ಹಲವು ಹೊಸ ಪ್ರಭೇದಗಳಾಗಿ ವಿಕಸನಗೊಂಡ ಪಶ್ಚಿಮಘಟ್ಟದ ಎರಡು ಹಾಡುಹಕ್ಕಿಗಳು

ಕಿರುರೆಕ್ಕೆಯ ಹಕ್ಕಿಗಳ ಸಮೀಪದ ಸಂಬಂಧಿ ನೀಲಿ ಬೆನ್ನಿನ ಗುಬ್ಬಚ್ಚಿಯಾಗಿದ್ದರೆ ಹಾಡುಹಕ್ಕಿಯ ಅತ್ಯಂತ ಸಮೀಪ ಸಂಬಂಧಿಗಳು ಸಿಬಿಯಾಗಳು, ಮಿನ್ಲಾ ಮತ್ತು ಬಾರ್ವಿಂಗ್ಸ್‌ಗಳಾಗಿವೆ. ಆದರೆ ಅವುಗಳನ್ನು ಒಂದೇ ಹೆಸರಿನಿಂದ ಕರೆಯಲು ಅಷ್ಟೊಂದು ಸಾಮೀಪ್ಯ ಹೊಂದಿರಲಿಲ್ಲ. ಹಾಗಾಗಿ ಈ ಅತ್ಯಂತ ಪುಟ್ಟ ಹಕ್ಕಿಗಳಿಗೆ ಅವುಗಳದ್ದೇ ಆದ ಹೆಸರನ್ನು ನೀಡುವ ಅಗತ್ಯವಿತ್ತು. ರಾಬಿನ್ ಮತ್ತವರ ತಂಡ ಪಶ್ಚಿಮಘಟ್ಟದ ಕಿರುರೆಕ್ಕೆಯ ಹಕ್ಕಿಗಳಿಗೆ ಲ್ಯಾಟಿನ್ ಭಾಷೆಯಲ್ಲಿ ಶೊಲಿಕೊಲಾ (ಶೋಲಾದ ಜೀವಿಗಳು) ಎಂದೂ ಸಾಮಾನ್ಯ ಬಳಕೆಗಾಗಿ ಶೊಲಾಕಿಲಿ ಎಂದೂ ಹೆಸರಿಟ್ಟಿತು. ಇದೇ ರೀತಿಯಲ್ಲಿ ಹಾಡುಹಕ್ಕಿಗಳಿಗೆ ಮೊಂಟೆಸಿಂಕ್ಲಾ (ಪರ್ವತಗಳ ಹಾಡುಹಕ್ಕಿ) ಅಥವಾ ಚಿಲಪ್ಪನ್ (ಅದರ ಇಂಪಾದ ಕೂಗಿಗಾಗಿ ಮಲಯಾಳಂನಿಂದ ಪಡೆದ ಹೆಸರು) ಎಂದು ಹೆಸರಿಸಲಾಯಿತು. ಶೊಲಾಕಿಲಿ ಮತ್ತು ಚಿಲಪ್ಪನ್ ಭೂಗ್ರಹದ ಇತರ ಯಾವುದೇ ಭಾಗದಲ್ಲಿ ಕಾಣಲುಸಿಗದ ಪ್ರಬೇಧಗಳಾಗಿವೆ.
ಒಂದು ಶತಮಾನಕ್ಕೂ ಹೆಚ್ಚು ಕಾಲ ಪಕ್ಷಿವೀಕ್ಷಕರು ಪಶ್ಚಿಮಘಟ್ಟದ ಆರು ಸಣ್ಣ ಹಕ್ಕಿಗಳನ್ನು ತಪ್ಪು ಹೆಸರಿನಿಂದ ಕರೆಯುತ್ತಿದ್ದರು. ಅವರು ಹಾಡುಹಕ್ಕಿಗಳೆಂದು ಕರೆಯುತ್ತಿದ್ದ ಹಕ್ಕಿಗಳು ಹಾಡುಹಕ್ಕಿಗಳಾಗಿರಲಿಲ್ಲ ಮತ್ತು ಕಿರುರೆಕ್ಕೆಯ ಹಕ್ಕಿಗಳು ಕಿರುರೆಕ್ಕೆ ಹಕ್ಕಿಗಳಾಗಿರಲಿಲ್ಲ. ಇತ್ತೀಚಿನ ವರದಿಯೊಂದು ಈ ಹಕ್ಕಿಗಳ ವಂಶದ ಬಗ್ಗೆ ಮಾಹಿತಿ ನೀಡುತ್ತದೆ ಮತ್ತು ಅವುಗಳು ವಿಕಸನಗೊಂಡ ಪ್ರಕ್ರಿಯೆಯನ್ನು ವಿವರಿಸುತ್ತದೆ. ಇಂಥಾ ಅನ್ವೇಷಣೆಗಳು ಅತ್ಯಂತ ವಿರಳ ಯಾಕೆಂದರೆ ಹಕ್ಕಿಗಳ ಬಗ್ಗೆ ಯಾವಾಗಲೂ ಉತ್ತಮ ಅಧ್ಯಯನ ನಡೆಸಲಾಗಿರುತ್ತದೆ ಮತ್ತು ಅವುಗಳ ವರ್ಗೀಕರಣ ಆಶ್ಚರ್ಯದಾಯಕವಾಗಿರುವುದಿಲ್ಲ..ಬಹುಶಃ ಇಲ್ಲಿಯ ತನಕ.
