Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕ್ರೀಡೆ, ಪ್ರಶಸ್ತಿಗಳು ಮತ್ತು ರಾಜಕೀಯ

ಕ್ರೀಡೆ, ಪ್ರಶಸ್ತಿಗಳು ಮತ್ತು ರಾಜಕೀಯ

ಕೆ. ಶಾರದಾ ಭಟ್ಕೆ. ಶಾರದಾ ಭಟ್8 Feb 2017 6:13 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕ್ರೀಡೆ, ಪ್ರಶಸ್ತಿಗಳು ಮತ್ತು ರಾಜಕೀಯ

ಸಚಿನ್ ತೆಂಡೂಲ್ಕರ್‌ಗೆ ಭಾರತ ರತ್ನ ನೀಡುವ ಮೊದಲೇ ಅದನ್ನು ಧ್ಯಾನ್‌ಚಂದ್‌ಗೆ ನೀಡುವ ಕುರಿತು ಮಾತುಕತೆಯೂ ಸ್ಪೋರ್ಟ್ಸ್ ಕಮಿಟಿಯಲ್ಲಿ ನಡೆದಿತ್ತು. ಆದರೆ ಸ್ಪೋರ್ಟ್ಸ್ ಕಮಿಟಿಯ ಶಿಫಾರಸುಗಳನ್ನು ಕಾಂಗ್ರೆಸ್ ನೇತೃತ್ವದ ಪ್ರಧಾನಮಂತ್ರಿಯ ಕಾರ್ಯಾಲಯ ತಳ್ಳಿಹಾಕಿತ್ತು. ಇದಕ್ಕೆ ಶರದ್ ಪವಾರ್ ಅವರ ವೋಟ್‌ಬ್ಯಾಂಕ್ ರಾಜಕೀಯ ಹಿತಾಸಕ್ತಿ ಕೂಡಾ ಅಡ್ಡಗಾಲು ಹಾಕಿತು ಎಂಬುದು ನಿರ್ವಿವಾದ. ಇದನ್ನು ಪ್ರತಿಭಟಿಸಿ ಕೆಲವು ಹಿರಿಯ ಹಾಕಿ ಆಟಗಾರರು ದಿಲ್ಲಿಯ ಜಂತರ್ ಮಂತರ್ ಎದುರು ಧರಣಿ ನಡೆಸಿದ್ದೂ ಇದೆ.

ಮುಂಬರುವ 32ನೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದವರಿಗೆ ಕ್ರಮವಾಗಿ 5, 3 ಮತ್ತು 2 ಕೋಟಿ ರೂಪಾಯಿಗಳ ನಗದು ಪುರಸ್ಕಾರವನ್ನು ಕರ್ನಾಟಕದ ಮುಖ್ಯಮಂತ್ರಿ ಇತ್ತೀಚೆಗೆ ಘೋಷಿಸಿರುವುದು ಕ್ರೀಡೆ ಕುರಿತು ಅವರು ತಳೆದ ಸಕಾರಾತ್ಮಕ ನಿಲುವನ್ನು ಬಿಂಬಿಸುತ್ತದೆ. ಉತ್ತರದ ಹರ್ಯಾಣ ರಾಜ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಿ, ಅಲ್ಲಿ ತರಬೇತಿಗೊಳ್ಳಲು ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಮಾಸಿಕ ತಲಾ 2,000 ರೂಪಾಯಿಗಳ ಗೌರವಧನ ಘೋಷಿಸಿರುವುದು ಒಂದು ಉತ್ತಮ ಹೆಜ್ಜೆ. ಕ್ರೀಡೆ ಬೆಳೆಯಲು ಪೂರಕವಾದ ವಾತಾವರಣ ನಮ್ಮ ದೇಶದಲ್ಲಿ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿರುವಾಗ ಮೇಲಿನ ಘಟನೆಗಳು ಕ್ರೀಡೆಯ ಕುರಿತು ಭರವಸೆ ಮೂಡಿಸುವ ವಿಚಾರ. ಕ್ರೀಡೆಯ ಕುರಿತಾಗಿ ನಮ್ಮ ರಾಜಕಾರಣಿಗಳು ಆಸಕ್ತಿ ವಹಿಸುವುದು ಒಂದು ಆಶಾದಾಯಕ ನಡೆ.

