Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ವೀಸಾ ಮಾತ್ರವಲ್ಲ ; ವಿದೇಶಿ...

ವೀಸಾ ಮಾತ್ರವಲ್ಲ ; ವಿದೇಶಿ ಉದ್ಯೋಗಿಗಳಿಗೆ ಕನಿಷ್ಠ ವೇತನವೂ ಅಗತ್ಯ

ಆರೀಫಾ ಜೊಹಾರಿಆರೀಫಾ ಜೊಹಾರಿ15 Feb 2017 10:55 PM IST
share
ವೀಸಾ ಮಾತ್ರವಲ್ಲ ; ವಿದೇಶಿ ಉದ್ಯೋಗಿಗಳಿಗೆ ಕನಿಷ್ಠ ವೇತನವೂ ಅಗತ್ಯ

 ‘‘ಭಾರತದಲ್ಲಿ ಉದ್ಯೋಗ ಪಡೆಯಲು ಬಯಸುವ ಹಲವು ಮಂದಿ ವಿದೇಶೀಯರು 20ರ ಆಸುಪಾಸಿನವರು ಹಾಗೂ ಯಾವುದೇ ಅನುಭವ ಇಲ್ಲದವರು. ಇವರಿಗೆ ಕೂಡಾ 25 ಸಾವಿರ ಡಾಲರ್‌ಗಿಂತ ಅಧಿಕ ವೇತನ ನೀಡಬೇಕಾಗುತ್ತದೆ’’ ಎನ್ನುವುದು ‘ಕ್ಲ್ಯಾಪ್ ಗ್ಲೋಬಲ್’ ಎಂಬ ಸ್ವಯಂಸೇವಾ ಸಂಸ್ಥೆಯ ಸಹ ಸಂಸ್ಥಾಪಕಿ ಆರತಿ ಛಾಬ್ರಿಯಾ ಅವರ ಅಭಿಪ್ರಾಯ. ಮುಂಬೈನ ಯುವ ಉದ್ಯಮಿಯೂ ಆಗಿರುವ ಇವರು, ರಶ್ಯಾ ಹಾಗೂ ಸ್ಪೇನ್‌ನಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುವ ತಮ್ಮ ಯತ್ನ ವಿಫಲವಾಗಿದೆ ಎಂದು ಹೇಳುತ್ತಾರೆ.

ಅಮೆರಿಕದ ಇಬ್ಬರು ಸೆನೆಟರ್‌ಗಳು ಅಮೆರಿಕಕ್ಕೆ ವಲಸೆ ಬರುವುದಕ್ಕೆ ಸಂಬಂಧಿಸಿದಂತೆ ಪ್ರಬಲ ಉದ್ಯೋಗ ಕಾಯ್ದೆಯ ಸುಧಾರಣೆಗೆ ಪ್ರಸ್ತಾವವನ್ನು ಫೆಬ್ರವರಿ 8ರಂದು ಮಂಡಿಸಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಅಮೆರಿಕಕ್ಕೆ ಕಾನೂನುಬದ್ಧವಾಗಿ ವಲಸೆ ಬರುವವರ ಸಂಖ್ಯೆಯನ್ನು ಹಾಲಿ ಇರುವ ಅರ್ಧದಷ್ಟಕ್ಕೆ ಇಳಿಸುವುದು ಇದರ ಉದ್ದೇಶ. ಆರ್‌ಎಐಎಸ್‌ಇ ಕಾಯ್ದೆ ಅನುಮೋದನೆಯಾದರೆ, ಖಾಯಂ ನಿವಾಸಿ ದಾಖಲೆಗಳ ಅಥವಾ ಗ್ರೀನ್‌ಕಾರ್ಡ್ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗುತ್ತದೆ. ಈಗ ಪ್ರತೀ ವರ್ಷ ಒಂದು ಲಕ್ಷ ಗ್ರೀನ್ ಕಾರ್ಡ್ ನೀಡುತ್ತಿದ್ದರೆ, ಕಾಯ್ದೆ ಅನುಮೋದನೆಯಾದ ಬಳಿಕ ಇದು 5 ಲಕ್ಷಕ್ಕೆ ಇಳಿಯಲಿದೆ. ಅಮೆರಿಕದಲ್ಲಿ 10-35 ವರ್ಷಗಳಿಂದ ವಾಸವಿರುವ ಹಲವು ಮಂದಿ ಭಾರತೀಯರು ಅಮೆರಿಕದ ಖಾಯಂ ಪೌರತ್ವ ಪಡೆಯಲು ಸರದಿಯಲ್ಲಿದ್ದಾರೆ. ಈ ಹೊಸ ಕಾಯ್ದೆ ಜಾರಿಗೆ ಬಂದರೆ, ಈ ಕಾಯುವಿಕೆ ಅವಧಿ ಮತ್ತಷ್ಟು ಹೆಚ್ಚುವುದು ಖಚಿತ.

