Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಜೈಲು ಸೇರಿದ ಚಿನ್ನಮ್ಮ :ಪ್ರಕರಣದ ಮಹತ್ವದ...

ಜೈಲು ಸೇರಿದ ಚಿನ್ನಮ್ಮ :ಪ್ರಕರಣದ ಮಹತ್ವದ ತಿರುವುಗಳು

ಮಾನ್ವಿ ಪರಾಶರ್ಮಾನ್ವಿ ಪರಾಶರ್17 Feb 2017 11:37 PM IST
share
ಜೈಲು ಸೇರಿದ ಚಿನ್ನಮ್ಮ :ಪ್ರಕರಣದ ಮಹತ್ವದ ತಿರುವುಗಳು

ಇದೀಗ ಶಶಿಕಲಾ ವಿರುದ್ಧದ ತೀರ್ಪಿನ ಪರಿಣಾಮವಾಗಿ, ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಂಡಿದ್ದಾರೆ ಹಾಗೂ ರಾಜ್ಯದ ಸಿಎಂ ಗಾದಿ ಹಿಡಿಯುವ ಅವರ ಕನಸು ನುಚ್ಚುನೂರಾಗಿದೆ. ಜೈಲಿನಿಂದ ಬಿಡುಗಡೆಯಾದ ಆರು ವರ್ಷಗಳ ಅವಧಿಗೆ ಅವರು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇಲ್ಲ. ಅಂದರೆ ಹತ್ತು ವರ್ಷಗಳ ಕಾಲ ಸಕ್ರಿಯ ರಾಜಕಾರಣದಿಂದ ಅವರು ಹೊರಗಿರಬೇಕಾಗಿದೆ.

ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಅಕ್ರಮ ಸಂಪತ್ತು ಕ್ರೋಡೀಕರಣ ಸಂಬಂಧ ಸುಪ್ರೀಂಕೋರ್ಟ್ ಇತ್ತೀಚೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಂಕಿ ಅಂಶಗಳು ಮತ್ತು ತಾತ್ವಿಕ ದೋಷಗಳನ್ನು ಒಳಗೊಂಡ ಹೈಕೋರ್ಟ್ ತೀರ್ಪನ್ನು ದೇಶದ ಅತ್ಯುನ್ನತ ನ್ಯಾಯಾಲಯ ತಳ್ಳಿಹಾಕಿದೆ. ಕಳೆದ ಡಿಸೆಂಬರ್‌ನಲ್ಲಿ ಅಸೌಖ್ಯದಿಂದ ನಿಧನರಾದ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧವೂ ತನಿಖೆ ನಡೆಯುತ್ತಿತ್ತು. ಆದರೆ ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆರೋಪ ಕೈಬಿಡಲಾಗಿದೆ.

ಇದೀಗ ಶಶಿಕಲಾ ವಿರುದ್ಧದ ತೀರ್ಪಿನ ಪರಿಣಾಮವಾಗಿ, ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಂಡಿದ್ದಾರೆ ಹಾಗೂ ರಾಜ್ಯದ ಸಿಎಂ ಗಾದಿ ಹಿಡಿಯುವ ಅವರ ಕನಸು ನುಚ್ಚುನೂರಾಗಿದೆ. ಜೈಲಿನಿಂದ ಬಿಡುಗಡೆಯಾದ ಆರು ವರ್ಷಗಳ ಅವಧಿಗೆ ಅವರು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇಲ್ಲ. ಅಂದರೆ ಹತ್ತು ವರ್ಷಗಳ ಕಾಲ ಸಕ್ರಿಯ ರಾಜಕಾರಣದಿಂದ ಅವರು ಹೊರಗಿರಬೇಕಾಗಿದೆ.

