ಅನ್ನಭಾಗ್ಯದ ಉಪ್ಪು ಮತ್ತು ಮಾಧ್ಯಮಗಳ ಅಜ್ಞಾನ

ಅಯೋಡಿನ್‌ಯುಕ್ತ ಉಪ್ಪುಸಿದ್ದರಾಮಯ್ಯ ನೀಡಿದರೂ, ಯಡಿಯೂರಪ್ಪ ನೀಡಿದರೂ ಅಯೋಡಿನ್ ಮತ್ತು ಸ್ಟಾರ್ಚ್‌ನ ಸಂಯೋಜನೆಯಿಂದಾಗುವ ರಾಸಾಯನಿಕ ಕ್ರಿಯೆಯನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಅವು ಅವುಗಳ ಸಹಜ ಗುಣದಂತೆ ನೀಲಿ ಬಣ್ಣಕ್ಕೆ ತಿರುಗಲೇಬೇಕಾಗುತ್ತದೆ.
ಇತ್ತೀಚೆಗೆ ನಮ್ಮ ಅನೇಕ ಮಾಧ್ಯಮಗಳು ಅನ್ನಭಾಗ್ಯದ ಉಪ್ಪಿನಲ್ಲಿ ವಿಷವಿದೆಯೆಂಬ ಸುದ್ದಿಯನ್ನು ಪ್ರಕಟಿಸಿದವು ಮತ್ತು ಪ್ರಸಾರ ಮಾಡಿದವು. ಅದಕ್ಕೆ ಅವುಗಳು ನೀಡಿದ ಕಾರಣ ‘‘ಉಪ್ಪುನೀಲಿ ಬಣ್ಣಕ್ಕೆ ತಿರುಗುತ್ತದೆ’’. ಹೌದು ಉಪ್ಪು ನೀಲಿ ಬಣ್ಣಕ್ಕೆ ತಿರುಗಿದ್ದು, ತಿರುಗುತ್ತಿರುವುದು ನೂರು ಶೇಕಡಾ ಸತ್ಯ. ಅಂದ ಮಾತ್ರಕ್ಕೆ ಅದು ವಿಷವಲ್ಲ ಮತ್ತು ಅದು ಕೃತಕ ಬಣ್ಣವೂ ಅಲ್ಲ. ಹಾಗಾದರೆ ಅದು ಏನು? ಮುಂದೆ ಓದಿ.
ನೀವು ಟಿ.ವಿ.ಯಲ್ಲಿ ಅಯೋಡಿನ್‌ಯುಕ್ತ ಉಪ್ಪಿನ ಜಾಹೀರಾತು ನೋಡಿರಬಹುದು. ನಾವೆಲ್ಲಾ ಮಾಧ್ಯಮಿಕ ಶಾಲೆಯಲ್ಲಿ ಓದಿರುತ್ತೇವೆ. ‘‘ಅಯೋಡಿನ್ ಕೊರತೆಯಿಂದ ಗಳಗಂಡ (GOITRE) ಎಂಬ ಕಾಯಿಲೆ ಬರುತ್ತದೆ’’. ನಮಗೆ ಅಯೋಡಿನ್ ಸಿಗುವ ಮತ್ತು ಸಿಗಬೇಕಾದ ಅತೀ ಮುಖ್ಯ ಮೂಲವೇ ಉಪ್ಪು.
ಅಯೋಡಿನ್ ಮತ್ತು ಸ್ಟಾರ್ಚ್ (ಪಿಷ್ಠ) ಒಂದುಗೂಡಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ (Chemical Reaction) ನೀಲಿ ಬಣ್ಣ ಸೃಷ್ಟಿಯಾಗುತ್ತದೆ. ಇದು ಅವೆರಡೂ ದ್ರಾವಣಗಳ ಸಂಯೋಜನೆಯಿಂದ ಉಂಟಾಗುವ ಸಹಜ ಪರಿಣಾಮವೇ ಹೊರತು ವಿಷವೂ ಅಲ್ಲ, ಕೃತಕ ಬಣ್ಣವೂ ಅಲ್ಲ. ಯಾವ ಉಪ್ಪುಕೂಡಾ ತನ್ನಿಂತಾನೇ ನೀಲಿ ಬಣ್ಣಕ್ಕೆ ತಿರುಗುವುದೂ ಇಲ್ಲ ಮತ್ತದು ಸಾಧ್ಯವೂ ಇಲ್ಲ.