ಹಿಂದಿನ ಹಾಡುಹಕ್ಕಿಗಳು ಮತ್ತು ಕಿರುರೆಕ್ಕೆಯ ಹಕ್ಕಿಗಳು ಎತ್ತರ ಪ್ರದೇಶದಲ್ಲಿರುವ ತಂಪು ಮತ್ತು ಆರ್ದ್ರ ಕಾಡುಗಳಲ್ಲಿ ಜೀವಿಸುತ್ತಿದ್ದವು. ಸಮುದ್ರ ಮಟ್ಟಕ್ಕಿಂತ 1500 ಮೀಟರ್ ಎತ್ತರದಲ್ಲಿ ಕಣಿವೆಗಳಲ್ಲಿ ಹುಲ್ಲುಗಾವಲಿನ ಮಧ್ಯೆ ನಿತ್ಯಹರಿದ್ವರ್ಣದ ಮರಗಳು ಬೆಳೆಯುತ್ತವೆ. ಆಗಸದ್ವೀಪಗಳೆಂದು ಕರೆಯಲ್ಪಡುವ ಈ ಶೋಲಾ ಕಾಡುಗಳು ಸಮುದ್ರ ದ್ವೀಪಗಳಷ್ಟೇ ಅಂತರವನ್ನು ಹೊಂದಿರುತ್ತವೆ. ಈ ಅತ್ಯಪೂರ್ವ ಅಂತರವೇ ಜೀವಿಗಳಲ್ಲಿ, ಅದು ಕೇವಲ ಕಪ್ಪೆ, ಹಲ್ಲಿ ಮತ್ತು ಹಾವುಗಳು ಮಾತ್ರವಲ್ಲ ಹಕ್ಕಿಗಳಲ್ಲೂ ಇನ್ನೆಲ್ಲೂ ಕಾಣದಂತಹ ವೈವಿಧ್ಯತೆಯನ್ನು ಸೃಷ್ಟಿಸುತ್ತವೆ. ಬೆಂಗಳೂರಿನ ರಾಷ್ಟ್ರೀಯ ಜೀವವೈವಿಧ್ಯ ವಿಜ್ಞಾನ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ತಿರುಪತಿಯ ವಿ.ವಿ ರಾಬಿನ್ ಕಿರುರೆಕ್ಕೆಯ ಹಕ್ಕಿಗಳ ಬಗ್ಗೆ 15 ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ. 2002ರಲ್ಲಿ ಅವರು ಬಿಳಿ ಹೊಟ್ಟೆಯ ಕಿರುರೆಕ್ಕೆ ಹಕ್ಕಿಗಳು ಯಾವ ರೀತಿಯ ಕಾಡುಗಳನ್ನು ಇಷ್ಟಪಡುತ್ತವೆ ಎಂಬುದನ್ನು ಕಂಡುಕೊಂಡರು. ಅವರು ತಮ್ಮ ಹೆಚ್ಚಿನ ಸಮಯವನ್ನು ಕೆಳಗಿನ ಮಳೆಕಾಡುಗಳಲ್ಲಿ ಕಳೆದರೂ ಈ ನೀಲಿ ಬಣ್ಣದ ಪುಟ್ಟ ಹಕ್ಕಿಗಳು ಶೋಲಾ ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ ಎಂಬುದನ್ನು ಅವರು ಕಂಡುಕೊಂಡರು. 40 ಕಿ.ಮೀ. ಅಗಲದ ಪಾಲ್ಗಾಟ್ ಕಣಿವೆ ಹಲವು ಜಾತಿಯ ಹಕ್ಕಿಗಳು, ಸರಿಸೃಪಗಳು ಮತ್ತು ಸಸ್ತನಿಗಳಿಗೆ ದಾಟಲಾಗದ ಕಂದರವಾಗಲಿದೆ. ಈ ಕಣಿವೆಯ ಎರಡೂ ಕಡೆಗಳಲ್ಲಿ ಬಿಳಿ ಹೊಟ್ಟೆಯ ಕಿರುರೆಕ್ಕೆಯ ಹಕ್ಕಿಯ ಎರಡು ರೀತಿಯ ಉಪಜಾತಿಗಳು ಜೀವಿಸುತ್ತವೆ. ಈ ಹಕ್ಕಿಗಳ ಕೂಗಿನಲ್ಲಿ ಇರುವ ವ್ಯತ್ಯಾಸವನ್ನು ವಿಶ್ಲೇಷಿಸಿದ ರಾಬಿನ್ ಇವುಗಳು ಎರಡು ಪ್ರಭೇದ ಎಂಬುದನ್ನು ಕಂಡುಕೊಂಡರು. ಆದರೆ ಇತರ ಅಸಮಂಜಸಗಳ ಬಗ್ಗೆ ಇದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ರಾಬಿನ್ ತಮ್ಮ ತನಿಖೆಯನ್ನು ಮುಂದುವರಿಸಿದರು.