ಸುದೀರ್ಘ ಪಯಣ

2014ರ ಸೆಪ್ಟಂಬರ್ 27ರಂದು ಬೆಂಗಳೂರಿನ ವಿಶೇಷ ನ್ಯಾಯಾಧೀಶ ಜಾನ್ ಮೈಕೆಲ್ ಡಿಕುನ್ಹಾ ಅವರು ಅಕ್ರಮ ಸಂಪತ್ತು ಪ್ರಕರಣದ ವಿಚಾರಣೆ ನಡೆಸಿ, ಜಯಲಲಿತಾ, ಶಶಿಕಲಾ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರ ತಡೆ ಪ್ರಕರಣದಲ್ಲಿ ನಾಲ್ಕು ವರ್ಷ ಶಿಕ್ಷೆ ವಿಧಿಸಿದ್ದರು. ಜಯಲಲಿತಾ ಹಾಗೂ ಶಶಿಕಲಾ ಮೊದಲನೆ ಹಾಗೂ ಎರಡನೆ ಆರೋಪಿಗಳಾಗಿದ್ದರು. ಹತ್ತು ವರ್ಷಗಳ ಅವಧಿಗೆ ರಾಜಕೀಯ ಅನರ್ಹತೆ ಪಡೆದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಅಧಿನಾಯಕಿಯಾಗಿದ್ದ ಜಯಲಲಿತಾ ತಕ್ಷಣ ಸಿಎಂ ಗಾದಿ ತ್ಯಜಿಸಿದ್ದರು. ಆದರೆ 2015ರ ಮೇ 11ರಂದು ಕರ್ನಾಟಕ ಹೈಕೋರ್ಟ್, ಆರೋಪಿಗಳನ್ನು ದೋಷಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ಜಯಲಲಿತಾ ಸಿಎಂ ಗಾದಿಯನ್ನು ಮತ್ತೆ ಅಲಂಕರಿಸಿದ್ದರು.

ಸುಪ್ರೀಂಕೋರ್ಟ್ ಮಂಗಳವಾರ ಇತ್ಯರ್ಥಪಡಿಸಿದ ಭ್ರಷ್ಟಾಚಾರ ಪ್ರಕರಣ ಎರಡು ದಶಕದಷ್ಟು ಹಳೆಯದು. ಜಯಲಲಿತಾ ಮೊದಲ ಬಾರಿಗೆ ಸಿಎಂ ಆದ ಬಳಿಕ ನಡೆದ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರ ಕಳೆದುಕೊಂಡರು. ಜಯಾ ಅವರು 1989-90ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಹಾಗೂ 1991ರಲ್ಲಿ ಸಿಎಂ ಆಗಿದ್ದಾಗ ಘೋಷಿಸಿದ ಸಂಪತ್ತಿನ ಆಧಾರದಲ್ಲಿ ಆಗ ಜನತಾ ಪಕ್ಷದಲ್ಲಿದ್ದು, ಈಗ ಬಿಜೆಪಿ ಸೇರಿರುವ ಸುಬ್ರಮಣಿಯನ್ ಸ್ವಾಮಿ ಪ್ರಕರಣ ದಾಖಲಿಸಿದ್ದರು.

ಈ ದೂರನ್ನು ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಅಪರಾಧ ದಂಡಸಂಹಿತೆಯ ಸೆಕ್ಷನ್ 202ರ ಅನ್ವಯ ಪರಿಗಣಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಲು ಲೆತಿಕಾ ಶರಣ್ ಎಂಬ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಎರಡು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

1997: ಆರೋಪಪಟ್ಟಿ

ಈ ಆದೇಶವನ್ನು ಜಯಲಲಿತಾ ಹಾಗೂ ಶಶಿಕಲಾ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರಿಂದ ಅಲ್ಪಕಾಲದವರೆಗೆ ತನಿಖೆಗೆ ತಡೆಯಾಜ್ಞೆ ಸಿಕ್ಕಿತ್ತು. ಆದರೆ ಬಳಿಕ ಹೈಕೋರ್ಟ್ ಆದೇಶದಂತೆ, ವಿಚಕ್ಷಣಾ ಮತ್ತು ಭ್ರಷ್ಟಾಚಾರ ತಡೆ ನಿರ್ದೇಶನಾಲಯ ಪ್ರಕರಣದ ಬಗ್ಗೆ ತನಿಖೆ ನಡೆಸಿತು. ವಿಚಾರಣೆ ವೇಳೆ ಹಲವು ಪುರಾವೆಗಳು ಕಂಡುಬಂದಿದ್ದು, ಚೆನ್ನೈನ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು.