125 ಕೋಟಿಗೂ ಮಿಕ್ಕಿ ಜನಸಂಖ್ಯೆ ಇರುವ ನಮ್ಮ ದೇಶದಿಂದ ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ 117 ಕ್ರೀಡಾಪಟುಗಳಲ್ಲಿ ಪದಕ ತಂದವರು ಕೇವಲ ಇಬ್ಬರು ಮಾತ್ರ. ಹೀಗೆ ಪದಕ ಗಳಿಸಿದ ಇಬ್ಬರೂ ಮಹಿಳೆಯರು ಎಂಬುದು ಗಮನಿಸತಕ್ಕ ವಿಚಾರ. ಬ್ಯಾಡ್‌ಮಿಂಟನ್ ಆಟಗಾರ್ತಿ ತೆಲಂಗಾಣದ ಪಿ.ವಿ.ಸಿಂಧು ಬೆಳ್ಳಿ ಪದಕ ತಂದರೆ, ಹರ್ಯಾಣದ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಕಂಚು ಗಳಿಸಿದರು. ಭಾರತದ ಮಟ್ಟಿಗೆ ಅದೇ ಸಾಧನೆಯೆಂಬಂತೆ ಈ ಕ್ರೀಡಾ ಪಟುಗಳ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗುವುದರ ಜೊತೆ ಪುರಸ್ಕಾರ ರೂಪದಲ್ಲಿ ಸಾಕಷ್ಟು ಹಣ ಅವರಿಗೆ ಸಂದಾಯವಾಯಿತು. ಆಂಧ್ರಪ್ರದೇಶ ಸರಕಾರ ಸಿಂಧುಗೆ 3 ಕೋಟಿ ರೂಪಾಯಿಗಳ ಪುರಸ್ಕಾರ ಘೋಷಿಸಿದರೆ, ತೆಲಂಗಾಣದ ಸರಕಾರ ತಾನೇನೂ ಕಮ್ಮಿ ಇಲ್ಲವೆನ್ನುವಂತೆ 5 ಕೋಟಿ ರೂಪಾಯಿ ನೀಡಿ ಬೀಗಿತ್ತು. ಮೊನ್ನೆ ನಡೆದ ಗಣರಾಜ್ಯೋತ್ಸವದಲ್ಲಿ ದೀಪಾ ಕರ್ಮಾಕರ್‌ಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು ಸಮಾಧಾನಕರ ಅಂಶ. ಉಳಿದ ಕೆಲವು ರಾಜ್ಯಗಳೂ ನಗದು ಪುರಸ್ಕಾರ ಘೋಷಿಸಿದವು. ವಾಹನ ತಯಾರಿಕಾ ಕಂಪೆನಿಯೊಂದು ಸಿಂಧುವಿಗೆ ಬಿಎಮ್‌ಡಬ್ಲೂ ವಾಹನ ನೀಡಿ ಪುರಸ್ಕರಿಸಿದರೆ ಜಾಹೀರಾತು ಕಂಪೆನಿಯೊಂದು ಆಕೆಯನ್ನು ಬ್ರಾಂಡ್ ಅಂಬಾಸಿಡರ್ ಮಾಡಿ ಗೌರವಿಸಿತು. ನಾಲ್ಕನೆಯ ಸ್ಥಾನ ಪಡೆದ ಒಲಿಂಪಿಯನ್ ತ್ರಿಪುರಾದ ದೀಪಾ ಕರ್ಮಾಕರ್‌ಗೂ ಬಿಎಮ್‌ಡಬ್ಲೂ ವಾಹನ ಸಿಕ್ಕಿತು. ಪೋಲ್‌ವಾಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳೆ ಆಕೆ. ಸಾಕ್ಷಿ ಮಲ್ಲಿಕ್‌ಗೂ ಇದೇ ರೀತಿ ಗೌರವ ಪುರಸ್ಕಾರಗಳು ದಕ್ಕಿದವು. ಸಿಂಧು ಸಾಧನೆಗೆ ಕಾರಣಕರ್ತರಾದ ಪುಲ್ಲೇಲ ಗೋಪಿಚಂದ್ ಹೆಸರು ಈ ಎಲ್ಲ ಭರಾಟೆಗಳ ಮಧ್ಯ ಯಾರಿಗೂ ನೆನಪಿಗೆ ಬರಲೇ ಇಲ್ಲ. ಒಲಿಂಪಿಕ್ಸ್ ಬೆನ್ನಲ್ಲೇ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 19 ಕ್ರೀಡಾಪಟುಗಳು ಭಾಗವಹಿಸಿ 2 ಚಿನ್ನದ ಪದಕ ಸಹಿತ ಒಟ್ಟು 4 ಪದಕ ತಂದರೂ ಜಾಸ್ತಿ ಸುದ್ದಿಯಾಗಲಿಲ್ಲ. ಮಾಧ್ಯಮಗಳು