ಅದಕ್ಕಾಗಿ ಅವರು ಅಂತಾರಾಷ್ಟ್ರೀಯ ಸಹಯೋಗಿಗಳ ತಂಡವೊಂದನ್ನು ರಚಿಸಿ ಆಗಸದ್ವೀಪಗಳಲ್ಲಿ ಜೀವಿಸುವ ಎಲ್ಲಾ ಪಕ್ಷಿಗಳ ಮೇಲೆ ನಿಗಾಯಿಡಲು ನಿರ್ಧರಿಸಿದರು. ಲೊಯೊಲಾ ವಿಶ್ವವಿದ್ಯಾನಿಲಯ ಚಿಕಾಗೊದ ದಕ್ಷಿಣ ಏಷ್ಯಾದ ಪಕ್ಷಿಗಳ ಜೀವವಿಕಾಸ ತಜ್ಞೆ ಸುಷ್ಮಾ ರೆಡ್ಡಿ. ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಫ್ರಾಂಕ್ ರೇಂಡಿಟ್ ತಂಡದಲ್ಲಿದ್ದ ಜೀವವರ್ಗೀಕರಣ ಶಾಸ್ತ್ರಜ್ಞ. ಎನ್‌ಸಿಬಿಎಸ್‌ನ ಪೂಜಾ ಗುಪ್ತಾ ಮತ್ತು ಸಿಕೆ ವಿಷ್ಣುದಾಸ್ ಮತ್ತು ಚಿಕಾಗೊ ವಿಶ್ವವಿದ್ಯಾನಿಲಯದ ಡೇನಿಯಲ್ ಹಾಪರ್ ತಂಡದಲ್ಲಿದ್ದ ಇತರ ಸದಸ್ಯರು. ಎನ್‌ಸಿಬಿಎಸ್‌ನ ಉಮಾ ರಾಮಕೃಷ್ಣನ್ ಭಾರತದಾದ್ಯಂತ ಸಸ್ತನಿಗಳ ಜನಸಂಖ್ಯಾ ಅನುವಂಶಿಕತೆ ಮತ್ತು ವಿಕಸನ ರಚನೆಯ ಬಗ್ಗೆ ಅಧ್ಯಯನ ನಡೆಸುತ್ತಾರೆ. ಈ ಯೋಜನೆಯು ಆಕೆಯ ಪ್ರಯೋಗಾಲಯದಿಂದಲೇ ಮೂಡಿಬಂದಿತ್ತು. ಸಂಶೋಧಕರು ಪಶ್ಚಿಮಘಟ್ಟದಲ್ಲಿರುವ ಕೇವಲ ಬಿಳಿ ಹೊಟ್ಟೆಯ ಕಿರುರೆಕ್ಕೆ ಹಕ್ಕಿಗಳ ಬಗ್ಗೆ ಮಾತ್ರವಲ್ಲ ಅದರ ಹತ್ತಿರದ ಸಂಬಂಧಿಗಳಾದ ಹಾಡುಹಕ್ಕಿಗಳ ನಾಲ್ಕು ಪ್ರಭೇದಗಳ ಬಗ್ಗೆಯೂ ಅಧ್ಯಯನ ನಡೆಸಿದರು. ಅವರು ಅನುವಂಶೀಯ ವಿಶ್ಲೇಷಣೆಗಾಗಿ 350ಕ್ಕೂ ಅಧಿಕ ಹಾಡುಹಕ್ಕಿಗಳು ಮತ್ತು 430ಕ್ಕೂ ಅಧಿಕ ಕಿರುರೆಕ್ಕೆ ಹಕ್ಕಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿದರು, ಕೊಕ್ಕುಗಳನ್ನು, ರೆಕ್ಕೆ ಮತ್ತು ಬಾಲಗಳನ್ನು ಅಳೆದರು, ಹಾಡುಗಳನ್ನು ವಿಶ್ಲೇಷಿಸಿದರು ಮತ್ತು ಗರಿಗಳನ್ನು ಪರೀಕ್ಷಿಸಿದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಕ್ಷಿಗಳನ್ನು ಹಿಡಿಯಲು ಹಿಂದೆಂದೂ ಅನುಮತಿ ಸಿಕ್ಕಿರಲಿಲ್ಲ. ‘‘ನಮ್ಮ ಬಳಿ ಪಕ್ಷಿಗಳನ್ನು ಹಿಡಿಯಲು ಅನುಮತಿಯಿದ್ದ ಕಾರಣ ಮಾತ್ರ ಈ ಅಧ್ಯಯನವನ್ನು ನಡೆಸಲು ಸಾಧ್ಯವಾಯಿತು’’ ಎಂದು ರಾಬಿನ್ ಹೇಳುತ್ತಾರೆ. ‘‘ಅದರ ಹೊರತಾಗಿ ಇಲ್ಲಿ ನೀಡಲಾದ ಯಾವ ಅಂಕಿಅಂಶಗಳನ್ನೂ ನಮಗೆ ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಅಧ್ಯಯನದ ಮಹತ್ತರ ಅಂಶವೆಂದರೆ ಕೇರಳ ಅರಣ್ಯ ಇಲಾಖೆ ನಮಗೆ ನಾಲ್ಕು ವರ್ಷಗಳ ಅನುಮತಿಯನ್ನು ನೀಡಿದ್ದು, ತಮಿಳುನಾಡು ಅರಣ್ಯ ಇಲಾಖೆ ಕೂಡಾ ಬಹಳ ಪ್ರೋತ್ಸಾಹ ನೀಡಿತ್ತು.’’