ಇದರ ಜತೆಗೆ ಭಾರತೀಯರಿಗೆ ಮಾರಕವಾಗುವ ಮತ್ತೊಂದು ಮಸೂದೆ ಎಂದರೆ, ಜನವರಿ 31ರಂದು ಮಂಡಿಸಿರುವ ಮಸೂದೆ. ಇದು ಕೌಶಲ ಹೊಂದಿರುವ ವೃತ್ತಿಪರರಿಗಾಗಿ ಎಚ್-1ಬಿ ವೀಸಾ ಅಥವಾ ಉದ್ಯೋಗ ವೀಸಾಗೆ ಸಂಬಂಧಿಸಿದ್ದು. ಅಮೆರಿಕದಲ್ಲಿ ಎಚ್-1ಬಿ ವೀಸಾ ಹೊಂದಿರುವವರಲ್ಲಿ ಬಹುತೇಕ ಮಂದಿ ಭಾರತೀಯರು. ಉದ್ದೇಶಿತ ಅಧಿಕ ಕೌಶಲದ ಸಮಗ್ರ ಹಾಗೂ ನ್ಯಾಯಬದ್ಧ ಕಾಯ್ದೆಯ ಅನ್ವಯ, ಎಚ್-1ಬಿ ವೀಸಾ ಪಡೆಯಲು ಇರಬೇಕಾದ ಕನಿಷ್ಠ ವೇತನವನ್ನು 60 ಸಾವಿರ ಡಾಲರ್ (ಸುಮಾರು 40.7 ಲಕ್ಷ ರೂಪಾಯಿ)ನಿಂದ 1.30 ಲಕ್ಷ ಡಾಲರ್ (88 ಲಕ್ಷ ರೂ.)ಗೆ ಹೆಚ್ಚಿಸಲಾಗುತ್ತದೆ.

ಇದು ಅಮೆರಿಕದಲ್ಲಿ ಪ್ರತೀ ವರ್ಷ ನಿಯೋಜಿಸಿಕೊಳ್ಳುತ್ತಿರುವ ಸಾವಿರಾರು ಮಂದಿ ಹೊರಗುತ್ತಿಗೆ ನೌಕರರ ಹಾಗೂ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಗೆ ಮಾರಕವಾಗಲಿದೆ. ಇದರ ಜತೆಗೆ ಉನ್ನತ ಕೌಶಲದ ಅಥವಾ ಕಡಿಮೆ ವೇತನ ನೀಡಿ ದುಡಿಸಿಕೊಳ್ಳುತ್ತಿರುವ ಅಮೆರಿಕನ್ ಕಂಪೆನಿಗಳ ಪಾಲಿಗೂ ಇದು ದೊಡ್ಡ ತಡೆಯಾಗಲಿದೆ.

ಈ ಬಗ್ಗೆ ಅಮರಿಕದಲ್ಲಿ ನಡೆಯುತ್ತಿರುವ ದೊಡ್ಡಮಟ್ಟದ ಚರ್ಚೆಯ ಮುಂಚೂಣಿಯಲ್ಲಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿಗಳೇ ಮುಂಚೂಣಿಯಲ್ಲಿವೆ. ವಲಸೆ ಸುಧಾರಣೆಯ ಪ್ರತಿಪಾದಕರ ವಾದದಂತೆ, ಉದ್ಯೋಗದ ವೀಸಾ ಮಿತಿಗೊಳಿಸುವುದರಿಂದ, ಸ್ಥಳೀಯರಿಗೆ ಅಮೆರಿಕನ್ ಉದ್ಯೋಗ ಉಳಿದುಕೊಳ್ಳುತ್ತದೆ. ಆದರೆ ಟೆಕ್ ಕಂಪೆನಿಗಳು ಸೇರಿದಂತೆ ಬಹುತೇಕ ವಿರೋಧಿಗಳು ಪ್ರತಿಪಾದಿಸುವ ಅಂಶವೆಂದರೆ, ಮಧ್ಯಮ ಹಂತದ ಹುದ್ದೆಗಳನ್ನು ಭರ್ತಿ ಮಾಡುವ ಸೂಕ್ತ ಅಭ್ಯರ್ಥಿಗಳ ಕೊರತೆ.

ಭಾರತೀಯ ವೃತ್ತಿಪರರಿಗೆ ವೀಸಾ ಕಡಿತ ನಿರ್ಧಾರ ಬರಸಿಡಿಲಿನಂತೆ ಬಂದೆರಗಿದೆ. ಇದೇ ಮಾದರಿಯ ಚರ್ಚೆ ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಕೂಡಾ ವ್ಯಾಪಕವಾಗಿ ನಡೆದಿತ್ತು. ದೇಶದಲ್ಲಿ ಉದ್ಯೋಗ ಬಯಸುವ ವಿದೇಶೀಯರಿಗೆ ಕನಿಷ್ಠ ವೇತನದ ಅಗತ್ಯತೆಯನ್ನು ಪ್ರತಿಪಾದಿಸುವ ಬಗ್ಗೆ ವ್ಯಾಪಕ ಚರ್ಚೆ ಭಾರತದಲ್ಲೂ ನಡೆದಿತ್ತು.

25 ಸಾವಿರ ಡಾಲರ್ ನಿಯಮ

2010ರ ನವೆಂಬರ್‌ನಲ್ಲಿ ಭಾರತ ಸರಕಾರದ ಪ್ರಸ್ತಾವದಂತೆ, ಕೌಶಲ ಹೊಂದಿದ ವಿದೇಶೀಯರ ಕನಿಷ್ಠ ವೇತನ 25 ಸಾವಿರ ಡಾಲರ್ ಅಥವಾ 16,6 ಲಕ್ಷ ರೂಪಾಯಿ ಆಗಿರಬೇಕು ಎಂದು ನಿರ್ಧರಿಸಲಾಗಿತ್ತು. ಆಗ ಮಾತ್ರ ಭಾರತದಲ್ಲಿ ವಿದೇಶೀಯರು ಉದ್ಯೋಗ ವೀಸಾ ಪಡೆಯಲು ಅವಕಾಶ ಇತ್ತು. ಆದರೆ ವಿದೇಶಿ ಭಾಷಾ ಬೋಧಕರಿಗೆ ಹಾಗೂ ಭಾಷಾಂತರಕಾರರಿಗೆ ಮಾತ್ರ ಇದರಿಂದ ವಿನಾಯಿತಿ ಇತ್ತು. ಇದರ ಜತೆಗೆ ಜನಾಂಗೀಯ ಅಡುಗೆಯವರು ಹಾಗೂ ಹೈಕಮಿಷನ್ ಅಥವಾ ರಾಯಭಾರ ಕಚೇರಿಯ ಸಿಬ್ಬಂದಿಗೂ ಈ ಕಾಯ್ದೆಯಿಂದ ವಿನಾಯಿತಿ ಇತ್ತು. ಕೌಶಲರಹಿತ ವಿದೇಶಿ ಉದ್ಯೋಗಿಗಳನ್ನು ದೇಶದಿಂದ ಹೊರಕ್ಕೆ ಅಟ್ಟುವುದು ಮತ್ತು ಭಾರತೀಯರ ಉದ್ಯೋಗವನ್ನು ಸಂರಕ್ಷಿಸುವುದು ಭಾರತ ಸರಕಾರದ ಉದ್ದೇಶವಾಗಿತ್ತು. ಇದು ಭಾರತದಲ್ಲಿ ಕೆಲಸ ಮಾಡುವ ವಿದೇಶೀಯರ ಕನಿಷ್ಠ ವೇತನ ಕುರಿತ ಸುದೀರ್ಘ ಚರ್ಚೆಯನ್ನು ಹುಟ್ಟುಹಾಕಿತು.