ಒಂದಿಷ್ಟು ಪ್ರಚಾರ ನೀಡಿದ್ದು ಬಿಟ್ಟರೆ ಉಳಿದ ವಿಚಾರಗಳಲ್ಲಿ ಅವರಿಗೆ ದಕ್ಕಿದ್ದು ಅಷ್ಟಕಷ್ಟೇ. ಇಲ್ಲಿ ಒಂದು ಮಾತನ್ನು ಹೇಳಬೇಕು. ಮೊನ್ನೆ ಮೊನ್ನೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾಭಿವೃದ್ಧಿಗಾಗಿಯೇ ಇರುವ ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆ ಮುಂಬರುವ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ತರಬೇತಾದ ನಮ್ಮ ಕ್ರೀಡಾಪಟುಗಳನ್ನು ಕಳಿಸುವ ಕುರಿತಾಗಿ ಚರ್ಚಿಸಲು ಒಂದು ಕಾರ್ಯಕ್ರಮ ಏರ್ಪಡಿಸಿತ್ತು. ಇದರಲ್ಲಿ ಸಂಸ್ಥೆಯ ಅಧ್ಯಕ್ಷ ರಾಜೇಶ್ ಪಾಂಡೆ ಹಾಗೂ ಬೇರೆ ಬೇರೆ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದರು. ಈ ಕಾರ್ಯಕ್ರಮ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದು ಮುಂಬರುವ ಒಲಿಂಪಿಕ್ಸ್ ನಲ್ಲಿ ನಮ್ಮ ದೇಶದಿಂದ ಕಳಿಸಲ್ಪಡುವ ಕ್ರೀಡಾಳುಗಳ ಕುರಿತು ಚರ್ಚೆ ನಡೆದದ್ದು ಒಂದು ಆಶಾದಾಯಕ ಬೆಳವಣಿಗೆ ಎನ್ನಬಹುದು.

ಕ್ರೀಡೆಗಳ ವಿಚಾರಕ್ಕೆ ಬಂದರೆ ನಮ್ಮ ದೇಸಿ ಕ್ರೀಡೆಗಳನ್ನು ಹಿಂದಿಕ್ಕಿ ವಿದೇಶೀಯರು ಈ ದೇಶಕ್ಕೆ ಪರಿಚಯಿಸಿದ ಕ್ರೀಡೆ ಕ್ರಿಕೆಟ್ ರಾಜನಾಗಿ ಮೆರೆಯುತ್ತಿದೆ. ಕ್ರಿಕೆಟ್ ಕುರಿತು ಜನರಿಗಿರುವ ಮೋಹವೇ ಇದನ್ನು ಅಗ್ರಸ್ಥಾನಕ್ಕೇರಿಸಿದ ಕಾರಣದಿಂದಾಗಿಯೇ ಇದು ಇಂದು ದೇಶದ ‘ನಂಬರ್ ಒನ್’ ಕ್ರೀಡೆಯಾಗಿ ಪರಿಗಣಿಸಲ್ಪಟ್ಟಿದೆ. ನಮ್ಮ ಕ್ರಿಕೆಟ್ ಆಟಗಾರರು ತಾವು ಶ್ರೀಮಂತರಾಗುವುದರ ಜೊತೆಗೆ ಕ್ರೀಡಾ ಸಂಸ್ಥೆಯನ್ನೂ ಶ್ರೀಮಂತಗೊಳಿಸಿದ್ದಾರೆ. ಈ ಕಾರಣದಿಂದಾಗಿಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ಒಂದು ಸಂಪದ್ಭರಿತ ಸಂಸ್ಥೆಯಾಗಿದ್ದು ಇದನ್ನು ಅನೇಕ ವಿವಾದಗಳು ಸುತ್ತುವರಿದಿವೆ. ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿನ ಅಕ್ರಮಗಳನ್ನು ಸರಿಪಡಿಸಲು ಸರ್ವೋಚ್ಚ ನ್ಯಾಯಾಲಯ ಕೆಲವು ಕಟ್ಟುನಿಟ್ಟಾದ ಮಾರ್ಗದರ್ಶಿ ಸೂತ್ರ ಸೂಚಿಸಿರುವುದು ಬಿಸಿಸಿಐ ಸಹಿತ ರಾಜ್ಯಗಳ ಎಲ್ಲಾ ಕ್ರಿಕೆಟ್ ಆಡಳಿತ ಸಂಸ್ಥೆಗಳ ಪದಾಧಿಕಾರಿಗಳ ಗಂಟಲಿನಲ್ಲಿ ಬಿಸಿ ತುಪ್ಪದಂತಾಗಿದೆ.