ಅನುವಂಶಿಕ ವಿಶ್ಲೇಷಣೆ ಮತ್ತು ಸಂಗ್ರಹಾಲಯಗಳಲ್ಲಿ ಇಡಲಾಗಿದ್ದ ಮೃತ ಪಕ್ಷಿಗಳ ಮಾದರಿಗಳನ್ನು ಹೋಲಿಸಿ ಸಂಶೋಧಕರು ಈ ಹಕ್ಕಿಗಳ ಅತ್ಯಂತ ಸಮೀಪದ ಸಂಬಂಧಿಕರು ಯಾರೆಂಬ ಬಗ್ಗೆ ಅಂದಾಜು ಮಾಡಿದರು ಮತ್ತು ಆಗಲೇ ಅವರಿಗೊಂದು ಆಶ್ಚರ್ಯ ಕಾದಿತ್ತು. ಕಿರುರೆಕ್ಕೆಯ ಹಕ್ಕಿಗಳ ಸಮೀಪದ ಸಂಬಂಧಿ ನೀಲಿ ಬೆನ್ನಿನ ಗುಬ್ಬಚ್ಚಿಯಾಗಿದ್ದರೆ ಹಾಡುಹಕ್ಕಿಯ ಅತ್ಯಂತ ಸಮೀಪ ಸಂಬಂಧಿಗಳು ಸಿಬಿಯಾಗಳು, ಮಿನ್ಲಾ ಮತ್ತು ಬಾರ್ವಿಂಗ್ಸ್‌ಗಳಾಗಿವೆ. ಆದರೆ ಅವುಗಳನ್ನು ಒಂದೇ ಹೆಸರಿನಿಂದ ಕರೆಯಲು ಅಷ್ಟೊಂದು ಸಾಮೀಪ್ಯ ಹೊಂದಿರಲಿಲ್ಲ. ಹಾಗಾಗಿ ಈ ಅತ್ಯಂತ ಪುಟ್ಟ ಹಕ್ಕಿಗಳಿಗೆ ಅವುಗಳದ್ದೇ ಆದ ಹೆಸರನ್ನು ನೀಡುವ ಅಗತ್ಯವಿತ್ತು. ರಾಬಿನ್ ಮತ್ತವರ ತಂಡ ಪಶ್ಚಿಮಘಟ್ಟದ ಕಿರುರೆಕ್ಕೆಯ ಹಕ್ಕಿಗಳಿಗೆ ಲ್ಯಾಟಿನ್ ಭಾಷೆಯಲ್ಲಿ ಶೊಲಿಕೊಲಾ (ಶೋಲಾದ ಜೀವಿಗಳು) ಎಂದೂ ಸಾಮಾನ್ಯ ಬಳಕೆಗಾಗಿ ಶೊಲಾಕಿಲಿ ಎಂದೂ ಹೆಸರಿಟ್ಟಿತು. ಇದೇ ರೀತಿಯಲ್ಲಿ ಹಾಡುಹಕ್ಕಿಗಳಿಗೆ ಮೊಂಟೆಸಿಂಕ್ಲಾ (ಪರ್ವತಗಳ ಹಾಡುಹಕ್ಕಿ) ಅಥವಾ ಚಿಲಪ್ಪನ್ (ಅದರ ಇಂಪಾದ ಕೂಗಿಗಾಗಿ ಮಲಯಾಳಂನಿಂದ ಪಡೆದ ಹೆಸರು) ಎಂದು ಹೆಸರಿಸಲಾಯಿತು.
ಶೊಲಾಕಿಲಿ ಮತ್ತು ಚಿಲಪ್ಪನ್ ಭೂಗ್ರಹದ ಇತರ ಯಾವುದೇ ಭಾಗದಲ್ಲಿ ಕಾಣಲುಸಿಗದ ಪ್ರಭೇದಗಳಾಗಿವೆ. ‘‘ಮೊದಲು ಒಂದು ಜಾತಿ ಎಂದು ನಂಬಲಾಗಿದ್ದುದರ ವಂಶಾವಳಿಯ ಮಟ್ಟದಲ್ಲೇ ಹೊಸ ವೈವಿಧ್ಯತೆಯನ್ನು ಪತ್ತೆಹಚ್ಚುವುದೆಂದರೆ ನಿಮ್ಮ ಹೆತ್ತವರು ತಮ್ಮ ವಂಶಾವಳಿಯ ಬಗ್ಗೆ ತಪ್ಪುತಿಳುವಳಿಕೆ ಹೊಂದಿದ್ದ ಪರಿಣಾಮ ನೀವು ಒಮ್ಮೆಲೆ ನಿಮ್ಮ ಕೊನೆಯ ಹೆಸರನ್ನು ಬದಲಿಸುವ ಪ್ರಮೇಯ ಬಂದಂತೆ’’ ಎಂದು ಉತ್ತರ ಕ್ಯಾರೊಲಿನಾ ರಾಜ್ಯ ವಿಶ್ವವಿದ್ಯಾನಿಲಯದ ಮಧುಸೂದನ್ ಕಟ್ಟಿ ತಿಳಿಸುತ್ತಾರೆ. ಅವರು ಈ ಅಧ್ಯಯನದಲ್ಲಿ ಪಾಲ್ಗೊಂಡಿರಲಿಲ್ಲ. ‘‘ನಾವು ಇಂತಹ ನಾಟಕೀಯ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ’’ ಎಂದು ನುಡಿಯುತ್ತಾರೆ ಸುಷ್ಮಾ ರೆಡ್ಡಿ. ‘‘ರಾಬಿನ್‌ನ 2010ರ ಅಧ್ಯಯನದಿಂದ ಕಿರುರೆಕ್ಕೆಯ ಹಕ್ಕಿಗಳು ಅವುಗಳನ್ನು ವರ್ಗೀಕರಿಸಲಾದ ವಂಶಾವಳಿಗೆ ಸೇರಿಲ್ಲ ಎಂಬುದು ನಮಗೆ ತಿಳಿದಿತ್ತು. ಆದರೆ ಅವುಗಳು ಏಷ್ಯಾದ ನೊಣಹಿಡುಕ ಪಕ್ಷಿಗಳ ಗುಂಪಿನ ಪ್ರತ್ಯೇಕ ಶಾಖೆಯಾಗಿ ನಾವು ಕಾಣಲಿದ್ದೇವೆ ಎಂಬ ನಿರೀಕ್ಷೆ ನಮಗಿರಲಿಲ್ಲ. ಇನ್ನು ಹಾಡುಹಕ್ಕಿಗಳು ಕೂಡಾ ಅವುಗಳದ್ದೇ ವಂಶಾವಳಿಯಲ್ಲಿ ವರ್ಗೀಕರಿಸುವ ನಿರೀಕ್ಷೆಯೂ ಇರಲಿಲ್ಲ’’ ಎಂದಾಕೆ ಹೇಳುತ್ತಾರೆ. ಭಾರತದ ಕೆಲವು ಭಾಗಗಳನ್ನು ಜೀವವೈವಿಧ್ಯತೆಯ ತಾಣ ಎಂದು ಕರೆಯಲಾದರೂ ಜೀವಶಾಸ್ತ್ರಜ್ಞರು ಭಾರತವು ಅಷ್ಟೊಂದು ವೈವಿಧ್ಯತೆಯನ್ನು ಹೊಂದಿಲ್ಲ ಎಂದು ಭಾವಿಸುತ್ತಾರೆ.
‘‘ಅದು ಹೇಗೆಂದರೆ ಫೋರ್ಬ್ಸ್ ಶ್ರೀಮಂತರ ಪಟ್ಟಿಯ ಕೊನೆಯಲ್ಲಿರುವ ಬಡ ಕೋಟ್ಯಧಿಪತಿಯಂತೆ’’ ಎಂದು ಹೇಳುತ್ತಾರೆ ರಾಬಿನ್. ರಚನೆಗಳು ಮತ್ತು ಜಾತಿರೂಪಣೆಯ ಪ್ರಕ್ರಿಯೆಯನ್ನು ಸರಿಯಾಗಿ ವಿವರಿಸಲಾಗಿಲ್ಲ. ಇಲ್ಲಿನ ಹಕ್ಕಿಗಳ ವೈವಿಧ್ಯಮಯ ಸ್ಥಳೀಯ ಕುಲವು ಭಾರತದ ಪಕ್ಷಸಂಕುಲವು ಭಾರತದ ಹೊರಗೆ ಕಾಣಸಿಗುವ ವಿಸ್ತಾರವಾದ ಕುಲದೊಳಗಿರುವ ಜಾತಿಗಳಷ್ಟೇ ಎಂಬ ನಂಬಿಕೆಗೇ ಸವಾಲು ಹಾಕುತ್ತವೆ. ‘‘ಈ ಅಧ್ಯಯನದ ಆಶ್ಚರ್ಯಕರ ಫಲಿತಾಂಶವು ಪಶ್ಚಿಮಘಟ್ಟದಲ್ಲಿನ ಜೀವವೈವಿಧ್ಯತೆಯ ಬಗ್ಗೆ ನನ್ನಲ್ಲಿದ್ದ ಸಂತೋಷ ಮತ್ತು ಕಾಳಜಿಯನ್ನು ಮತ್ತಷ್ಟು ಆಳಗೊಳಿಸಿದೆ’’ ಎಂದು ಹೇಳುತ್ತಾರೆ ಕಟ್ಟಿ. ಪಶ್ಚಿಮಘಟ್ಟದಲ್ಲಿ ಮಾನವನ ಕಾರ್ಯಾಚರಣೆಯ ಇತಿಹಾಸ ಮತ್ತು ಪಕ್ಷಿವೀಕ್ಷಕರ ನಡುವೆ ಈ ಸ್ಥಳಕ್ಕಿರುವ ಜನಪ್ರಿಯತೆಯನ್ನು ಗಮನಿಸಿದಾಗ ಇಷ್ಟರವರೆಗೆ ಈ ಪಕ್ಷಿಗಳ ಬಗ್ಗೆ ವೈಜ್ಞಾನಿಕ ದೃಷ್ಟಿಕೋನವನ್ನು ಯಾರೂ ಕೂಡಾ ಹೊಂದದಿರುವುದು ಗಮನಾರ್ಹ.