ಅಯೋಡಿನ್‌ಯುಕ್ತ ಉಪ್ಪಿಗೆ ಗಂಜಿ ನೀರು ತಾಗಿದಾಗ ಒಮ್ಮೆ ಅದು ನೀಲಿ ಬಣ್ಣಕ್ಕೆ ತಿರುಗಲೇಬೇಕು. ಅಯೋಡಿನ್‌ಯುಕ್ತ ಉಪ್ಪಿನ ಮೇಲೆ ಕೆಲವು ಹನಿ ಗಂಜಿ ನೀರನ್ನು ಚಿಮುಕಿಸಿದಾಗ ಗಂಜಿ ನೀರು ತಾಗಿದ ಭಾಗದ ಉಪ್ಪುನೀಲಿ ಬಣ್ಣಕ್ಕೆ ತಿರುಗುತ್ತದೆ. (ಅಯೋಡಿನ್ ಕಡಿಮೆಯೂ ಸ್ಟಾರ್ಚ್ ಅಧಿಕವೂ ಇದ್ದಾಗ ಈ ಪ್ರಯೋಗ ಫಲಿತಾಂಶ ನೀಡದು) ಯಾಕೆಂದರೆ ಯಾವುದೇ ಗಂಜಿ ನೀರೂ ಸ್ಟಾರ್ಚ್ (ಪಿಷ್ಠ)ನಿಂದ ಮುಕ್ತವಾಗಿರಲು ಸಾಧ್ಯವಿಲ್ಲ ಅಂದ ಮಾತ್ರಕ್ಕೆ ಸ್ಟಾರ್ಚ್ ಎಂದರೆ ಅದು ವಿಷವೇನೂ ಅಲ್ಲ. ಒಂದು ನಿರ್ದಿಷ್ಟ ಮಟ್ಟದ ಸ್ಟಾರ್ಚ್ ಪ್ರತಿಯೊಂದು ಜೀವಿಗೂ ಅಗತ್ಯ. ಸ್ಟಾರ್ಚ್ ಮತ್ತು ಅಯೋಡಿನ್ ಸೇರಿದಾಗ ಸೃಷ್ಟಿಯಾಗುವ ನೀಲಿ ಬಣ್ಣ ಶಾಶ್ವತವಲ್ಲ. ಆ ನೀಲಿ ಬಣ್ಣದ ಆಯುಷ್ಯ ಕೆಲವು ಕ್ಷಣ ಮಾತ್ರ. ಅಯೋಡಿನ್ ಸ್ಟಾರ್ಚ್‌ನೊಂದಿಗೆ ಮಿಶ್ರವಾಗುತ್ತಲೇ ನೀಲಿ ಬಣ್ಣ ಮಾಯವಾಗುತ್ತದೆ. ಇದಕ್ಕೆ ಇನ್ನೊಂದು ಉದಾಹರಣೆ ನೋಡೋಣ.
