಿದ್ದರು. 2016ರಲ್ಲಿ ಈ ಪ್ರಮಾಣ 2016ರಲ್ಲಿ ಶೇ. 27.7 ಏರಿಕೆ ಕಂಡಿದೆ. ಈ ಏರಿಕೆಯೂ ಸರಕಾರಿ ಶಾಲೆಗಳಲ್ಲೇ ಉಂಟಾಗಿದ್ದು 2014ರಲ್ಲಿ ಮೂರನೆ ತರಗತಿಯಲ್ಲಿ ಕಲಿಯುವ ಶೇ.17.2 ಮಕ್ಕಳು ಎರಡಂಕೆಯ ವ್ಯವಕಲನ ಮಾಡಬಲ್ಲರಾಗಿದ್ದರೆ 2016ರಲ್ಲಿ ಈ ಪ್ರಮಾಣ ಶೇ. 20.2 ವರದಿಯು ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಿಗಿಂತ ಹೆಚ್ಚಿನ ಬೆಳವಣಿಗೆ ಕಂಡಿರುವುದನ್ನು ಸೂಚಿಸುತ್ತದೆ.

8. 2016ಕ್ಕೆ ಹೋಲಿಸಿದರೆ 2009ರಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಿರುವುದು ಅಂಕಿಅಂಶಗಳು ಸೂಚಿಸುತ್ತವೆ. 2009ರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಶೇ. 74.3 ಹಾಜರಾತಿಯಿತ್ತು. 2016ರಲ್ಲಿ ಈ ಪ್ರಮಾಣ ಶೇ. 71.4 ಆಗಿತ್ತು. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಪ್ರಮಾಣ 2009ರಲ್ಲಿ ಶೇ. 77 ಆಗಿದ್ದರೆ 2016ರಲ್ಲಿ ಶೇ. 73.2 ಆಗಿದೆ. 9. ಉತ್ತರ ಪ್ರದೇಶದಲ್ಲಿ ಅತೀಹೆಚ್ಚು ಅಂದರೆ ಶೇ. 9.9 ಹೆಣ್ಮಕ್ಕಳು ಶಾಲೆಯಿಂದ ಹೊರಗಿದ್ದರೆ ರಾಜಸ್ಥಾನದಲ್ಲಿ ಈ ಪ್ರಮಾಣ ಶೇ. 9.7 ಆಗಿದೆ.

2005ರ ಎಎಸ್‌ಇಆರ್ ವರದಿಯು ಆಘಾತಕಾರಿಯಾಗಿತ್ತು. ಯಾಕೆಂದರೆ ಅದೇ ಮೊದಲ ಬಾರಿ ಭಾರತದ ಶಾಲೆಗಳಲ್ಲಿನ ಕಳಪೆ ಕಲಿಕಾ ಗುಣಮಟ್ಟವನ್ನು ಪ್ರಮಾಣೀಕರಿಸಲಾಗಿತ್ತು. ಸರಕಾರಿ ಶಾಲೆಗಳಲ್ಲಿ ಐದನೆ ತರಗತಿಯಲ್ಲಿ ಕಲಿಯುವ ಕೇವಲ ಶೇ. 51 ಮಕ್ಕಳು ಮಾತ್ರ ಎರಡನೆ ತರಗತಿಯ ಪಾಠವನ್ನು ಓದಬಲ್ಲರು ಎಂಬುದನ್ನು ಅದೇ ಮೊದಲ ಬಾರಿ ವರದಿಯೊಂದು ತಿಳಿಸಿತ್ತು.

ಆದರೆ ಎಎಸ್‌ಇಆರ್ ಆರಂಭವಾಗಿ ಹನ್ನೊಂದು ವರ್ಷಗಳು ಕಳೆದ ನಂತರ ಶಿಕ್ಷಣದ ಹಕ್ಕು (ಆರ್ಟಿಇ) ಆರಂಭವಾಗಿ ಎಂಟು ವರ್ಷಗಳ ನಂತರ ಈಗಲೂ ಭಾರತ ಕಲಿಕೆಯ ವಿಷಯದಲ್ಲಿ ಮಾಡಿರುವ ಅಭಿವೃದ್ಧಿ ಮಾತ್ರ ಚಿಂತಾಜನಕವೇ ಆಗಿದೆ.

ಎಲ್ಲಿ ತಪ್ಪಾಗುತ್ತಿದೆ?

