ರಂಗಮನೆಯಲ್ಲಿ ರಾಜ್ಯ ಮಟ್ಟದ ರಂಗ ಸಂಭ್ರಮಕ್ಕೆ ಚಾಲನೆ
ದಿನೇಶ್ ಕುಕ್ಕುಜಡ್ಕ, ಗಿರೀಶ್ ಭಾರದ್ವಾಜ್‌ರಿಗೆ ಅಭಿನಂದನೆ

ಸುಳ್ಯ,ಫೆ.5: ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ ರಂಗ ಸಂಭ್ರಮ ಆರಂಭಗೊಂಡಿದೆ.
ಖ್ಯಾತ ರಂಗ ನಿರ್ದೇಶಕ ಪ್ರಸನ್ನ ಹೆಗ್ಗೋಡು ರಂಗ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಂತ್ರ ಪ್ರಣೀತ ಸಮೂಹ, ಯಂತ್ರ ಪ್ರಣೀತ ಸಂಸ್ಕೃತಿ, ಯಂತ್ರ ಪ್ರಣೀತ ಆರ್ಥಿಕತೆ ಇಡೀ ಬದುಕನ್ನು ನಾಶ ಮಾಡಲು ಹೊರಟಿದೆ. ಸುಲಭತಡಯ ಅಪಾಯವನ್ನು ನಾವು ಅರಿತಿಲ್ಲ. ಸಹಜವಾಗಿ ದೊರೆಯುವ ಶಕ್ತಿಯಿಂದ ಮಾತ್ರ ಸಮಾಜ ಬೆಳಗುತ್ತದೆ ಎಂಬ ಎಚ್ಚರ ನಮಗೆ ಬೇಕು. ಅದಕ್ಕಾಗಿ ಇಂತಹ ಸಾಂಸ್ಕೃತಿಕ ಕ್ರಾಂತಿಗಳು ಹೆಚ್ಚಬೇಕೆಂದು ಅವರು ಹೇಳಿದರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಆತ್ಮ ವಂಚನೆಯ ಬದುಕು ವಿಜೃಂಭಿಸಿರುವ ಇಂದಿನ ಕಾಲದಲ್ಲಿ ಕಲೆ ಸಂಸ್ಕೃತಿಯ ಮೂಲಕ ನೈಜ ಬದುಕು ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಅತಿಥಿಗಳಾಗಿ ಮಾತನಾಡಿ ರಂಗಮನೆ ನಾಡಿನ ಸಾಂಸ್ಕೃತಿಕ ಶಕ್ತಿ ಕೇಂದ್ರ ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಖ್ಯಾತ ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕರವರನ್ನು ಸನ್ಮಾನಿಸಲಾಯಿತು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಗಿರೀಶ್ ಭಾರದ್ವಾಜ್‌ರವರನ್ನು ಅಭಿನಂದಿಸಲಾಯಿತು. ರಂಗಮನೆಯ ಅಧ್ಯಕ್ಷ ಜೀವನ್ ರಾಂ ಸುಳ್ಯ ಸ್ವಾಗತಿಸಿದರು. ಮೌಲ್ಯ ಜೀವನ್ ಸನ್ಮಾನ ಪತ್ರ ವಾಚಿಸಿದರು. ಡಾ.ಸುಂದರ್ ಕೇನಾಜೆ ವಂದಿಸಿದರು. ಡಾ.ವೀಣಾ ಕಾರ್ಯಕ್ರಮ ನಿರೂಪಿಸಿದರು. ಸುಜನಾ ಸುಳ್ಯ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಗಾನ ನೃತ್ಯ ಅಕಾಡೆಮಿ ಸುಳ್ಯ ಶಾಖೆ ವತಿಯಿಂದ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ನೃತ್ಯ ಸಂಗಮ ನಡೆಯಿತು. ಬಳಿಕ ವಿದ್ಯಾಶ್ರೀ ರಾಧಾಕೃಷ್ಣ ರಿಮದ ಪ್ರೋ ಅಮೃತ ಸೋಮೇಶ್ವರ ವಿರಚಿತ ಜ್ವಾಲಾಮುಖಿ ಅಂಬೆ ಯೆಂಬ ನೃತ್ಯ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಲಿಕ ಪ್ರಸನ್ನ ಹೆಗ್ಗೋಡು ರಚಿಸಿ ನಿರ್ದೇಶಿಸಿದ ಹಿಂದೂ ಸ್ವರಾಜ್ ಕೃತಿ ಆಧಾರಿತ ಸ್ವರಾಜ್ಯದಾಟ ನಾಟಕ ಪ್ರದರ್ಶನ ಗೊಂಡಿತು.