ಇದರ ವಿಸ್ತರಣೆಯು ಪಕ್ಷಿಗಳ ಮತ್ತು ಪಶ್ಚಿಮಘಟ್ಟದ ವೈವಿಧ್ಯತೆಯ ಆಚೆಗೂ ತಳಕು ಹಾಕಿಕೊಂಡಿದೆ. ಇದು ಭಾರತೀಯ ಉಪಖಂಡದ ವಿಕಸನದ ಇತಿಹಾಸವನ್ನು ತೆರೆದಿಡುತ್ತದೆ. ಪಾಚಿಯಿಂದ ಗೂಡುಕಟ್ಟುವ ಶೊಲಾಕಿಲಿ ಮತ್ತು ಹೂ ಮತ್ತು ಹಣ್ಣುಗಳನ್ನು ತಿನ್ನುವ ಚಿಲಪ್ಪನ್‌ಗಳ ಅತ್ಯಂತ ಸಮೀಪ ಸಂಬಂಧಿಗಳು ಹಿಮಾಲಯ ಮತ್ತು ಏಷ್ಯಾದ ಆಗ್ನೇಯ ಭಾಗದಲ್ಲಿ ಜೀವಿಸುತ್ತವೆ. ಪಶ್ಚಿಮಘಟ್ಟದಲ್ಲಿ ಜೀವಿಸುವ ಅನೇಕ ಇತರ ಜೀವಿಗಳು ತಮ್ಮ ಪೂರ್ವಜರನ್ನು ಉತ್ತರದ ಪರ್ವತಶ್ರೇಣಿಗಳಲ್ಲಿ ಕಂಡುಕೊಳ್ಳುತ್ತವೆ. ದೇಶದ ಬೃಹತ್ ನಿರಾಶ್ರಯದಾಯಕ ಹರವಿನ ಆಚೆ ದಕ್ಷಿಣದ ಪರ್ವತಗಳಲ್ಲಿ ತಮ್ಮ ವಾಸಸ್ಥಾನಗಳನ್ನು ನಿರ್ಮಿಸಲು ಈ ಹಕ್ಕಿಗಳು ಹೇಗೆ ದಾರಿಯನ್ನು ಕಂಡುಕೊಂಡವು? ‘ಸಾತ್ಪುರ ಕಲ್ಪನೆ’ಯು ಈ ಪಕ್ಷಿಗಳಿಗೆ ಸಮೀಪದಲ್ಲಿ ಸಂಬಂಧಿಗಳು ಇಲ್ಲದಿರುವುದನ್ನು ವಿವರಿಸುವ ಪ್ರಚಲಿತದಲ್ಲಿರುವ ಸಿದ್ಧಾಂತವಾಗಿದೆ. ಈ ಸಿದ್ಧಾಂತದ ಪ್ರಕಾರ ಹನ್ನೊಂದು ಮಿಲಿಯನ್ ವರ್ಷಗಳ ಹಿಂದೆ ಮಧ್ಯ ಅಥವಾ ಕೊನೆಯ ಮಯೋಸಿನ್ ಯುಗದಲ್ಲಿ ಮಧ್ಯಭಾರತದಲ್ಲಿರುವ ಸಾತ್ಪುರ ಪರ್ವತದಲ್ಲಿದ್ದ ಒದ್ದೆಕಾಡುಗಳು ಹಿಮಾಲಯ ಮತ್ತು ಪಶ್ಚಿಮಘಟ್ಟವನ್ನು ಬೆಸೆದಿತ್ತು. ಈ ಪರ್ವತ ಸೇತುವೆಯ ಮೂಲಕ ಪಕ್ಷಿಗಳು ಮತ್ತು ಪ್ರಾಣಿಗಳು ದಕ್ಷಿಣಕ್ಕೆ ಆಗಮಿಸಿದವು. ಮುಂದಿನ ವರ್ಷಗಳಲ್ಲಿ ಉಪಖಂಡ ಒಣಗುವ ಮೂಲಕ ದಕ್ಷಿಣ ಮತ್ತು ಉತ್ತರದ ಪ್ರಾಣಿ ಮತ್ತು ಪಕ್ಷಿ ಸಂಕುಲವನ್ನು ಪ್ರತ್ಯೇಕಿಸಿದವು. ಶೊಲಾಕಿಲಿ ಮತ್ತು ಚಿಲಪ್ಪನ್‌ಗಳ ವಂಶವಾಹಿ ವಿಶ್ಲೇಷಣೆಯಿಂದ ಅವುಗಳು ತಮ್ಮ ಹಿಮಾಲಯದ ಸಹೋದರರಿಂದ ಹನ್ನೊಂದು ಮಿಲಿಯನ್ ವರ್ಷಗಳ ಹಿಂದೆ ಪ್ರತ್ಯೇಕಗೊಂಡಿರುವುದು ತಿಳಿಯುತ್ತದೆ. ಆಗಸದಲ್ಲಿ ಅರಣ್ಯದಿಂದ ಸುತ್ತುವರಿದ ದ್ವೀಪಗಳಲ್ಲಿ ಈ ಹಕ್ಕಿಗಳು ಐದು ಮಿಲಿಯನ್ ವರ್ಷಗಳ ಹಿಂದೆ ತಮ್ಮದೇ ಪ್ರತ್ಯೇಕ ಪ್ರಭೇದಗಳಾಗಿ ವಿಕಸನಗೊಳ್ಳಲು ಆರಂಭಿಸಿದವು. ಸಾತ್ಪುರ ಸಿದ್ಧಾಂತ ಕೂಡಾ ಇದೇ ಅವಧಿಯಲ್ಲಿ ಖಂಡದಲ್ಲಿದ್ದ ಒದ್ದೆಕಾಡುಗಳು ಒಣಗಿದವು ಎಂಬುದನ್ನು ಸೂಚಿಸುತ್ತದೆ.