ಕ್ರಿಕೆಟ್ ಎಂದೊಡನೆ ನಮಗೆ ತಟ್ಟನೆ ನೆನಪಾಗುವ ಹೆಸರು ಸಚಿನ್ ತೆಂಡೂಲ್ಕರ್ ಅವರದು. ಕ್ರಿಕೆಟ್ ಪಂದ್ಯಗಳಿಂದ ಗಳಿಸಿದ ಹಣವಲ್ಲದೆ ಪ್ರಸಿದ್ಧ ಜಾಹೀರಾತು ಕಂಪೆನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ಕೂಡಾ ಇವರು ಗಳಿಸಿದ ಸಂಪತ್ತನ್ನು ಕೋಟಿಗಟ್ಟಲೇ ಎಣಿಸಬೇಕು. ಇತ್ತೀಚಿನ 3-4 ವರ್ಷಗಳ ಹಿಂದೆ ಕ್ರಿಕೆಟಿಗೆ ವಿದಾಯ ಹೇಳಿದ ಇವರನ್ನು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ‘ಭಾರತ ರತ್ನ’ ಅರಸಿ ಬಂತು. ಜೊತೆಗೆ ರಾಜ್ಯಸಭಾ ಸದಸ್ಯತನದ ಗೌರವವೂ ದಕ್ಕಿತು. ಇವರಿಗೆ ಎಲ್ಲಾ ಗೌರವ ಸಿಕ್ಕಲು ಕಾರಣವಾದವರು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು. ಅವರ ರಾಜಕೀಯ ಹಿತಾಸಕ್ತಿ ಇಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗಿದೆ. ಕ್ರಿಕೆಟ್‌ನಲ್ಲಿ ಒಳಸ್ತರದ ರಾಜಕೀಯ ಕೆಲವರನ್ನು ಕಡೆಗಣಿಸಿದೆ ಎಂಬುದಕ್ಕೆ ಒಂದು ಉದಾಹರಣೆ ಇತ್ತೀಚೆಗೆ ಕಾನ್ಪುರದಲ್ಲಿ ನಡೆದ 500 ಟೆಸ್ಟ್ ಪಂದ್ಯದ ಸಂಭ್ರಮಾಚರಣೆಯಲ್ಲಿ ತಂಡಗಳ ಮಾಜಿ ನಾಯಕರನ್ನು ವೇದಿಕೆಯಲ್ಲಿ ಸತ್ಕರಿಸಿದ ಸಂದರ್ಭ. ಆಗ ಕ್ರಿಕೆಟ್ ಲೋಕದ ‘ಜಂಟಲ್ ಮೆನ್’ ಎಂದೇ ಖ್ಯಾತರಾಗಿದ್ದ ಕರ್ನಾಟಕದ ಜಿ.ಆರ್.ವಿಶ್ವನಾಥ ಅವರನ್ನು ಯಾರೂ ನೆನಪಿಸಿಕೊಳ್ಳಲೇ ಇಲ್ಲ. ಒಮ್ಮೆ ಎದುರಾಳಿ ತಂಡದ ಬ್ಯಾಟ್ಸ್‌ಮನ್ ಒಬ್ಬರು ಅಂಪೈರ್‌ನ ತಪ್ಪು ನಿರ್ಧಾರದಿಂದ ಔಟೆಂದು ಘೋಷಿಸಲ್ಪಟ್ಟು ಪೆವಿಲಿಯನ್ ಕಡೆಗೆ ಹೋಗುತ್ತಿದ್ದಾಗ ಅವರನ್ನು ವಾಪಸು ಕರೆದು ಪುನಃ ಬ್ಯಾಟಿಂಗ್ ಮಾಡಲು ಹೇಳಿದ ವಿಶ್ವನಾಥ ಅವರ ಕ್ರೀಡಾ ಮನೋಭಾವ ಆಗ ಎಲ್ಲರ ಪ್ರಶಂಸೆಗೂ ಪಾತ್ರವಾಗಿತ್ತು. ಅಂದು ಕರ್ನಾಟಕದ ಹೆಮ್ಮೆಯಾಗಿದ್ದ ವಿಶ್ವನಾಥ ಅವರನ್ನು ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕರೆದು ಸತ್ಕರಿಸಬೇಕೆಂದು ಯಾರಿಗೂ ಅನಿಸದಿದ್ದುದು ಅಚ್ಚರಿಯ ಸಂಗತಿ. ಯಾವುದೇ ಕ್ಷೇತ್ರದಲ್ಲಿ ಗಾಡ್‌ಫಾದರ್ ಇದ್ದವರಷ್ಟೇ ಖ್ಯಾತಿಗಳಿಸುತ್ತಾರೆ. ಇದು ಎಲ್ಲ ಕ್ಷೇತ್ರಗಳಿಗೂ ಸಲ್ಲುವ ಮಾತು. ಇಲ್ಲಿ ಕರ್ನಾಟಕದ ಕ್ರಿಕೆಟ್ ಪ್ರತಿಭೆ ರಾಹುಲ್ ದ್ರಾವಿಡ್ ಅವರನ್ನೂ ನೆನಪಿಸಿಕೊಳ್ಳಬೇಕು. ಪ್ರಶಸ್ತಿ, ಬಿರುದು ಬಾವಲಿಗಳಿಗಾಗಿ ಎಲ್ಲರೂ ಹಪಹಪಿಸುತ್ತಿರುವ ಇಂದಿನ ದಿನಗಳಲ್ಲಿ ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ನೀಡುವಂತಿದ್ದ ಡಾಕ್ಟರೇಟ್ ಅನ್ನು ಅವರು ಸ್ವೀಕರಿಸಲಿಲ್ಲ. ಕ್ರಿಕೆಟ್‌ಗೆ ಅವರು ನೀಡಿದ್ದು ಅಪಾರ. ಇದನ್ನು ಪರಿಗಣಿಸಿಯೇ ಅವರ ಹೆಸರನ್ನು ಗೌರವ ಡಾಕ್ಟರೇಟ್‌ಗೆ ಪರಿಗಣಿಸಲಾಗಿತ್ತು. ತಾನು ಕ್ರಿಕೆಟ್‌ನಲ್ಲಿ ಸಾಕಷ್ಟು ಸಂಶೋಧನೆ ಮಾಡಿಯೇ ಡಾಕ್ಟರೇಟ್ ಪಡೆದುಕೊಳ್ಳುವುದಾಗಿ ಹೇಳಿದ ಅವರ ನಡೆಗೆ ಎಂತಹ ಘನಸ್ತಿಕೆ ಇದೆ ಅಲ್ಲವೇ?

ಕ್ರಿಕೆಟ್ ನಂತರ ಭಾರತಕ್ಕೆ ಹೆಚ್ಚಿನ ಖ್ಯಾತಿ ತಂದದ್ದು ಹಾಕಿ ಕ್ರೀಡೆ ಎಂಬುದು ನಿರ್ವಿವಾದ. ಹಾಕಿ ಎಂದೊಡನೆ ನಮಗೆ ನೆನಪಾಗುವ ಹೆಸರು ‘ಹಾಕಿ ಮಾಂತ್ರಿಕ’ ಎಂದೇ ಜನಜನಿತರಾದ ಧ್ಯಾನ್ ಚಂದ್ ಅವರದು.