1997ರಲ್ಲಿ ವಿಶೇಷ ನ್ಯಾಯಾಲಯ, ಜಯಲಲಿತಾ, ಶಶಿಕಲಾ, ವಿ.ಎನ್. ಸುಧಾಕರನ್ ಹಾಗೂ ಜೆ. ಇಳವರಸಿ ಅವರಿಗೆ ಸಮನ್ಸ್ ಜಾರಿಗೊಳಿಸಿತು. ವಿಚಾರಣೆ ನಡೆಸಿದ ಅವರು, ಆರೋಪಿಗಳ ವಿರುದ್ಧ ಭಾರತದ ದಂಡಸಂಹಿತೆ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅನ್ವಯ ಆರೋಪಪಟ್ಟಿ ಅಂತಿಮಪಡಿಸಿದರು.

ಆರೋಪವನ್ನು ಆರೋಪಿಗಳು ನಿರಾಕರಿಸಿದರು. ಈ ಮಧ್ಯೆ ವಿಚಕ್ಷಣಾ ಮತ್ತು ಭ್ರಷ್ಟಾಚಾರ ತಡೆ ವಿಭಾಗ ಮತ್ತಷ್ಟು ತನಿಖೆ ನಡೆಸಿ, ಅಕ್ರಮ ಸಂಪತ್ತಿನ ಬಗ್ಗೆ ಮಾಹಿತಿ ಕಲೆ ಹಾಕಿತು. ಶ್ರೀಲಂಕಾ, ದುಬೈ, ಮಲೇಶ್ಯಾ, ಸಿಂಗಾಪುರ, ಹಾಂಕಾಂಗ್‌ನಲ್ಲಿ ಕೂಡಾ ಆಸ್ತಿ ಇರುವುದಕ್ಕೆ ಪುರಾವೆಗಳನ್ನು ಸಂಗ್ರಹಿಸಿತು. ಎರಡೂ ಪ್ರಕರಣಗಳ ಬಗ್ಗೆ ಜಂಟಿ ವಿಚಾರಣೆ ಆರಂಭವಾಯಿತು. ವಿಚಾರಣೆ ವೇಳೆ 258 ಸಾಕ್ಷಿಗಳನ್ನು ಪರಿಶೀಲಿಸಲಾಯಿತು.

2003: ಕರ್ನಾಟಕಕ್ಕೆ ವರ್ಗ

ಜಯಲಲಿತಾ 2001ರಲ್ಲಿ ಅಧಿಕಾರಕ್ಕೆ ಮರಳಿದ ಬಳಿಕ, ಡಿಎಂಕೆ ಪ್ರಧಾನ ಕಾರ್ಯದರ್ಶಿ ಅಂನ್ಬಳಗನ್, ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನಿಂದ ಹೊರಗೆ ವರ್ಗಾಯಿಸಬೇಕು ಎಂದು ಕೋರಿದರು. 2003ರ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್, ಈ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸಿತು.

ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಹಾಗೂ ತಕ್ಷಣಕ್ಕೆ ವಿಚಾರಣೆ ಆರಂಭಿಸುವುದೂ ಸೇರಿದಂತೆ ಹಲವು ಷರತ್ತುಗಳನ್ನು ಇದಕ್ಕೆ ವಿಧಿಸಲಾಗಿತ್ತು. ತಮಿಳುನಾಡಿನಲ್ಲಿ ವಿಚಾರಣೆ ನಡೆದರೆ ನ್ಯಾಯಸಮ್ಮತವಾಗಿ ನಡೆಯುವುದು ಸಾಧ್ಯವಿಲ್ಲ; ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ ಪ್ರಕರಣ ವರ್ಗಾಯಿಸಲಾಗಿತ್ತು.

ಕಳೆದ ವರ್ಷ ನೀಡಿದ ತೀರ್ಪಿನಲ್ಲಿ ವಿಚಾರಣಾ ನ್ಯಾಯಾಧೀಶ ಜಾನ್ ಮೈಕೆಲ್ ಡಿಕುನ್ನಾ, ಈ ನ್ಯಾಯಾಲಯದ ಮುಂದೆ ವಿಚಾರಣೆ ಆರಂಭವಾದ ಬಳಿಕ ಪ್ರತೀ ಹಂತದಲ್ಲಿ ಆರೋಪಿಗಳು ಅರ್ಜಿ ಸಲ್ಲಿಸಿ, ಹಲವು ಆಕ್ಷೇಪಗಳನ್ನು ಎತ್ತಿದ್ದರು. ಇದು ಮುಕ್ತ ಹಾಗೂ ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಆಪಾದಿಸಿದ್ದರು.

ಈ ನ್ಯಾಯಾಲಯ ಹೊರಡಿಸಿದ ಪ್ರತೀ ಆದೇಶವನ್ನು ಹೈಕೋರ್ಟ್‌ನಲ್ಲಿ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರಿಂದ ವಿಚಾರಣೆ ವಿಳಂಬವಾಯಿತು ಎಂದು ಹೇಳಿದ್ದರು.

ಪ್ರಕರಣ 18 ವರ್ಷ ಸುದೀರ್ಘ ಅವಧಿಗೆ ವಿಸ್ತರಿಸಲು ಜಯಲಲಿತಾ ಹಾಗೂ ಶಶಿಕಲಾ ಪದೇ ಪದೇ ಮೇಲ್ಮನವಿ ಸಲ್ಲಿಸಿರುವುದು ಕಾರಣವಾಗಿತ್ತು.

ಆರೋಪಗಳೇನು?

ಸಿಎಂ ಆಗಿರುವ ಅವಧಿಯಲ್ಲೇ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷೆಗೆ ಒಳಗಾದ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಪಾತ್ರರಾದ ಜಯಲಲಿತಾ ಈ ಪ್ರಕರಣದ ಮೊದಲ ಆರೋಪಿ. ಖ್ಯಾತ ನಟಿ ಎನ್.ಆರ್.ಸಂಧ್ಯಾ ಅವರ ಮಗಳಾದ ಜಯಲಲಿತಾ, 1964-1972ರ ಅವಧಿಯಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ತಾಯಿಯ ನಿಧನದ ಬಳಿಕ, ವಂಶಪಾರಂಪರ್ಯವಾಗಿ ಅವರಿಗೆ ಕೆಲ ಆಸ್ತಿ ಬಂತು.

ಆಂಧ್ರಪ್ರದೇಶದಲ್ಲಿ 13 ಎಕರೆ ಜಾಗ, ಹೈದರಾಬಾದ್‌ನಲ್ಲಿ ಒಂದು ಮನೆ, ಪೋಯೆಸ್ ಗಾರ್ಡನ್ ಕೂಡಾ ಈ ಅವಧಿಯಲ್ಲಿ ಅವರಿಗೆ ಸೇರಿದ ಆಸ್ತಿಯಾಗಿತ್ತು. 1988ರಿಂದ 1996ರವರೆಗೆ ಜಯಲಲಿತಾ ಪೋಯೆಸ್ ಗಾರ್ಡನ್‌ನ ಖಾಯಂ ನಿವಾಸಿಯಾಗಿದ್ದರು. ಶಶಿಕಲಾ ಕೂಡಾ ಅವರ ಜತೆಗಿದ್ದರು.

1992ರಿಂದ 1997ರವರೆಗೆ, ಜಯಲಲಿತಾ ಅವರ ದತ್ತುಪುತ್ರ ವಿ.ಎನ್.ಸುಧಾಕರನ್ ಕೂಡಾ ಜತೆಗೆ ವಾಸವಿದ್ದರು. ಪತಿಯ ನಿಧನದ ಬಳಿಕ ಶಶಿಕಲಾ ನಟರಾಜನ್ ಅವರ ಅಣ್ಣನನ್ನು ವಿವಾಹವಾಗಿದ್ದ ಜೆ. ಇಳವರಸಿ ಕೂಡಾ ಪೋಯೆಸ್ ಗಾರ್ಡನ್ ಸೇರಿದರು. ಈ ನಾಲ್ಕು ಮಂದಿ ಪ್ರಕರಣದ ಪ್ರಮುಖ ಆರೋಪಿಗಳು.