ದಾಖಲಾತಿ ಎಂದ ಮಾತ್ರಕ್ಕೆ ಕಲಿಕೆಯೆಂದು ಅರ್ಥವಲ್ಲ. ‘ಪ್ರಥಮ್’ನ ರುಕ್ಮಿಣಿ ಬ್ಯಾನರ್ಜಿ ಪ್ರಕಾರ ಹಾಜರಾತಿ ಹೆಚ್ಚಿನ ಸೂಚನೆ ನೀಡುತ್ತದೆ. ಎಎಸ್‌ಇಆರ್‌ನ ನಿರ್ದೇಶಕರಾದ ವಿಲಿಮಾ ವಾದ್ವಾ ಕಲಿಕೆಯ ಸಮಸ್ಯೆಯ ಬಗ್ಗೆ ಹೆಚ್ಚಿನ ಉಲ್ಲೇಖವನ್ನು ಮಾಡುತ್ತಾರೆ. ‘ಸ್ಕೂಲ್ ಮ್ಯಾಟರ್ಸ್’ ಎಂಬ ವರದಿಗೆ ಅವರು ಬರೆದಿರುವ ಪರಿಚಯ ಪುಟದಲ್ಲಿ ‘‘ಕಲಿಕೆಯನ್ನು ಬಹಳಷ್ಟು ಇತರ ಅಭಿವೃದ್ಧಿ ಅಂಶಗಳ ಬೆಂಬಲದೊಂದಿಗೆ ನಡೆಯುವ ಪ್ರಕ್ರಿಯೆ ಎಂದು ಕಾಣಬೇಕೇ ಹೊರತು ಕೇವಲ ಶಾಲೆಗೆ ಪ್ರವೇಶಾತಿ ಎಂದು ನೋಡಬಾರದು’’ ಎಂದು ತಿಳಿಸುತ್ತಾರೆ. ‘‘ಒಂದು ಖಾಯಂ ಮನೆಯಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬಳ ಓದುವ ಸಾಮರ್ಥ್ಯ, ಉದಾಹರಣೆಗೆ, ಶೇ.3 4.8 ಇದ್ದಿದ್ದು 41.7ಕ್ಕೇರುತ್ತದೆ. ತನ್ನ ಸುತ್ತಮುತ್ತಲ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ತಿಳಿಯಲು ಆಕೆಗೊಂದು ಟಿವಿಯನ್ನು ಒದಗಿಸಿದಾಗ ಆಕೆ ಓದುವ ಸಾಧ್ಯತೆ ಶೇ.49.9ಕ್ಕೆ ಏರುತ್ತದೆ. ಶಾಲೆ ಕಲಿತಿರುವ ತಾಯಿ ಆಕೆಗಿದ್ದರೆ ಆ ಪ್ರಮಾಣ ಶೇ.57.4 ಆಗುತ್ತದೆ. ಕೇವಲ ಇಷ್ಟು ಮೂಲ ಲಾಭಗಳಿಂದಲೇ ಆಕೆ ಒಂದು ಸರಾಸರಿ ಖಾಸಗಿ ಶಾಲಾ ಮಟ್ಟವನ್ನು ತಲುಪುತ್ತಾಳೆ. ಇನ್ನು ಆಕೆಯ ತಾಯಿ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳನ್ನು ಓದುತ್ತಾಳೆಯಾದರೆ, ಆಕೆಯ ಓದುವ ಸಾಮರ್ಥ್ಯ ಶೇ. 62.2ಕ್ಕೇರುವ ಮೂಲಕ ಆಕೆ ಖಾಸಗಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗಿಂತಲೂ ಉತ್ತಮ ನಿರ್ವಹಣೆ ತೋರುತ್ತಾಳೆ’’ ಎಂದು ವಿಲಿಮಾ ತಿಳಿಸುತ್ತಾರೆ. ಬಹಳಷ್ಟು ಹೆತ್ತವರು ಮತ್ತು ನೀತಿ ನಿರೂಪಕರು ಶಾಲೆಗೆ ಹೋದರೆ ಕಲಿತಂತೆ ಎಂದು ಭಾವಿಸಿದ್ದಾರೆ. ಆದರೆ 10ಕ್ಕೂ ಅಧಿಕ ವರ್ಷಗಳ ಎಎಸ್‌ಇಆರ್ ಅಂಕಿಅಂಶಗಳು ಕಲಿಕೆಯ ಸಮಸ್ಯೆಗೆ ತುರ್ತು ಮತ್ತು ನೇರ ಎಚ್ಚರಿಕೆಯ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಶಕ್ತಿಯನ್ನು ಶಾಲೆಗಳನ್ನು ಕಟ್ಟುವುದಕ್ಕಿಂದ ಕಲಿಕೆಯ ವಾತಾವರಣವನ್ನು ಪೋಷಿಸಲು ಬಳಸಬೇಕಿದೆ.

ಕೃಪೆ: catchnews.com

share
ಶ್ರಿಯಾ ಮೋಹನ್
ಶ್ರಿಯಾ ಮೋಹನ್
Next Story
X