ಐನೂರು ಮಿಲಿಯನ್ ವರ್ಷ ಹಳೆಯ ಪಾಲ್ಗಾಟ್ ಕಣಿವೆ ಪರ್ವತಗಳ ಸರಣಿಯಲ್ಲಿ ಅತೀದೊಡ್ಡ ಕಡಿತವಾದರೆ ಏಳು ಕಿ.ಮೀ. ಅಗಲದ ಶೆನ್ಕೋಟಾ ಕಣಿವೆ ಕೂಡಾ ಪ್ರಾಣಿಗಳನ್ನು ಉತ್ತರ ಅಥವಾ ದಕ್ಷಿಣಕ್ಕೆ ಚಲಿಸುವುದನ್ನು ತಡೆಯುತ್ತವೆ. ಅದು 1.5 ಮಿಲಿಯನ್ ವರ್ಷಗಳ ಹಿಂದೆ ಪಳನಿ ಚಿಲಪ್ಪನ್ ಮತ್ತು ಬಿಳಿ ಹೊಟ್ಟೆಯ ಶೊಲಾಕಿಲಿಗಳು ಅಣ್ಣಾಮಲೈ ಮತ್ತು ಹೈವೇವೀಸ್‌ನಲ್ಲಿ ವಿಕಸನಗೊಳ್ಳಲು ಅವಕಾಶ ನೀಡಿತು.
ಅತ್ಯಂತ ಪುಟ್ಟ ಗಾತ್ರದ ಈ ಹಕ್ಕಿಗಳು ಅತೀ ಎತ್ತರದ ಅರಣ್ಯಗಳಿಂದಾವೃತ ತಮ್ಮದೇ ಲೋಕದಲ್ಲಿ ಜೀವಿಸುತ್ತಿರುವುದನ್ನು ಪರಿಗಣಿಸಿದಾಗ ಇದೇ ಜಾತಿಯ ಹಕ್ಕಿಗಳು ಮತ್ತೊಂದು ಪ್ರದೇಶದಲ್ಲೂ ವಾಸಿಸುತ್ತವೆ ಎಂಬುದೇ ಆಶ್ಚರ್ಯದಾಯಕವಾಗಿದೆ. ಶೊಲಾಕಿಲಿಗಳು 1,500 ಮೀಟರ್ ಎತ್ತರದಲ್ಲಿ ಶೊಲಾ ಅರಣ್ಯಗಳಲ್ಲಿ ಜೀವಿಸಲು ಇಷ್ಟಪಟ್ಟರೂ 1,000 ಮೀಟರ್ ಕೆಳಮಟ್ಟದಲ್ಲೂ ಇವುಗಳನ್ನು ಕಾಣಬಹುದು. ಈ ಮಟ್ಟದಲ್ಲಿ ಅರಣ್ಯಗಳು ಅಣ್ಣಾಮಲೈ ಮತ್ತು ಹೈವೇವೀಸ್‌ಗಳನ್ನು ಸಂಪರ್ಕಿಸುತ್ತವೆ. ಬಹುಶಃ ಚಿಲಪ್ಪನ್ ಕೂಡಾ ಇದೇ ಅರಣ್ಯ ಸೇತುವೆಯನ್ನು ಬಳಸಿದೆ. ಈ ಕಣಿವೆಯ ದಕ್ಷಿಣದ ತುದಿ ಅಶಂಬು ಪರ್ವತ ತನ್ನದೇ ಆದ ಶೊಲಾಕಿಲಿ ಮತ್ತು ಚಿಲಪ್ಪನ್ ಹಕ್ಕಿಗಳನ್ನು ಹೊಂದಿದೆ. ಅಧ್ಯಯನದ ಸಮಯದಲ್ಲಿ ಸಂಶೋಧಕರ ತಂಡದಲ್ಲಿ ಒಬ್ಬರಾಗಿದ್ದ ಸಿ.ಕೆ ವಿಷ್ಣುದಾಸ್ ದೀರ್ಘಕಾಲದಿಂದ ಮರೆತು ಹೋಗಿದ್ದ ಪುಟ್ಟ ಹಕ್ಕಿಯೊಂದರ ಮಾದರಿಯನ್ನು ತಿರುವನಂತಪುರಂನಲ್ಲಿರುವ ನೈಸರ್ಗಿಕ ಇತಿಹಾಸಗಳ ಸಂಗ್ರಹಾಲಯದಲ್ಲಿ ಕಂಡರು. 