ಭಾರತದ ಬಹುತೇಕ ಕಂಪೆನಿಗಳಿಗೆ ವಿದೇಶೀಯರನ್ನು ಅತ್ಯುನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಂಡು 25 ಸಾವಿರ ಡಾಲರ್ ವೇತನ ನೀಡುವುದು ದೊಡ್ಡ ತಡೆ ಎನಿಸಲಿಲ್ಲ.

‘‘ಭಾರತದಲ್ಲಿ ವಿದೇಶಿ ಉದ್ಯೋಗಿಗಳ ಕನಿಷ್ಠ ವೇತನ ದೊಡ್ಡ ಸಮಸ್ಯೆಯೇ ಅಲ್ಲ. ಏಕೆಂದರೆ ಭಾರತೀಯ ಕಂಪೆನಿಗಳು ಅತ್ಯುನ್ನತ ಹುದ್ದೆಗಳಿಗೆ 25 ಸಾವಿರ ಡಾಲರ್‌ಗಿಂತ ಅಧಿಕ ವೇತನ ನೀಡುತ್ತಿವೆ’’ ಎಂದು ಹಿರಿಯ ಮಾನವ ಸಂಪನ್ಮೂಲ ತಜ್ಞರೊಬ್ಬರು ಹೇಳುತ್ತಾರೆ. ಅದಕ್ಕಿಂತ ಹೆಚ್ಚಾಗಿ ವಿದೇಶೀಯರನ್ನು ನೇಮಕ ಮಾಡಿಕೊಳ್ಳುವುದು ಕಡಿಮೆ ಎನ್ನುವುದು ಅವರ ಅಭಿಮತ.

ಇದು ನಿಜ ಕೂಡಾ. ಬಹುತೇಕ ದೊಡ್ಡ ಭಾರತೀಯ ಕಂಪೆನಿಗಳು, ವಿದೇಶಿಯರನ್ನು ಅತ್ಯುನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತವೆ. ಹಲವು ಆರಂಭಿಕ ಉದ್ದಿಮೆಗಳು, ಲಾಭರಹಿತ ಸಂಸ್ಥೆಗಳು ಹಾಗೂ ಇತರ ಸಣ್ಣ ಕಂಪೆನಿಗಳು ಮಾತ್ರ ಕನಿಷ್ಠ 25 ಸಾವಿರ ಡಾಲರ್ ಎಂಬ ಮಿತಿಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಜೀವನವೆಚ್ಚಕ್ಕೆ ಅನುಗುಣ ವೇತನ

ಉದಯೋನ್ಮುಖ ಆರ್ಥಿಕತೆಯಲ್ಲಿ, ಭಾರತವು ವಿಶ್ವದ ಎಲ್ಲ ಯುವ ವೃತ್ತಿಪರರಿಗೆ ಅತ್ಯಾಕರ್ಷಕ ಉದ್ಯೋಗ ತಾಣವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪೂರ್ವ ಯೂರೋಪ್‌ನಿಂದ ಅಧಿಕ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಸಿಗುತ್ತಾರೆ. ವಿಭಿನ್ನ ಅನುಭವ ಹಾಗೂ ಸಂಸ್ಕೃತಿಯನ್ನು ಅರಸಿ ಇಲ್ಲಿಗೆ ಬರುವವರಿದ್ದಾರೆ.