ಜಯಲಲಿತಾ ಅವರು ಶಶಿಕಲಾ ಜತೆ ಸೇರಿ ಹಲವು ಕಂಪೆನಿಗಳನ್ನು ಜಂಟಿಯಾಗಿ ಹುಟ್ಟುಹಾಕಿದರು. ಈ ಕಂಪೆನಿಗಳು ಹಲವು ಆಸ್ತಿ, ಸ್ಥಿರಾಸ್ತಿ ಹಾಗೂ ಹಣವನ್ನು ಪಡೆದು ಈ ಕಂಪೆನಿಗಳಲ್ಲಿ ಹೂಡಿದರು. ಆದರೆ ಈ ಕಂಪೆನಿಗಳು ವಾಸ್ತವವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. 1991ರ ಬಳಿಕ, ಶಶಿಕಲಾ, ಸುಧಾಕರನ್ ಹಾಗೂ ಇಳವರಸಿ ಹೆಸರಿನಲ್ಲಿ 31 ಕಂಪೆನಿಗಳು ತಲೆ ಎತ್ತಿದವು. ಇವುಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಿಲ್ಲ ಹಾಗೂ ವಾಣಿಜ್ಯ ತೆರಿಗೆ ಮೌಲ್ಯಮಾಪನವೂ ಆಗಿರಲಿಲ್ಲ. ಜಯಲಲಿತಾ ಅವರ ಆಸ್ತಿ ಹಾಗೂ ಸಂಪತ್ತು, ಅವರ ಆದಾಯ ಮೂಲದ ಪ್ರಮಾಣಕ್ಕಿಂತ ರೂ. 66 ಕೋಟಿಯಷ್ಟು ಅಧಿಕವಾಗಿರುವುದು ಪತ್ತೆಯಾಯಿತು.

ಜಯಾ ವಕೀಲರ ವಾದ

ಆದರೆ ಪ್ರಕರಣಗಳ ವಿಚಾರಣೆ ಹಾಗೂ ತನಿಖೆ ವೇಳೆ ಕಾನೂನುಬಾಹಿರ ವಿಧಾನಗಳನ್ನು ಅನುಸರಿಸಲಾಗಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿ, ಜಯಾ ಪರ ವಕೀಲರು ವಾದ ಮಂಡಿಸಿದರು ಹಾಗೂ ತನಿಖೆಯ ಕಾನೂನುಬದ್ಧತೆಯನ್ನೇ ಪ್ರಶ್ನಿಸಿದರು.

ಇದು ಭ್ರಷ್ಟಾಚಾರ ತಡೆ ಕಾಯ್ದೆಗೆ ಅನುಗುಣವಾಗಿ ಇಲ್ಲ ಎಂದು ವಾದಿಸಿದರು. ಸಂವಿಧಾನದ 21ನೆ ವಿಧಿಯ ಅನ್ವಯ ಭ್ರಷ್ಟಾಚಾರ ತಡೆ ಕಾಯ್ದೆಯೇ ಕಾನೂನುಬಾಹಿರವಾಗುತ್ತದೆ ಎಂದು ವಾದಿಸಿ, ಈ ಆರೋಪಗಳು ರಾಜಕೀಯ ದುರುದ್ದೇಶದ್ದು ಎಂದು ಪ್ರತೀಪಾದಿಸಿದರು