1903ರಲ್ಲಿ ಸಂಗ್ರಹಿಸಲಾದ ಈ ಮಾದರಿಯು ಅಶಂಬು ಶೊಲಾಕಿಲಿ ಅಥವಾ ಶೊಲಿಕೊಲಾ ಅಶಂಬುವೆನ್ಸಿಸ್ ಎಂಬ ಹೊಸ ಜಾತಿಯನ್ನು ವಿವರಿಸಲು ಆಧಾರವಾಯಿತು. ಇಲ್ಲಿಯವರೆಗೆ ಎಲ್ಲರೂ ಅದು ವಿಭಿನ್ನವಾಗಿ ಕಾಣುವ ಬಿಳಿ ಹೊಟ್ಟೆಯ ಕಿರುರೆಕ್ಕೆಯ ಹಕ್ಕಿಯೆಂದೇ ತಿಳಿದಿದ್ದರು. ಈ ಎಲ್ಲಾ ವಿವಿಧ ಜಾತಿಗಳು ಕೇವಲ ತಮ್ಮ ವಂಶಾವಳಿಯಿಂದ ಮಾತ್ರ ವಿಭಿನ್ನವಾಗಿರಲಿಲ್ಲ, ಅವುಗಳ ಪುಕ್ಕ ಮತ್ತು ದೇಹಗಾತ್ರ ಕೂಡಾ ಒಂದನ್ನೊಂದು ಹೋಲುತ್ತಿರಲಿಲ್ಲ. ಅವುಗಳ ಹಾಡುಗಳು ಕೂಡಾ ಆವರ್ತನ, ಸಂಕೀರ್ಣತೆಯಲ್ಲಿ ಭಿನ್ನವಾಗಿದ್ದವು. ‘‘ಪಕ್ಷಿಶಾಸ್ತ್ರಜ್ಞರನ್ನು ನಾವೊಂದು ಹೊಸ ಪ್ರಭೇದವನ್ನು ಪತ್ತೆ ಮಾಡಿದ್ದೇವೆ ಎಂದು ಒಪ್ಪಿಸುವುದು ಬಹಳ ಕಷ್ಟದ ಕೆಲಸ ಹಾಗಾಗಿ ನಾವು ಅವುಗಳ ಹಾಡುಗಳು, ಗರಿಯ ವಿನ್ಯಾಸ, ದೇಹಗಾತ್ರ, ಡಿಎನ್‌ಎ ಹೀಗೆ ಹಲವು ವಿವಿಧ ರೀತಿಯ ಅಂಕಿಅಂಶಗಳನ್ನು ಪರೀಕ್ಷಿಸುವ ಮೂಲಕ ಈ ಹಕ್ಕಿಗಳು ವಿಶಿಷ್ಟ ಗುಣ-ರಚನೆಗಳನ್ನು ಹೊಂದಿವೆ ಮತ್ತು ಅವುಗಳನ್ನು ಪ್ರತ್ಯೇಕ ಪ್ರಭೇದಗಳಾಗಿ ಕಾಣಬೇಕು ಎಂಬುದನ್ನು ತಿಳಿಸಬೇಕಿತ್ತು’’ ಎಂದು ರಾಬಿನ್ ತಿಳಿಸುತ್ತಾರೆ.
ಈ ಏಳು ಹಕ್ಕಿಗಳು ಪಶ್ಚಮಘಟ್ಟದ 400 ಕಿ.ಮೀ ವ್ಯಾಪ್ತಿಯ ಎತ್ತರದ ಅರಣ್ಯ ಪ್ರದೇಶಗಳಲ್ಲಿ ಜೀವಿಸುತ್ತವೆ. 1850ರಿಂದೀಚೆಗೆ ಈ ಅರಣ್ಯ ಪ್ರದೇಶದ ಶೇ. 50 ನಾಶವಾಗಿದೆ. ಅವುಗಳ ವೈವಿಧ್ಯತೆಗೆ ಕಾರಣವಾಗಿದ್ದ ಪ್ರತ್ಯೇಕತೆಯೇ ಅವುಗಳ ದೌರ್ಬಲ್ಯವೂ ಆಗಿರಬಹುದು. ‘‘ಈ ಅನ್ವೇಷಣೆಗಳನ್ನು ನಡೆಸಲು ನಮ್ಮ ಬಳಿ ಸಮಯದ ಅಭಾವವೂ ಇರಬಹುದು ಯಾಕೆಂದರೆ ಹವಾಮಾನ ವೈಪರೀತ್ಯ ಮತ್ತು ವಾಸಸ್ಥಳಗಳ ನಾಶ ಕೆಲವೊಂದು ಇನ್ನೂ ಪತ್ತೆಹಚ್ಚಲಾಗದ ಪಕ್ಷಿ ಪ್ರಭೇದಗಳನ್ನು ಅಳಿವಿನ ಅಂಚಿಗೆ ಕೊಂಡೊಯ್ದಿರಬಹುದು’’ ಎನ್ನುತ್ತಾರೆ ಕಟ್ಟಿ. ‘‘ಕೇವಲ ಆಗಸ ದ್ವೀಪಗಳನ್ನು ಕಳೆದುಕೊಳ್ಳುವುದು ಮಾತ್ರವಲ್ಲ ವಿಕಸನೀಯವಾಗಿ ವಿಶಿಷ್ಟವಾಗಿರುವ ಈ ಜೀವಿಗಳನ್ನು ನಾವು ಅವುಗಳನ್ನು ತಿಳಿಯುವ ಮೊದಲೇ ಕಳೆದುಕೊಳ್ಳುವುದು ಕೂಡಾ ಖೇದಕರ’’ ಎನ್ನುತ್ತಾರೆ ಅವರು.
ಕೃಪೆ: thewire.in