Betadine ನಮಗೆ ಯಾವುದಾದರೂ ಗಾಯವಾದಾಗ ನಾವು ವೈದ್ಯರ ಬಳಿ ಹೋಗುತ್ತೇವೆ. ಆಗ ವೈದ್ಯ ಗಾಯವನ್ನು ತೊಳೆದು ಅದಕ್ಕೆ ಎಂಬ ದ್ರಾವಣವನ್ನೋ ಅಥವಾ ಮುಲಾಮನ್ನೋ ಹಚ್ಚಿ ಬ್ಯಾಂಡೇಜು ಕಟ್ಟುತ್ತಾನೆ. ಬ್ಯಾಂಡೇಜು ಕಟ್ಟಿದ ಕೆಲವು ನಿಮಿಷಗಳ ಕಾಲ ಬ್ಯಾಂಡೇಜಿನ ಬಟ್ಟೆಯ ಒಳಗಿಂದ ಅಲ್ಲಲ್ಲಿ ನೀಲಿ ಬಣ್ಣ ಕಾಣಿಸುತ್ತದೆ. ಸ್ವಲ್ಪ ಸಮಯದಲ್ಲಿ ಅದು ತನ್ನಿಂತಾನೇ ಮಾಯವಾಗುತ್ತದೆ.Betadine BetadinePovidine - Iodineನ ಬಣ್ಣ ಒಂಥರಾ ಕಡು ಕಾಫಿ ಬಣ್ಣ. ಆದಾಗ್ಯೂ ಬ್ಯಾಂಡೇಜು ಬಟ್ಟೆಯಲ್ಲಿ ಯಾಕೆ ನೀಲಿ ಬಣ್ಣ ಕಾಣಿಸಿಕೊಳ್ಳುತ್ತದೆ ಗೊತ್ತೇ? ಎಂಬ ಮುಲಾಮು ಅಥವಾ ದ್ರಾವಣದಲ್ಲಿ ಎಂಬ ಮೂಲ ಧಾತುಗಳಿರುತ್ತವೆ. ಅಲ್ಲಿರುವ ಅಯೋಡಿನ್ ಸ್ಟಾರ್ಚ್‌ನೊಂದಿಗೆ ಸಂಯೋಜನೆಗೊಂಡು ನೀಲಿ ಬಣ್ಣ ಸೃಷ್ಟಿಯಾಗುತ್ತದೆ. ಈಗ ನಿಮ್ಮಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಬಹುದು. ಅಲ್ಲಿ ಸ್ಟಾರ್ಚ್ ಎಲ್ಲಿಂದ ಬಂತು? ಬ್ಯಾಂಡೇಜ್ ಕಟ್ಟುವ ಬಟ್ಟೆ ತಯಾರಿಸುವಾಗ ಅದು ಗರಿಗರಿಯಾಗಿ ನಿಲ್ಲಲು ಅದಕ್ಕೆ ಸ್ಟಾರ್ಚ್ ಹಾಕಲಾಗುತ್ತದೆ. ಒಂದು ವೇಳೆ ಸ್ಟಾರ್ಚ್ ಹಾಕದೇ ಆ ಬಟ್ಟೆ ತಯಾರಿಸಿದರೆ ಅದು ಗರಿಗರಿಯಾಗಿ ಸ್ಟಿಫ್ ಆಗಿ ನಿಲ್ಲದು. ಅದು ಮುದ್ದೆ ಮುದ್ದೆಯಾಗಿ ಬಿಡುತ್ತದೆ. ಆದುದರಿಂದ ಅದಕ್ಕೆ ಸ್ಟಾರ್ಚ್ ಹಾಕಲೇಬೇಕಾಗುತ್ತದೆ.
ಯಾರ ಮೇಲಾದರೂ, ಯಾವುದರ ಮೇಲಾದರೂ ಯಾವುದೇ ಆರೋಪ ಹೊರಿಸುವ ಮುನ್ನ ಅದರ ಹಿಂದಿನ ನೈಜ ಕಾರಣವನ್ನು ಅರಿಯಬೇಕು. ಅದಕ್ಕಾಗಿಯೇ ಕನ್ನಡದಲ್ಲಿ ‘‘ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು’’ಎಂಬ ಉಕ್ತಿಯಿರುವುದು. ಈ ಮೇಲಿನ ಕಾರಣ ರಸಾಯನ ಶಾಸ್ತ್ರ ಓದಿದ ಪ್ರತಿಯೊಬ್ಬನಿಗೂ ತಿಳಿದಿರುತ್ತದೆ. ಇದು ನನ್ನ (ಲೇಖಕನ) ಹೊಸ ಸಂಶೋಧನೆಯೇನೂ ಅಲ್ಲ. ಅಯೋಡಿನ್‌ಯುಕ್ತ ಉಪ್ಪುಸಿದ್ದರಾಮಯ್ಯ ನೀಡಿದರೂ, ಯಡಿಯೂರಪ್ಪ ನೀಡಿದರೂ ಅಯೋಡಿನ್ ಮತ್ತು ಸ್ಟಾರ್ಚ್‌ನ ಸಂಯೋಜನೆಯಿಂದಾಗುವ ರಾಸಾಯನಿಕ ಕ್ರಿಯೆಯನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಅವು ಅವುಗಳ ಸಹಜ ಗುಣದಂತೆ ನೀಲಿ ಬಣ್ಣಕ್ಕೆ ತಿರುಗಲೇಬೇಕಾಗುತ್ತದೆ.