ಆದರೆ ರಾಜ್ಯಪಾಲರು ಈ ತನಿಖೆಗೆ ನೀಡಿರುವ ಒಪ್ಪಿಗೆ ಕಾನೂನುಬದ್ಧ ಎಂಬ ವಾದವನ್ನು ಸರಕಾರ ಪ್ರತೀಪಾದಿಸಿತು. ದಾಖಲೆಗಳು ಹಾಗೂ ಅಧಿಕಾರಿಗಳ ಸಾಕ್ಷ್ಯವನ್ನು ಪರಿಶೀಲಿಸಿದ ನ್ಯಾಯಾಲಯ, ಭ್ರಷ್ಟಾಚಾರ ತಡೆ ಕಾಯ್ದೆಯ ಅನ್ವಯ ಕಾನೂನುಬದ್ಧ ಎಂದು ಅಭಿಪ್ರಾಯಪಟ್ಟಿತು. ರಾಜಕೀಯ ದುರುದ್ದೇಶದ್ದು ಎಂಬ ಆರೋಪವನ್ನು ಕೂಡಾ ಸುಪ್ರೀಂಕೋರ್ಟ್, 2003ರಲ್ಲೇ ಪ್ರಕರಣ ವರ್ಗಾವಣೆ ವೇಳೆ ತಳ್ಳಿಹಾಕಿದೆ ಎನ್ನುವುದನ್ನೂ ನ್ಯಾಯಾಲಯ ಹೇಳಿತು.

ಸುಪ್ರೀಂಕೋರ್ಟ್ ಈ ಬಗ್ಗೆ ನೀಡಿದ ತೀರ್ಪಿನಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ರಾಜಕೀಯ ವಿರೋಧಿಗಳು ಸದನದ ಒಳಗೆ ಹಾಗೂ ಹೊರಗೆ ಮಹತ್ವದ ಪಾತ್ರ ವಹಿಸುತ್ತಾರೆ. ಅವರು ಸರಕಾರದ ಕಾವಲುನಾಯಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಇದು ಸರಕಾರದ ಎಲ್ಲ ಲೋಪಗಳನ್ನು ಪರಿಣಾಮಕಾರಿಯಾಗಿ ತಡೆಯುವ ಪ್ರಮುಖ ಅಸ್ತ್ರ. ವಿರೋಧ ಪಕ್ಷಗಳು ಸಾರ್ವಜನಿಕರ ಧ್ವನಿಯಾಗಿ ಕೆಲಸ ಮಾಡುತ್ತವೆ.

ರಾಜ್ಯದ ಅಪರಾಧ ನ್ಯಾಯ ವಿತರಣೆ ವಿಷಯದಲ್ಲೂ ವಿರೋಧ ಪಕ್ಷಗಳ ಪಾತ್ರ ಮಹತ್ವದ್ದು ಎಂದು ಹೇಳಿತ್ತು. ಈ ಸಂಬಂಧ ಶಿವನಂದನ್ ಪಾಸ್ವಾನ್ ಹಾಗೂ ಬಿಹಾರ ಸರಕಾರದ ಪ್ರಕರಣದ ಅಂಶವನ್ನೂ ನ್ಯಾಯಾಲಯ ಉಲ್ಲೇಖಿಸಿತ್ತು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ವಿಚಾರಣಾ ನ್ಯಾಯಾಲಯ, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ, 100 ಕೋಟಿ ರೂಪಾಯಿ ದಂಡ ವಿಧಿಸಿತು. ಶಶಿಕಲಾ, ವಿ.ಎನ್.ಸುಧಾಕರನ್ ಹಾಗೂ ಜೆ.ಇಳವರಸಿ ಅವರಿಗೆ ನಾಲ್ಕು ವರ್ಷ ಜೈಲು ಹಾಗೂ 10 ಕೋಟಿ ದಂಡ ವಿಧಿಸಿತು. ಶಿಕ್ಷೆಯಾದ ಬಳಿಕ ಸಿಎಂ ಪಟ್ಟದಿಂದ ಜಯಲಲಿತಾ ಕೆಳಗಿಳಿದು, ಒ. ಪನ್ನೀರ್‌ಸೆಲ್ವಂ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದರು.