‘‘ಭಾರತದಲ್ಲಿ ಉದ್ಯೋಗ ಪಡೆಯಲು ಬಯಸುವ ಹಲವು ಮಂದಿ ವಿದೇಶೀಯರು 20ರ ಆಸುಪಾಸಿನವರು ಹಾಗೂ ಯಾವುದೇ ಅನುಭವ ಇಲ್ಲದವರು. ಇವರಿಗೆ ಕೂಡಾ 25 ಸಾವಿರ ಡಾಲರ್‌ಗಿಂತ ಅಧಿಕ ವೇತನ ನೀಡಬೇಕಾಗುತ್ತದೆ’’ ಎನ್ನುವುದು ‘ಕ್ಲ್ಯಾಪ್ ಗ್ಲೋಬಲ್’ ಎಂಬ ಸ್ವಯಂಸೇವಾ ಸಂಸ್ಥೆಯ ಸಹ ಸಂಸ್ಥಾಪಕಿ ಆರತಿ ಛಾಬ್ರಿಯಾ ಅವರ ಅಭಿಪ್ರಾಯ. ಮುಂಬೈನ ಯುವ ಉದ್ಯಮಿಯೂ ಆಗಿರುವ ಇವರು, ರಶ್ಯಾ ಹಾಗೂ ಸ್ಪೇನ್‌ನಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುವ ತಮ್ಮ ಯತ್ನ ವಿಫಲವಾಗಿದೆ ಎಂದು ಹೇಳುತ್ತಾರೆ. ನಮ್ಮ ಕೆಲಸದಲ್ಲಿ ಮುಖ್ಯವಾಗಿ ವಿದೇಶಿ ಪ್ರವಾಸಿಗಳನ್ನು ನಿರ್ವಹಿಸುವುದು ಸೇರುತ್ತದೆ. ಈ ಕಾರಣದಿಂದ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದು ಅನಿವಾರ್ಯ ಎಂದು ಹೇಳುತ್ತಾರೆ.

2013ರಿಂದೀಚೆಗೆ, ಸರಕಾರ ಹಲವು ಬಾರಿ ವಿದೇಶೀಯರ ಕನಿಷ್ಠ ವೇತನ ಮಿತಿಯನ್ನು ಕಡಿಮೆ ಮಾಡುವ ಸಂಬಂಧ ಹಲವು ಸಭೆಗಳನ್ನು ನಡೆಸಿದೆ. ಆದರೆ ಇಂದಿಗೂ ಅದೇ ನಿಯಮಾವಳಿ ಉಳಿದುಕೊಂಡಿದೆ. ಹಲವು ಸ್ವಯಂಸೇವಾ ಸಂಸ್ಥೆಗಳು ವಿದೇಶೀಯರನ್ನು ಮಾಸಿಕ 25 ಸಾವಿರ ಡಾಲರ್ ವಿದ್ಯಾರ್ಥಿ ವೇತನ ನೀಡಿ ಕರೆಸಿಕೊಳ್ಳುತ್ತಿವೆ.

ಆದರೆ ಛಾಬ್ರಿಯಾ, ‘‘ಸರಕಾರದ ನಿಯಮಾವಳಿ ವಾಸ್ತವಕ್ಕೆ ಪೂರಕವಲ್ಲ’’ ಎಂದು ಛಾಬ್ರಿಯಾ ದೂರುತ್ತಾರೆ. ದೇಶದ ಜೀವನ ವೆಚ್ಚ ಸೂಚ್ಯಂಕಕ್ಕೆ ಅನುಗುಣವಾಗಿ ವಿದೇಶೀಯರಿಗೆ ವೇತನ ನಿಗದಿಪಡಿಸಬೇಕು ಎನ್ನುವುದು ಅವರ ಸ್ಪಷ್ಟ ನಿಲುವು.

share
ಆರೀಫಾ ಜೊಹಾರಿ
ಆರೀಫಾ ಜೊಹಾರಿ
Next Story
X