ಹಾಕಿಯನ್ನೇ ಜೀವದ ಉಸಿರು ಮಾಡಿಕೊಂಡಿದ್ದ ಅವರಿಂದ ಈ ಕ್ರೀಡೆ ಗಳಿಸಿದ್ದು ಅಪಾರ. 1928ರಿಂದ 1956ರ ನಡುವಿನ ಅವಧಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿಯಲ್ಲಿ 6 ಚಿನ್ನದ ಪದಕಗಳನ್ನು ಗೆದ್ದಿದ್ದರೆ ಅದರಲ್ಲಿ ಇವರ ಕೊಡುಗೆ ಗಣನೀಯ. ಅದು 1936ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಸಂದರ್ಭ. ಇವರ ಆಟದ ವೈಖರಿ ನೋಡಲು ತನ್ನ ಕೈಕೆಳಗಿನ ಉನ್ನತ ಅಧಿಕಾರಿಗಳೊಡನೆ ಕ್ರೀಡಾಂಗಣದಲ್ಲಿ ಹಿಟ್ಲರ್ ಉಪಸ್ಥಿತಿ ಇದ್ದುದು ಅಚ್ಚರಿಯ ಸಂಗತಿ. ಕ್ರೀಡಾಂಗಣದಲ್ಲಿ ಭಾರತದಿಂದ ಬರೋಡಾದ ಮಹಾರಾಜರೂ ತನ್ನ ಸ್ನೇಹಿತ ಗಡಣದೊಂದಿಗೆ ಧ್ಯಾನ್‌ಚಂದ್‌ರ ಆಟದ ವೀಕ್ಷಣೆಗೆ ಹೋಗಿದ್ದರು. ಅಂದಿನ ಕಾಲದಲ್ಲಿ ಹೆಚ್ಚೇ ಎನಿಸುವಷ್ಟು 40,000ಕ್ಕೂ ಅಧಿಕ ಪ್ರೇಕ್ಷಕರಿಂದ ಗ್ಯಾಲರಿ ತುಂಬಿತ್ತು. ಅಂದು ಧ್ಯಾನ್‌ಚಂದ್‌ರ ಆಟದ ವೈಖರಿಯಿಂದ ಪ್ರಭಾವಿತನಾಗಿ ತನ್ನ ಸೈನ್ಯದಲ್ಲಿ ಉನ್ನತ ಹುದ್ದೆ ನೀಡುವುದಾಗಿ ಹೇಳಿದ ಹಿಟ್ಲರ್‌ನ ಆಹ್ವಾನವನ್ನು ಧ್ಯಾನ್‌ಚಂದ್ ನಯವಾಗಿ ತಿರಸ್ಕರಿಸಿದರು. ಸಚಿನ್ ತೆಂಡೂಲ್ಕರ್‌ಗೆ ಭಾರತ ರತ್ನ ನೀಡುವ ಮೊದಲೇ ಅದನ್ನು ಧ್ಯಾನ್‌ಚಂದ್‌ಗೆ ನೀಡುವ ಕುರಿತು ಮಾತುಕತೆಯೂ ಸ್ಪೋರ್ಟ್ಸ್ ಕಮಿಟಿಯಲ್ಲಿ ನಡೆದಿತ್ತು. ಆದರೆ ಸ್ಪೋರ್ಟ್ಸ್ ಕಮಿಟಿಯ ಶಿಫಾರಸುಗಳನ್ನು ಕಾಂಗ್ರೆಸ್ ನೇತೃತ್ವದ ಪ್ರಧಾನಮಂತ್ರಿಯ ಕಾರ್ಯಾಲಯ ತಳ್ಳಿಹಾಕಿತ್ತು. ಇದಕ್ಕೆ ಶರದ್ ಪವಾರ್ ಅವರ ವೋಟ್‌ಬ್ಯಾಂಕ್ ರಾಜಕೀಯ ಹಿತಾಸಕ್ತಿ ಕೂಡಾ ಅಡ್ಡಗಾಲು ಹಾಕಿತು ಎಂಬುದು ನಿರ್ವಿವಾದ. ಇದನ್ನು ಪ್ರತಿಭಟಿಸಿ ಕೆಲವು ಹಿರಿಯ ಹಾಕಿ ಆಟಗಾರರು ದಿಲ್ಲಿಯ ಜಂತರ್ ಮಂತರ್ ಎದುರು ಧರಣಿ ನಡೆಸಿದ್ದೂ ಇದೆ. ಇದೆಲ್ಲ ಇತಿಹಾಸ. ತನ್ನ ಕ್ರೀಡೆಯಿಂದ ದೇಶಕ್ಕೆ ಕೀರ್ತಿ ತಂದು ಕೊಟ್ಟ ಧ್ಯಾನ್‌ಚಂದ್ ಅವರ ಕೊನೆಗಾಲ ಮಾತ್ರ ಸುಖವಾಗಿರಲಿಲ್ಲ. ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಕೈಯಲ್ಲಿ ಕಾಸಿಲ್ಲದೆ ದಾರುಣ ಸ್ಥಿತಿಯಲ್ಲಿ ದಿಲ್ಲಿಯ ಏಮ್ಸ್ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಅಸುನೀಗಿದ್ದು ನಂಬಲಾರದ ವಾಸ್ತವ.