ಕರ್ನಾಟಕ ಹೈಕೋರ್ಟ್‌ನಲ್ಲಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಯಿತು. ವಿಶೇಷ ರಜಾಕಾಲದ ನ್ಯಾಯಾಧೀಶ ಕೆ.ಆರ್.ರಾಮಸ್ವಾಮಿ ಈ ಬಗ್ಗೆ ವಿಚಾರಣೆ ನಡೆಸಿದರು. ಜಯಾ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ ಜಯಲಲಿತಾ ಮತ್ತೆ ಅಧಿಕಾರಕ್ಕೆ ಮರಳಿದರು. ಆದರೆ ಸುಪ್ರೀಂಕೋರ್ಟ್ ತೀರ್ಪು ಅವರ ಪರಂಪರೆಯ ಮೇಲೆ ಕರಾಳ ಛಾಯೆ ಬೀರಿದೆ. ಇದು ಶಶಿಕಲಾ ಅವರ ಸಿಎಂ ಕನಸನ್ನೂ ನುಚ್ಚುನೂರು ಮಾಡಿದೆ.

2014ರಲ್ಲಿ ಜಯಾಗೆ ಶಿಕ್ಷೆಯಾದ ಬಳಿಕ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒ. ಪನ್ನೀರ್‌ಸೆಲ್ವಂ ಮತ್ತೆ ಜಯಲಲಿತಾ ಆಸ್ಪತ್ರೆ ಸೇರಿದ ಬಳಿಕವೂ 2016ರ ಡಿಸೆಂಬರ್‌ನಲ್ಲಿ ಸಿಎಂ ಆದರು. ಎಲ್ಲ ಎಐಎಡಿಎಂಕೆ ಶಾಸಕರು ಅವಿರೋಧವಾಗಿ ಪನ್ನೀರ್‌ಸೆಲ್ವಂ ಅವರನ್ನು ಆಯ್ಕೆ ಮಾಡಿದರು.

ನಂತರ ಶಶಿಕಲಾರವರೇ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಎಲ್ಲ ಶಾಸಕರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಫೆಬ್ರವರಿ 6ರಂದು ಹುದ್ದೆಗೆ ರಾಜೀನಾಮೆ ನೀಡಿದರು. ನಂತರದ ರಾಜಕೀಯ ಮೇಲಾಟದಲ್ಲಿ ಕೆಲ ದಿನಗಳ ಬಳಿಕ ರಾಜೀನಾಮೆ ವಾಪಸ್ ಪಡೆಯುವ ಇಂಗಿತ ವ್ಯಕ್ತಪಡಿಸಿದರೂ ಮುಂದಿನ ಬೆಳವಣಿಗೆ ಪನ್ನೀರ್‌ಸೆಲ್ವಂಗೆ ಸಹಕಾರಿಯಾಗಲಿಲ್ಲ.

ಪನ್ನೀರ್‌ಸೆಲ್ವಂ ಹಾಗೂ ಶಶಿಕಲಾ ನಡುವಿನ ಬಲಾಬಲ ಪರೀಕ್ಷೆಯ ತಾಣವಾದ ರಾಜ್ಯದ ಪರಿಸ್ಥಿತಿ ಅವಲೋಕಿಸಿದ ತಮಿಳುನಾಡು ರಾಜ್ಯಪಾಲರು ಇದೀಗ ಶಶಿಕಲಾರವರ ಆಪ್ತ ಎಡಪ್ಪಾಡಿ ಕೆ. ಪಳನಿಸ್ವಾಮಿ ಸರಕಾರ ರಚಿಸಲು ಅವಕಾಶ ನೀಡಿದ್ದಾರೆ. ಆದರೆ ಶಶಿಕಲಾ ಸಿಎಂ ಆಗುವ ಅವಕಾಶ ಇಲ್ಲದಿದ್ದರೂ ಜೈಲಿನಲ್ಲೇ ರಾಜ್ಯಭಾರ ನಡೆಸುವ ಅವಕಾಶ ದಟ್ಟವಾಗಿದೆ.

share
ಮಾನ್ವಿ ಪರಾಶರ್
ಮಾನ್ವಿ ಪರಾಶರ್
Next Story
X