ರಾಜಕೀಯ ಮುಖಂಡರ ವೋಟ್‌ಬ್ಯಾಂಕ್ ಹಿತಾಸಕ್ತಿ ಏನೆಲ್ಲ ಅನರ್ಥಗಳನ್ನು ತಂದೊಡ್ಡುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಕೊನೆಯದಾಗಿ ಒಂದು ಮಾತನ್ನು ಹೇಳಲೇಬೇಕು. ಪತ್ರಿಕಾ ಪುಟದಲ್ಲಿ ವರದಿಯಾದಂತೆ ಉತ್ತರಪ್ರದೇಶದ ಸರಕಾರ ತನ್ನ ವಾರ್ಷಿಕ ಸ್ಪೋರ್ಟ್ಸ್ ಬಜೆಟ್‌ನಲ್ಲಿ ಶಾಲಾ ಮಕ್ಕಳಿಗೆ ನಿಗದಿ ಮಾಡಿದ್ದು ತಲಾ 30 ಪೈಸೆಗಳಷ್ಟು ಮಾತ್ರ. ಆದರೆ (ಪಕ್ಷದಲ್ಲಿ ಬಿರುಕು ಉದ್ಭವಿಸುವ ಮುನ್ನ) ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ರ ಜನ್ಮದಿನಾಚರಣೆಯ ಸಂಭ್ರಮಕ್ಕಾಗಿ ಸಹನಟಿ ಆಲಿಯಾ ಭಟ್ ಜೊತೆ ಡ್ಯಾನ್ಸ್ ಕಾರ್ಯಕ್ರಮ ನೀಡಲು ನಟ ಸಲ್ಮಾನ್ ಖಾನ್‌ಗೆ ಕೊಟ್ಟಿದ್ದು 5 ಕೋಟಿ ರೂಪಾಯಿಗಳು ಎಂಬುದು ಅಚ್ಚರಿಯೆನಿಸಿದರೂ ಅದು ನಮ್ಮ ರಾಜಕಾರಣಿಗಳ ಮನಸ್ಥಿತಿಯನ್ನು ಬಿಂಬಿಸುವ ಒಂದು ವಾಸ್ತವ. ಕುರ್ಚಿಯಲ್ಲಿ ಕುಳಿತಷ್ಟು ದಿನಗಳವರೆಗೆ ರಾಜಕಾರಣಿಗಳಿಗೆ ಕಿಮ್ಮತ್ತು. ಕುರ್ಚಿ ಕಳೆದುಕೊಂಡರೆ ಅವರಿಗೆ ಕವಡೆ ಕಾಸಿನಷ್ಟು ಬೆಲೆಯಿಲ್ಲ. ಹಾಗಾಗಿ ಕುರ್ಚಿ ಉಳಿಸಿಕೊಳ್ಳಲು ಈ ರಾಜಕಾರಣಿಗಳು ಏನೆಲ್ಲ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಮೇಲಿನಂಥವು ಕೆಲವು ಉದಾಹರಣೆಗಳು ಅಷ್ಟೇ. ಪಕ್ಷಾಂತರ ಮಾಡಿಯಾದರೂ ಸರಿ, ಸಾಯುವ ತನಕ ರಾಜಕಾರಣಿಯಾಗಿಯೇ ಸಾಯಬೇಕು.

ಮಾಹಿತಿ: ಇಶ್ಯೂಸ್ ಆ್ಯಂಡ್ ಕನ್ಸರ್ನ್ಸ್ ಇಂಗ್ಲಿಷ್ ಮಾಸಿಕ ಮತ್ತಿತರ ಸುದ್ದಿ ಮೂಲಗಳು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಕೆ. ಶಾರದಾ ಭಟ್
ಕೆ. ಶಾರದಾ ಭಟ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X